ಉಪಯುಕ್ತ ಮಾಹಿತಿ

ಸಂಜೀವಿನಿಮುದ್ರೆ ಮಾಡುವುದು ಹೇಗೆ? ಈಗೆ ಮಾಡಿದರೆ ಏನಾಗುತ್ತದೆ! ಹಲವು ಜನರಿಗೆ ತಿಳಿದಿಲ್ಲ.

409

ಸಂಜೀವಿನಿ ಮುದ್ರೆಗೆ ಹೃದಯಮುದ್ರೆ ಅಥವಾ ಅಪಾನವಾಯು ಮುದ್ರೆ ಎಂಬ ಹೆಸರಿದೆ. ಈ ಮುದ್ರೆಯಲ್ಲಿ ತೋರುಬೆರಳನ್ನು ಮಡಚುವುದರಿಂದ ಗಾಳಿಯ ಅಂಶ ಕಡಿಮೆಯಾಗುತ್ತದೆ. ನೋವು ನಿವಾರಿಸಲು ಮತ್ತು ದೇಹ, ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಹೆಬ್ಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ಸಂಪರ್ಕವು ಬೆಂಕಿಯ ಅಂಶ ಮತ್ತು ಭೂಮಿಯ ಅಂಶವನ್ನು ಹೆಚ್ಚಿಸುತ್ತದೆ. ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಹೃದಯದ ಅಪಧಮನಿಗಳಿಗೆ ಹೆಚ್ಚಿನ ಆಮ್ಲಜನಕ ಪೂರೈಸುತ್ತದೆ. ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರದಲ್ಲಿ ವಾಯು ಅಧಿಕ ಪ್ರಮಾಣದಲ್ಲಿದ್ದರೆ ಈ ಮುದ್ರೆಯಿಂದ ಕಡಿಮೆಯಾಗುತ್ತದೆ. ದುರ್ಬಲ ನಾಡಿಬಡಿತದ ಸಂದರ್ಭದಲ್ಲಿ ಈ ಮುದ್ರೆಯು ಚೇತರಿಕೆಗೆ ಸಹಕಾರಿಯಾಗುತ್ತದೆ. ದುರ್ಬಲ ಹೃದಯ ಪೀಡಿತರಿಗೆ ಮುದ್ರೆ ಬಲು ಉಪಕಾರಿ.

ವಿಧಾನ: ತೋರುಬೆರಳಿನ ಮೇಲೆ ಹೆಬ್ಬೆರನ್ನಿಟ್ಟು ಮೃದುವಾಗಿ ಒತ್ತಿ. ಅನಂತರ ಮಧ್ಯದ ಬೆರಳು ಮತ್ತು ಉಂಗುರ ಬೆರಳಿನ ತುದಿಗಳನ್ನು ಹೆಬ್ಬೆರಳಿನ ತುದಿಗೆ ತಾಗಿಸಿ. ಕಿರುಬೆರಳು ನೇರವಾಗಿರಲಿ. ಈ ಮುದ್ರೆಯನ್ನು 10 ನಿಮಿಷದಿಂದ 30-45 ನಿಮಿಷದವರೆಗೆ ಮಾಡಿದರೆ ಒಳ್ಳೆಯದು. ಹೃದಯ ಮುದ್ರೆಯನ್ನು ಅಭ್ಯಾಸ ಮಾಡಿದ ಬೆನ್ನಿಗೇ ಪ್ರಾಣ ಮುದ್ರೆಯನ್ನು 10 ರಿಂದ 15 ನಿಮಿಷ ಮಾಡಿ. ಓಂ ನಮಃ ಶಿವಾಯ ಎಂದು 108 ಬಾರಿ ಪಠಿಸಿ.

ಉಪಯೋಗ: ಹೃದಯಾಘಾತದ ಸಮಯದಲ್ಲಿ ಈ ಮುದ್ರೆಯನ್ನು ಮಾಡಿದರೆ ಇದರ ಪ್ರಯೋಜನ ತ್ವರಿತವಾಗಿ ಅನುಭವಕ್ಕೆ ಬರುತ್ತದೆ. ಕೆಲಸದೊತ್ತಡದ ವೇಳೆಯಲ್ಲಿ ಅಥವಾ ಮೆಟ್ಟಿಲುಗಳನ್ನು ಏರುವಾಗ ಅಥವಾ ಬೆಟ್ಟ-ಗುಡ್ಡ ಹತ್ತುವ ಸಂದರ್ಭದಲ್ಲಿ ಹೃದಯ ಮುದ್ರೆ ಮಾಡಿ. ಒಂದೆರಡು ನಿಮಿಷಗಳವರೆಗೆ ನಿಂತು ಮತ್ತೆ ಹತ್ತಿದರೆ ಈ ಮುದ್ರೆ ಪ್ರಾಣಶಕ್ತಿಯನ್ನು ಹೆಚ್ಚಿಸುತ್ತದೆ. ಕೈ-ಕಾಲುಗಳಲ್ಲಿ ಅನಗತ್ಯವಾಗಿ ಬರುವ ಬೆವರನ್ನು ನಿಯಂತ್ರಿಸುತ್ತದೆ. ಮೂತ್ರವಿಸರ್ಜನೆ ಸರಾಗವಾಗಲು ಸಹಾಯ ಮಾಡುತ್ತದೆ. ವೆರಿಕೋಸ್ ನರದ ತೊಂದರೆಯನ್ನು ಈ ಮುದ್ರೆಯಿಂದ ಸರಿಪಡಿಸಲು ಸಾಧ್ಯ. ವೇಗವಾಗಿ ಹೃದಯಬಡಿತ ಇರುವವರಿಗೆ ಮತ್ತು ಅಪಧಮನಿಗಳೊಳಗಿನ ಅಡೆತಡೆಗಳಿಂದ ಉಂಟಾಗುವ ಎದೆನೋವಿನಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಹೃದಯಾಘಾತದ ಸಂದರ್ಭದಲ್ಲಿ ಅಪಾನವಾಯು ಮುದ್ರೆ ಉತ್ತಮ ತುರ್ತು ಚಿಕಿತ್ಸೆಯಾಗಿದೆ ಎಂದು ನಂಬಲಾಗಿದೆ.

ಯೋಗಾಭ್ಯಾಸಕ್ಕೆ ಯಾವ ಸಮಯ ಸೂಕ್ತ

ನಾವು ಯೋಗದ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಆದರೆ ಅದನ್ನು ಅಭ್ಯಾಸ ಮಾಡಲು ಉತ್ತಮ ಸಮಯವನ್ನು ರ್ಚಚಿಸುವುದಿಲ್ಲ. ಅಭ್ಯಾಸ ಸಮಯವು ಯೋಗದ ಪರಿಣಾಮಕಾರಿತ್ವದೊಂದಿಗೆ ಬಹಳಷ್ಟು ಸಂಬಂಧಿಸಿದೆ. ಸಾಮಾನ್ಯವಾಗಿ ಟಿ.ವಿ.ಯಲ್ಲಿ ಬೆಳಗಿನ ಅವಧಿಯಲ್ಲಿ ಯೋಗ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಅದಕ್ಕೆ ಒಂದು ಕಾರಣವಿದೆ. ಯೋಗಾಭ್ಯಾಸ ಮಾಡಲು ಉತ್ತಮ ಸಮಯವೆಂದರೆ ಬೆಳಗಿನ ಉಪಾಹಾರಕ್ಕೆ ಮೊದಲು (ಬ್ರಾಹ್ಮೀಮುಹೂರ್ತ) ಎದ್ದು, ಶೌಚ ಮುಗಿಸಿ, ಆದರೆ ಸ್ನಾನವನ್ನೂ ಮಾಡಿ. ಎರಡನೆಯ ಅತ್ಯಂತ ಉತ್ತಮ ಸಮಯ ಸೂರ್ಯಾಸ್ತದ ಸುತ್ತ ಅಂದರೆ ಸಂಜೆ ನೀವು ವಿವಿಧ ಆಸನಗಳನ್ನು ಮಾಡಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರಧಾನಿ ಮೋದಿ ಹೆಲಿಕಾಪ್ಟರ್ ನಿಂದ ಇಳಿಸಲಾಗಿದ್ದ ಟ್ರಂಕ್ ನಲ್ಲಿ ಇದ್ದಿದೇನು.?ಕೊನೆಗೆ ಬಹಿರಂಗ ಆಯ್ತು ಆ ರಹಸ್ಯ!?

    ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 9ರಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದು, ಅವರಿದ್ದ ಹೆಲಿಕಾಪ್ಟರ್ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬಂದಿಳಿದ ವೇಳೆ ಅದರಲ್ಲಿದ್ದ ಟ್ರಂಕ್ ಒಂದನ್ನು ತರಾತುರಿಯಲ್ಲಿ ಸಾಗಿಸಲಾಗಿತ್ತು. ಮೂರ್ನಾಲ್ಕು ಮಂದಿ ಈ ಟ್ರಂಕ್ ಹೊತ್ತುಕೊಂಡು ಹೋಗಿ ಅಲ್ಲಿಯೇ ನಿಲ್ಲಿಸಿದ್ದ ಇನ್ನೋವಾ ಒಂದರಲ್ಲಿ ಇಟ್ಟಿದ್ದರು. ಬಳಿಕ ಆ ವಾಹನ ಕ್ಷಣಾರ್ಧದಲ್ಲಿ ಶರವೇಗದಲ್ಲಿ ಸಾಗಿ ಹೋಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚುನಾವಣೆಯಲ್ಲಿ ಬಳಸಲು ಈ ಟ್ರಂಕ್ ನಲ್ಲಿ ಅಪಾರ ಹಣವನ್ನು ತರಲಾಗಿದೆ…

  • ಸುದ್ದಿ

    ಈ ವಿಲನ್ ತನ್ನ ಹೆಂಡತಿಯನ್ನು ಹೇಗೆ ಕಳೆದುಕೊಂಡರು ಗೊತ್ತಾ, ಕಣ್ಣಲ್ಲಿ ನೀರು ಬರುತ್ತೆ.

    ಟಾಪ್ ವಿಲನ್ ಗಳಲ್ಲಿ ಇವರು ಒಬ್ಬರು. ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ ಈ ನಟ. ತೆಲುಗಿನ ಪೌರ್ಣಮಿ, ತುಳಸಿ, ಮುನ್ನ, ಅರುಂಧತಿ ಕನ್ನಡದ ಶ್ರೀ, ಯೋಧ ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಆದರೆ ಈತನ ಸುಂದರ ಸಂಸಾರ 10 ವರ್ಷಗಳ ಹಿಂದೆ ಛಿದ್ರ ಛಿದ್ರವಾಯಿತು. ಅದಕ್ಕೆ ಕಾರಣ ಏನು? ಆನಂತರ ಏನಾಯಿತು? ಗೊತ್ತಾ?? 1998 ರಲ್ಲಿ ರೀನಾ ಎನ್ನುವವರನ್ನು ಮದುವೆಯಾದ ರಾಹುಲ್ ಗೆ ಒಂದು ಮುದ್ದಾದ ಮಗು ಹುಟ್ಟಿತು….

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನ ಒಂದು ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…

  • ಸುದ್ದಿ

    ನೀವು ಪ್ಯಾಕೆಟ್ ಹಾಲುಗಳನ್ನ ಬಳಸ್ತಿದೀರಾ! ಎಚ್ಚರಿಕೆ.

    ಈ ಭೂಮಿಗೆ ಕಾಲಿಟ್ಟ ಪ್ರತಿಯೊಬ್ಬರೂ ತಾಯಿಯ ಹಾಲನ್ನ ಕುಡಿದಿರುತ್ತಾರೆ ಮತ್ತು ಬಹಳಷ್ಟು ದಿನಗಳ ತನಕ ಬೇರೆ ಯಾವ ಆಹಾರವನ್ನ ಕೂಡ ಸೇವನೆ ಮಾಡದೆ ಕೇವಲ ತಾಯಿಯ ಎದೆ ಹಾಲನ್ನ ಕುಡಿದು ನಾವು ಬದುಕಿದ್ದೇವೆ, ತಾಯಿಯ ಎದೆ ಹಾಲು ಭೂಲೋಕದಲ್ಲಿ ಸಿಗುವ ಒಂದು ಅಮೃತ ಎಂದು ಹೇಳಿದರೆ ತಪ್ಪಾಗಲ್ಲ. ಮಮತೆ, ಪ್ರೀತಿ ಮತ್ತು ಪೋಷಣೆಯ ಅದ್ಬುತ ಶಕ್ತಿ ಈ ಹಾಲಿನಲ್ಲಿ ಇದೆ. ತಾಯಿಯ ಎದೆ ಹಾಲಿನ ಋಣವನ್ನ ತೀರಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಇನ್ನು ಕೆಲವರಿಗೆ ಈ ಮಮತೆಯ…

  • ಕರ್ನಾಟಕದ ಸಾಧಕರು

    ‘ತಿಮ್ಮಪ್ಪ ನಾಯಕ’ ಕನಕದಾಸರಾಗಿದ್ದು ಹೇಗೆ ಎಂದು ತಿಳಿಯ ಬೇಕಾ..!ಹಾಗದ್ರೆ ಈ ಲೇಖನ ಓದಿ..

    ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು.