ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಲ್ದೂರು ಸಮೀಪದ ಹಳಿಯೂರು ಕಾಲೊನಿ ವಾಸಿ ಲೋಕೇಶ್, ಸರಿತಾ ಅವರ 3 ತಿಂಗಳ ಮಗು ಆರವ್ನನ್ನು ಜಾಂಡೀಸ್ ಕಾಯಿಲೆ ಕಾರಣ ಹಾಸನದ ಮಣಿ ಆಸ್ಪತ್ರೆಗೆ ಕಳೆದ ಗುರುವಾರ ದಾಖಲಿಸಲಾಗಿತ್ತು. ಮಣಿ ಆಸ್ಪತ್ರೆಯವರು ಮಗುವಿನ ಪೋಷಕರಿಂದ ಹಣ ಕಟ್ಟಿಸಿಕೊಂಡು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ ಹಸ್ತಾಂತರಿಸಿಬಿಟ್ಟರು.
ಮಗುವಿನ ಅಂತ್ಯಕ್ರಿಯೆ ನಡೆಸಲು ತಾಯಿ ಸರಿತಾ ಅವರ ತವರು ಮನೆ ಮೂಡಿಗೆರೆ ಸಮೀಪದ ಭಾರತಿ ಆಂಬ್ಯುಲೆನ್ಸ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಮೂಡಿಗೆರೆ ಸಮೀಪ ಮಗು ಮೂತ್ರ ವಿಸರ್ಜಿಸಿದ್ದಲ್ಲದೇ, ಏಕಾಏಕಿ ಅಳಲು ಪ್ರಾರಂಭಿಸಿತು. ಆಶ್ಚರ್ಯಚಕಿತರಾದ ಪೋಷಕರು, ತಕ್ಷಣವೇ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಪರೀಕ್ಷಿಸಿ ಮಗು ಜೀವಂತವಾಗಿರುವುದನ್ನು ದೃಢಪಡಿಸಿದರು. ವೈದ್ಯರ ಸೂಚನೆ ಮೇರೆಗೆ ತಕ್ಷಣವೇ ಮಂಗಳೂರಿನ ಫಾದರ್ಮುಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಗು ಆರೋಗ್ಯವಾಗಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಲೋಕೇಶ್,ಸರಿತಾ ದಂಪತಿಗೆ ಇದು 2ನೇ ಮಗು. ಮೊದಲ ಗಂಡು ಮಗು ಕಾಯಿಲೆಯಿಂದ ಮೃತಪಟ್ಟಿತ್ತು. 3 ವರ್ಷದ ನಂತರ 2ನೇ ಮಗುವಾಗಿದ್ದು ಹುಟ್ಟಿದಾಗ ಆರೋಗ್ಯವಾಗಿಯೇ ಇತ್ತು. ಜಾಂಡೀಸ್ ಕಾಯಿಲೆ ಕಂಡುಬಂದ ಕಾರಣ ಚಿಕಿತ್ಸೆ ಕೊಡಿಸಲು ಹಾಸನದ ಮಣಿ ಆಸ್ಪತ್ರೆಗೆ ಸೇರಿಸಿದ್ದರು. ಹಾಸನದ ಮಣಿ ಆಸ್ಪತ್ರೆಯ ಬಗ್ಗೆ ಇಂತಹ ಅಪಸ್ವರಗಳು ಮತ್ತೆಮತ್ತೆ ಕೇಳಿಬರುತ್ತಿದ್ದು, ಇವರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಣಿ ಆಸ್ಪತ್ರೆ ವೈದ್ಯರು ಮಗುವಿನ ಚಿಕಿತ್ಸೆಗೆ ನಮ್ಮಿಂದ 50 ಸಾವಿರ ರೂ. ಕಟ್ಟಿಸಿಕೊಂಡು 4 ದಿನ ಆಸ್ಪತ್ರೆಯಲ್ಲಿಇಟ್ಟುಕೊಂಡು ಕೊನೆಗೆ ಮಗು ಸತ್ತುಹೋಗಿದೆ ಎಂದರು. ಆದರೆ ಮಗು ಜೀವಂತವಾಗಿದೆ. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ನಾವು ಇದ್ದ ಮಗುವನ್ನು ಕಳೆದುಕೊಳ್ಳಬೇಕಿತ್ತು– ಲೋಕೇಶ್, ಮಗುವಿನ ತಂದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೋಲೀಸರ ಕಾಟಕ್ಕೆ ಕಳಪೆಮಟ್ಟದ, ಬಿಐಎಸ್ ಅಥವಾ ಐಎಸ್’ಐ ಮಾರ್ಕ್ ಇಲ್ಲದ ಹೆಲ್ಮೆಟ್’ಗಳನ್ನು ಕೊಂಡು ಬೈಕ್ ಸವಾರಿ ಮಾಡುತ್ತಿದ್ದವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.ಬೆಂಗಳೂರಿನಲ್ಲಿ ಈಗಾಗ್ಲೆ ಅರ್ಧ ಹೆಲ್ಮೆಟ್ ಹಾಕಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕೆಲವರಿಗೆ ನಾಯಿ ಎಂದರೆ ಅಪಾರ ಪ್ರೀತಿ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ನಾಯಿ ಜೊತೆಗಿರಬೇಕು. ಇನ್ನು ಕೆಲವರು ನಾಯಿ ಎಂದರೆ ಮೂಗು ಮುರಿಯುತ್ತಾರೆ. ಆದರೆ ನಾಯಿ ಸಾಕುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹಾಗೂ ಅವರಲ್ಲಿ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ. ಕಾರಣ ಸಾಕಿದ…
ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ ಹಾಗೂ ಒರಟಾಗಿರುತ್ತವೆ. ನೋಡಲು ಅಷ್ಟೇನು ಅಂದವಾಗಿರುವುದಿಲ್ಲ. ಡೆಡ್ಸ್ಕಿನ್ನ ಕಾರಣದಿಂದಾಗಿ ಆ ಭಾಗದ ಚರ್ಮ ಕಪ್ಪಾಗುತ್ತದೆ. ಪ್ರತಿದಿನ ನಾವು ಬಳಕೆ ಮಾಡುವ ಸೋಪ್ನಿಂದ ಈ ಚರ್ಮದ ಬಣ್ಣವನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ಇನ್ನೂ ಕೆಲವೊಂದು ಟಿಪ್ಸ್ಗಳನ್ನು ಬಳಕೆ ಮಾಡಿಕೊಂಡು ನೀವು ಚರ್ಮದ ಬಣ್ಣವನ್ನ ಬದಲಾವಣೆ ಮಾಡಬಹುದು. ಆದರೆ ನೀವು ಕೆಳಗಿನ ಈ ಕ್ರಮವನ್ನು ಒಂದು ಬಾರಿ ಬಳಸಿ ನೋಡಬಹುದು… ಟೂಥ್ಪೇಸ್ಟ್…
ವಯಸ್ಸಿಗೆ ಸಭಂದಪಟ್ಟ ವಿಷಯ ಬಂದಾಗ ಯಾರನ್ನಾದರೂ ನೋಡಿದ್ರೆ, ಅಂದಾಜು ಅವರ ವಯಸ್ಸನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದ್ರೆ ಕೆಲವೊಬ್ಬರನ್ನು ನೋಡಿದಾಗ ಅದು ಕಷ್ಟ ಸಾಧ್ಯವೆನಿಸಬಹುದು. ಅಂತವರೇ ಆದ ಒಬ್ಬರ ಬಗ್ಗೆ ನಾವು ಹೇಳುತ್ತಿದ್ದೇವೆ.
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ನಾಗರಾಜ್, ತಹಸೀಲ್ದಾರ್…
ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ 2018 ಕುರಿತಂತೆ ಸಿ ಫೋರ್ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ, ಆಗಸ್ಟ್ 20 ರಂದು ಪ್ರಕಟಿಸಿದೆ.