ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಂತುಕೊಂಡು ತಿಂದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳು ಬೀರಬಹುದು ಎಂದು ನಾವು ತಿಳಿದುಕೊಳ್ಳಬೇಕು. ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ನಮಗೆ ಕುಳಿತುಕೊಂಡು ಆರಾಮವಾಗಿ ತಿನ್ನಲು ಪುರುಸೊತ್ತೇ ಇಲ್ಲ. ಅದು ಹೋಟೆಲ್ ಗಳಿಗೆ ಹೋದರೂ ಅಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಸೆಲ್ಫ್ ಸರ್ವೀಸ್ ಮಾಡಿ, ನಿಂತುಕೊಂಡೇ ತಿನ್ನುವ ವ್ಯವಸ್ಥೆ ಮಾಡಿರುವರು. ಆದರೆ ನಿಂತುಕೊಂಡು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಪ್ರಶ್ನೆ ಮೂಡುವುದು. ಆದರೆ ನೆಲದ ಮೇಲೆ ಕುಳಿತುಕೊಂಡು, ಕಾಲುಗಳನ್ನು ಮಡಚಿಟ್ಟು ತಟ್ಟೆಯಲ್ಲಿ ಬಡಿಸಿಟ್ಟ ಊಟ ಮಾಡುವ ಸೊಗಸೇ ಬೇರೆ. ಈ ರೀತಿಯಾಗಿ ಊಟ ಮಾಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಆಯುರ್ವೇದವು ಹೇಳಿದೆ.

ನೀವು ತಿನ್ನುವಂತಹ ಭಂಗಿಯು ನಿಮ್ಮ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಮಂದಿ ತಾವು ಮಲಗಿಕೊಂಡು ತಿನ್ನುತ್ತೇವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಆತ್ಮತೃಪ್ತಿ ಸಿಗುತ್ತದೆಯೇ ಹೊರತು, ದೇಹಕ್ಕೆ ಲಾಭವಿಲ್ಲ. ಇದರಿಂದ ಅಜೀರ್ಣ ಬರಬಹುದು. ಹಾಗೆ ಹೊಟ್ಟೆಉಬ್ಬರ ಮತ್ತು ಕಿರಿಕಿರಿ ಉಂಟಾಗಬಹುದು. ಮಹಿಳೆಯರ ಮೇಲೆ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ಮಲಗಿ ತಿನ್ನುವಂತಹ ಜನರಲ್ಲಿ ಸ್ವಲ್ಪ ಸಮಯದ ಬಳಿಕ ತೊಂದರೆ ಕಂಡುಬರುವುದು. ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಜೀರ್ಣಕ್ರಿಯೆಯು ತುಂಬಾ ನಿಧಾನವಾಗುವುದು.

ತಿಂದ ಕೂಡಲೇ ಎದ್ದು ನಿಂತರೇ ನೆರವಾಗುವುದೇ? : ಮಲಗಿ ಅಥವಾ ಕುಳಿತುಕೊಂಡು ತಿನ್ನುವುದಕ್ಕೆ ಹೋಲಿಸಿದರೆ, ತಿಂದ ಬಳಿಕ ನಿಲ್ಲುವುದು ಮತ್ತು ನಡೆಯುವುದು ವೇಗದ ಜೀರ್ಣಕ್ರಿಯೆಗೆ ಸಹಕಾರಿ ಆಗಿದೆ ಎಂದು ಮತ್ತೊಂದು ಅಧ್ಯಯನವು ಹೇಳಿದೆ. ಅದಾಗ್ಯೂ, ಇದರಲ್ಲಿ ಅತೀ ಕೆಟ್ಟದು ಎಂದರೆ ಅದು ಮಲಗಿಕೊಂಡು ತಿನ್ನುವುದು. ತಿಂದ ಬಳಿಕ ನಡೆಯುವುದರಿಂದ ಸ್ವಲ್ಪ ಮಟ್ಟಿಗೆ ನೆರವಾಗಿದೆ ಮತ್ತು ಇದರಿಂದ ಸುಮಾರು 50 ಕ್ಯಾಲರಿ ದಹಿಸಲು ನೆರವಾಗಿದೆ. ಇದು ದೀರ್ಘಕಾಲಕ್ಕೆ ತೂಕ ಇಳಿಸಿಕೊಳ್ಳಲು ನೆರವಾಗಲಿದೆ. ಆದರೆ ಇಲ್ಲಿ ಹೇಗೆ ತಿನ್ನುತ್ತೀರಿ ಎನ್ನುವುದಕ್ಕಿಂತಲೂ ನೀವು ಏನು ತಿನ್ನುತ್ತೀರಿ ಎನ್ನುವುದು ಮುಖ್ಯವಾಗಿರುವುದು.
