ಆರೋಗ್ಯ

ಚಳಿಗಾಲದಲ್ಲಿ ಏನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಈ ಮಾಹಿತಿ ನೋಡಿ.

124

ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್​ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.
ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್​ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.
ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು ಎಂಬುದನ್ನು ತಜ್ಞರು ಹೇಳಿದ್ದಾರೆ ನೋಡಿ.

1. ಚಳಿಗಾಲದಲ್ಲಿ ಆಗಾಗ ಏನಾದರೂ ತಿನ್ನುತ್ತಿದ್ದರೆ ದೇಹ ಬೆಚ್ಚಗಿರುತ್ತದೆ.
ಇದೊಂದು ಶುದ್ಧ ತಪ್ಪು ಕಲ್ಪನೆ ಎಂದು ಹೇಳುತ್ತಾರೆ ಪೌಷ್ಟಿಕತಜ್ಞರು. ಚಳಿಗಾಲ ಬಂತೆಂದರೆ ಸಾಕು, ಜಾಸ್ತಿ ಆಹಾರ ಸೇವಿಸಿ. ಆಗಾಗ ಏನಾದರೂ ಸ್ವಲ್ಪ ತಿನ್ನುತ್ತಿರಿ. ಇದರಿಂದ ದೇಹ ಬೆಚ್ಚಗಿರುತ್ತದೆ. ಅನಾರೋಗ್ಯಕ್ಕೆ ಒಳಗಾಗುವುದೂ ತಪ್ಪುತ್ತದೆ ಎಂದು ಮನೆಯಲ್ಲಿ ಹಿರಿಯರು, ಪಾಲಕರು ಹೇಳುವುದನ್ನು ಕೇಳಿದ್ದೇವೆ.
ಆದರೆ ತಜ್ಞರು ಹೇಳುವ ಪ್ರಕಾರ, ಹೀಗೆ ಪದೇಪದೆ ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆ ಹೊರತು ಬೇರೇನೂ ಉಪಯೋಗ ಆಗುವುದಿಲ್ಲ. ಅದರ ಬದಲಾಗಿದೆ ಚಳಿಗಾಲದಲ್ಲಿ ಸರಿಯಾದ ಕ್ರಮದಲ್ಲಿ ಡಯಟ್​ ಮಾಡುವ ಮೂಲಕ ಕಾಯಿಲೆ ಬರುವುದನ್ನು ತಡೆಗಟ್ಟಬಹುದು. ಹಾಗಾಗಿ ಆಗಾಗ ಏನಾದರೂ ಆಹಾರ ಸೇವನೆ ಮಾಡುವುದರಿಂದ ಏನೂ ಉಪಯೋಗವಿಲ್ಲ.

2. ಮಸಾಲೆಯುಕ್ತ ಆಹಾರ ಸೇವನೆ ದೇಹವನ್ನು ಬೆಚ್ಚಗಿಡುತ್ತದೆ.
ಮಸಾಲೆಯುಕ್ತ, ಖಾರ, ಸ್ಪೈಸಿ ಆಹಾರಗಳ ಸೇವನೆಯಿಂದ ಖಂಡಿತ ಮೈ ಬೆವರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮೆಣಸಿನಕಾಯಿ ಪ್ರಮಾಣ ಹೆಚ್ಚಾಗಿರುವ ಆಹಾರ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗಿ ನಾವು ಚಳಿಯಿಂದ ಪಾರಾಗಬಹುದು ಎಂದುಕೊಂಡಿದ್ದರೆ ಅದು ದೊಡ್ಡ ತಪ್ಪು.
ಆಹಾರ ತಜ್ಞರ ಪ್ರಕಾರ, ಮಸಾಲೆಯುಕ್ತ ಸ್ಪೈಸಿ ಆಹಾರಗಳು ನಮ್ಮ ದೇಹದ ಉಷ್ಣತೆಯ ಮೇಲೆ ಯಾವುದೇ ಗುರುತರ ಪ್ರಭಾವವನ್ನೂ ಬೀರುವುದಿಲ್ಲ. ಅದನ್ನು ತಿಂದ ಕ್ಷಣಕ್ಕೆ ಖಾರದಿಂದ ಮೈ ಬಿಸಿಯಾಗಬಹುದು. ಬೆವರಬಹುದು. ಆದರೆ ನಂತರ ಏನೂ ಪ್ರಯೋಜನವಿಲ್ಲ.

3. ನೀವು ಶೀತ, ಕೆಮ್ಮಿನಿಂದ ಬಳಲುತ್ತಿದ್ದರೆ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು
ಯಾರಾದರೂ ಹೀಗೆ ಹೇಳಿದರೆ ಅದನ್ನು ಕೇಳಲೇಬೇಡಿ ಎನ್ನುತ್ತಾರೆ ತಜ್ಞರು.

