ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅದು ಆಸ್ಟ್ರೇಲಿಯಾದ ಅರಣ್ಯ. ಅದೆಷ್ಟೋ ವನ್ಯಸಂಕುಲಕ್ಕೆ ಈ ಕಾಡೇ ಆಶ್ರಯ ತಾಣ. ಇಂತಹ ಕಾನನದಲ್ಲಿ 55 ವರ್ಷದ ಮಹಿಳೆಯೊಬ್ಬರು ಗೊತ್ತಾಗದೇ ದಾರಿ ತಪ್ಪಿದ್ದರು…! ಬರೋಬ್ಬರಿ ಮೂರು ದಿನಗಳ ಕಾಲ ಇವರು ಕಾಡಿನಲ್ಲಿ ದಾರಿ ತಪ್ಪಿ ಭಯದಲ್ಲೇ ಅಲೆದಾಡುತ್ತಿದ್ದರು. ಅಂತಹ ಸಮಯದಲ್ಲಿ ಮಹಿಳೆ ಪತ್ತೆಯಾಗಿದ್ದು ಇದೊಂದು ಸಂಕೇತದಿಂದ ಆ ಸಂಕೇತವಾದರೂ ಏನು ಗೊತ್ತಾ,…

ಈಕೆ ಡೆಬೊರಾ ಪಿಲ್ಗ್ರಿಮ್. ಕಾಡಂಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಇವರು ಸಾಗುತ್ತಿದ್ದರು. ಒಬ್ಬರೇ ಇದ್ದರು. ಹೀಗೆ ಸಾಗುವಾಗ ಅಕಸ್ಮಾತ್ ದಾರಿ ತಪ್ಪಿದ್ದರು. ಹೀಗಾಗಿ, ಕತ್ತಲಾಗುತ್ತಿದ್ದಂತೆಯೇ ಅಲ್ಲೇ ವಾಸಕ್ಕೆ ಯೋಗ್ಯವಾದ ಸಣ್ಣ ಕುಟೀರದಂತೆ ಕಟ್ಟಿಕೊಂಡರು. ಆದರೆ, ಇಲ್ಲಿ ನೀರು ಕುಡಿದ ಬಳಿಕ ಇವರು ತೀವ್ರ ಅಸ್ವಸ್ಥರಾದರು. ಬಳಿಕ ಒಂದು ದಿನ ಕಳೆದ ಮೇಲೆ ಈ ಮಹಿಳೆ ಶುದ್ಧ ನೀರಿಗಾಗಿ ಹುಡುಕುತ್ತಿದ್ದರು. ಹೀಗೆ ಹೋಗುವಾಗ ಯಾವುದಕ್ಕೂ ಗುರುತಿಗೆ ಇರಲಿ ಎಂದು ನೆಲದ ಮೇಲೆ ದೊಡ್ಡದಾಗಿ sos ಎಂದು ಬರೆದಿದ್ದರು. ಇದನ್ನು ನೋಡಿಯಾದರೂ ಯಾರಾದರೂ ಬಂದು ರಕ್ಷಿಸುತ್ತಾರೆ ಎಂಬ ಉದ್ದೇಶವೂ ಇವರದಾಗಿತ್ತು.

ಇತ್ತ, ನಾಪತ್ತೆಯಾದ ಈ ಮಹಿಳೆಗಾಗಿ ಅವರ ಮನೆಯವರ ಹುಡುಕಾಟವೂ ಶುರುವಾಗಿತ್ತು. ಹೀಗೆ ಹುಡುಕುತ್ತಿರುವ ತಂಡದ ಕ್ಯಾಮೆರಾಕ್ಕೆ ಮೊದಲು ಕಂಡಿದ್ದೇ ಈ `ಎಸ್‌ಓಎಸ್’ ಎಂಬ ಸಂಕೇತ. ಜೊತೆಗೆ, ಇನ್ನಷ್ಟು ಸೂಕ್ಷ್ಮವಾಗಿ ನೋಡಿದಾಗ ಇನ್ನೊಂದಷ್ಟು ದೂರದಲ್ಲಿ ನೀರು ಹುಡುಕಲು ಬಂದಿದ್ದ ಮಹಿಳೆ ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕಿದ್ದರು. ಹೀಗಾಗಿ, ತಕ್ಷಣ ಅಧಿಕಾರಿಗಳು ಇವರನ್ನು ರಕ್ಷಿಸಿದ್ದಾರೆ. ಈ ವೇಳೆ, ಇವರು ತುಂಬಾ ನಿತ್ರಾಣಗೊಂಡಿದ್ದರು ಎಂದು ರಕ್ಷಣಾ ತಂಡದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಖಾಸಗಿ ಆಸ್ತಿಯಾಗಿತ್ತು. ನೀಲ್ ಮ್ಯಾರಿಯಟ್ ಎಂಬಾತನ ಒಡೆತನದ ಆಸ್ತಿ ಇದು. ಈತ ತುಂಬಾ ದೂರದಲ್ಲಿದ್ದ. ಈತನಿಂದ ಮಾಹಿತಿ ಪಡೆದಿದ್ದ ಅಧಿಕಾರಿಗಳು ಮಹಿಳೆಯ ಹುಡುಕಾಟ ಆರಂಭಿಸಿದ್ದರು. ಡ್ರೋಣ್, ಹೆಲಿಕಾಪ್ಟರ್ ಮತ್ತು ಸ್ವಯಂಸೇವಕರ ನೆರವಿನಿಂದ ಆ ಮಹಿಳೆಯ ಹುಡುಕಾಟವನ್ನು ಶುರು ಮಾಡಿಕೊಂಡಿದ್ದರು.