ನಿಂತುಕೊಂಡು ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದೇ? : ನಿಂತುಕೊಂಡು ತಿಂದರೆ ಆಗ ಕ್ಯಾಲರಿ ದಹಿಸಬಹುದು ಎಂದು ಹೆಚ್ಚಿನವರು ಭಾವಿಸಿರಬಹುದು. ಆದರೆ ತೂಕ ಕಳೆದುಕೊಳ್ಳಲು ಇದು ಆರೋಗ್ಯಕಾರಿ ವಿಧಾನವೇ? ಖಂಡಿತವಾಗಿಯೂ ಇದು ಆರೋಗ್ಯಕಾರಿ ವಿಧಾನವಲ್ಲ. ನಿಂತುಕೊಂಡು ತಿಂದರೆ ಆಗ ತಿನ್ನುವ ವೇಗ ಅಧಿಕವಾಗುವುದು ಮತ್ತು ಸ್ವಲ್ಪ ಹೆಚ್ಚು ಆಹಾರ ಹೊಟ್ಟೆ ಸೇರುವುದು. ನೀವು ನಿಂತುಕೊಂಡು ಹೆಚ್ಚು ಆಹಾರ ತಿಂದರೆ ಆಗ ಅದಕ್ಕೆ ಯಾವುದೇ ರೀತಿಯಿಂದಲೂ ಪರಿಹಾರ ಸಿಗದು.

ಎಚ್ಚರ..! : ನಿಂತುಕೊಂಡು ತಿಂದರೆ ಅದರಿಂದ ಕ್ಯಾಲರಿ ದಹಿಸಬಹುದು ಎಂದು ಕೆಲವೊಂದು ಸಂದರ್ಭದಲ್ಲಿ ಸಾಬೀತು ಆಗಿದೆ. ಆದರೆ ನಿಂತುಕೊಂಡು ತಿನ್ನುವುದು ದೀರ್ಘಕಾಲಕ್ಕೆ ಒಳ್ಳೆಯ ಅಭ್ಯಾಸವಲ್ಲ. ನಿಂತುಕೊಂಡು ತಿಂದರೆ ಆಗ ಅತಿಯಾಗಿ ತಿನ್ನಬಹುದು ಮತ್ತು ಹೊಟ್ಟೆ ಉಬ್ಬರ ಬರಬಹುದು. ಕೆಲವೊಂದು ಪ್ರಕರಣದಲ್ಲಿ ಎದೆಯುರಿ ಮತ್ತು ಆಮ್ಲೀಯ ಹಿಮ್ಮುಖ ಹರಿವು ತಗ್ಗಿಸುವುದು. ಆದರೆ ಆಹಾರ ಸೇವಿಸಲು ಇದು ಸರಿಯಾದ ಕ್ರಮವಲ್ಲ.ಇದರಿಂದ ನೆಲದ ಮೇಲೆ ಕುಳಿತುಕೊಂಡು, ಆರಾಮವಾಗಿ ತಿನ್ನಬೇಕು. ಇದರಿಂದ ಮನಸ್ಸಿಗೂ ಖುಷಿ ಸಿಗುವುದು ಮತ್ತು ದೇಹವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ಜೀರ್ಣಕ್ರಿಯೆಗೆ ಇದು ಸಹಕಾರಿ ಆಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂಬರೀಷ್ ಹಾಗು ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ನಡುವೆ ಎಂದು ವಾಕ್ ಸಮರ ಎರ್ಪಟ್ಟಿದೆ. ಈ ನಿಟ್ಟಿನಲ್ಲಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಅಂಬರೀಶ್ ಗರಂ ಆಗಿದ್ದಾರೆ.
