ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರತಿಮೆಗೆ ‘ಸ್ಟ್ಯಾಚ್ಯೂ ಆಫ್ ಬಿಲೀಫ್’ ಎಂದು ಹೆಸರಿಡಲಾಗಿದೆ.ಆಗಸ್ಟ್ ತಿಂಗಳ ಒಳಗೆ ಪೂರ್ಣವಾಗುವ ನಿರೀಕ್ಷೆ ಇದೆ. ಈ ಪ್ರತಿಮೆಯನ್ನು ಬರೋಬ್ಬರಿ 2,500 ಟನ್ ರಿಫೈಂಡ್ ಸ್ಟೀಲ್ ಬಳಸಿ ನಿರ್ಮಿಸಲಾಗುತ್ತಿದೆ. ಶಿವನ ಪ್ರತಿಮೆಯನ್ನು ಮಿರ್ಜಾ ಗ್ರೂಪ್ ಕಂಪನಿ ನಿರ್ಮಾಣ ಮಾಡುತ್ತಿದೆ. ಸ್ಟೀಲ್ ಮಾತ್ರವಲ್ಲದೆ ಪ್ರತಿಮೆಗೆ ಉತ್ತಮ ಗುಣಮಟ್ಟದ ತಾಮ್ರ ಹಾಗೂ ಸತು ಅನ್ನು ಬಳಸಲಾಗುತ್ತಿದೆ.
ಶಿವನ ಪ್ರತಿಮೆಯು 351 ಅಡಿ ಎತ್ತರವಿದ್ದು, 20 ಅಡಿ ಎತ್ತರದಲ್ಲಿ ಮೂರು ವೀಕ್ಷಣಾ ಗ್ಯಾಲರಿ ಇದೆ. ಅಲ್ಲದೆ ಪ್ರತಿಮೆಯ 110 ಅಡಿ ಹಾಗೂ 270 ಅಡಿಗಳ ಎತ್ತರಕ್ಕೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಸ್ಟ್ಯಾಚ್ಯೂ ಆಫ್ ಯುನಿಟಿ, ಸ್ಪ್ರಿಂಗ್ ಟೆಂಪಲ್ ಬುದ್ಧ ಮತ್ತು ಲೇಕ್ಯುನ್ ಸೆಟ್‍ಕ್ಯಾರ್ ಬಳಿಕದ ಜಗತ್ತಿನ ಅತಿ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ. ಹಾಗೆಯೇ ಜಗತ್ತಿನ 4ನೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
2013ರ ಏ.17ರಂದು ಈ ಪ್ರತಿಮೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಅಂದಿನ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.ಶಿವನ ಪ್ರತಿಮೆಯ ಫೋಟೋ ಟ್ವಿಟ್ಟರ್ ನಲ್ಲಿ ಶೇರ್ ಆಗಿದ್ದು, ಅದರಲ್ಲಿ ಶಿವನ ಮುಖದ ಭಾಗವು ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ. ಹಾಗೆಯೇ ಪ್ರತಿಮೆ ನಿರ್ಮಾಣ ಕೆಲಸ ನಡೆಯುತ್ತಿರುವ ಚಿತ್ರಣವನ್ನು ನಾವು ಗಮನಿಸಬಹುದಾಗಿದೆ. ಶಿವನ ಪ್ರತಿಮೆ ಮುಂದೆ ಸುಮಾರು 25 ಅಡಿ ಎತ್ತರ ಹಾಗೂ 37 ಅಡಿ ಅಗಲದ ನಂದಿ ಪ್ರತಿಮೆ ಕೂಡ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮಗೆ ಒಂದು ಚಾಲೆಂಜ್ ? ಏನು ಗೊತ್ತೇ ಈ ಕೆಳಗಿನ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರಗಳಿಗೆ ಸಂಖ್ಯೆಯನ್ನು ಕೊಡಲಾಗಿದೆ. ಆ ಚಿತ್ರಕ್ಕೆ ಹೊದಿಕೊಳ್ಳುವಂತ ಕಾಮೆಂಟನ್ನು ಬರೆಯಿರಿ.
ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
‘ಸಾಯಿಪಲ್ಲವಿ’ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ ‘ಪ್ರಜ್ವಲ್ ದೇವರಾಜ್’ ಜೊತೆಯಲ್ಲಿ ‘ಪ್ರೇಮಂ’ ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ.
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.
60 ವಸಂತಗಳನ್ನು ಕಂಡ ಕರ್ನಾಟಕಕ್ಕೆ ನಮ್ಮ ರಾಜ್ಯದ ಹೆಮ್ಮೆಯ ಮೀಸಲು ಪೋಲೀಸ್ ತನ್ನದೇ ಆದ ಶೈಲಿಯಲ್ಲಿ ನಮನವನ್ನು ಸಲ್ಲಿಸುತ್ತಿದೆ..