ಸುದ್ದಿ

ಮದ್ವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್.

73

ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ. 

ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದರು. ಹೀಗೆ ಹಲವು ತಿಂಗಳು ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಬಾಲಕೃಷ್ಣ, ಒಂದು ದಿನ ತನ್ನ ಪರಿಚಯಸ್ಥರಿಗೆ ಮೆಸೇಜ್ ಮಾಡಿದ್ದಾನೆ. ತನಗೆ ಮದುವೆಯಾಗಬೇಕು, ಹುಡುಗಿ ಹುಡುಕಿ ಎಂದು ಸಂದೇಶದಲ್ಲಿ ತಿಳಿಸಿದ್ದನು. ಇತ್ತ ಗುರುವಾರ ಉತ್ತರಪ್ರದೇಶದ ಬಿಜೋರಿ ಗ್ರಾಮಕ್ಕೆ ಬಂದು ಭೇಟಿಯಾಗುವಂತೆ ಬಾಲಕೃಷ್ಣ, ಮಾಧವಿ ಅಗ್ನಿಹೋತ್ರಿಯವರನ್ನು ಆಹ್ವಾನಿಸಿದ್ದಾನೆ. ಹಾಗೆಯೇ ಭೇಟಿಗೆ ಬಂದ ಮಾಧವಿ, ಆರೋಪಿ ತನ್ನನ್ನು ಭೇಟಿಯಾಗಲು ಬರುತ್ತಿದ್ದಂತೆಯೇ ತಂಡಕ್ಕೆ ಸೂಚನೆ ನೀಡಿದರು. ಹಾಗೆಯೇ ತಂಡ ಆತನನ್ನು ಅರೆಸ್ಟ್ ಮಾಡಿತು. ಶುಕ್ರವಾರ ಪೊಲಿಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Animals

    ಆನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳು

    ಪ್ರಾಣಿಶಾಸ್ತ್ರದ ಪ್ರಕಾರ ಆನೆ ಸಸ್ತನಿಗಳ ವರ್ಗದಲ್ಲಿ ಪ್ರೊಬೊಸಿಡಿಯ  ಉಪವರ್ಗದ ಒಂದು ಕುಟುಂಬ. ಹಿಂದೆ ಇವುಗಳನ್ನು ಪಾಚಿಡರ್ಮಾಟಾ ಎಂಬ ದಪ್ಪಚರ್ಮದ ಪ್ರಾಣಿಗಳ ಉಪವರ್ಗದಲ್ಲಿರಿಸಲಾಗಿತ್ತು. ಇಂದು 2 ತಳಿಗಳ ಆನೆಗಳು ಭೂಮಿಯ ಮೇಲೆ ಇವೆ. ಅವೆಂದರೆ: , ಆಫ್ರಿಕದ ಅರಣ್ಯದ ಆನೆ ಮತ್ತು ಏಷ್ಯಾದ  ಆನೆ. ಇವುಗಳಲ್ಲಿ ಮೊದಲೆರಡನ್ನು ಒಟ್ಟಾಗಿ ಆಫ್ರಿಕನ್ ಆನೆ ಎಂದು ಸಹ ಕರೆಯುವುದು ವಾಡಿಕೆ. ಏಷ್ಯಾದ ಆನೆಯನ್ನು ಭಾರತದ ಆನೆ ಎಂದು ಸಹ ಕರೆಯಲಾಗುತ್ತದೆ. ಸುಮಾರು ೧೦,೦೦೦ ವರ್ಷಗಳ ಹಿಂದೆ ಕೊನೆಗೊಂಡ ಹಿಮಯುಗದೊಂದಿಗೆ ಉಳಿದ ತಳಿಗಳ ಆನೆಗಳು ಭೂಮಿಯಿಂದ ಶಾಶ್ವತವಾಗಿ ಮರೆಯಾದುವು. ಇವುಗಳಲ್ಲಿ ಮ್ಯಾಮತ್ (ದೈತ್ಯ ಆನೆ) ಬಲು…

  • ಆರೋಗ್ಯ

    ನೀವು ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವುದರಿಂದ ಆಗುವ ಸಮಸ್ಯೆ ..!ತಿಳಿಯಲು ಈ ಲೇಖನ ಓದಿ..

    ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕು. ಯಾಕಂದ್ರೆ ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು ಶೇ.35ರಷ್ಟು ಕಡಿಮೆಯಾಗುತ್ತದೆ.

  • ವಿಸ್ಮಯ ಜಗತ್ತು

    ಈತ ಮಗುವಿಗೆ ಜನ್ಮ ನೀಡಿದ ಮೊದಲ ಬ್ರಿಟನ್ ಪುರುಷ!ಶಾಕ್ ಆಗ್ತೀರ…ಈ ಲೇಖನಿ ಓದಿ…

    ನೀವು ನಂಬಲೇಬೇಕು. ಈ ವಿಷಯ ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಮೊದಲಬಾರಿಗೆ ಬ್ರಿಟನ್ನಿನ 21 ರ ಹರೆಯದ ವ್ಯಕ್ತಿಯೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ. ಇದರಿಂದ ಲಂಡನ್‌ನ ವ್ಯಕ್ತಿಯೊಬ್ಬ ಮಗುವಿಗೆ ಜನ್ಮ ನೀಡಿದ ಮೊದಲ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ….

  • ಉಪಯುಕ್ತ ಮಾಹಿತಿ

    ಶೂನ್ಯ ಬಂಡವಾಳದಲ್ಲಿ ಶುರುಮಾಡುಬಹುದಾದ 7 ಬುಸಿನೆಸ್..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡುವವರು ಮೊದಲು ನೋಡುವುದು ಬಂಡವಾಳ‌.. ಹೌದು ದೊಡ್ಡ ಮಟ್ಟದ ಬಂಡವಾಳ ಹಾಕುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತವರು ಒಂದು ಹತ್ತು ಸಾವಿರ ರೂಪಾಯಿಗಳ ಒಳಗೆ ಬಂಡವಾಳ ಹೂಡಿ ಸ್ವಂತ ಉದ್ಯೋಗ ಮಾಡಬಹುದು.. ಆ ಉದ್ಯೋಗಗಳು ಇಲ್ಲಿವೆ ನೋಡಿ.. ಬ್ಲಾಗಿಂಗ್ ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ…

  • ಸರ್ಕಾರಿ ಯೋಜನೆಗಳು

    ಶಾಲೆಗೆ ಹೋಗ್ತಿರುವ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

    ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.

  • ಸಿನಿಮಾ, ಸುದ್ದಿ

    ವಿನೋದ್ ರಾಜ್ ರನ್ನು ಕ್ಯಾರೆ ಎನ್ನದ ಟಿವಿ ಶೋಗಳು, ಹುಡುಕಿಕೊಂಡು ಬಂತು ಬಂಪರ್ ಆಫರ್.

    ಒಂದು ಕಾಲದಲ್ಲಿ ನೃತ್ಯ ಅಂದ್ರೆ ಏನು ಅಂತ ಸ್ಯಾಂಡಲ್ ವುಡ್ ಗೆ ತೋರಿಸಿಕೊಟ್ಟವರು ಅಂದ್ರೆ ನಟ ವಿನೋದ್ ರಾಜ್. ಹೌದು. ತಮ್ಮ ನೃತ್ಯದ ಮೂಲಕ ಇಡೀ ಕರ್ನಾಟಕವನ್ನೇ ಗೆದ್ದಿದ್ದರು. ಇನ್ನು ಅವರು ಕೆಲವು ಸಿನಿಮಾಗಳಲ್ಲಿ ನಟನಾಗಿ ನಟಿಸಿದ್ದು, ಎಲ್ಲರೂ ಅವರ ನಟನೆ ಹಾಗು ನೃತ್ಯಕ್ಕೆ ಫಿದಾ ಆಗಿದ್ದರು. ಆದರೆ ಕಾಲ ಕಳೆದಂತೆ ಅವರಿಗೆ ಚಿತ್ರಗಳ ಅವಕಾಶ ಕಡಿಮೆಯಾಗಿದ್ದರಿಂದ ಅವರು ಚಿತ್ರರಂಗದಿಂದ ದೂರ ಉಳಿಯಬೇಕಾಯಿತು. ಇನ್ನು ಅವರ ಕೊನೆ ಸಿನಿಮಾ 2009ರಲ್ಲಿ ತೆರೆ ಕಂಡ ‘ಯಾರದು’ ಆಗಿದ್ದು, ನಂತರ…