ಸುದ್ದಿ

ಅಗ್ನಿಸಾಕ್ಷಿ ಖ್ಯಾತಿಯ ನಟಿ ಪ್ರಿಯಾಂಕಾರಿಗೆ ಒಂದೇ ಒಂದು ಆಸೆ ಇದೆಯಂತೆ, ಏನದುಗೊತ್ತಾ?

38

ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ಹಲವಾರು ಟಾಸ್ಕ್‌ಗಳು, ಚಟುವಟಿಕೆಗಳು ನಡೆಯುತ್ತಲೇ ಇವೆ. ಕೆಲವುದರಲ್ಲಿ ಸಪ್ತಾಶ್ವ ತಂಡ ಗೆದ್ದರೆ, ಇನ್ನೂ ಕೆಲವೊಂದರಲ್ಲಿ ಸಿಡಿಲು ತಂಡ ಗೆಲ್ಲುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಪ್ತಾಶ್ವ ಹಾಗೂ ಸಿಡಿಲು ತಂಡದ ನಡುವೆ ಹಲವಾರು ಟಾಸ್ಕ್‌ಗಳು, ಚಟುವಟಿಕೆಗಳು ನಡೆಯುತ್ತಲೇ ಇವೆ. ಕೆಲವುದರಲ್ಲಿ ಸಪ್ತಾಶ್ವ ತಂಡ ಗೆದ್ದರೆ, ಇನ್ನೂ ಕೆಲವೊಂದರಲ್ಲಿ ಸಿಡಿಲು ತಂಡ ಗೆಲ್ಲುತ್ತಿದೆ.

“ಬಾಲೊಂದು ನಂದಾದೀಪ” (ಚೆಂಡಿನಾಟ) ಟಾಸ್ಕನ್ನು ನೀಡಿದರು ಬಿಗ್ ಬಾಸ್. ಈಗಾಗಲೆ ಹಲವಾರು ಚಟುವಟಿಕೆಗಳಲ್ಲಿ ಕಾಲಿಗೆ, ಕೈಗೆ ಗಾಯ ಮಾಡಿಕೊಂಡಿರುವ ಸ್ಪರ್ಧಿಗಳು ಈ ಟಾಸ್ಕನ್ನು ಮಾತ್ರ ಸ್ವಲ್ಪ ಸಮಯಮದಿಂದಲೇ ಆಡಿದರು. ಸಿಡಿಲು ತಂಡಗೆದ್ದಿದ್ದು ಮೂಲ ಮನೆಯನ್ನು ಪ್ರವೇಶಿಸಿದೆ, ಸಪ್ತಾಶ್ವ ತಂಡ ಹೊಸ ಮನೆಯಲ್ಲಿವಾಸ ಆರಂಭಿಸಿದೆ. ಈ ಸಲ ಸ್ಪರ್ಧಿಗಳು ಕಿತ್ತಾಟಕ್ಕೆ ಇಳಿಯಲಿಲ್ಲ ಎಂಬುದೇ ಸಮಾಧಾನದ ಸಂಗತಿ.

ನನಗೊಂದು ಆಸೆ ಇದೆ ಕುರಿ ಎಂದರು ಪ್ರಿಯಾಂಕಾ. ಏನು ಹೇಳು ಎಂದಾಗ, ಕುರಿ ಪ್ರತಾಪ್ ಮಾತನಾಡುತ್ತಾ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದಾ? ಎಂದು ಕೇಳಿದ್ದಕ್ಕೆ, ನಾನು ಯಾವತ್ತಾದರೂ ಶೋಕಿ ಮಾಡಿದ್ದೀನಾ? ಅದಲ್ಲಬೇರೆ ಏನು ಹೇಳು ಎಂದಾಗ. ಪ್ರಿಯಾಂಕಾ ಚಪ್ಪಾಳೆ ತಟ್ಟಿದರು, ಅದನ್ನು ಅರ್ಥ ಮಾಡಿಕೊಳ್ಳುವಂತೆ ಕುರಿ ಗೊತ್ತಾಯ್ತು ಸುದೀಪ್ ಅವರತ್ರ  ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಅಂತತಾನೆ ಎಂದರು. ಹೌದು ಅದೇ ನನ್ನ ಆಸೆ ಎಂದರು. ಬಿಗ್ಬಾಸ್ ಮನೆಯಲ್ಲಿ ಇರುವಷ್ಟು ದಿನ ಚೆನ್ನಾಗಿ ಆಡಿ ಒಂದಲ್ಲ ಒಂದು ದಿನ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೀನಿ ಎಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಕ್ಕರೆ ಖಾಯಿಲೆ ಮುಂದುವರೆದಿದೆ, ಚಂದನಾ, ಶೈನ್ ಶೆಟ್ಟಿ ಕಡೆಗೆ ಜೈ ಜಗದೀಶ್ ಸಹ ಸಕ್ಕರೆಯನ್ನು ಕದ್ದು ತಿಂದರು. ಬಿಗ್ಬಾಸ್ ಫಿಶ್ ಕಳುಹಿಸಿದ್ದನ್ನು ನೋಡಿ ಅದೆಷ್ಟೋ ದಿನ ಉಪವಾಸ ಇದ್ದವರಂತೆ ಆಡಿದರು ಭೂಮಿ ಶೆಟ್ಟಿ. ಒಟ್ಟಾರೆ ಬಿಗ್ ಬಾಸ ಮನೆಯ ಚಟುವಟಿಕಳಿಂದ ಸ್ಪರ್ಧಿಗಳು ಹೈರಾಣಾದಂತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