ಈ ಕಾಡಿನಲ್ಲಿ ಅಪಾಯಕಾರಿಯಾದಂತಹ ಹಾವುಗಳಿವೆ. ಇಲ್ಲಿನ ಅಧಿಕಾರಿಗಳಿಗೂ ಈ ವಿಷಯ ಗೊತ್ತಿತ್ತು. ಇದೇ ಕಾರಣಕ್ಕೆ ಅಧಿಕಾರಿಗಳು ಆದಷ್ಟು ಬೇಗ ಮಹಿಳೆಯನ್ನು ರಕ್ಷಿಸಲೇಬೇಕೆಂಬ ಪಣ ತೊಟ್ಟಿದ್ದರು. ಇತ್ತ, ಸುರಕ್ಷಿತವಾಗಿ ಮರಳಿದ್ದಕ್ಕೆ ಮಹಿಳೆ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಕ್ಸಸ್ ಆದ ಖುಷಿಯಲ್ಲಿ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿದ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳೂ ಸಹ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಶ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಿಧನರಾಗುವುದರೊಂದಿಗೆ ರಾಷ್ಟ್ರೀಯ ರಾಜಧಾನಿ ದಿಲ್ಲಿ ಒಂದು ವರ್ಷದೊಳಗೆ ತನ್ನ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಂತಾಗಿದೆ. 1998ರ ಅಕ್ಟೋಬರ್-ಡಿಸೆಂಬರ್ನಲ್ಲಿ ಅಲ್ಪ ಅವಧಿಗೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸುಶ್ಮಾ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಈ ವರ್ಷದ ಜುಲೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ದೀಕ್ಷಿತ್ ಹಾಗೂ ಸುಶ್ಮಾ ಸ್ವರಾಜ್ ಒಂದು ತಿಂಗಳ ಅಂತರದಲ್ಲಿ ವಿಧಿವಶರಾಗಿದ್ದಾರೆ. 1993ರಿಂದ 96ರ ತನಕ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ…
ಅಪರೂಪದ ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ ಮಾಡಲಾಗಿದೆ.
ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ…
ಇಂದು ಮಂಗಳವಾರ, 06/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ನಮ್ಮ ದೇಹದಲ್ಲಿ ಏನೇ ತೊಂದರೆ ಆದರೂ ಕೂಡ ನಾವು ಮೊದಲು ಹೋಗುವುದು ವೈದ್ಯರ ಬಳಿ ಆಗಿದೆ, ಹೌದು ವೈದ್ಯರನ್ನ ದೇವರು ಎಂದು ನಂಬಲಾಗಿದೆ, ಒಬ್ಬ ವೈದ್ಯ ಮನಸ್ಸು ಮಾಡಿದರೆ ಸಾಯುವ ಅಂಚಿನಲ್ಲಿ ಇರುವ ಮನುಷ್ಯನನ್ನ ಬದುಕಿಸುತ್ತಾನೆ. ಇನ್ನು ಮನುಷ್ಯನಿಗೆ ಬರುವ ಹಲವು ಖಾಯಿಲೆಗಳು ಯಾರಿಗೂ ಗೊತ್ತಾಗುವುದಿಲ್ಲ, ಆದರೆ ನಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳನ್ನ ನೋಡಿ ನಮಗೆ ಇಂತಹುದ್ದೇ ತೊಂದರೆ ಆಗಿದೆ ಎಂದು ಗುರುತಿಸುವುದು ಒಬ್ಬ ಡಾಕ್ಟರ್ ಮಾತ್ರ. ಮುಂದುವರೆದ ಈ ವೈದ್ಯ ಲೋಕದಲ್ಲಿ ನಾವು ಹೊಟ್ಟೆಯಲ್ಲಿ…