ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಬಹಳ ಅದ್ಭುತವಾಗಿದೆ ಎಂದು ಹೇಳಲಾಗಿದೆ .

ಎಲ್ಲಿದೆ ಈ ರಾಮಮಂದಿರ? : ನೇತ್ರಾವತಿ ನದಿಯ ತೀರದಲ್ಲಿರುವ ಧರ್ಮಸ್ಥಳದ ರಾಮ ಮಂದಿರವು ಶ್ರೀ ಮಂಜುನಾಥ ದೇವಾಲಯದಿಂದ 3.5 ಕಿ.ಮೀ ದೂರದಲ್ಲಿದೆ. ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ, ದೇವಾಲಯದ ತಾಣವು ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಈ ರಾಮ ಮಂದಿರವು ಧರ್ಮಸ್ಥಳಕ್ಕೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ.

ರಾಮ ನೆಲೆಸಿದ್ದ ಸ್ಥಳ : ಪುರಾಣದ ಪ್ರಕಾರ, ಭಗವಾನ್ ರಾಮನು ‘ಸೀತಾನ್ವೇಷಣೆ ’ ಅಂದರೆ ಸೀತೆಯನ್ನು ಹುಡುಕುತ್ತಿದ್ದ ಸಮಯದಲ್ಲಿ ಸ್ವಲ್ಪ ಕಾಲ ಇಲ್ಲಿಯೇ ಇದ್ದರು. ನಂತರ ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಮತ್ತು ಯೋಗ ಗುರುಗಳಾಗಿದ್ದ ವಿಶೇಷ ದೈವಿಕ ಶಕ್ತಿಗಳನ್ನು ಹೊಂದಿದ್ದ ನಿತ್ಯಾನಂದ ಸ್ವಾಮಿ ಅವರು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಇಲ್ಲಿ ಉಳಿದುಕೊಂಡಿದ್ದರು ಆಗ ಅವರು ಇಲ್ಲಿ ರಾಮನ ಮಂದಿರ ನಿರ್ಮಾಣವಾಗ ಬೇಕೆಂದು ಭಾವಿಸಿದ್ದರು.

ಯಾರು ನಿರ್ಮಿಸಿದ್ದು? : 1978 ರ ವರೆಗೆ ಇಲ್ಲಿ ಬರೀ ಒಂದು ನಿತ್ಯಾನಂದ ಆಶ್ರಮವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ.1978 ರಲ್ಲಿ ಬೆಂಗಳೂರಿನ ಶ್ರೀ ಬಾಲಾ ಶಿವಯೋಗಿ ಮಹಾರಾಜ್ ಅವರು ರಾಮ ಮಂದಿರಕ್ಕೆ ಅಡಿಪಾಯ ಹಾಕಿದರು. ನಂತರ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಎರಡು ಎಕರೆ ಭೂಮಿಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು.2007 ರಲ್ಲಿ ಮಂದಿರದ ‘ಪ್ರತಿಷ್ಠ ಬ್ರಹ್ಮಕಲಾಶೋತ್ಸವ’ವನ್ನು 45 ದಿನಗಳ ಕಾಲ ನಡೆಸಲಾಯಿತು.
ಯಾವಾಗ ಭೇಟಿ ನೀಡುವುದು ಸೂಕ್ತ
ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಧರ್ಮಸ್ಥಳವು ಅತ್ಯಂತ ಅನುಕೂಲಕರ ಹವಾಮಾನವನ್ನು ಹೊಂದಿರುತ್ತದೆ. ಹೀಗಾಗಿ, ಹೆಚ್ಚಿನ ಪ್ರವಾಸಿಗರು ಈ ಅವಧಿಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ.
ತಲುಪುವುದು ಹೇಗೆ?
ದೇವಾಲಯವು ಮಂಜುನಾಥ ದೇವಸ್ಥಾನದಿಂದ ಪೂರ್ವಕ್ಕೆ3.5 ಕಿ.ಮೀ ದೂರದಲ್ಲಿರುವ ಬೆಳ್ತಂಡಿಗೆ ಹೋಗುವ ಮಾರ್ಗದಲ್ಲಿದೆ. ಕನ್ಯಾಡಿ ಶ್ರೀ ರಾಮ ಕ್ಷೇತ್ರವು ಮಂಗಳೂರಿನಿಂದ 74ಕಿಲೋಮೀಟರ್ ದೂರದಲ್ಲಿದೆ. ಮಂಗಳೂರು – ಧರ್ಮಸ್ಥಳ ರಸ್ತೆಯಲ್ಲಿರುವ ಧರ್ಮಸ್ಥಳಕ್ಕೆ ಕೇವಲ 4 ಕಿಲೋಮೀಟರ್ ದೂರದಲ್ಲಿರುವ ಕಾರಣ ಈ ಸ್ಥಳಕ್ಕೆ ಭೇಟಿ ನೀಡುವುದು ಅಷ್ಟೊಂದು ಕಷ್ಟವೇನಲ್ಲ. ಸ್ಥಳೀಯ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಶ್ರವಣ ಬೆಳಗೋಳದವರೆಗೆ ಸುಲಭವಾಗಿ ಲಭ್ಯವಿವೆ, ಇದು ಹತ್ತಿರದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಆದ್ದರಿಂದ, ರಾಮ ಮಂದಿರವನ್ನು ನಗರದ ಎಲ್ಲಾ ಭಾಗಗಳಿಂದ ಸುಲಭವಾಗಿ ಪ್ರವೇಶಿಸಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭರಚುಕ್ಕಿ ಎಂದರೆ ಎಲ್ಲರಿಗು ಇಷ್ಟವಾದ ಜಾಗ ಎನ್ನಬಹುದು ಯಾಕೆಂದರೆ ಇಲ್ಲಿನ ಸೊಬಗು ನೋಡಲುತುಂಬಾ ಆಕರ್ಷಕವಾಗಿರುತ್ತದೆ ಮತ್ತು ಎತ್ತರದಿಂದ ಹರಿಯುವ ನೀರನ್ನು ನೋಡಲು ಜನರು ಸಾಕಷ್ಟು ದೂರದಿಂದ ಬರುತ್ತಾರೆ. ಈ ಸೊಬಗನ್ನು ಧಾರೆಯೆರೆಯುತ್ತಿದ್ದ ಭರಚುಕ್ಕಿ ಈಗ ಮತ್ತಷ್ಟು ರೋಮಾಂಚಕ ಅನುಭವ ನೀಡಲು ಸಜ್ಜಾಗುತ್ತಿದೆ. ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತವಿಶ್ವದ ಗಮನ ಸೆಳೆಯಲು ಅಣಿಯಾಗುತ್ತಿದೆ.ಶೀಘ್ರದಲ್ಲೇ ಇಲ್ಲಿ ಪ್ರವಾಸಿ ಆಕರ್ಷಣೆಯೊಂದು ಸೇರ್ಪಡೆಗೊಳ್ಳಲಿದ್ದು, ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್…
ಇವರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸತಿ-ಪತಿಗಳಾಗಬೇಕಿತ್ತು.ಆದ್ರೆ ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಇವರಿಬ್ಬರಲ್ಲಿ ಚರ್ಚೆಯಾಗಿದ್ದು, ಇವರ ವಾದ ಪ್ರತಿವಾದಗಳು ತಾರಕಕ್ಕೇರಿ, ಜಗಳದಲ್ಲಿ ಕೊನೆಯಾಗಿ ಇವರ ಮದುವೆಯೇ ರದ್ದಾಗಿದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(17 ಮಾರ್ಚ್, 2019) ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ಪ್ರಣಯದ…
ಚಿಕ್ಕಬಳ್ಳಾಪುರ/ಬೆಂಗಳೂರು: ಮನೆ ಮಾಲೀಕರು ಮತ್ತು ಪೊಲೀಸರ ಕಿರುಕುಳದಿಂದ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಂಜುಳಾ (35) ನೇಣಿಗೆ ಶರಣಾದ ಮಹಿಳೆ. ದೇವನಹಳ್ಳಿ ಪಟ್ಟಣದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾಗುವ ಮೊದಲು ಮಂಜುಳಾ ಮೊಬೈಲ್‍ನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಾಡಿಗೆ ಮನೆ ವಿಚಾರವಾಗಿ ಮಾಲೀಕರು ಮತ್ತು ಮಂಜುಳಾ ನಡುವೆ ಜಗಳ ನಡೆದಿತ್ತು. ಜಗಳದ ಹಿನ್ನೆಲೆಯಲ್ಲಿ ಮಾಲೀಕರು ಮತ್ತು ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟೆಲೇರಿದ್ದರು….
ಕೋಲಾರ:- ರಾಮನ ಪೂಜೆ ಎಲ್ಲಾ ಕಡೆ ನಡೆಯುತ್ತದೆ ಅದರಲ್ಲಿ ವಿಶಿಷ್ಟತೆ ಏನೂ ಇಲ್ಲ ಆದರೆ, ತಾಲ್ಲೂಕಿನ ಸುಗಟೂರು ಮತ್ತು ವಕ್ಕಲೇರಿ ಗ್ರಾಮಗಳಲ್ಲಿ ನಂತರ ಶಿವ ಭಕ್ತನಾದ ರಾವಣನಿಗೂ ಪ್ರಾಧಾನ್ಯತೆ ನೀಡಿ ಪೂಜಿಸುವ ವಿಶಿಷ್ಟ ಪದ್ದತಿ ರೂಢಿಯಲ್ಲಿದೆ. ವಕ್ಕಲೇರಿ ಗ್ರಾಮದಲ್ಲಿ ಮಾರ್ಕಂಡೇಶ್ವರ ಸ್ವಾಮಿ ರಥೋತ್ಸವ ಮುಗಿದಿದ್ದು, ಫೆ.7ರ ಮಂಗಳವಾರ ರಾತ್ರಿ 10 ತಲೆಗಳನ್ನೊತ್ತ ರಾವಣನ ಮೂರ್ತಿ ಮತ್ತು ಮೇಲೆ ಮಾರ್ಕಂಡೇಶ್ವರ ಸ್ವಾಮಿಯ ಮೂರ್ತಿಗಳನ್ನಿಟ್ಟು ವೈಭವದಿಂದ ರಾವಣೋತ್ಸವ ನಡೆಸಲಾಯಿತು. ಅದೇ ರೀತಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲೂ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ ನಡೆದ…
ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಮಾಡರ್ನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನ ಪಡೆದಿದ್ದಾರೆ. ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ…