ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
21 ವರ್ಷದ ತಿರುಪುರ್ ಮೂಲಕದ ಅಂಬುಲೆನ್ಸ್ ಚಾಲಕ ಆಕಾಶ್ ಜ್ವರದಿಂದ ಬಳಲುತ್ತಿದ್ದ ಬಾಲಕ ಸಂತೋಷ್‍ನನ್ನು ಗುರುವಾರ ರಾತ್ರಿ ವೆಲ್ಲಾಕೋಯಿಲ್‍ನಿಂದ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೇವಲ 70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ ತಲುಪಿದ್ದಾರೆ. ಆಕಾಶ್ 3 ವರ್ಷದ ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದ ಬಳಿಕ ಅಂಬುಲೆನ್ಸ್ ಮುಂದೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ವೈರಲ್ ಆಗಿದ್ದು ಇವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ, ಸಂತೋಷ್ ತೀವ್ರ ಜ್ವರದಿಂದ ಬಳಲುತ್ತಿದ್ದು, ಗುರುವಾರ ಆತನ ಪೋಷಕರು ಹತ್ತಿರದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯರು ಸಂತೋಷ್‍ನನ್ನು ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದರು. ಅಲ್ಲದೆ ಸಂತೋಷ್‍ನನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಅಂಬುಲೆನ್ಸ್ ಚಾಲಕ ಆಕಾಶ್ ಅವರಿಗೆ ವಹಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆಕಾಶ್, ವೈದ್ಯರು ಆದಷ್ಟು ಬೇಗ ಕೊಯಮತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದ್ದರು. ನಾನು ಸಂಜೆ ಸುಮಾರು 7 ಗಂಟೆಗೆ ವೆಲ್ಲಾಕೋಯಿಲ್ ಹೊರಟ್ಟಿದ್ದು, 8.10ಕ್ಕೆ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿದೆ. ಇದು 90 ಕಿ.ಮೀ ಪ್ರಯಾಣವಾಗಿದ್ದು, ಸಂತೋಷ್‍ನನ್ನು ಮಕ್ಕಳ ವಾರ್ಡ್‍ಗೆ ದಾಖಲಿಸಲಾಯಿತು. ಸಂತೋಷ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ. ನಾನು 10ನೇ ತರಗತಿ ಡ್ರಾಪೌಟ್ ಆಗಿದ್ದು, ಇತ್ತೀಚೆಗೆ ಸ್ವಂತ ಅಂಬುಲೆನ್ಸ್ ಖರೀದಿಸಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ಅಂಬುಲೆನ್ಸ್ ಖರೀದಿಸುವ ಮೂಲಕ ನನ್ನ ಬುಸಿನೆಸ್ ವಿಸ್ತರಿಸಲು ನಿರ್ಧರಿಸಿದ್ದೇನೆ. ರೋಗಿಗಳು ಹಾಗೂ ಆಸ್ಪತ್ರೆಗಳು ಬೇಡಿಕೆ ಇಟ್ಟಾಗ ನಾನು ಗಡಿಯನ್ನು ಮೀರಿ ಕೆಲಸ ಮಾಡುತ್ತೇನೆ ಎಂದು ಆಕಾಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್. ಬಹುಭಾಷೆಯಲ್ಲಿ ಬೇಡಿಕೆ ಇರುವ ಬಹುಮುಖ ಪ್ರತಿಭೆ. ಪೈಲ್ವಾನ್ ಸಕ್ಸಸ್ ಸಂಭ್ರಮ , ಪೈರಸಿ ಸಂಗ್ರಾಮವನ್ನು ಮುಗಿಸಿಕೊಂಡು ಈಗ ಪೋಲೆಂಡ್ ದೇಶಕ್ಕೆ ಹಾರಿದ್ದಾರೆ. ಕಾರಣ ಕೋಟಿಗೋಬ್ಬ -3 ಸಿನಿಮಾದ ಶೂಟಿಂಗ್. ಕಳೆದ ಎರಡು ವರ್ಷದಿಂದ ‘ಕೋಟಿಗೊಬ್ಬ-3’ ಚಿತ್ರದ ಕಾರ್ಯಗಳು ಪ್ರಗತಿಯಲ್ಲಿವೆ. ನಾಲ್ಕೈದು ಶೆಡ್ಯೂಲ್ ಶೂಟಿಂಗ್ ಅನ್ನು ಕೂಡ ಚಿತ್ರತಂಡ ಮುಗಿಸಿಕೊಂಡಿದೆ. ಈಗ ಸೂರಪ್ಪ ಬಾಬು ನಿರ್ಮಾಣದ ಈ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ದೂರದ ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ‘ಕೋಟಿಗೊಬ್ಬ-3’ ಸಿನಿಮಾದ…
ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ ಪುಟಗಳಲ್ಲಿ ನಾವು ಓದಿದ್ದೇವೆ. ಆದರೆ ಧಾರವಾಡದಲ್ಲಿ ರೈತರೊಬ್ಬರು ತಮ್ಮ ತಾಯಿಯ ಶತಮಾನೋತ್ಸವಕ್ಕೆ ಬೆಳ್ಳಿ ಕಿರೀಟ ತೊಡಿಸಿ ಸಾವಿರಾರು ಜನರ ಮಧ್ಯೆ ಅಭಿನಂದಿಸಿದ್ದಾರೆ. ಡಾಕ್ಟರ್, ಇಂಜಿನಿಯರ್ ಓದಿ ಕೆಲಸ ಸಿಕ್ಕ ಬಳಿಕ ವಿದೇಶದಲ್ಲಿ ಸುಖ ಜೀವನ ನಡೆಸುವ ಕೆಲ ಮಕ್ಕಳು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೋ, ಅನಾಥಾಶ್ರಮಕ್ಕೋ ಸೇರಿಸುವ ಕಾಲವಿದು. ಇಂಥಹ ಕಾಲದಲ್ಲಿ ಧಾರವಾಡ ಜಿಲ್ಲೆಯ ಹೊಲ್ತಿಕೋಟಿ ಗ್ರಾಮದ ರೈತ ಮಹದೇವಪ್ಪ ಕೋರಿ…
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ವರಕವಿ ಬೇಂದ್ರೆಯವರ ಈ ಕವನ ಯಾರಿಗೆ ತಾನೇ ಗೊತ್ತಿಲ್ಲ.. ನಮ್ಮ ತಂಡದಿಂದ ಯುಗಾದಿ ಮತ್ತು ಹೊಸವರ್ಷದ ಆರ್ಥಿಕ ಶುಭಾಶಯಗಳು… ಯುಗಾದಿ ಅಂದ್ರೆ ಏನು… ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು….
ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ,
ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….
ನನ್ನ ಹೆಸರು ಅಶ್ವಥ್ ಕುಮಾರ್ 42 ವರ್ಷ ವಯಸ್ಸು,ನಾನು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ವಾಸವಾಗಿರುವುದು. ನಾನು ಲೈಬ್ರರಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದು, 2016 ರಲ್ಲಿ ನನಗೆ ಸೊಂಟ ನೋವು ವಿಪರೀತ ಬರುತ್ತಿತ್ತು,ಮೂತ್ರ ಹೋಗಲೂ ಕಷ್ಟ ಆಗುತ್ತಿತ್ತು, ನಂತರ ಕೋಲಾರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದೆ ಆಗ ತಿಳಿಯಿತು …..