Health

ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗಬೇಕಾ? ಈಗೆ ಮಾಡಿ.

167

ಬಹಳಷ್ಟು ಮಂದಿಯ ಮನೆಯಲ್ಲಿ ಈ ಸೊಳ್ಳೆ ಬ್ಯಾಟ್‌ಗಳು ಇದ್ದೇ ಇರುತ್ತವೆ. ನೀವು ಮನೆ ಬಾಗಿಲು ಹಾಕಿಟ್ಟಿದ್ದರೂ ಒಂದು ಕ್ಷಣಕ್ಕೆ ಬಾಗಿಲು ತೆರೆದರೆ ಸಾಕು ಸೊಳ್ಳೆಗಳೆಲ್ಲಾ ಮನೆಯೊಳಗಡೆ ಸೇರಿಕೊಂಡು ಬಿಡುತ್ತವೆ. ಮಧ್ಯರಾತ್ರಿಯಲ್ಲಿ ಸೊಳ್ಳೆ ಬ್ಯಾಟ್ ಹಿಡಿದುಕೊಂಡು ಸೊಳ್ಳೆಯನ್ನು ಹುಡುಕಿ ಹುಡುಕಿ ಸಾಯಿಸಬೇಕಾಗುತ್ತದೆ. ಬೇಸಿಗೆಗಾಲದಲ್ಲಂತೂ ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಇರುತ್ತವೆ.

ಈ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗಬೇಕಾ? ನಾವು ನಿಮಗೆ ಸೊಳ್ಳೆ ಓಡಿಸಲು ಉಪಯೋಗಕ್ಕೆ ಬರುವ ಕೆಲವು ಸುಲಭವಾದ ಟಿಪ್ಸ್‌ನ್ನು ಹೇಳಿಕೊಡಲಿದ್ದೇವೆ. ಇದಕ್ಕೆ ಮನೆಯಲ್ಲಿರುವ ಕೆಲವು ವಸ್ತುಗಳೇ ಸಾಕು. ಅದಕ್ಕೆ ಹೆಚ್ಚು ಖರ್ಚು ಕೂಡಾ ಆಗೋದಿಲ್ಲ, ಆ ಟಿಪ್ಸ್‌ ಯಾವುದೆಂದು ನೋಡೋಣ ಬನ್ನಿ.

ಕರ್ಪೂರ : ದೇವರಿಗೆ ಕರ್ಪೂರ ಹಚ್ಚುವಾಗ ಅದು ಎಷ್ಟೊಂದು ಪರಿಮಳ ಬರುತ್ತದೆ ಅಲ್ವಾ? ಸೊಳ್ಳೆಗಳನ್ನು ಓಡಿಸಲು ಸೊಳ್ಳೆ ಬತ್ತಿಗಳನ್ನು ಹಚ್ಚುವ ಬದಲು ನೀವು ಕರ್ಪೂರವನ್ನು ಹಚ್ಚಿ ನೋಡಿ. ಕರ್ಪೂರ ಹಚ್ಚಿದ 15ರಿಂದ 20 ನಿಮಿಷಗಳಲ್ಲಿ ಸೊಳ್ಳೆಗಳೆಲ್ಲಾ ಮಾಯವಾಗುತ್ತವೆ.

ಪುದೀನಾ : ಪುದೀನಾ ಕೂಡ ಸೊಳ್ಳೆ ನಿವಾರಕ ಸಸ್ಯವಾಗಿದೆ, ಆದರೆ ಈ ಸಸ್ಯವು ಬೇಗನೆ ಬೆಳೆಯುವುದರಿಂದ ಮನೆಯಲ್ಲಿ ನೆಟ್ಟಾಗ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಇದು ನಿಮ್ಮ ಮಡಕೆ ಅಥವಾ ಇಡೀ ಉದ್ಯಾನದಲ್ಲಿ ಕೆಲವೇ ದಿನಗಳಲ್ಲಿ ಹರಡಬಹುದು. ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ನೀವು ಪುದೀನಾ ಎಣ್ಣೆಯನ್ನು ಬಳಸಬಹುದು ಏಕೆಂದರೆ ಅದರ ಎಲೆಗಳ ಸುಗಂಧವು ಸೊಳ್ಳೆಗಳನ್ನು ದೂರ ಇರಿಸಲು ಸೂಕ್ತವಾಗಿದೆ. ಈ ಪುದೀನಾ ಎಣ್ಣೆಯನ್ನು ನೀವು ಮನೆಯಲ್ಲೇ ತಯಾರಿಸಬಹುದು.

ಈರುಳ್ಳಿ ಮತ್ತು ಬೆಳ್ಳುಳ್ಳಿ : ನಮ್ಮ ಮನೆಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಹೇರಳವಾಗಿ ಅಡುಗೆ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಆದರೆ ಸೊಳ್ಳೆಗಳನ್ನು ನಿವಾರಿಸಲು ಬೆಳ್ಳುಳ್ಳಿ ಮತ್ತು ಈರುಳ್ಳಿ ಸಸ್ಯವೂ ಉಪಯುಕ್ತವಾಗಿದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ಗಿಡ ಇಲ್ಲವೆಂದಾದರೆ ಸೊಳ್ಳೆಗಳನ್ನು ಓಡಿಸಲು ನೀವು ಮೊಳಕೆಯೊಡೆದ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸಬಹುದು. ಏಕೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಕಾಂಡವು ಬಲವಾದ ದುರ್ವಾಸನೆಯನ್ನು ಹೊಂದಿರುತ್ತದೆ, ಇದು ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ದೂರ ಇಡುತ್ತದೆ.

ನಿಂಬೆ : ನಿಂಬೆ ವಾಸನೆಯ ಅದ್ಭುತ ಸಸ್ಯವಾಗಿದೆ. ನಿಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಸೊಳ್ಳೆಗಳನ್ನು ತಡೆಗಟ್ಟಲು ಇದು ಅತ್ಯುತ್ತಮ ಮಾರ್ಗವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