ಉಪಯುಕ್ತ ಮಾಹಿತಿ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ದುಡ್ಡು ಕೊಟ್ಟು ಖರೀದಿಸಿದ ಆ್ಯಪ್ ಬೇಡವೆನಿಸಿದಾಗ, ಅದಕ್ಕೆ ಪಾವತಿಸಿದ ಮೊತ್ತ ಮರಳಿ ಪಡೆಯುವುದು ಹೇಗೆ..?

97

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಯಾವುದೇ ಆ್ಯಪ್ ಬೇಕಾದರೂ ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಿದೆ. ಆದರೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಎಲ್ಲ ಆ್ಯಪ್‌ಗಳು ಉಚಿತವಲ್ಲ. ಕೆಲವೊಂದು ಆ್ಯಪ್‌ಗಳಿಗೆ ನಾವು ಹಣ ಪಾವತಿಸಬೇಕಾಗುತ್ತದೆ. ಕೆಲವೊಂದು ಆ್ಯಪ್‌ಗಳ ಆರಂಭಿಕ ಸೇವೆಗಳು ಉಚಿತವಾಗಿದ್ದರೂ, ಪ್ರೀಮಿಯಂ ಸೇವೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸುವುದು ಅನಿವಾರ್ಯವಾಗುತ್ತದೆ.

ಅಂತಹ ಸಂದರ್ಭದಲ್ಲಿ ಯಾವುದಾದರೂ ಆ್ಯಪ್ ಅನ್ನು ಖರೀದಿಸಿದ್ದರೆ ಮತ್ತು ಹಣ ಪಾವತಿಸಿದ್ದರೆ, ಅದನ್ನು ಮರಳಿ ಪಡೆಯುವುದು ಹೇಗೆ ಎಂದು ಇಲ್ಲಿವಿವರಿಸಲಾಗಿದೆ. ಜತೆಗೆ ಕೆಲವೊಂದು ಆ್ಯಪ್‌ಗಳು ಟ್ರಯಲ್‌ ಲಭ್ಯವಿದ್ದರೂ, ಅಚಾನಕ್ ಆಗಿ ಗೂಗಲ್ ಪ್ಲೇಸ್ಟೋರ್‌ಗೆ ನಿಮ್ಮ ಬ್ಯಾಂಕ್ ಕಾತೆ ಯಿಂದ ಹಣ ಕಡಿತವಾಗಿರುತ್ತದೆ. ಅದನ್ನು ಮರಳಿ ಪಡೆಯಲು ಸಾಧ್ಯವಿದೆ. ಅದಕ್ಕಾಗಿ ಕೆಳಗಡೆ ಹೇಳಿರುವ ವಿಧಾನ ಅನುಸರಿಸಿ.

ಗೂಗಲ್ ಖಾತೆ ಮತ್ತು ಪಾವತಿ ವಿಧಾನ ಆಕ್ಟಿವ್ ಆಗಿರುವುದನ್ನು ನೋಡಿಕೊಳ್ಳಿ. ಗೂಗಲ್ಪ್ಲೇ ಪರ್ಚೇಸ್ ಹಿಸ್ಟರಿ ಮತ್ತು ಗೂಗಲ್ ಪ್ಲೇ ಲಿಸ್ಟಿಂಗ್ ಎಂಬ ಎರಡು ವಿಧಾನದ ಮೂಲಕ ಹಣಮರಳಿ ಪಡೆಯಲು ಸಾಧ್ಯವಿದೆ. ಗೂಗಲ್ಪ್ಲೇ ಪರ್ಚೇಸ್ ಹಿಸ್ಟರಿ, ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಆ್ಯಪ್‌ ಓಪನ್ ಮಾಡಿ,ಎಡತುದಿಯಲ್ಲಿನ ಮೂರುಚುಕ್ಕಿಗಳ ಬಟನ್ ಅನ್ನು ಒತ್ತಿ, ಬಳಿಕ ಅಕೌಂಟ್ ಆಯ್ಕೆ ಮಾಡಿ, ಅಲ್ಲಿ ಸ್ಕ್ರಾಲ್ ಮಾಡಿ ಪರ್ಚೆಸ್ ಹಿಸ್ಟರಿ ವಿಭಾಗಕ್ಕೆ ಬನ್ನಿ, ನಂತರ ಯಾವ ಆ್ಯಪ್‌ ಅನ್ನು ನೀವು ರಿಫಂಡ್ಮಾಡಲು ಬಯಸುತ್ತೀರಿ ಅದನ್ನು ಆಯ್ಕೆ ಮಾಡಿ, ಬಳಿಕ ರಿಫಂಡ್ ಬಟನ್ ಒತ್ತಿ, ನಂತರ ಅಲ್ಲಿ ಕೇಳಲಾದ ಪ್ರಶ್ನೆಗೆ ಯೆಸ್ಎಂದು ಉತ್ತರಿಸಿ.

ಅದಾದ ಬಳಿಕ ನೀವು ಡೌನ್‌ಲೋಡ್ ಮಾಡಿಕೊಂಡಿದ್ದ ಆ್ಯಪ್‌ ಅಥವಾ ಗೇಮ್ ಅದಾಗಿಯೇ ಅನ್‌ಇನ್‌ಸ್ಟಾಲ್ ಆಗುತ್ತದೆ ಮತ್ತು ಯಾವ ಖಾತೆಯಿಂದ ನೀವುಹಣ ಪಾವತಿಸಿದ್ದೀರೋ, ಅದೇ ಖಾತೆಗೆ ಹಣಜಮೆಯಾಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಅನ್ನು ರಿಸೆಂಟ್ ಆಪ್ಷನ್ ಮೂಲಕಹುಡುಕಿ, ಅಲ್ಲಿ ರಿಫಂಡ್ ಆಯ್ಕೆಮಾಡಿಕೊಳ್ಳಿ. ಅದಕ್ಕೂ ಮೊದಲು ನೀವು ಆ್ಯಪ್‌ ಅನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಬೇಕು.

