ಸುದ್ದಿ

ನಾವು ಸಹ ಮಂಗಳ ಗ್ರಹಕ್ಕೆ ಹೋಗಬಹುದು ; ಇಲ್ಲಿದೆ ನೋಡಿ ಪೂರ್ತಿ ಮಾಹಿತಿ,.!!

20

ಮಂಗಳಗ್ರಹಕ್ಕೆ ನೀವು ಹೋಗಲು ಇಚ್ಚಿಸುವಿರಾ..? ಅಂತರಿಕ್ಷಕ್ಕೆ ತೆರಳಲು ತುಂಬಾ ಸಿದ್ಧತೆ ಮತ್ತು ಭಾರೀ ಹಣ ಬೇಕು. ಸಾಮಾನ್ಯ ಜನರು ಅಲ್ಲಿಗೆ ಹೋಗುವುದು ಕನಸಿನ ಮಾತು…! ಆದರೆ ಕೆಂಪುಗ್ರಹವನ್ನು ಹೋಲುವಂತೆ ಸ್ಥಳವೊಂದು ಈ ಭೂಮಂಡಲದಲ್ಲಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಉತ್ತರ ಸ್ಪೇನ್‍ನ ಗುಹೆಯೊಂದರಲ್ಲಿ ಮಂಗಳಗ್ರಹದ ಪರಿಸರವನ್ನು ಹೋಲುವ ಪ್ರತಿರೂಪವನ್ನು ಸೃಷ್ಟಿಸಲಾಗಿದೆ. ಆಸ್ಟ್ರೋಲ್ಯಾಂಡ್ಸ್ ಎಂಬ ಸಂಸ್ಥೆ ನಿರ್ಮಿಸಿರುವ ಏರ್ ಸ್ಟೇಷನ್ ಎಂಬ ಈ ಸ್ಥಳವು ಕೆಂಪು ಗ್ರಹಕ್ಕೆ ಅಂತರಿಕ್ಷಯಾನ ಕೈಗೊಂಡ ಅನುಭವ ನೀಡುತ್ತದೆ.

ಕಾಂಟಾಬ್ರಿಯಾದಲ್ಲಿನ ಅರ್ರೆದೊಂಡೊ ಎಂಬಲ್ಲಿ 1.5 ಕಿಲೋಮೀಟರ್ ಉದ್ದದ ಮತ್ತು 60 ಮೀಟರ್‍ಗಳಷ್ಟು ಎತ್ತರದ ಗುಹೆಯನ್ನು ಮಾನವರ ವಸತಿ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ. ಮಂಗಳಗ್ರಹದ ಪರಿಸರವನ್ನೂ ಇದು ತದ್ರೂಪು ಹೋಲುತ್ತದೆ. ಇದಕ್ಕಾಗಿ ವಿಜ್ಞಾನಿಗಳು, ವಾಸ್ತುಶಿಲ್ಪಿಗಳು ಮತ್ತು ಅಭಿವೃದ್ದಿಕಾರರು ಶ್ರಮವಹಿಸಿದ್ದಾರೆ. ಇಲ್ಲಿನ ತೀವ್ರ ಕಡಿಮೆ ತಾಪಮಾನ ಮತ್ತು ಮಂಗಳ ಗ್ರಹದಲ್ಲಿರುವಂತೆ ಕಾಸ್ಮಿಕ್ ಕಿರಣಗಳು ಅಂತರಿಕ್ಷದ ಅನುಭವ ನೀಡುತ್ತವೆ.

ಈ ಗುಹೆಯಲ್ಲಿ ಪ್ರವಾಸ ಮಾಡಲು ಇಚ್ಚಿಸುವವರು 20 ದಿನಗಳ ಆನ್‍ಲೈನ್ ಕೋರ್ಸ್‍ಗೆ ಒಳಗಾಗಬೇಕು ಹಾಗೂ ಗವಿಯಲ್ಲಿ ನಾಲ್ಕು ದಿನಗಳು ಮತ್ತು ಮೂರು ರಾತ್ರಿಗಳನ್ನು ಕಳೆಯುವುದಕ್ಕೆ ಮುನ್ನ ಮೂರು ದಿವಸಗಳ ತೀವ್ರ ತರಬೇತಿ ನೀಡಲಾಗುತ್ತದೆ. ಇದು ಹೆಚ್ಚುಕಡಿಮೆ ಗಗನಯಾತ್ರಿಗಳಿಗೆ ನೀಡುವ ಟ್ರೈನಿಂಗ್ ಮಾದರಿಯಲ್ಲೇ ಇರುತ್ತದೆ.ಗುಹೆಯಲ್ಲಿ ನೆಲೆಸುವ ವೇಳೆ ಗಗನಯಾತ್ರಿಗಳೆಂದು ಕರೆಯಲ್ಪಡುವ ಪ್ರವಾಸಿಗರು ಬಾಹ್ಯಾಕಾಶ ನಡಿಗೆ ಸಾಧನಗಳನ್ನು ಕೊಂಡೊಯ್ಯಬೇಕು.

ಈ ಗವಿಯಲ್ಲೂ ದೇಹ ತೂಕರಹಿತವಾಗಿರುವ ವಾತಾವರಣ ಸೃಷ್ಟಿಸಲಾಗಿದೆ. ಗುಹೆಯೊಳಗೆ ನಿರ್ಮಿಸಲಾಗಿರುವ ಪ್ರಯೋಗಾಲಯದಲ್ಲಿ ಪ್ರವಾಸಿಗರು ನಾಲ್ಕು ದಿನಗಳ ಕಾಲ ತಾವೇ ಆಹಾರ ತಯಾರಿಸಿಕೊಳ್ಳಬೇಕು. ಗುಹೆಯೊಳಗೆ ಪ್ರವೇಶಿಸಲು ಒಂದು ಬಾರಿ 10 ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು. ಗುಹೆಯೊಳಗೆ ಮಂಗಳ ಗ್ರಹದ ಅನುಭವ ಹೊಂದಲು ತಲಾ 6,600 ಡಾಲರ್ ಶುಲ್ಕ ಪಾವತಿಸಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ಗಂಡು ಮೀನಾಗಿ ಹುಟ್ಟಿ ಬಳಿಕ ಹೆಣ್ಣು ಮೀನಾಗಿ ಬದಲಾಗುವ ಈ ಮೀನಿನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮೀನು ಹುಟ್ಟಿನಿಂದ ಗಂಡು ಮೀನಾಗಿ ಹುಟ್ಟಿ ಎರಡು ವರ್ಷಗಳ ಬಳಿಕ ಹೆಣ್ಣು ಮೀನಾಗಿ ಬದಲಾಗುತ್ತದೆ. ಇದು ಕೇಳಲು ನಿಮ್ಗೆ ಅಚ್ಚರಿ ಅನ್ನಿಸಿದರೂ ನಿಜ. ಬರ್ರಮುಂಡಿ ಎಂಬ ಮೀನು ಈ ವಿಧವಾಗಿ ಗಂಡಿನಿಂದ ಹೆಣ್ಣಾಗಿ ರೂಪಾಂತರ ಹೊಂದುತ್ತದೆ.

  • ಸುದ್ದಿ

    ತಿರುವನಂತಪುರಂ ದೇವಾಲಯದ ಏಳನೇ ಬಾಗಿಲಿನ ರಹಸ್ಯ ಇಲ್ಲಿದೆ ನೋಡಿ.

    ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಕೆಲವು ದೇವಾಲಯಗಳ ರಹಸ್ಯಗಳನ್ನು ಇಲ್ಲಿಯವರೆಗೆ ಯಾರೂ ಬಹಿರಂಗಪಡಿಸಿಲ್ಲ. ಇಂದು ನಾವು ನಿಮಗೆ ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಾಲಯವನ್ನು ನೀವು ನೋಡಿರದಿದ್ದರೂ, ಅದರ ಹೆಸರನ್ನು ಖಂಡಿತ ಕೇಳಿರುತ್ತೀರಿ. ಏಕೆಂದರೆ ಈ ದೇವಾಲಯವು ಕೆಲವು ನಿಗೂಢತೆಗಳಿಗೆ ಮತ್ತು ಅದರ ಸಂಪತ್ತಿಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಆದ್ದರಿಂದ ಇದನ್ನು ಭಾರತದ ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಅನೇಕ ರಹಸ್ಯ ನೆಲಮಾಳಿಗೆಗಳಿವೆ. ಅವುಗಳಲ್ಲಿ ಕೆಲವು ತೆರೆದಿವೆ. ಆ ಮಳಿಗೆಗಳಿಂದ ಕೋಟ್ಯಂತರ…

  • ಸುದ್ದಿ

    ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

    ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು…

  • ಜ್ಯೋತಿಷ್ಯ

    ವಿಜ್ಞ ನಿವಾರಕ ವಿನಾಯಕನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ಸಂತೋಷದ ಸುದ್ದಿ…

  • ಸುದ್ದಿ

    ಟ್ರಾಫಿಕ್ ಪೊಲೀಸ್ ಹಾಕಿದ ದುಬಾರಿ ದಂಡ ಕೇಳಿ ತನ್ನ ಬೈಕನ್ನೇ ಸುಟ್ಟ ಸವಾರ…!

    ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ,  ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ…

  • ಸುದ್ದಿ

    ರೈಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿಎಂ ಪಯಣ…….!

    ಮುಖ್ಯಮಂತ್ರಿ ಅವರ ಗ್ರಾಮವಾಸ್ತವ್ಯಕ್ಕೆ ಭರದ ಸಿದ್ಧತೆ ನಡೆದಿದ್ದು, ಇದೀಗ ಜನರ ಬಳಿಗೆ ಸಿಂಪಲ್ಲಾಗಿ ಹೋಗಲು ಸಿಎಂ ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಜೂನ್ 21ರಂದು ಯಾದಗಿರಿಯ ಗುರುಮಿಠ್ಕಲ್‍ನ ಚಂಡ್ರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಹೊರಟ ಸಿಎಂ ಸಿಂಪಲ್ಲಾಗಿಯೇ ಜನರ ಬಳಿಗೆ ಹೋಗಲು ತೀರ್ಮಾನ ಮಾಡಿದ್ದು, ಈ ಗ್ರಾಮಕ್ಕೆ ತೆರಳಲು ಮುಖ್ಯಮಂತ್ರಿಗಳು ರೈಲು ಮಾರ್ಗ ಬಳಸುತ್ತಿದ್ದಾರೆ. ಜೂನ್ 20ರಂದು ರಾತ್ರಿ ಬೆಂಗಳೂರಿನಿಂದ ಯಾದಗಿರಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣ…