ಸುದ್ದಿ

ನರೇಂದ್ರ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ರಮ್ಯಾ.!ಆ ದೂರಿನಲ್ಲಿ ಏನಿದೆ ಗೊತ್ತಾ..?

216

ಮಾಜಿ ಸಂಸದೆ ನಟಿ ರಮ್ಯ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ, ‘ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಫೇಸ್ಬುಕ್ ಖಾತೆ ಮೂಲಕ ಬ್ಯಾಡ್ಜ್, ಟೀ ಶರ್ಟ್, ಫೋನ್ ಕವರ್, ಟೋಪಿ ಮೊದಲಾದ ಉಚಿತ ಉಡುಗೊರೆಗಳಿಗಾಗಿ ನರೇಂದ್ರ ಮೋದಿಯವರಿಗೆ ವೋಟ್ ಮಾಡಿ ಎಂದು ಮತದಾರರಿಗೆ ಆಮಿಷ ಒಡ್ಡಲಾಗಿದೆ. ಅಲ್ಲದೆ ವೆಬ್ ಸೈಟ್ ಒಂದರ ಮೂಲಕ ಈ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ ಎಂದು ರಮ್ಯಾ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಪ್ರತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ರಮ್ಯಾ, ಇಂತಹ ಫೇಸ್ಬುಕ್ ಪೇಜ್ ಗಳು ಹಾಗು ವೆಬ್ಸೈಟ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಇವುಗಳನ್ನು ನಿರ್ವಹಿಸಿದವರಿಗೆ ನೀಡಿದ ಸಂಬಳ ಸೇರಿದಂತೆ ಎಲ್ಲ ಖರ್ಚುಗಳನ್ನು ನರೇಂದ್ರ ಮೋದಿ ಅವರ ವೈಯಕ್ತಿಕ ಚುನಾವಣಾ ವೆಚ್ಚಕ್ಕೆ ಸೇರಿಸುವಂತೆ ಆಗ್ರಹಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