ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿತ್ಯಾನಂದನ ಆಶ್ರಮದಲ್ಲಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಯುವತಿಯೇ ಫೇಸ್ಬುಕ್ ನಲ್ಲಿ ಲೈವ್ ವಿಡಿಯೋ ಮಾಡುವ ಮೂಲಕ ಎಲ್ಲ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾಳೆ.
ಅಪಹರಣಗೊಂಡಿದ್ದಾಳೆ ಎಂಬ ಆರೋಪ ಕೇಳಿಬಂದ ಯುವತಿ ಫೇಸ್ಪುಕ್ ನಲ್ಲಿ ಪ್ರತ್ಯಕ್ಷವಾಗಿ ತಂದೆಯ ವಿರುದ್ಧವೇ ಕಿಡಿಕಾರಿದ್ದಾಳೆ. ಲೈವ್ ವಿಡಿಯೋ ಮೂಲಕ ತಮ್ಮನ್ನು ಯಾರೂ ಅಪಹರಿಸಿಲ್ಲ. ಆದರೆ ಸುಖಾಸುಮ್ಮನೆ ನಮ್ಮ ಗುರುಗಳಾದ ನಿತ್ಯಾನಂದ ಸ್ವಾಮೀಜಿ ಮೇಲೆ ಆರೋಪಿಸಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಾಗಿದೆ. ಆದರೆ ಸ್ವಾಮೀಜಿ ನಮಗೆ ತಂದೆ ಸಮಾನರು, ಈ ರೀತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ವಿಡಿಯೋದಲ್ಲಿ ತನ್ನ ಹೆಸರನ್ನು ಮಾ ನಿತ್ಯ ತತ್ವಪ್ರಿಯ ಆನಂದ ಎಂದು ಹೇಳಿಕೊಂಡಿದ್ದಾಳೆ.
ನನ್ನನ್ನು ಯಾರೂ ಅಪಹರಿಸಿಲ್ಲ. ನನ್ನ ವೈಯಕ್ತಿಕ ಕಾರಣ, ಕುಟುಂಬದಲ್ಲಿ ವೈಮನಸ್ಸು ಇರುವುದರಿಂದ ಹೆತ್ತವರ ಜೊತೆ ಇರಲಾರದೆ ಆಶ್ರಮದಲ್ಲಿದ್ದೇನೆ. ನಾನು ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ಇದು ನನ್ನ ಬದುಕು, ನಾನು ಇಚ್ಛೆ ಪಟ್ಟು ಈ ಬದುಕನ್ನು ಬದುಕುತ್ತಿದ್ದೇನೆ ಎಂದು ತಿಳಿಸಿದ್ದಾಳೆ.
ಸ್ವಾಮೀಜಿಯ ಮೇಲೆ ವೈಯಕ್ತಿಕ ಕಾರಣಗಳಿಂದ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅವರು ಆರೋಪಿಸಿರುವುದು ಸುಳ್ಳು, ದೂರಿನಲ್ಲಿ ಉಲ್ಲೇಖಿಸಿರುವುದು ಸಹ ಸುಳ್ಳು. ನಮ್ಮನ್ನು ಸ್ವಾಮೀಜಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾನು ಹಾಗೂ ನನ್ನ ಸಹೋದರಿ ಜೊತೆಗೆ ಇದ್ದೇವೆ. ಹೆತ್ತವರು ಖಾವಿ ಬಿಟ್ಟು ಬನ್ನಿ ಅಂತಿದ್ದಾರೆ. ಆದರೆ ನಾವು ಇದಕ್ಕೆ ತಯಾರಿಲ್ಲ ಎಂದು ಹೇಳಿದ್ದಾಳೆ.
ಪೊಲೀಸರು, ಮಾಧ್ಯಮದವರು ಎಲ್ಲರೂ ನಮಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸುಖಾಸುಮ್ಮನೆ ಆಶ್ರಮದಲ್ಲಿರುವವರನ್ನು ಬಂಧಿಸುತ್ತಿದ್ದಾರೆ. ಇದು ಕುಟುಂಬದ ಸಮಸ್ಯೆ, ಇದಕ್ಕೂ ಆಶ್ರಮಕ್ಕೂ ಸಂಬಂಧವಿಲ್ಲ. ನನಗೆ ಖಾವಿ ಬಿಟ್ಟು ಬದುಕು ಇಲ್ಲ. ನಿತ್ಯಾನಂದ ಸ್ವಾಮೀಜಿ ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನೈಜ ಪರಿಸ್ಥಿತಿ ಬಗ್ಗೆ ಎಷ್ಟೇ ಹೇಳಿದದರೂ ಪೊಲೀಸರು ಕೇಳುತ್ತಿಲ್ಲ ಎಂದು ಹೇಳಿದ್ದಾಳೆ.
ಏನಿದು ಪ್ರಕರಣ?
ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಜನಾರ್ದನ ಶರ್ಮಾ ತನ್ನ ಮಕ್ಕಳನ್ನು ನಿತ್ಯಾನಂದನ ಆಶ್ರಮಕ್ಕೆ ಬಿಟ್ಟಿದ್ದರು. ನಿತ್ಯಾನಂದನ ಮಾತಿಗೆ ಮರುಳಾಗಿ ತನ್ನ ನಾಲ್ವರು ಮಕ್ಕಳನ್ನು ಆಶ್ರಮದಲ್ಲಿ ಇಟ್ಟಿದ್ದರು. ಆಶ್ರಮದಲ್ಲಿನ ಅಕ್ರಮಗಳ ಬಗ್ಗೆ ತಿಳಿದು ಶರ್ಮಾ ಆಶ್ರಮದ ಕೆಲಸ ಬಿಟ್ಟು ಹೊರಗೆ ಬಂದಿದ್ದರು. ಬಟ್ಟು ಬರುವ ವೇಳೆ ನಾಲ್ವರು ಮಕ್ಕಳ ಪೈಕಿ 18 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಶರ್ಮಾ ಆರೋಪಿಸಿದ್ದರು. ಇವಳನ್ನು ಅಪಹರಿಸಿ, ನಮಗೆ ತಿಳಿಯದಂತೆ ಬಿಡದಿಯ ನಿತ್ಯಾನಂದ ಆಶ್ರಮದಿಂದ ಅಹಮದಾಬಾದ್ ಆಶ್ರಮಕ್ಕೆ ನನ್ನ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಜನಾರ್ದನ ಶರ್ಮಾ ಆರೋಪಿಸಿದ್ದರು. ಅಲ್ಲದೆ ಮಕ್ಕಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ನಿತ್ಯಾನಂದನ ವಿರುದ್ಧ ಗುಜರಾತ್ ನಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶುಕ್ರವಾರ, 30/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಇಂದು ನಿಮ್ಮದೇ ದಿನವಾಗಿ ಪರಿವರ್ತಿತವಾಗಲಿದೆನಾನಾ ರೀತಿಯಲ್ಲಿ ಆದಾಯ ಒದಗಿ ಬರುತ್ತದೆ. ಶತ್ರುಭಯ ಕಲಹಾದಿಗಳಿಂದ ಮುಕ್ತಿ ಇದೆ. ಕೆಲಸಕಾರ್ಯಗಳು ನಿಮ್ಮಚ್ಛೆಯಂತೆ ನಡೆಯುತ್ತವೆ. ಮನೆಯಲ್ಲಿ ಶಾಂತಿ ಸಮಾಧಾನದ ವಾತಾವರಣ ವಿರುತ್ತದೆ. ನಿಮ್ಮ ಮನೋಭಿಲಾಷೆಗಳು ಸುಸೂತ್ರವಾಗಿ ಈಡೇರಲಿವೆ. ಆರೋಗ್ಯದಲ್ಲಿ ಸುಧಾರಣೆ. ಮಕ್ಕಳಿಂದ ಶುಭ ವಾರ್ತೆ ಕೇಳುವ ಅವಕಾಶ ನಿಮ್ಮದಾಗಲಿದೆ. ವೃಷಭ:- ನೀವು ಗ್ರಹಿಸಿರುವ ಕೆಲಸಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆಯಲಿವೆ. ಇಂದು ನಿಮ್ಮದೇ ದಿನವಾಗಿ ಪರಿವರ್ತಿತವಾಗಲಿದೆ. ನಿಮ್ಮ ಮನೋಭಿಲಾಷೆಗಳು ಸುಸೂತ್ರವಾಗಿ…
ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ…
ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ನಾಯಕರಿಂದ ಭರವಸೆ ಮಹಾಪೂರವೇ ಹರಿದು ಬರ್ತಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. 2019ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸರ್ಕಾರಿ ಪರೀಕ್ಷೆ ಹಾಗೂ ಸರ್ಕಾರಿ ಹುದ್ದೆಗಳ ಪರೀಕ್ಷೆಗೆ ವಿಧಿಸುವ ಅರ್ಜಿ ಶುಲ್ಕವನ್ನು ರದ್ದು ಮಾಡುವುದಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಯಾವುದೇ ಅಭ್ಯರ್ಥಿಯಿಂದ ಸರ್ಕಾರಿ ಪರೀಕ್ಷೆಗೆ ಅರ್ಜಿ…
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಲ್ಲಿ ಪ್ರತಿ ಕಿಲೋಮೀಟರ್ ಗೂ ನಮ್ಮ ಸಂಸ್ಕೃತಿ , ಸಂಪ್ರದಾಯ, ಭಾಷೆ , ಪದ್ಧತಿ ಬದಲಾಗುತ್ತ ಹೋಗುತ್ತದೆ. ಇಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿ, ಕಲೆ , ಆಚಾರ ವಿಚಾರಗಳು ಇವೆ. ಅಂತೆಯೇ ತನ್ನದೇ ಆದ ವಿಶಿಷ್ಟ ಅಡುಗೆ ಶೈಲಿಗಳನ್ನು ಈ ರಾಜ್ಯಗಳು ಹೊಂದಿವೆ. ಇಡ್ಲಿ , ವಡೆ, ಮಸಾಲ ದೋಸೆ ತಮಿಳು ನಾಡಿನಲ್ಲಿ ಸುಪ್ರಸಿದ್ದ. ಈ ತಿಂಡಿಗಳ ಹೆಸರು ಕೇಳಿದೊಡನೆಯೇ ಹೊರ ಜನರಿಗೆ…
ನೀವು ರಾತ್ರಿಯಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದರೆ, ಅರಿಶಿನ ಹಾಲು ನಿಮ್ಮ ನಿದ್ರೆಗೆ ಸಹಾಯಕವಾಗಬಹುದು. ರಾತ್ರಿ ಊಟದ ನಂತರ ಮಲಗುವ ಮುನ್ನ ಅರ್ಧ ಲೋಟ ಹಾಲನ್ನು ಅರಿಶಿನೊಂದಿಗೆ ಕುಡಿಯಿರಿ ಮತ್ತು ನಂತರ ನೀವು ರಾತ್ರಿಯಲ್ಲಿ ಹೇಗೆ ಮಲಗುತ್ತೀರಿ ಎಂಬುದನ್ನು ನೋಡಿ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ…