ಸಿನಿಮಾ, ಸುದ್ದಿ

ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ, 80ರ ದಶಕದ ತಾರೆಯರ ಸಮಾಗಮ!

21

ಚಿತ್ರ  ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ  ಮತ್ತು  ಚಿತ್ರರಂಗ ವಲಯದಿಂದ ಸಹ  ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ      ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ ಭಾರತದ ಕಲಾವಿದರನ್ನು ಮನೆಗೆ ಆಹ್ವಾನಿಸಿ, ಪಾರ್ಟಿ ಮಾಡುವ ಕಾರ್ಯಕ್ರವನ್ನು ನಡೆಸಿಕೊಂಡು ಬಂದಿದ್ದಾರೆ ಚಿರು. ಅಂತೆಯೇ ಅವರ ಮನೆಯಲ್ಲಿ ಅನೇಕ ತಾರೆಯರು ಆಗಮಿಸಿ, ಹಳೆಯ ಕ್ಷಣಗಳನ್ನು ನೆನೆದಿದ್ದಾರೆ. ಯಂಗ್ ಜನರೇಷನ್‌ಗಿಂತ ನಾವೇನು ಕಮ್ಮಿ ಇಲ್ಲ ಎನ್ನುವಂತೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಸಂಸದೆ ಸುಮಲತಾ ಅಂಬರೀಷ್‌,ರಮೇಶ್‌ ಅರವಿಂದ್ ಸೇರಿದಂತೆ ಅನೇಕರು ಅಲ್ಲಿ ಹಾಜರಿದ್ದರು.

ತಮ್ಮ ಸಮಕಾಲೀನ ಕಲಾವಿದರನ್ನೆಲ್ಲ ಮನೆಗೆ ಕರೆಸಿಕೊಂಡು ಚಿರಂಜೀವಿ ಅವರ ಕಾರ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಸಿಕ್ಕಿವೆ.3 ದಶಕಗಳಿಂದಲೂ ಇತರೆ ಕಲಾವಿದರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರ ನಡೆಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿದೆ. ಅಪ್ಪನಿಗೆ ಸಹಾಯಕವಾಗಿ ನಟ ರಾಮ್ ಚರಣ್‌ ಕೂಡ ಇದ್ದರು. ನಟಿ ಖುಷ್ಬೂ ತಮಿಳು, ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಚಿರು ಜತೆ ನಟಿಸಿದ್ದು2006ರಲ್ಲಿ ತೆರೆಕಂಡ ‘ಸ್ಟಾಲಿನ್‌’ ಸಿನಿಮಾದಲ್ಲಿ ಮಾತ್ರ. ಅದು ಪೋಷಕ ಪಾತ್ರದಲ್ಲಿ! ಜೊತೆಗೆ ಸಿನಿಮಾಗಳನ್ನು ಮಾಡದಿದ್ದರೂ,

ನಟಿ, ಸಂಸದೆ ಸುಮಲತಾ ಅಂಬರೀಷ್‌,ಕನ್ನಡದ ಜೊತೆಗೆ ತೆಲುಗಿನಲ್ಲೂ ಸಖತ್ ಫೇಮಸ್‌ ಆಗಿದ್ದವರು. 80ರ ದಶಕದಲ್ಲಿ ಚಿರಂಜೀವಿ ಜತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಜಪಗತಿ ಬಾಬು, ವಿಕ್ಟರಿ ವೆಂಕಟೇಶ್‌, ರಾಧಿಕಾ ಶರತ್‌ಕುಮಾರ್ ಜತೆ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಚಿರು-ಖುಷ್ಬೂ ನಡುವಿನ ಒಡನಾಟ ಮಾತ್ರ ಹಾಗೆಯೇ ಇದೆ. ಅದಕ್ಕೆ ಸಾಕ್ಷಿ ಈ ಕ್ಯೂಟ್ ಸೆಲ್ಫಿ.ಕೇರಳದಲ್ಲಿ ಮೋಹನ್‌ಲಾಲ್‌ ಸೂಪರ್ ಸ್ಟಾರ್‌. ಟಾಲಿವುಡ್‌ನಲ್ಲಿ ಚಿರಂಜೀವಿ ಮೆಗಾ ಸ್ಟಾರ್‌. ಈ ಇಬ್ಬರು ಕಲಾವಿದರು ಒಂದೇ ಫ್ರೇಮ್‌ನಲ್ಲಿ ಸೆರೆ ಸಿಕ್ಕಿದ್ದಾರೆ. ಅದಕ್ಕೆ ಕಾರಣವಾಗಿದ್ದು ಚಿರು ಮನೆಯ ಪಾರ್ಟಿ.

ಮಲಯಾಳಂ ‘ಸೂಪರ್ ಸ್ಟಾರ್‌’ ಮೋಹನ್‌ಲಾಲ್‌ ಜತೆ ನಟಿ ರಾಧಿಕಾ ಶರತ್‌ಕುಮಾರ್ ಗೆಳೆತನ ಇಂದು ನಿನ್ನೆಯದಲ್ಲ. 1985ರಲ್ಲೇ ಈ ಇಬ್ಬರು ಕಲಾವಿದರು ಒಟ್ಟಿಗೆ ‘ಕೂಡುಮ್‌ ಥೇಡಿ’ ಚಿತ್ರದಲ್ಲಿ ನಟಿಸಿದ್ದರು. ವಿಶೇಷವೆಂದರೆ, ಕಳೆದ ಸೆಪ್ಟಂಬರ್‌ನಲ್ಲಿ ತೆರೆಕಂಡ ‘ಇಟ್ಟಿಮಾನಿ; ಮೇಡ್‌ ಇನ್ ಚೀನಾ’ ಚಿತ್ರದಲ್ಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಚಿರು ಮನೆಯ ಪಾರ್ಟಿಯಲ್ಲಿ ಕ್ಯಾಮರಾಕ್ಕೆ ಜೊತೆಯಾಗಿ ಕಾಣಿಸಿಕೊಂಡ ಕ್ಷಣ.ಚಿರು ಮನೆಯಲ್ಲಿ 80ರ ದಶಕ ರಿ-ಯೂನಿಯನ್‌ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನಸೆಳೆದ ನಟಿ ಖುಷ್ಬೂ. ಈ ವೇಳೆ ನಟಿ ರಾಧಿಕಾ ಶರತ್‌ಕುಮಾರ್ ಮತ್ತು ನಾಧಿಯಾ ಅವರ ಜತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಸಿದರು.

ಚಿರು ಕುಟುಂಬದೊಂದಿಗೆ ರಾಧಿಕಾ ಶರತ್‌ ಕುಮಾರ್ ಫ್ಯಾಮಿಲಿ ಮೊದಲಿನಿಂದಲೂ ಉತ್ತಮ ಒಡನಾಡ ಹೊಂದಿದೆ. ರೀ-ಯೂನಿಯನ್‌ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಚಿರು ಪುತ್ರ ರಾಮ್ ಚರಣ್‌ ಜತೆ ಕಾಣಿಸಿಕೊಂಡರು.ಬರೀ ದಕ್ಷಿಣದ ಕಲಾವಿದರು ಮಾತ್ರವಲ್ಲ, ಬಾಲಿವುಡ್‌ನ ಜಾಕಿಶ್ರಾಫ್‌ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ನಟಿ ರಾಧಿಕಾ ಶರತ್‌ಕುಮಾರ್, ಚಿರಂಜೀವಿ ಮತ್ತು ರಾಮ್‌ ಚರಣ್ ಅವರೊಂದಿಗೆ ಜಾಕಿ ಅವರ ಸಖತ್ ಪೋಸ್‌.ತಮ್ಮ ಕಾಲದ ನಾಯಕಿಯರ ಜತೆ ಗ್ರೂಪ್ ಫೋಟೋಗೆ ಸಖತ್ ಪೋಸ್‌ ನೀಡಿದ್ದಾರೆ ಚಿರು. ಖುಷ್ಬೂ, ಸುಹಾಸಿನಿ ಮಣಿರತ್ನಂ, ರಾಧಿಕಾ ಶರತ್‌ಕುಮಾರ್ ಮುಂತಾದವರು ಅವರೊಂದಿಗೆ ಸಾಥ್ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಇನ್ನು ಮುಂದೆ ಸಮುದ್ರದಾಳದಲ್ಲಿ ಕೂಡ ಫೋನ್ ಮಾಡಬಹುದು!!!

    ಸರ್ಕಾರಿ ಒಡೆತನದ ಬಿಎಸ್ಎನ್‌ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.

  • ಆಧ್ಯಾತ್ಮ, ದೇವರು-ಧರ್ಮ

    ಸರ್ಪಗಳಿಗೆ ಅವರ ತಾಯಿಯೇ ಕೊಟ್ಟ ಶಾಪ ಏನು ಗೊತ್ತಾ?ಸರ್ಪ ಮತ್ತು ಗರುಡಗಳು ಹುಟ್ಟಿದ್ದು ಹೇಗೆ ಗೊತ್ತಾ? ಈ ಲೇಖನ ಓದಿ ಶೇರ್ ಮಾಡಿ…

    ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು.

  • ಉಪಯುಕ್ತ ಮಾಹಿತಿ

    ಭಾರಿ ಮೊತ್ತದ ಅಪಘಾತ ವಿಮೆ ಪರಿಚಯಿಸಿದ ಅಂಚೆ ಇಲಾಖೆ

    ಬೆಂಗಳೂರು: ಜನಸಾಮಾನ್ಯರಿಗೆ ನೆರವಾಗಲೆಂದು ಭಾರತೀಯ ಅಂಚೆ ಇಲಾಖೆಯು. ಅತ್ಯಂತ ಕಡಿಮೆ. ಹಣದಲ್ಲಿ ಭಾರಿ ಮೊತ್ತದ. ಅಪಘಾತ ವಿಮೆಯನ್ನು ಪರಿಚಯಿಸಿದೆ. ಆಕಸ್ಮಿಕ ಅವಘಡಗಳಿಗೆ ತುತ್ತಾದಾಗ ಅಂಚೆ ಕಚೇರಿಯ ಈ ಅಲ್ಪ ಮೊತ್ತದ ಅಪಘಾತ ವಿಮೆ ಆರ್ಥಿಕವಾಗಿ ಸಹಾಯಕ್ಕೆ ಬರಲಿದೆ. ಕನಿಷ್ಠೆ 18ರಿಂದ ಗರಿಷ್ಠ 65ವರ್ಷದ ಒಳಗಿನವರು ಕೂಡಲೇ ಖಾತೆ 1 ತೆರೆದು ಈ ವಿಮೆಯ ಅನುಕೂಲ ಪಡೆಯಬಹುದಾಗಿದೆ. ಹತ್ತಾರು. ಆಕಸ್ಮಿಕ ಅಪಘಾತಗಳಿಗೆ ಪರಿಹಾರ ಪಡೆಯಲು ಕೂಡಲೇ ಈ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ನಿಮ್ಮ ಹತ್ತಿರದ. ಅಂಚೆ ಕಚೇರಿಗೆ ತೆರಳಿ…

  • ಸುದ್ದಿ

    ಬಿಎಸ್ಎನ್ಎಲ್ ಬಳಸುತ್ತಿರುವ ಗ್ರಾಹಕರಿಗೊಂದು ಸಂತಸದ ಸುದ್ದಿ ..!ಸುಳ್ಳು ವದಂತಿಗಳಿಗೆ ಬ್ರೇಕ್….

    ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮುಚ್ಚಲಾಗುತ್ತದೆ ಎಂದು ಹೇಳಲಾಗಿದ್ದು, ಈ ಕುರಿತಾಗಿ ಸಂಸ್ಥೆಯ ಕರ್ನಾಟಕ ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಎಂಬ ವದಂತಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದು, ಬಿಎಸ್ಎನ್ಎಲ್ ಸಂಸ್ಥೆ ಮುಚ್ಚುವ ವದಂತಿ ನಿಜವಲ್ಲ. ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಕೆಲವರು ಬಿಎಸ್ಎನ್ಎಲ್ ಮುಚ್ಚುವ ಕುರಿತು ವದಂತಿ ಹರಡುತ್ತಿದ್ದಾರೆ. ಸಂಸ್ಥೆಯ ಸೇವೆ…

  • ಶಿಕ್ಷಣ

    ಸರಕಾರಿ ಶಾಲೆಗಳ ಪರಿವರ್ತನೆ-ಸಂಕಲ್ಪ :ವರ್ತೂರು ಪ್ರಕಾಶ್

    ದೆಹಲಿ ಮಾದರಿಯಲ್ಲಿ ಸರಕಾರಿ ಶಾಲೆಗಳ ಪರಿವರ್ತನೆ-ಸಂಕಲ್ಪ :ವರ್ತೂರು ಪ್ರಕಾಶ್ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ ಬಿಡುಗಡೆಗೊಳಿಸಿ, 12೦ ದಿನಗಳ ಕಾಲ 1೦೦೦ ಪ್ರತಿಗಳನ್ನು ವಿತರಿಸುವ ಕಾರ್ಯಕ್ಕೆ ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವರ್ತೂರು ಪ್ರಕಾಶ್, ದೆಹಲಿಯಲ್ಲೂ ಸಹ ಆಮ್ ಆದ್ಮಿ ಮುಖ್ಯಮಂತ್ರಿ ಶಾಲೆಗಳನ್ನು ಅಭಿವೃದ್ಧಿಪಡಿಸಿರುವುದಕ್ಕಿಂತಲೂ ಮಾದರಿಯಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಸ್ವಕ್ಷೇತ್ರ ರಾಜರಾಜೇಶ್ವರಿ ನಗರದಲ್ಲಿ ಸುಮಾರು…

  • ಸುದ್ದಿ

    ಕಾಶ್ಮೀರದಲ್ಲಿ ಯಾರೇ ಗನ್​​ ಹಿಡಿದರೂ, ಅವರನ್ನು ಖಂಡಿತಾ ಕೊಂದು ಹಾಕುತ್ತೇವೆ…ವಾರ್ನಿಂಗ್ ಕೊಟ್ಟ ಭಾರತೀಯ ಸೇನೆ…

    ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ. ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು…