ಸುದ್ದಿ

ವಿರಾಟ್ ಕೊಹ್ಲಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ…!

61

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ  ಅವರ ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಭಾರತ ತಂಡದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ. 

ವೆಸ್ಟ್‌ಇಂಡೀಸ್ ಪ್ರವಾಸದ ವೇಳೆಯಲ್ಲಿ ಜಮೈಕಾದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಯಲ್ಲಿರುವಾಗ ಅಚಾನಕ್ ಆಗಿ ಬಾಲಕನ ಭೇಟಿಯಾದರು. ಈ ಸಂದರ್ಭದಲ್ಲಿ ಬಾಲಕನೇ ನನ್ನ ಆಟೋಗ್ರಾಫ್ ಪಡೆಯುವೀರಾ ಎಂದು ವಿರಾಟ್ ಕೊಹ್ಲಿರನ್ನು ಪ್ರಶ್ನಿಸಿದರು. 

ಬಾಲಕನ ಪ್ರಶ್ನೆಯಿಂದ ಅಚ್ಚರಿಗೊಂಡರೂ ನಗುಮುಖದಿಂದಲೇ ಬಹಳ ತಾಳ್ಮೆಯಿಂದ ಆಟೋಗ್ರಾಫ್ ಪಡೆಯುವ ಮೂಲಕ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದಾರೆ. 

ಇದಕ್ಕೂ ಮೊದಲು ವೆಸ್ಟ್‌ಇಂಡೀಸ್ ಸರಣಿ ನಡುವೆ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುವ ಮೂಲಕ ವಿರಾಟ್ ಕೊಹ್ಲಿ ಹೃದಯ ಗೆದ್ದಿದ್ದರು. ಅಂದ ಹಾಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ2-0 ಅಂತರದಲ್ಲಿ ವೈಟ್‌ವಾಶ್ ಮಾಡಿಕೊಂಡಿದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕ್ರೀಡೆ

    ನಿಮ್ಮ ಬಾಲ್ಯದ ಈ ಆಟಗಳು ನೆನಪಿದೆಯಾ ???

    ಗೋಲಿ ಆಟ : ಅಂಗಳದಲ್ಲಿ ಒಂದು ಕುಳಿ ತೆಗೆಯುತ್ತಾರೆ. ಕುಳಿಯಿಂದ ಸುಮಾರು ಇಪ್ಪತ್ತು ಇಪ್ಪತ್ತೈದು ಫೂಟುಗಳ ಅಂತರದ ಮೇಲೆ ಅಡ್ಡ ಗೆರೆಯೊಂದನ್ನು ಎಳೆದು, ಅಲ್ಲಿಂದ ಆಟಗಾರರು ಗೋಡಾ-ಎಂದು ತಮ್ಮ ಗೋಲಿಗಳನ್ನು ಕುಳಿಯತ್ತ ಬಿಡುವರು. ಯಾರ ಗೋಲಿ ಕುಳಿಯ ಹತ್ತರ ಬೀಳುವದೋ ಅವರು ಮೊದಲು ಕುಳಿ ತುಂಬುವರು. ಕುಳಿ ತುಂಬಿದವರು ಕುಳಿಯ ಹತ್ತಿರ ಕುಳಿತಯ ಇನ್ನೊಬ್ಬರ ಗೋಲಿಗೆ ಹೊಡೆಯುವರು. ಆಗ ಇನ್ನೊಬ್ಬ ಅವನ ಗೋಲಿ ಹೊಡೆತದಿಂದ ಎಷ್ಟು ದೂರ ಬೀಳುವದೋ ಅಲ್ಲಿಂದ ತನ್ನ ಮುಷ್ಟಿ ಕಟ್ಟಿ ಮುಷ್ಟಿಯ ತುದಿಯಿಂದ ಗೋಲಿಯನ್ನು ತೊರಿ ಕುಳಿಯನ್ನು ತುಂಬಬೇಕು. ಕೈಮುಷ್ಟಿಯಿಂದ ಗೋಲಿ ತೂರುವುದಕ್ಕೆ “ಡೀಗು” ಎನ್ನುತ್ತಾರೆ. ಒಮ್ಮ ಗೋಲಿಗೆ ಹೊಡೆದ ಹೊಡೆತದ ಗುರು ತಪ್ಪಿದರೆ, ಗೋಲಿ ಇದ್ದಲ್ಲಿಂದ ಮೇಲೆ ಹೇಳಿದ ರೀತಿಯಲ್ಲಿ ಗೋಲಿ ತೂರಿ ಕುಳಿ ತುಂಬಬೇಕು. ಒಮ್ಮೊಮ್ಮೆ ಗೋಲಿ ಕುಳಿಯಿಂದ ಹೊಡೆದ ಪರಿಣಾಮವಾಗಿ ಬಹಳ ದೂರ ಬಿದ್ದರೆ, ಮೂರು ಸಲ ಮುಷ್ಟಿಯಿಂದ ಡೀಗಲು ಅವಕಾಶ ಕೊಡುತ್ತಾರೆ. ಆಗ ಗೋಲಿ ಕುಳಿ ತುಂಬದೆ ಕುಳಿಯಿಂದ ಅಂತರದಲ್ಲಿಯೇ ಉಳಿದರೆ, ಮತ್ತೆ ಆಟಗಾರ ಇನ್ನೊಮ್ಮೆ ಕುಳಿಯ ಹತ್ತಿರ ಕುಳಿತು ಗೋಲಿಗೆ ಹೊಡೆದು ಓಡುಸುತ್ತಾನೆ. ಹೀಗೆ ಗೋಲಿಯನ್ನು ಮುಷ್ಟಿಯಿಂದ ಡೀಗುವವ ಕುಳಿ ತುಂಬುವವರೆಗೆ ಆಟ ಮುಂದುವರೆಯುತ್ತದೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ…ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಬುಧವಾರ, 21/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮೇಲಾಧಿಕಾರಿಗಳೊಂದಿಗಿನ ಮಾತುಕತೆಯಿಂದ ಹೆಚ್ಚಿನ ಫಲ. ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಅನುಕೂಲ ಮತ್ತು ಲಾಭ ದೊರಕಲಿದೆ. ಅನಿರೀಕ್ಷಿತವಾಗಿ ಸಂಚಾರ ಒದಗಿ ಬಂದೀತು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಸದ್ಯದಲ್ಲೇ ಶುಭವಾರ್ತೆ ಇದೆ. ಅತಿಥಿಗಳ ಆಗಮನವಿದೆ. ವೃಷಭ:- ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಆಗಾಗ ಕಿರಿಕಿರಿ ತೋರಿ ಬಂದರೂ ಕಾರ್ಯಸಾಧನೆಯಾಗುತ್ತದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಸಾಧನೆ ಕಂಡು ಸಂತೋಷ ವಾಗಲಿದೆ….

  • ಜ್ಯೋತಿಷ್ಯ

    ಚಂದ್ರಗ್ರಹಣ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ ಏನೆಂದು ತಿಳಿಯಿರಿ….!

    ಈ ಬಾರಿ ಚಂದ್ರಗ್ರಹಣ ಧನಸ್ಸು ಮತ್ತು ಮಕರ ರಾಶಿಯವರಿಗೆ ಹೆಚ್ಚು ದೋಷಕರವಾಗಲಿದೆ. ವೃಷಭ ಲಗ್ನ ಮತ್ತು ಮಿಥುನ ಲಗ್ನದಲ್ಲಿ ಚಂದ್ರಗ್ರಹಣ ಸಂಭವಿಸುತ್ತಿದೆ. ಹಾಗಾಗಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರಿಗೆ ಸ್ವಲ್ಪ ಮಟ್ಟದ ದೋಷ ಎದುರಾಗಲಿದೆ ಎಂದು ಜೋತಿಷ್ಯಶಾಸ್ತ್ರಜ್ಞರು ಹೇಳುತ್ತಾರೆ. ದೋಷ ನಿವಾರಣೆ: ಗ್ರಹಣ ಕಾಲದಲ್ಲಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರು ನಿದ್ರೆ ಮಾಡದೇ ಕೆಳಗೆ ನೀಡಲಾಗಿರುವ ಶ್ಲೋಕವನ್ನು ಕ್ರಮಬದ್ಧವಾಗಿ ಹೇಳುತ್ತಾ ಪಾರಾಯಣ ಮಾಡಬೇಕು. ಯೋ ಸೌ ವ್ರಜಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ…

  • ಆಧ್ಯಾತ್ಮ

    ಧ್ಯಾನ ಮಾಡೋದ್ರಿಂದ ಏನೆಲ್ಲಾ ಚಮತ್ಕಾರ ಆಗುತ್ತೆ ಗೊತ್ತಾ!ಹಾಗಾದ್ರೆ ಧ್ಯಾನ ಹೇಗೆ ಮಾಡಬೇಕು,ಹೇಗೆ ಮಾಡಬಾರದು?ತಿಳಿಯಲು ಈ ಲೇಖನಿ ಓದಿ…

    ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮುಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ಧ್ಯಾನದ ಲಾಭಗಳು ವರ್ಣಿಸಲು ಹೋದರೆ ಅದಕ್ಕೆ ಅಂತ್ಯವೇ ಇಲ್ಲ.

  • ಸುದ್ದಿ

    ಟಿಕ್‌ಟಾಕ್‌ಗೆ ಮತ್ತೊಂದು ಬಲಿ : ಕೋಲಾರದಲ್ಲಿ ಕೃಷಿ ಹೊಂಡದ ಬಳಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು…!

    ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್​ಟಾಕ್​ ಕ್ರೇಜ್​​ಗೆ ಬಲಿಯಾಗಿದ್ದಾಳೆ. ಮಾಲಾಗೆ ವಿಪರೀತ ಟಿಕ್​ಟಾಕ್​ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್​ಟಾಕ್​ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ…