ಸುದ್ದಿ

ಯಾವ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಅರೆಸ್ಟ್ ಮಾಡಿ ಬಂಧಿಸಿದ ಪೊಲೀಸರು…ಕಾರಣ?

58

ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ.
ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ ವೃದ್ಧೆಗೆ ಇತ್ತು. ಈ ಹಿನ್ನೆಲೆಯಲ್ಲಿ ಈಗ ಮೊಮ್ಮಗಳು ಅಜ್ಜಿಯ ಕೋರಿಕೆಯನ್ನು ಇಡೇರಿಸಲು ಯುಕೆ ನ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ವೃದ್ಧೆಯನ್ನು ಬಂಧಿಸಿದ್ದಾರೆ.

ಅಜ್ಜಿಯನ್ನು ಪೋಲೀಸರು ಬಂಧಿಸಿ ಅವರ ಆಸೆ ತೀರಿಸಿದ್ದಕ್ಕೆ ಮೊಮ್ಮಗಳು ಪಾಮ್ ಸ್ಮಿತ್ ಟ್ವಿಟ್ಟರ್ ನಲ್ಲಿ ಖಾಕಿ ಪಡೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಅಜ್ಜಿ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ತನ್ನ ಈ ಆಸೆ ಬಗ್ಗೆ ಸ್ಮಿತ್ ಬಳಿ ಹೇಳಿದ್ದರು. ತನ್ನ ಅಜ್ಜಿಯ ಆರೋಗ್ಯವು ಏರುಪೇರು ಆಗುತಿತ್ತು. ತನ್ನ ಜೀವನದ ಉದ್ದಕ್ಕೂ ಚೆನ್ನಾಗಿದ್ದರಿಂದ ಯಾವುದಾದರು ಕಹಿ ಅನುಭವವನ್ನು ಹೊಂದಬೇಕೆಂದು ಎಂದು ಬಯಸಿದ್ದರು.

ಈ ಹಿನ್ನಲೆಯಲ್ಲಿ ವಯಸ್ಸಾದರೂ ತನ್ನನ್ನು ಬಂಧಿಸಬೇಕೆಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಈಗ ಆ ಅಜ್ಜಿ ಪೋಲೀಸರ ಬಂಧನದಿಂದ ಖುಷಿಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಮ್ಯಾಂಚೆಸ್ಟರ್ ಪೊಲೀಸ್ ಅಧಿಕಾರಿ ಮಾತನಾಡಿ, ವೃದ್ಧೆಯ ಆಸೆಯನ್ನು ನಾವು ಈಡೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ಜೀವನದಲ್ಲಿ ನೆನಪಿಟ್ಟುಕೊಳ್ಳುವ ಒಂದು ದಿನವನ್ನು ನಾವು ನೀಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