ಗಮನಿಸಿ

ಯಾವುದೇ ಹೊಸ ಆ್ಯಪ್‌ ಅಥವಾ ಗೇಮ್ ಅನ್ನು ಗೂಗಲ್ಪ್ಲೇ ಸ್ಟೋರ್ ಮೂಲಕ ಇನ್‌ಸ್ಟಾಲ್ ಮಾಡಿಕೊಂಡ 48 ಗಂಟೆಯವರೆಗೆ ಮಾತ್ರ ರಿಫಂಡ್ ಪಡೆದುಕೊಳ್ಳಲು ಅವಕಾಶವಿದೆ.ಅದಕ್ಕೂ ಹೆಚ್ಚಿನ ಸಮಯವಾಗಿದ್ದತೆ, ಆ್ಯಪ್‌ ಡೆವಲಪರ್‌ ಅನ್ನು ಸಂಪರ್ಕಿಸಿ, ರಿಫಂಡ್‌ ಕೇಳಬೇಕಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಎಲ್ಲಾ ಡಾಕ್ಟರ್ಸ್ ಬಿಳಿ ಬಣ್ಣದ ಬಟ್ಟೆಯನ್ನೇ ಯಾಕೆ ಧರಿಸುತ್ತಾರೆ, ನೋಡಿ ಬಿಳಿ ಬಣ್ಣದ ರಹಸ್ಯ.

    ನಮ್ಮ ದೇಹದಲ್ಲಿ ಏನೇ ತೊಂದರೆ ಆದರೂ ಕೂಡ ನಾವು ಮೊದಲು ಹೋಗುವುದು ವೈದ್ಯರ ಬಳಿ ಆಗಿದೆ, ಹೌದು ವೈದ್ಯರನ್ನ ದೇವರು ಎಂದು ನಂಬಲಾಗಿದೆ, ಒಬ್ಬ ವೈದ್ಯ ಮನಸ್ಸು ಮಾಡಿದರೆ ಸಾಯುವ ಅಂಚಿನಲ್ಲಿ ಇರುವ ಮನುಷ್ಯನನ್ನ ಬದುಕಿಸುತ್ತಾನೆ. ಇನ್ನು ಮನುಷ್ಯನಿಗೆ ಬರುವ ಹಲವು ಖಾಯಿಲೆಗಳು ಯಾರಿಗೂ ಗೊತ್ತಾಗುವುದಿಲ್ಲ, ಆದರೆ ನಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳನ್ನ ನೋಡಿ ನಮಗೆ ಇಂತಹುದ್ದೇ ತೊಂದರೆ ಆಗಿದೆ ಎಂದು ಗುರುತಿಸುವುದು ಒಬ್ಬ ಡಾಕ್ಟರ್ ಮಾತ್ರ. ಮುಂದುವರೆದ ಈ ವೈದ್ಯ ಲೋಕದಲ್ಲಿ ನಾವು ಹೊಟ್ಟೆಯಲ್ಲಿ…

  • ಉಪಯುಕ್ತ ಮಾಹಿತಿ

    ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ,ಈ ಅಂಶಗಳನ್ನು ಅನುಸರಿಸಿ…

    ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

  • ತಂತ್ರಜ್ಞಾನ

    10ನೇ ತರಗತಿ ಬಾಲಕನ 5 ಕೋಟಿ ಒಪ್ಪಂದ !ಈ ಲೇಖನಿ ಓದಿ ಶಾಕ್ ಆಗ್ತೀರಾ…

    ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.

  • ಜೀವನಶೈಲಿ

    ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಏನ್ ಗೊತ್ತಾ?ಮುಂದೆ ಓದಿ…

    ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ

  • ಉಪಯುಕ್ತ ಮಾಹಿತಿ

    ಹಲಸಿನ ಹಣ್ಣಿನ ಈ ಪ್ರಯೋಜನಗಳನ್ನು ಕೇಳಿದ್ರೆ, ನೀವು ತಿನ್ನದೇ ಸುಮ್ಮನೆ ಇರಲ್ಲ…

    ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.

  • ಸುದ್ದಿ

    ಕೊನೆಗೂ ಅಭಿಮಾನಿಗಳ ಮುಂದೆ ತಾನು ಪ್ರೀತಿಸುತ್ತಿರುವುದು ನಿಜ ಎಂದು ಒಪ್ಪಿಕೊಂಡ ರಶ್ಮಿಕಾ ಮಂದಣ್ಣ..!ಆ ವ್ಯಕ್ತಿ ಯಾರು ಗೊತ್ತಾ?

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ನಟನನ್ನು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಈ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿ ನಾನು ಪ್ರೀತಿಸುತ್ತಿರುವುದು ನಿಜ ಎಂದು ಹೇಳಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ಈ ಸಂವಾದದಲ್ಲಿ ರಶ್ಮಿಕಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಇದೇ ವೇಳೆ ತೆಲುಗು ನಟನನ್ನು ಪ್ರೀತಿಸುತ್ತಿರುವ ಗಾಸಿಪ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ, ಹೌದು. ನಾನು ಪ್ರೀತಿಸುತ್ತಿರುವುದು ನಿಜ. ಆದರೆ ನಾನು ನನ್ನ ಸಿನಿಮಾವನ್ನು ಮಾತ್ರ ಪ್ರೀತಿಸುತ್ತಿದ್ದೇನೆ. ನನಗೆ ಬೇರೆ ಬೇರೆ ರೀತಿಯ…