ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಂಬಿ ಅಂತಿಮ ದರ್ಶನಕ್ಕೆ ಬಾರದೇ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ, ತಮ್ಮ ರಾಜಕೀಯ ಕಾರ್ಯಕ್ಷೇತ್ರ ಮಂಡ್ಯದಲ್ಲಿ ಮಾಡಿದ್ದ ಬಾಡಿಗೆ ಮನೆಯನ್ನು ರಾತ್ರೋ ರಾತ್ರಿ ಖಾಲಿ ಮಾಡೋ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದರೇ ಎನ್ನುವ ಪ್ರಶ್ನೆ ಎದ್ದಿದೆ.ಹಾಗೂ ಖಾಲಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯ ನಗರದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಅದಾದ ನಂತರ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ನಟಿ ರಮ್ಯಾ, ಮಂಡ್ಯದತ್ತ ಹೋಗುವುದೇ ಕಡಿಮೆಯಾಗಿತ್ತು. ಇತರೆ ಚುನಾವಣೆ ಸಂದರ್ಭಗಳಲ್ಲಿ ಮತದಾನಕ್ಕೂ ರಮ್ಯಾ ಹಾಜರಾಗಿರಲಿಲ್ಲ.
ಬಳಿಕ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿ ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು.
ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ದರು. ಇದೇ ವೇಳೆ, ಇತ್ತೀಚೆಗೆ ಪಾಂಡವಪುರ ತಾಲೂಕಿನ ಕನಗನಮರಡಿ ಬಸ್ ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ್ದರೂ ಮಾಜಿ ಸಂಸದೆ ರಮ್ಯಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
ಜೊತೆಗೆ ಖ್ಯಾತ ಚಿತ್ರನಟ ಅಂಬರೀಶ್ ಸಾವನ್ನಪ್ಪಿದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕಾಗಲಿ ಅಥವಾ ಅಂತ್ಯ ಸಂಸ್ಕಾರಕ್ಕಾಗಲಿ ರಮ್ಯಾ ಬಾರದಿರುವುದು ಅಭಿಮಾನಿಗಳನ್ನು ಕೆರಳಿಸಿತ್ತು. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಸಿಟ್ಟು ಹೊರಹಾಕಿದ್ರು.
ಈ ಎಲ್ಲಾ ಕಾರಣಗಳಿಂದ ಮಂಡ್ಯ ಜಿಲ್ಲೆಯ ಜನತೆಯ ಆಕ್ರೋಶಕ್ಕೆ ತುತ್ತಾಗಿರುವ ರಮ್ಯಾ, ಇದರಿಂದಾಗಿಯೇ ಸದ್ದುಗದ್ದಲವಿಲ್ಲದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದಾರೆಂದು ಮಾತನಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಠಕ್ಕೆ ಪೂರೈಕೆ ಆಗುತ್ತಿದ್ದ ಅಕ್ಕಿ ಹಾಗೂ ಗೋಧಿ ಎರಡು ತಿಂಗಳಿಂದ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ. ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಸ್ವಾಮೀಜಿಗಳು, ಮಠಕ್ಕೆ ಪೂರೈಕೆಯಾಗುತ್ತಿದ್ದ ರೇಷನ್ ಎಷ್ಟು ಬಳಕೆಯಾಗುತ್ತಿದೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಕೇಳಿತ್ತು. ಅದರಂತೆ ನಾವು ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಿದ್ದೇವೆ. ಆದರೆ ಕೆಲ ಸಂಸ್ಥೆಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಅಕ್ಕಿ ಹಾಗೂ ಗೋಧಿ ವಿತರಣೆಯನ್ನು ನಿಲ್ಲಿಸಿರಬಹುದು. ಮುಂದಿನ ದಿನಗಳಲ್ಲಿ ಆಹಾರ ಮತ್ತು…
ಬೆಂಗಳೂರಿನ ಜನರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿರುವ ನಮ್ಮ ಮೆಟ್ರೋ ಇನ್ನು ಮುಂದೆ ಇನ್ನಷ್ಟು ಹತ್ತಿರವಾಗಲಿದೆ. ಡಿಸೆಂಬರ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ ಬೋಗಿ ಸಹ ಆರಂಭವಾಗಲಿದೆ.
ಮಂಡ್ಯದ ಹುಡುಗಿ ವರಲಕ್ಷ್ಮಿ ಆಟ-ಪಾಠ ಎಲ್ಲದರಲ್ಲೂ ಸದಾ ಮುಂದು. ಆಶುಭಾಷಣ ಮಾಡುವುದರಲ್ಲಿ ಈಕೆ ಎತ್ತಿದ ಕೈ. ಕಬಡ್ಡಿ ಕೂಡ ಆಡುವ ವರಲಕ್ಷ್ಮಿಗೆ ಮುಂದೆ ಟೀಚರ್ ಆಗಿ ಬಡ ಮಕ್ಕಳಿಗೆ ಪಾಠ ಹೇಳಿಕೊಡುವ ಆಸೆ ಇದೆ. ಜೊತೆಗೆ ಸಿ.ಎ (ಚಾರ್ಟರ್ಡ್ ಅಕೌಂಟೆಂಟ್) ಆಗುವ ಕನಸಿದೆ. ಬೆಟ್ಟದಷ್ಟು ಆಸೆ ಹೊತ್ತು ‘ಕನ್ನಡದ ಕೋಟ್ಯಧಿಪತಿ’ ವೇದಿಕೆಗೆ ಬಂದಿದ್ದ ಈ ಪುಟ್ಟ ಹುಡುಗಿಯ ಕನಸು ಒಂದೇ ಕ್ಷಣದಲ್ಲಿ ನುಚ್ಚು ನೂರಾಗಿದ್ದು ಮಾತ್ರ ದುರಾದೃಷ್ಟಕರ. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಕೋಟಿ ರೂಪಾಯಿ ಗೆಲ್ಲಲೇಬೇಕು ಎಂಬ ಛಲ…
ಹೆಬ್ಬಾವು ಸುತ್ತಿ, ಉಸಿರುಗಟ್ಟಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಅವರ ಮನೆಯಲ್ಲಿ 140 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಮೆರಿಕದ ಇಂಡಿಯಾನಾ ಎಂಬಲ್ಲಿ 36 ವರ್ಷ ವಯಸ್ಸಿನ ಲಾರಾ ಹರ್ಸ್ಟ್ ಎಂಬ ಮಹಿಳೆಯ ದೇಹವನ್ನುಹೆಬ್ಬಾವು ಸುತ್ತಿಕೊಂಡಿತ್ತು. ಅವರು ಅದರಿಂದ ತಪ್ಪಿಸಿಕೊಳ್ಳಲುಎಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ.ಹಾಗೇ ಉಸಿರುಗಟ್ಟಿ ಅವರು ಅಸುನೀಗಿದ್ದರು. ಈ ಸಂದರ್ಭದಲ್ಲಿ ಮಹಿಳೆಯಿದ್ದ ಮನೆಯಲ್ಲಿ 140 ಹಾವಿದ್ದಿದ್ದು ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಡಾನ್ ಮುನ್ಸನ್ ಎಂಬುವವರು ಸಾಕಿದ್ದರು. ಅವರ ಬಳಿ ಲಾರಾ ಅವರು ಇಪ್ಪತ್ತಕ್ಕೂ ಹೆಚ್ಚು ಹಾವುಗಳನ್ನು ಸಾಕಲು…
ಈಗಿನ ಕಾಲದಲ್ಲಿ ಮಕ್ಕಳಿಗೆ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಗಳನ್ನು ಸಾಕುವುದೇ ದೊಡ್ಡ ಕಷ್ಟವೆನಿಸಿದೆ.ಹಾಗಾಗಿ ತಮ್ಮ ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವುವರೇ ಹೆಚ್ಚು. ಆದರೆ ಇನ್ನು ಮುಂದೆ ಹಾಗೆ ಮಾಡುವ ಆಗಿಲ್ಲ.
ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಇವತ್ತಿನ ಇಡೀ ದಿನ ಚೆನ್ನಗಿರಲೆಂದು, ಎಲ್ಲರೂ ದೇವರಲ್ಲಿ ಪ್ರಾರ್ಥಿಸುವುದು ಸಾಮಾನ್ಯ. ಹಾಗೆಯೇ ತಮ್ಮ ಮನಸ್ಸನ್ನು ತುಂಬಾ ಪ್ರಶಾಂತವಾಗಿ ಇಟ್ಟುಕೊಂಡು ದಿನ ಪ್ರಾರಂಭಿಸಲು ಪ್ರಯತ್ನಿಸುತ್ತಾರೆ. ಇಷ್ಟೇ ಅಲ್ಲದೆ, ನಾವೀಗ ಹೇಳಲಿರುವ ಕೆಳಗಿನ ಸೂಚನೆಗಳೊಂದಿಗೆ ದಿನ ಪ್ರಾರಂಭಿಸಿದರೆ, ಅದರಿಂದ ಅದೃಷ್ಟ ಕೂಡಿಬರುತ್ತದೆ. ಎಲ್ಲವೂ ಶುಭವಾಗುತ್ತದೆ.