ಅರೆ ತಲೆನೋವು ಬಂತು ಎಂದರೆ ಮಾನಸಿಕವಾಗಿ ತುಂಬ ಹಿಂಸೆ ಅನುಭವಿಸುತ್ತೇವೆ. ಈ ಅರೆ ತಲೆನೋವು ಸಹಿಸಿಕೊಳ್ಳಲಾಗದಷ್ಟು ನೋವು ಕೊಡುತ್ತದೆ. ಇಂತಹ ಅರೆತಲೆನೋವಿಗೆ ಮನೆಯಲ್ಲಿ ಪರಿಹರಿಸುವ ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಇದೆ.
ಹಿಂದೂ ಧರ್ಮದ ಜ್ಯೋತಿಷ್ಯದ ಪ್ರಕಾರ ರತ್ನಗಳ ಧಾರಣೆಯಿಂದ ಕ್ಷೇಮ ಪ್ರಾಪ್ತವಾಗುತ್ತದೆ ಹಾಗೂ ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ ಹೀಗೆ ನಾನಾ ಬಯಕೆಗಳ ಈಡೇರಿಕೆ ಹಾಗೂ ಜೀವನದಲ್ಲಿ ಉಂಟಾಗುವ ತೊಂದರೆಗಳಿಗೂ ರತ್ನಗಲಿಂದ ಪರಿಹಾರ ಸಿಗುತ್ತೆ ಎಂದು ಹಿಂದೂಗಳಲ್ಲಿ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದಕ್ಕೂ ತನ್ನದೇ ಆದ ನಿಯಮವನ್ನು ಹೊಂದಿರುತ್ತದೆ ಅಂತೆಯೇ ನೀವು ರತ್ನಗಳನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳಿತು. ನೀವು ಧರಿಸುವ ರತ್ನಗಳು ನಿಮಗೆ ಒಳಿತು ಮಾಡಬಬೇಕು ಅಂದ್ರೆ ನೀವು ಇಂತಹ ನಿಯಮಗಳನ್ನು ಪಾಲಿಸಲೇಬೇಕು…
ತಮ್ಮ ಹೆಸರಿನ ಬಗ್ಗೆ ಜನರಂತೂ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ.ತಮ್ಮ ಈ ಹೆಸರಿನಿಂದ ನಾನು ಜೀವನದಲ್ಲಿ ಮುಂದೆ ಬರಲು ಹಾಗುತ್ತಿಲ್ಲ ಎಂದು ಹಲವಾರು ಜನ ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಳ್ಳುವುದು ಉಂಟು. ಹಾಗಾದ್ರೆ ಹೆಸರಿನಲ್ಲಿ ಅಂತದ್ದೇನಿದೆ..?
ಚೀನಾದಲ್ಲಿ ಮಹಿಳೆಯೊಬ್ಬಳು ತನ್ನ ಪಾರ್ಶ್ವವಾಯು ಪತಿಗೆ ವಿಚ್ಛೇದನ ನೀಡಿದ್ದಾಳೆ. ನಂತ್ರ ತನ್ನ ಸ್ನೇಹಿತನೊಬ್ಬನ ಜೊತೆ ಮದುವೆಯಾಗಿದ್ದಾಳೆ. ಇಷ್ಟಕ್ಕೆ ಕಥೆ ಮುಗಿಯಲಿಲ್ಲ.
ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.