ಸುದ್ದಿ

ಸಾವಿನಲ್ಲಿಯೂ ಸಹ ಸಾರ್ಥಕತೆ, ಮೆದುಳು ನಿಷ್ಕ್ರಿಯಗೊಂಡ ಉಡುಪಿ ಯುವಕನ ಅಂಗಾಂಗ ದಾನ…!

38

ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ.

ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ ಹಿನ್ನೆಲೆ ಸಂದೀಪ್ ಅವರ ದೇಹದ ಎಂಟು ಅಂಗಗಳನ್ನು ಅಗತ್ಯವಿರುವ ಬೇರೆ ಬೇರೆ ರೋಗಿಗಳಿಗೆ ಅಳವಡಿಸಲು ನಿರ್ಧರಿಸಲಾಗಿದೆ. ಎರಡು ಕಾರ್ನಿಯಾ, ಎರಡು ಕಿಡ್ನಿ (ಮೂತ್ರಪಿಂಡ), ಯಕೃತ್ತು, ಮೇದೋಜೀರಕ ಗ್ರಂಥಿ, ಹೃದಯ ಕಪಾಟಗಳು ಹಾಗೂ ಶ್ವಾಸಕೋಶಗಳನ್ನು ದಾನ ಮಾಡಲಾಗಿದೆ. ಈ ಎಲ್ಲಾ ಅಂಗಾಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ತಂದು ಅಲ್ಲಿಂದ ಚೆನ್ನೈ ಆಸ್ಪ್ತ್ರೆಗೆ ಸಾಗಿಸಲಾಗಿದೆ.

ಮೃತರ ಎರಡು ಮೂತ್ರಪಿಂಡಗಳನ್ನು ಕಸ್ತೂರ್ಬಾ ಆಸ್ಪತ್ರೆಯ ರೋಗಿಗಳಿಗೆ ಅಳವಡಿಸಿದ್ದರೆ ಯಕೃತ್ತು ಹಾಗೂ ಮೇದೋಜೀರಕ ಗ್ರಂಥಿಗಳನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ ನಿಡಲಾಗಿದೆ. ಇನ್ನು ಹೃದಯ ಕಪಾಟ ಹಾಗೂ ಶ್ವಾಸಕೋಶಗಳನ್ನು ಚೆನ್ನೈ ಬಿಜಿಎಸ್ ಆಸ್ಪತ್ರೆ ರೋಗಿಗಳಿಗೆ ಅಳವಡಿಸಾಗುತ್ತದೆ ಎಂದು ಮೂಲಗಳು ಹೇಳಿದೆ.ಹೀಗೆ ಸಂದೀಪ್ ತಾವು ಸಾವಿನಲ್ಲಿಯೂ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ನುಡಿದಂತೆ ನಡೆದ “ಹಳ್ಳಿ ಹುಡುಗ ಪ್ರಥಮ್”.

    ನಮ್ಮ ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿರೋ ರಾಜಕಾರಣಿಗಳೇ ಸಾವಿರಾರೂ ಭರವಸೆಗಳನ್ನು ಕೊಡ್ತಾ ಇನ್ನೂ ಜೀವಂತವಾಗಿ ಸನ್ಮಾನ ಮಾಡಿಸಿಕೊಂಡು ಓಡಾಡುತ್ತಿರುವಾಗ, ಕನ್ನಡದ ಬಿಗಬಾಸ್ ಸಂಚಿಕೆ-4ರ ವಿಜೇತರಾದ ಒಳ್ಳೆ ಹುಡುಗ “ಪ್ರಥಮ್” ರವರು ಆ ದಿನ ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

  • ಸುದ್ದಿ

    ಲೈಂಗಿಕ ಕಿರುಕಳ ನೀಡುತಿದ್ದ ಕಾಮುಕ ಮಾವನ ಹಿಡಿಯಲು ಸೊಸೆ ಮಾಡಿದ ಚಾಣಾಕ್ಷ ಪ್ಲ್ಯಾನ್…..!

    ತನ್ನ ಸೊಸೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ 50 ವರ್ಷದ ಆಟೋ ಚಾಲಕನನ್ನು ಮುಂಬೈ ವಿಹಾರ್ ಪೊಲೀಸರು ಬಂಧಿಸಿದ್ದಾರೆ.  ಮಾವನಿಂದಲೇ ಶೋಷಣೆ ಆಗುತ್ತಿರುವ ಬಗ್ಗೆ ಮಹಿಳೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಳು. ಆದರೆ ಗಂಡ ಆಕೆಯ ಮಾತನ್ನು ನಂಬಿರಲಿಲ್ಲ. ಹಾಗಾಗಿ ಮಹಿಳೆ ಸಾಕ್ಷಿ ಸಮೇತ ಮಾವನನ್ನು ಹಿಡಿದಕೊಡುವ ನಿರ್ಧಾರಕ್ಕೆ ಬಂದಿದ್ದರು. ಅಡುಗೆ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಫಿಕ್ಸ್ ಮಾಡಿದಳು. ಮಾವ ಆಕೆಯ ಮೇಲೆ ಶೋಷಣೆ ಮಾಡಲು ಆಗಮಿಸಿದ.  ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದವ ಸೊಸೆಯ…

  • ಸಿನಿಮಾ

    ಕಿಚ್ಚ ನಟಿಸುತ್ತಿರುವ ಈ ಹಾಲಿವುಡ್ ಚಿತ್ರದಲ್ಲಿ, ಖ್ಯಾತ ನಾಯಕಿ ಮತ್ತು ನಿರ್ದೇಶಕ ಯಾರು ಗೊತ್ತಾ..?ಈ ಲೇಖನ ಓದಿ ಶಾಕ್ ಆಗ್ತೀರಾ…

    ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ವಿದೇಶಕೆ ತೆರಳಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.

  • ಕರ್ನಾಟಕ

    ಗೋವಾ ನಿರಾಶ್ರಿತ ಕನ್ನಡಿಗರಿಗೆ, ರಾಜ್ಯದಿಂದ ಸಿಕ್ಕ ಭಾಗ್ಯ ಏನು ಗೊತ್ತಾ..?

    ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ‌ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

  • ಸುದ್ದಿ

    ವೇಶ್ಯೆಯರನ್ನೂ ಬಿಡದ ಕಾಮುಕರು, ಮೂವರ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ…!

    ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ. ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಕ್ಯಾಬ್ ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಗಿರಾಕಿಗಳ ಸೋಗಿನಲ್ಲಿ ಮಹಿಳೆಯರನ್ನು ಸಂಪರ್ಕಿಸಿದ್ದಾರೆ. 3000 ಸಾವಿರ ರೂಗಳಿಗೆ ಡೀಲ್ ಮಾಡಿಕೊಂಡ ದುಷ್ಕರ್ಮಿಗಳು ಮಹಿಳೆಯರನ್ನು ನೊಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ ಮುಂಗಡ ಹಣವನ್ನೂ ನೀಡಿದ್ದಾರೆ. ಬಳಿಕ ಮಹಿಳೆಯರನ್ನು…

  • ಸುದ್ದಿ

    ಜನವರಿ 8ರಿಂದ ಬ್ಯಾಂಕ್ ಗಳು ಬಂದ್ ಆಗಲಿವೆ. ಏನಾದರೂ ಬ್ಯಾಂಕ್ ವ್ಯವಹಾರಗಳು ಇದ್ದರೆ ಈಗಲೇ ಮುಗಿಸಿಕೊಳ್ಳಿ…

    ಜನವರಿ 8 ಮತ್ತು 9 ಭಾರತ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರದ್ಧ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕೇಂದ್ರ ಸರ್ಕಾರವು ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕಾರ್ಮಿಕ ಸಂಘಟೆಗಳು ಅಪಾದಿಸಿವೆ. ಇದಕ್ಕೆ ಇಂಡಿಯನ್ ಬ್ಯಾಂಕ್​ ಅಸೋಸಿಯೇಷನ್ ಸಹ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ.ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಮತ್ತು ಬ್ಯಾಂಕ್ ಎಂಫ್ಲಾಯಿಸ್​ ಫೆಡರೇಷನ್ ಆಫ್ ಇಂಡಿಯಾ ಅಸೋಸಿಯೇಷನ್​​ (ಬಿಇಎಫ್​ಐಎ) ಸಂಘಟನೆಗಳು ಬ್ಯಾಂಕ್ ಆಫ್ ಇಂಡಿಯಾ…