ಸುದ್ದಿ

ಭಾರತದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಜಗತ್ತಿನ ಹಲವು ನಗರಗಳು ಇನ್ನು 30 ವರ್ಷಗಳಲ್ಲಿ ಮಾಯವಾಗಲಿದೆ, ಹೇಗೆ ಗೊತ್ತಾ,?

172

ಜಾಗತಿಕ ತಾಪಮಾನ ಏರಿಕೆ ಈ ಮೊದಲು ಊಹಿಸಿದ್ದಕ್ಕಿಂತಲೂ ಮೂರು ಪಟ್ಟು ಭೀಕರವಾಗಿರಲಿದೆ. ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ 2050ರ ವೇಳೆಗೆ ವಿಶ್ವದ ಪ್ರಮುಖ ಕರಾವಳಿ ನಗರಗಳು ಭೂಪಟದಿಂದಲೇ ಅಳಿಸಿ ಹೋಗಲಿವೆಯಂತೆ. ದೇಶದ ವಾಣಿಜ್ಯ ನಗರಿ ಮುಂಬಯಿ ಸೇರಿದಂತೆ ಸಮುದ್ರ ಮಟ್ಟದಲ್ಲಿರುವ ವಿಶ್ವದ ಹಲವಾರು ನಗರಗಳು ಜಲಸಮಾಧಿಯಾಗಲಿವೆ.

ಅಮೆರಿಕದ ನ್ಯೂ ಜೆರ್ಸಿ ನಗರದ “ಕ್ಲೈಮೇಟ್ ಸೆಂಟ್ರಲ್” ಎಂಬ ವಿಜ್ಞಾನ ಸಂಸ್ಥೆಯು ಈ ಹೊಸ ಸಂಶೋಧನೆ ನಡೆಸಿ ತನ್ನ ವರದಿಯನ್ನು “ನೇಚರ್ ಕಮ್ಯೂನಿಕೇಶನ್ಸ್”ಪತ್ರಿಕೆಯಲ್ಲಿ ಬಿಡುಗಡೆ ಮಾಡಿದೆ. ಸಂಶೋಧಕರು ಈ ಹಿಂದಿನ ವಿಧಾನದ ಬದಲು ಉಪಗ್ರಹ ಮಾಹಿತಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವಿನಿಂದ ಸಮುದ್ರ ನೀರಿನ ಮಟ್ಟವನ್ನು ಅಳೆದು ಭೂಮುಳುಗಡೆಯ ಪ್ರಮಾಣವನ್ನು ಹೆಚ್ಚು ಕರಾರುವಾಕ್ಕಾಗಿ ಅಂದಾಜು ಮಾಡಿದ್ದಾರೆನ್ನಲಾಗಿದೆ.

ಭಾರತದ ವಾಣಿಜ್ಯ ರಾಜಧಾನಿ ಎನ್ನಲಾದ ಹಾಗೂ ವಿಶ್ವದ ಬೃಹತ್ ನಗರಗಳಲ್ಲೊಂದೆನಿಸಿದ ಮುಂಬೈನ ಬಹುತೇಕ ಭೂಪ್ರದೇಶವು ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಈ ಸಂಶೋಧಕರು ಎಚ್ಚರಿಸಿದ್ದಾರೆ. ಮುಂಬೈ ಅಷ್ಟೇ ಅಲ್ಲ, ವಿಯೆಟ್ನಾಮ್​ನ ಹೋ ಚಿ ಮಿನ್ ನಗರ, ಥಾಯ್ಲೆಂಡ್​ನ ಬ್ಯಾಂಕಾಕ್, ಚೀನಾದ ಶಾಂಘೈ, ಈಜಿಪ್ಟ್​ನ ಅಲೆಕ್ಸಾಂಡ್ರಿಯಾ,ಇರಾಕ್​ನ ಬಾಸ್ರಾ ಮೊದಲಾದ ನಗರಗಳು ಮುಳುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.

ಸಮುದ್ರದ ದಡದಲ್ಲಿ ಮರಗಳು ಮತ್ತು ಕಟ್ಟಡಗಳು ಇರುವ ಕಾರಣ ಭೂಮಿಯ ನಿಜವಾದ ಎತ್ತರವನ್ನು ಕಂಡುಕೊಳ್ಳುವುದು ಕಷ್ಟವಾಯಿತು ಎಂದು ಸಂಶೋಧನಾ ತಂಡದ ಸದಸ್ಯನಾದ ಸ್ಕಾಟ್‌ ಎ. ಕುಲ್ಪ್ ತಿಳಿಸಿದ್ದಾರೆ. ಸಂಶೋಧನೆ ಪ್ರಕಾರ 2050ರ ವೇಳೆಗೆ ಸಮುದ್ರ ದಡದಲ್ಲಿ ವಾಸವಾಗಿರುವ 15 ಕೋಟಿ ಜನರು ತಮ್ಮ ಮನೆ ಕಳೆದುಕೊಳ್ಳಲಿದ್ದಾರೆ. ಕಾರಣ ಈ ಪ್ರದೇಶ ಸಮುದ್ರದ ಅಲೆಗಳಿಗೆ ಸಿಲುಕಿ ಮುಳುಗಿ ಹೋಗಲಿದೆ.

