ಸುದ್ದಿ

ಯುವತಿ ಸ್ನಾನ ಮಾಡೋವಾಗ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್‍ಮೇಲ್ ಮಾಡಿ ಅತ್ಯಾಚಾರ…!

912

34 ವರ್ಷದ ವ್ಯಕ್ತಿಯೊಬ್ಬ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‍ಗಡದ ರಾಜ್‍ನಂದ್‍ಗಾಂವ್‍ನಲ್ಲಿ ನಡೆದಿದೆ.

22 ವರ್ಷದ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರವಿ ಕನ್ನೌಜೆ ಎಂದು ಗುರುತಿಸಲಾಗಿದ್ದು, ಈತ ಚ್ಚುಯಿಖಾದನ್ ಪಟ್ಟಣದ ಪುರೈನಾ ಗ್ರಾಮದ ಮೂಲದವಾಗಿದ್ದಾನೆ. ಅಷ್ಟೇ ಅಲ್ಲದೇ ಆರೋಪಿ ಯುವತಿಯ ದೂರದ ಸಂಬಂಧಿಯಾಗಿದ್ದು, ಯುವತಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ಪೊಲೀಸ್ ಅಧಿಕಾರಿ ನರೇಂದ್ರ ಪೂಜಾರಿ ತಿಳಿಸಿದ್ದಾರೆ.

ಆರೋಪಿ ರವಿ ಕನ್ನೌಜೆ ಈಗಾಗಲೇ ಮದುವೆಯಾಗಿದ್ದಾನೆ. ಕಳೆದ ವರ್ಷ ಯುವತಿಯ ಮನೆಗೆ ಭೇಟಿ ನೀಡಿದ್ದನು. ಆಗ ಯುವತಿ ಸ್ನಾನ ಮಾಡುವಾಗ ರಹಸ್ಯವಾಗಿ ತನ್ನ ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಆತ ವಿಡಿಯೋ ಮೂಲಕ ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಾನೆ. ಒಂದು ವರ್ಷದಲ್ಲಿ ಯುವತಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಯುವತಿ ಅಶ್ಲೀಲ ವಿಡಿಯೋಗಳನ್ನು ಕೂಡ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಯುವತಿ ಆರೋಪಿ ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ವಿರೋಧಿಸಿದ್ದಾಳೆ. ಆಗ ಆರೋಪಿ ಕೋಪಗೊಂಡು ಆ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ ಎಂದು ಪೂಜಾರಿ ಹೇಳಿದ್ದಾರೆ. ಸದ್ಯಕ್ಕೆ ರವಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಗಂಟಲು ನೋವಿಗೆ ಮನೆಯಲ್ಲೇ ಔಷಧಿ ಸುಲಭವಾಗಿ ತಯಾರಿಸ ಬಹುದು ಈ ಲೇಖನ ಓದಿ ತಿಳಿಯಿರಿ….

    ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿ ಬಿಡುತ್ತದೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟ ವಾಗುತ್ತದೆ. ಆಹಾರ ಸೇವಿಸಲು ಸಹ ಕಷ್ಟ ವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ.

  • ಸ್ಪೂರ್ತಿ

    ಶಿಕ್ಷಣ ಕೊಡುವದಷ್ಟೇ ಅಲ್ಲ, ಹುಡುಗಿಯರಿಗೆ ಮದ್ವೆ ಕೂಡ ಮಾಡಿಸುತ್ತೆ ಈ ಶಾಲೆ..!

    ವಿಶ್ವದಲ್ಲಿ ಅನೇಕ ಶಾಲೆಗಳು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿವೆ. ವಿದ್ಯಾಭ್ಯಾಸ ಹೇಳುವ ವಿಧಾನ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಶಾಲೆ ಹೆಸರು ಮಾಡಿರುತ್ತದೆ. ಆದ್ರೆ ಈ ಶಾಲೆ ಎಲ್ಲಕ್ಕಿಂತ ಭಿನ್ನವಾಗಿದೆ. ಇಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಹೇಳುವ ಜೊತೆಗೆ ಅವ್ರ ಮದುವೆ ಜವಾಬ್ದಾರಿಯನ್ನೂ ಶಾಲೆಯೇ ಹೊರುತ್ತದೆ. ಹೌದು, ಭಿನ್ನವಾಗಿರುವ ಈ ಶಾಲೆ ಗುಜರಾತಿನ ಅಹಮದಾಬಾದ್ ನಲ್ಲಿದೆ. ಈ ಶಾಲೆ ಹೆಸರು ‘ಬ್ಲೈಂಡ್ ಕನ್ಯಾ ಪ್ರಕಾಶ್ ಘರ್’. ನಾಲ್ಕು ಮಕ್ಕಳೊಂದಿಗೆ ಶಾಲೆ ತೆರೆಯಲಾಗಿತ್ತು. ಆದ್ರೀಗ ಶಾಲೆ ಹೆಸ್ರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಿವ್ಯಾಂಗ…

  • ದೇಶ-ವಿದೇಶ

    ಸೌದಿಯಲ್ಲಿ ಈಗ ಯೋಗಕ್ಕೆ ನೀಡಲಾಗಿದೆ ಕ್ರೀಡೆಯ ಮಾನ್ಯತೆ..!ತಿಳಿಯಲು ಈ ಲೇಖನ ಓದಿ…

    ಯೋಗ ಈಗ ಸೌದಿ ಅರೇಬಿಯಾದ ಅಧಿಕೃತ ಕ್ರೀಡಾ ಚಟುವಟಿಕೆಗಳಲ್ಲಿ ಒಂದು ಎಂದು ಮಾನ್ಯತೆ ಪಡೆದುಕೊಂಡಿದೆ. ಈ ಮೂಲಕ ಇಸ್ಲಾಮಿಕ್‌ ರಾಷ್ಟ್ರದಲ್ಲಿ ಜನತೆಗೆ ಇನ್ಮುಂದೆ ಅಧಿಕೃತವಾಗಿ ಯೋಗ ಕಲಿಕೆ ಹಾಗೂ ಬೋಧನೆಗೆ ಪರವಾನಿಗೆ ದೊರೆಯಲಿದೆ

  • ಸುದ್ದಿ

    ರಾತ್ರಿಸಮಯ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

    ಡ್ರಗ್ಸ್, ಆಲ್ಕೋಹಾಲ್‌ನಂತಹ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿರುವಂತೆ ಸ್ಮಾರ್ಟ್‌ಫೋನ್‌ಗಳಿಗೆ ಇಂದಿನ ಜನ ಅಡಿಕ್ಟ್ ಆಗುತ್ತಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ. ಆದರೆ, ಇದೀಗ ಬಿಡುಗಡೆಯಾಗಿರುವ ನೂತನ ವರದಿಯೊಂದು ಸ್ಮಾರ್ಟ್‌ಫೋನ್ ಬಳಕೆಗೂ ಒಂದು ಮಿತಿ ಎನ್ನುವುದನ್ನು ಸಾರಿಸಾರಿ ಹೇಳುತ್ತಿದೆ. ಹೌದು, ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ ‘ಸ್ಯಾನ್ ಡೈಗೊ ಸ್ಟೇಟ್’ ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ…

  • ಉಪಯುಕ್ತ ಮಾಹಿತಿ

    ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ತಿಂಗಳಿಗೆ 2.5 ಲಕ್ಷ ರೂಪಾಯಿಗಳ ಹಣ ಸಂಪಾದಿಸಿ..!ಹೇಗೆ ಎಂದು ತಿಳಿಯಲು ಈ ಲೇಖನ ಓದಿ..

    OneADನಿಮಗೆ ಎರಡು ಪ್ರಯೋಜನವನ್ನು ನೀಡುತ್ತದೆ – ಹಣ ಸಂಪಾದಿಸಿ ಮತ್ತು ಉಳಿತಾಯ ಮಾಡಿ.!ನಿಮ್ಮ ಸ್ನೇಹಿತರಿಗೆ ಅಪ್ಲಿಕೇಶನ್ ಅನ್ನು ಉಲ್ಲೇಖಿಸಿ ನೀವು ಹಣವನ್ನು ಮಾಡಬಹುದು.

  • ಆರೋಗ್ಯ

    ಕೊತ್ತಂಬರಿ ಸೊಪ್ಪು ಸೇವನೆ ಮಾಡುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ.!

    ಹಸಿ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಎ.ಬಿ1, ಬಿ2, ಸಿ ಜೀವಸತ್ವಗಳು ಮತ್ತು ಕಬ್ಬಿಣ ಇವುಗಳ ಅಭಾವದಿಂದ ತಲೆದೋರುವ ವ್ಯಾಧಿಗಳ ಭಯವಿರುವುದಿಲ್ಲ. ಒಂದು ಟೀ ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪ ದೊಂದಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತ್ತಿದ್ದರೆ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಕಣ್ಣು, ಕಿವಿ, ಹೃದಯ, ಶ್ವಾಸಕೋಶ ಕ್ರಿಯೆ ಚುರುಕಿನಿಂದ ನಡೆಯುವುದು. ಕ್ಷಯ ಮತ್ತು ಉಬ್ಬಸ ರೋಗಗಳ ಬಾಧೆ ಇರುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ದಂತಕ್ಷಯ ನಿವಾರಣೆಯಾಗುವುದು. ಬಾಯಿಯಿಂದ ದುರ್ಗಂಧ…