ಕಿತ್ತಳೆ, ಲಿಂಬುವಿನಂತಹ ಸಿಟ್ರಸ್​​ ಹಣ್ಣುಗಳು ಚಳಿಗಾಲದಲ್ಲಿ ದೇಹಕ್ಕೆ ಅತ್ಯವಶ್ಯಕ. ವಿಟಮಿನ್​ ಸಿಯನ್ನು ಹೇರಳವಾಗಿ ಹೊಂದಿರುವ ಈ ಹಣ್ಣುಗಳಲ್ಲಿ ನೀರಿನ ಅಂಶವೂ ಹೆಚ್ಚಾಗಿರುತ್ತದೆ.
ಕಿತ್ತಳೆಗಳು ಚಳಿಗಾಲದ ಹಣ್ಣುಗಳು. ಅವು ಚಳಿಗಾದಲ್ಲಿ ಸಿಗುತ್ತವೆ ಎಂದರೆ ಆ ಸಮಯದಲ್ಲಿಯೇ ನಮ್ಮ ದೇಹಕ್ಕೆ ಬೇಕು ಎಂದರ್ಥ. ಕೆಮ್ಮು, ನೆಗಡಿಯಾದಾಗ ಕಿತ್ತಳೆ, ಲಿಂಬು ಹಣ್ಣುಗಳ ಸೇವನೆ ಮಾಡಬೇಕು. ನಮ್ಮೊಳಗಿನ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಅಲ್ಲದೆ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಕಟ್ಟಿಕೊಂಡ ಕಫವನ್ನು ಸಡಿಲಗೊಳಿಸುತ್ತವೆ ಹಾಗೂ ಶೀತವನ್ನು ತೊಡೆದುಹಾಕುತ್ತದೆ ಎಂದು ನ್ಯೂಟ್ರಿಷಿಯನಿಸ್ಟ್​ ಹೇಳುತ್ತಾರೆ.

4. ಡೇರಿ ಉತ್ಪನ್ನಗಳಿಂದ ದೂರವಿರಿ
ಈ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಮೊದಲೇ ಚಳಿ ಇರುತ್ತದೆ. ಶೀತ, ಕೆಮ್ಮು, ಜ್ವರ, ಕಫ ಇರುತ್ತದೆ. ಹೀಗಿರುವಾಗ ಡೇರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪಗಳ ಸೇವನೆಯಿಂದ ಮತ್ತಷ್ಟು ಕಫ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಬಹುತೇಕರ ನಂಬಿಕೆ. ಆದರೆ ನಿಜಕ್ಕೂ ಹಾಗೇನೂ ಆಗುವುದಿಲ್ಲ ಎಂಬುದನ್ನು ಆಹಾರತಜ್ಞರು ಪತ್ತೆಹಚ್ಚಿದ್ದಾರೆ.
ಚಳಿಗಾಲದಲ್ಲಿ ರಾತ್ರಿ ವೇಳೆ ಬಿಸಿ ಹಾಲಿಗೆ ಸ್ವಲ್ಪ ಕೇಸರಿ ಬೆರಸಿ ಕುಡಿಯುವುದು ತುಂಬ ಉತ್ತಮ. ಹಾಲಿನ ಉತ್ಪನ್ನಗಳನ್ನು ಹಿತಮಿತವಾಗಿ ಸೇವಿಸುವುದರಿಂದ ಪೋಷಕಾಂಶ ಸಿಗುತ್ತದೆ ಎಂದು ಹೇಳಿದ್ದಾರೆ.

5.ಚಳಿಗಾಲದಲ್ಲಿ ವಿಟಮಿನ್​ ಸಪ್ಲಿಮೆಂಟ್ಸ್​ ತೀರ ಅಗತ್ಯ
ವಿಟಮಿನ್​ಗಳನ್ನು ತೆಗೆದುಕೊಳ್ಳುವುದು ಒಳ್ಳೆಯದೇ. ಆದರೆ ಉಳಿದ ಕಾಲಗಳಿಗಿಂತ ಚಳಿಗಾಲದಲ್ಲೇ ತೆಗೆದುಕೊಳ್ಳಬೇಕು ಎಂಬುದು ತಪ್ಪು ಅಭಿಪ್ರಾಯ.
ಒಬ್ಬ ಮನುಷ್ಯ ತನ್ನ ದೇಹಕ್ಕೆ ಬೇಕಾದ ವಿಟಮಿನ್​ಗಳನ್ನು ಪಡೆಯಲು ಸಮತೋಲನಯುಕ್ತ ಡಯಟ್​ ಮಾಡುವುದು ಉತ್ತಮ. ಸುಮ್ಮನೆ ತೆಗೆದುಕೊಳ್ಳುವ ಅನಗತ್ಯ ಸಪ್ಲಿಮೆಂಟ್ಸ್​ಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಶಿವಸೇನಾ ಬೆಂಬಲಿಗರ ಒತ್ತಾಯ ; ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಸ್ಥಾನ,.!!

    ಶಿವಸೇನೆ ಮುಖ್ಯಸ್ಥ ಉದ್ಧವ್​ಠಾಕ್ರೆ ಮಗ ಆದಿತ್ಯ ಠಾಕ್ರೆ ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಗೆಲುವನ್ನು   ದಾಖಲಿಸಿದ  ಮತ್ತು ಅವರಿಗೆ  ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಬೆಂಬಲಿಗರಿಂದ ಜೋರಾಗಿ  ಕೇಳಿ ಬಂದಿದೆ. ಇನ್ನು ಇದನ್ನು  ಕುರಿತು ಮುಂಬೈನ ಅನೇಕ ಕಡೆ ಶಿವಸೇನಾ ಕಾರ್ಯಕರ್ತರು ಬ್ಯಾನರ್​ ಹಾಕಿದ್ದು, ಅದರಲ್ಲಿ ಶಿವಸೇನೆಯ ಯುವನಾಯಕ, ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಘೋಷಣೆ ಬರೆದಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಮುಖ್ಯಮಂತ್ರಿ ಸ್ಥಾನವನ್ನು  ಉದ್ಧವ್​ ಠಾಕ್ರೆ ಮುನ್ನಡೆಸುತ್ತಿದ್ದು, ಅವರು  ಇರುವಾಗಲೇ ಅವರ ಮಗನಿಗೆ ಸಿಎಂ ಸ್ಥಾನ ನೀಡಬೇಕು…

  • ಸುದ್ದಿ

    ನೀವು ತಿರುಪತಿ ತಿಮ್ಮಪ್ಪನಿಗೆ ಮೂಡಿ ಅರ್ಪಿಸುತ್ತಿದ್ದೀರಾ ಯಾಕೆ ಅಂತ ಕಾರಣ ಗೊತ್ತಾ?ಗೊತ್ತಿಲ್ಲದಿದ್ದರೆ ತಿಳಿಯಿರಿ,!

    ತಲೆ ಬೋಳಿಸುದನ್ನ ಕೆಲವು ಹರಕೆ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನ ಬಿಸಿನೆಸ್ ಎಂದು ಹೇಳುತ್ತಾರೆ, ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮೂಡಿ ಕೊಡುವುದು ಯಾಕೆ ಮತ್ತು ಈ ಮೂಡಿ ಕೊಡುವ ಹರಕೆಯ ಹಿಂದೆ ಇರುವ ರೋಚಕ ಸತ್ಯ ಏನು ಎಂದು ತಿಳಿದರೆನೀವು ಆಶ್ಚರ್ಯ ಪಡುತ್ತೀರಾ. ಹಾಗಾದರೆ ಮೂಡಿ ಕೊಡುವ ಹಿಂದೆ ಇರುವ ರೋಚಕ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆನಿಮ್ಮ ಅನಿಸಿಕೆಯನ್ನ ನಮಗೆ…

  • ಚುನಾವಣೆ

    ಕೋಲಾರ ಜಿಲ್ಲೆ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023

    ಕೋಲಾರ ಜಿಲ್ಲೆಯ 6 ವಿಧಾನ ಸಭಾ ಮತ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಪೂರ್ಣ; ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ; ನಿಗಾವಹಿಸಲು ವಿವಿಧ ತಂಡಗಳ ರಚನೆ: ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಕೋಲಾರ(ಕರ್ನಾಟಕ ವಾರ್ತೆ)ಮಾ.29:  ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು…

  • ಆರೋಗ್ಯ

    ಈ ಅದ್ಭುತವಾದ ಗಿಡದಲ್ಲಿರುವ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ. ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ.

  • ಉಪಯುಕ್ತ ಮಾಹಿತಿ

    ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ..! ತಿಳಿಯಲು ಓದಿ…

    ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಸ್ಪೂರ್ತಿ

    ಈ ಅಟೋಚಾಲಕ ತಮ್ಮ ಆಟೋವನ್ನು ಆಂಬುಲೆನ್ಸ್ ಆಗಿ ಮಾಡಿಕೊಂಡು ರೋಗಿಗಳಿಗೆ ದೇವರಾಗಿದ್ದಾನೆ..!ತಿಳಿಯಲು ಈ ಲೇಖನ ಓದಿ..

    ನಮ್ಮ ಜಗತ್ತಿನಲ್ಲಿ ಅವರ ಬೇಳೆ ಬೇಯಿಸಿಕೊಳ್ಳಲು ಜನ ಯೋಚಿಸುತ್ತಾರೆ ಹೊರತು ಮತ್ತೊಬ್ಬರಿಗೆ ಯಾವ ವಿಷಯದಲ್ಲೂ ಸಹಾಯಮಾಡುವುದಿಲ್ಲ, ಇನ್ನೊಬ್ಬರ ಕಷ್ಟ ಕಣ್ಣಿಗೆ ಕಂಡರೂ ಕಾಣದಂತೆ ಓಡಾಡುವ ಜನರೇ ಹೆಚ್ಚು ಅಂತದರಲ್ಲಿ ಇಲ್ಲೊಬ್ಬ ವ್ಯಕ್ತಿ ಉಚಿತವಾಗಿ ರೋಗಿಗಳಿಗೆ ಸಹಾಯ ಮಾಡುತ್ತಾರೆ ಎಂದರೆ ಇವರು ನಿಜವಾಗಲೂ ಗ್ರೇಟ್.