ಈ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಕೋಟ್ಯಂತರ ಜನರು ಬೇರೊಂದು ಪ್ರದೇಶಗಳಿಗೆ ಗುಳೆ ಹೋದಾಗ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಸಾಮಾಜಿಕ ಮತ್ತು ರಾಜಕೀಯ ಅಭದ್ರತೆ ಕಾಡಬಹುದು. ನೆಲಕ್ಕಾಗಿ, ವಸಾಹತಿಗಾಗಿ ಸಶಸ್ತ್ರ ಸಂಘರ್ಷ, ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗಬಹುದು. ಇದು ಹವಾಮಾನ ಸಂಬಂಧಿತ ಅಪಾಯಕ್ಕಿಂತಲೂ ಹೆಚ್ಚು ತೀವ್ರ ಮಟ್ಟದ್ದು ಎಂದು ಮತ್ತೊಂದು ಸಂಶೋಧಕರ ತಂಡವು ಆತಂಕ ವ್ಯಕ್ತಪಡಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಆಂಜನೇಯಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ರಾಜಯೋಗ ಕಟ್ಟಿಟ್ಟಬುತ್ತಿ..ನಿಮ್ಮ ರಾಶಿ ಇದೆಯಾ ನೋಡಿ…!

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷದೈಹಿಕ ಆಲಸ್ಯತನದಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಮಕ್ಕಳ ವಿಷಯದಲ್ಲಿ ಹರ್ಷದಾಯಕ ವಾರ್ತೆಗಳನ್ನು ಕೇಳುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.. . ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121…

  • ಸಿನಿಮಾ

    ಬಹುಭಾಷಾ ನಟನಿಂದ ಮತ್ತೊಂದು ವಿವಾಧಾತ್ಮಕ ಹೇಳಿಕೆ!ಅಯ್ಯಪ್ಪ ಸ್ವಾಮೀ ದೇವರೇ ಅಲ್ಲ ಅಂದ್ರು ಪ್ರಕಾಶ್ ರೈ..!

    ಸುಪ್ರಿಂ ಕೋರ್ಟ್ ಮಹಿಳೆಯರಿಗೆ ಶಬರಿಮಲೆ ಆಯ್ಯಪ ಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟ ಮೇಲೆ ಶಬರಿಮಲೈ ಕುರಿತಂತೆ ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಲೇ ಇವೆ.ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಬಹುಭಾಷ ನಟ ಪ್ರಕಾಶ್ ರಾಯ್ ಮತ್ತೊಂದು ಹೇಳಿಕೆಯಿಂದ ಈಗ ಸುದ್ದಿಯಲ್ಲಿದ್ದಾರೆ.   ಶಬರಿ ಮಲೈ ಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರಿಂ ಕೋರ್ಟ್ ಪ್ರವೇಶ ನೀಡಬೇಕೆಂದು ಆದೇಶ ಮಾಡಿದ್ದರೂ ಅಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಮಾತನಡಿರುವ ಪ್ರಕಾಶ್ ರೈ ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು…

  • ದೇವರು-ಧರ್ಮ

    ಈ ರಾಜ್ಯದ ದೇವಾಲಯಗಳಲ್ಲಿ ಹೊಸ ವರ್ಷದ ಆಚರಣೆ ಬ್ಯಾನ್..!ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯ ಅಂಗಸಂಸ್ಥೆಯಾಗಿರುವ ‘ಹಿಂದೂ ಧರ್ಮ ಪರಿರಕ್ಷಣಾ ಟ್ರಸ್ಟ್‌’ ರಾಜ್ಯದ ದೇವಸ್ಥಾನಗಳಲ್ಲಿ ಹೊಸ ವರ್ಷ ಆಚರಿಸಿದಂತೆ ಆದೇಶ ಮಾಡಿದೆ.

  • ಸಿನಿಮಾ

    Tv9 ಕೆಜಿಎಫ್ ಚಿತ್ರ ಪ್ರಮೋಷನ್ ಏಕೆ ಮಾಡಲಿಲ್ಲ ಎಂಬ ಸತ್ಯ ಬಯಲು…!

    ಕನ್ನಡದ ಹೆಮ್ಮೆ ಕೆಜಿಎಫ್ ಚಿತ್ರದ ಯಶಸ್ಸು ಕಾಣಲಿ ಎಂದು ಎಲ್ಲಾ ಕನ್ನಡಿಗರು ಪ್ರೋತ್ಸಾಹ ನೀಡಿದರು. ಸ್ಟಾರ್ ವಾರ್ ಮರೆತು ಎಲ್ಲಾ ನಟರುಗಳ ಅಭಿಮಾನಿಗಳು ಯಶ್ ಗೆ ಸಪೋರ್ಟ್ ಮಾಡಿದ್ದಾರ್ರೆ. ಹಾಗೆ ಎಲ್ಲಾ ಸುದ್ದಿವಾಹಿನಿಗಳು ಈ ಸಿನಿಮಾವನ್ನು ಪ್ರಮೋಷನ್ ಮಾಡಿದವು. ಆದರೆ ಟಿವಿ9 ಮಾತ್ರ ಈ ಚಿತ್ರದ ಬಗ್ಗೆ ಒಂದು ದಿನವೂ ವಿಶೇಷ ಕಾರ್ಯಕ್ರಮವನ್ನು ಮಾಡಲಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. Tv9 ಸುದ್ದಿ ವಾಹಿನಿಯ ಏಕೆ ಹೀಗೆ ಮಾಡಿತು ಎಂಬುದಕ್ಕೆ ಉತ್ತರ ಇಲ್ಲಿದೆ. ಸಾಮಾನ್ಯವಾಗಿ ಚಿತ್ರತಂಡದವರು ಆ…

  • ಸುದ್ದಿ

    ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್‌ ಆವಿಷ್ಕರಿಸಿದ ಭಾರತೀಯ ವಿಜ್ಞಾನಿಗಳು,..!

    ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್‌ ಆವಿಷ್ಕರಿಸಿದ್ದಾರೆ. ಅಹಮದಾಬಾದ್‌,  ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ…