ಸುದ್ದಿ

ಪುಟ್ಟ ಮಕ್ಕಳಿಗೆ ವಿಳ್ಯೆದೆಲೆ ಯನ್ನು ಹೊಟ್ಟೆಗೆ ಅಂಟಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ,.!ಇದನೊಮ್ಮೆ ತಿಳಿಯಿರಿ.

81

ಹೌದು ಹುಟ್ಟಿದ ಮಕ್ಕಳಿಗೆ ಒಂದು ತಿಂಗಳಿನಿಂದ ವಿಳ್ಯೆದೆಲೆಯನ್ನು ಹೊಟ್ಟೆಗೆ ಅಂಟಿಸುತ್ತಾರೆ.. ಇದನ್ನು ಸಾಮಾನ್ಯವಾಗಿ 1 ವರ್ಷದವರೆಗೂ ಮುಂದುವರೆಸುತ್ತಾರೆ.. ಇದಕ್ಕೆ ಕಾರಣ ಮತ್ತು ಉಪಯೋಗ ಇಲ್ಲಿದೆ ನೋಡಿ.. ಹುಟ್ಟಿದ ಮಕ್ಕಳು ಸೂಕ್ಷ್ಮವಾಗಿರುತ್ತವೆ.. ಜೊತೆಗೆ ಗರ್ಭದಿಂದ ಹೊರ ಬಂದು ವಾತಾವರಣಕ್ಕೆ ಹೊಂದಿಕೊಳ್ಳಬೇಕು..

ಪುಟ್ಟ ಮಕ್ಕಳಿಗೆ ಆರೋಗ್ಯ ಕೆಟ್ಟರೆ ಚೇತರಿಸಿಕೊಳ್ಳುವುದು ಬಲು ಕಷ್ಟ.. ಅದಕ್ಕಾಗಿಯೇ ಮಕ್ಕಳ ಆರೋಗ್ಯ ಕೆಡದೇ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಅಜೀರ್ಣದ ಸಮಸ್ಯೆ ಮಕ್ಕಳಲ್ಲಿ ಬೇಗ ಕಾಣಿಸಿಕೊಳ್ಳುತ್ತವೆ. ಮಲ ಮೂತ್ರ ವಿಸರ್ಜಿಸಲು ತುಂಬಾ ಕಷ್ಟ ಪಡುತ್ತವೆ.. ಇದಕ್ಕಾಗಿಯೇ ವಿಳ್ಯೆದೆಲೆಯನ್ನು ಅಂಟಿಸುತ್ತಾರೆ.. ಹೀಗೆ ಮಾಡುವುದರಿಂದ ಮಗುವಿಗೆ ಅಜೀರ್ಣ ಸಮಸ್ಯೆ ಕಂಡುಬರುವುದಿಲ್ಲ.. ಮಲಮೂತ್ರ ವಿಸರ್ಜನೆ ಮಾಡುವಾಗ ಕಷ್ಟವೂ ಆಗುವುದಿಲ್ಲ.

ಮಕ್ಕಳ ಹೊಟ್ಟೆಗೆ ವಿಳ್ಯೆದೆಲೆಯನ್ನು ಅಂಟಿಸುವ ವಿಧಾನ.

ಮೊದಲು ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ಅದಕ್ಕೆ ಹರಳೆಣ್ಣೆಯನ್ನು ಹಾಕಿ ಬತ್ತಿ ಯನ್ನು ಹಾಕಿ ಸಿದ್ಧಪಡಿಸಿಕೊಳ್ಳಿ ನಂತರ 4 ರಿಂದ 5 ವಿಳ್ಯೆದೆಲೆಯನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಸವರಿ ನಂತರ ದೀಪವನ್ನು ಹಚ್ಚಿ ವಿಳ್ಯೆದೆಲೆಯನ್ನು ಆ ದೀಪದಿಂದ ಬಿಸಿ ಮಾಡಿಕೊಳ್ಳಿ  ಬೆಚ್ಚಗಾದ ಎಲೆಗಳನ್ನು ಮಗುವಿನ ಹೊಟ್ಟೆಯ ಭಾಗದಲ್ಲಿ ಅಂಟಿಸುತ್ತಾ ಬನ್ನಿ.

ನಂತರ ಒಂದು ಬಟ್ಟೆಯಿಂದ ವಿಳ್ಯೆದೆಲೆ ಒಳಗಿರುವಂತೆ ಹೊಟ್ಟೆಯನ್ನು ಮೆಲ್ಲಗೆ ಸುತ್ತಿ.ಒಂದೆರೆಡು ಘಂಟೆ ಹಾಗೆ ಇರಲು ಬಿಡಿ.. ಹೆಚ್ಚಿನ ಸಮಯವಿದ್ದರೇ ಏನೂ ಅಪಾಯವಿಲ್ಲ.ಆದರೇ ಎಲೆಯ ಬಿಸಿ ಯನ್ನು ನೀವೊಮ್ಮೆ ಪರೀಕ್ಷಿಸಿ ನಂತರ ಹೊಟ್ಟೆಯ ಮೇಲೆ ಇಡಿ.. ಕೇವಲ ಬೆಚ್ಚಗಿರುವಾಗ ಮಾತ್ರ ಅಂಟಿಸಿ. ವಿಳ್ಯೆದೆಲೆಯಿಂದ ಮಕ್ಕಳು ಹೊಟ್ಟೆ ಹಗುರ ಅಗಿ ಒಳ್ಳೆಯ ನಿದ್ದೆ ಮಾಡುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ನಿಮ್ಮ ಮನೆಯಲ್ಲಿ ಕಾರಿದ್ದು ‘ಎಲ್ ಪಿ ಜಿ ಗ್ಯಾಸ್’ ಉಪಯೋಗಿಸುತ್ತಿದಿರಾ..?ಹಾಗಾದ್ರೆ ಈ ಲೇಖನ ಓದಿ ..

    ನಿಮ್ಮ ಬಳಿ ಕಾರಿದ್ದು ಎಲ್ ಪಿ ಜಿ ಸಬ್ಸಿಡಿಯನ್ನೂ ಪಡೆಯುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ನೀಡಲು ಕೇಂದ್ರ ಸರ್ಕಾರ ಸಜ್ಜಾಗ್ತಿದೆ. ದೇಶದಲ್ಲಿ ಎಷ್ಟು ಮಂದಿ ಬಳಿ ಕಾರಿದೆಯೋ ಅವರಿಗೆ ಸಬ್ಸಿಡಿಯಲ್ಲಿ ಅಡುಗೆ ಅನಿಲ ನೀಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಲಿದೆ. ಈ ಬಗ್ಗೆ ಮೋದಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಸದ್ಯದಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದೆ.

  • ಸುದ್ದಿ

    ಕಿರುತೆರೆಯ ನಂಬರ್ 1 ಧಾರಾವಾಹಿ ಜೊತೆ ಜೊತೆಯಲಿ ಯಾವ ಸೀರಿಯಲ್ ರಿಮೇಕ್ ಗೊತ್ತಾ.?ತಿಳಿದರೆ ಅಚ್ಚರಿ ಪಡೋದಂತು ಗ್ಯಾರಂಟಿ..!

    ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಟಿಆರ್ ಪಿಯಲ್ಲಿ ನಂ 1  ಸ್ಥಾನದಲ್ಲಿದೆ. ಇದೇಮೊದಲ ಬಾರಿಗೆ ಸ್ಯಾಂಡಲ್ ವುಡ್ ನಿಂದ ಕಿರುತೆರೆಗೆ ಬಂದಿರುವ ಅನಿರುದ್ಧ್ ಗೆ ಈ ಧಾರಾವಾಹಿ ಹೊಸ ಇನ್ನಿಂಗ್ಸ್ ನೀಡಿದೆ. ಅವರಿಗೆ ಹೆಸರನ್ನು ತಂದು ಕೊಟ್ಟಿದೆ. ನವಿರಾದ ಪ್ರೇಮ ಕಥೆ, ಮಧ್ಯಮ ವರ್ಗ ಕುಟುಂಬದಲ್ಲಿ ನಡೆಯುವಸಾಂಸಾರಿಕ ತಾಪತ್ರಯಗಳು, ಹೊಸ ರೀತಿಯ ನಿರೂಪಣೆ, ಕತೆ ಇವೆಲ್ಲವೂ. ಹೊಸ ಕಥೆಯೊಂದಿಗೆ ಜನರ ಮನಸ್ಸು ಗೆದ್ದಿರುವ ಜೊತೆ ಜೊತೆಯಲಿ ಧಾರಾವಾಹಿ ನಿಜವಾಗಿ ಸ್ವಮೇಕ್ ಕಥೆ ಅಲ್ಲ…

  • ಉಪಯುಕ್ತ ಮಾಹಿತಿ

    ಕಾರಿನ ಹಿಂಭಾಗದಲ್ಲಿ ಈ ರೀತಿ ಶೇಪ್ ಯಾಕೆ ಇರುತ್ತದೆ ಗೊತ್ತಾ?

    ಕಾರು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಜೀವನದಲ್ಲಿ ನಾವು ಒಂದು ಒಳ್ಳೆಯ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಮತ್ತು ಕೆಲವರಿಂದ ಅದೂ ಸಾದ್ಯವಾದರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಇನ್ನು ಕಾರ್ ಗಳನ್ನ ಖರೀದಿ ಮಾಡದೆ ಇದ್ದರೆ ಏನು ಕಾರನ್ನ ಪ್ರತಿಯೊಬ್ಬರೂ ನೋಡಿರುತ್ತಾರೆ, ಇನ್ನು ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಅನ್ನುವ ಒಂದು ಭಾಗ ಇರುತ್ತದೆ, ಹಾಗಾದರೆ ಸ್ಪೋಲೈರ್ ಎಲ್ಲಾ ಕಾರುಗಳಲ್ಲಿ ಯಾಕೆ ಇರುತ್ತದೆ ಮತ್ತು ಅದರಿಂದ ಆಗುವ…

  • ಸುದ್ದಿ

    ಕೋಟ್ಯಧಿಪತಿಯಲ್ಲಿ 10ನೇ ತರಗತಿ ವಿದ್ಯಾರ್ಥಿ; ಗೆದ್ದ ಹಣ ಶಾಲಾ ಕಾಂಪೌಂಡ್​ಗೆ,.!

    ಪ್ರತಿ ವರ್ಷ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ, ಆದರೆ ದನಗಳು ದಾಳಿನಡೆಸಿ ಎಲ್ಲವೂ ಹಾಳಾಗುತ್ತವೆ. ಹಾಗಾಗಿ,ಶಾಲೆಗೆ ಕಾಂಪೌಂಡ್ ಕಟ್ಟಿಸಲು ಮೊದಲ ಆದ್ಯತೆ ನೀಡುತ್ತೇನೆ..’ನಟ ಪುನೀತ್ ರಾಜ್​ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿ 6.4 ಲಕ್ಷ ರೂ. ಗೆದ್ದ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಅವರ ಮನದಾನದ ಮಾತುಗಳಿವು. ರಿಯಾಲಿಟಿ ಶೋಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿ ತೇಜಸ್ ಜಿಲ್ಲೆಗೆ ಕೀರ್ತಿತಂದಿದ್ದಾನೆ….

  • Uncategorized

    ತುಂಬಾ ನಕ್ಕರೆ ಹೀಗೂ ಆಗುತ್ತೆ..! ಈ ಲೇಖನಿ ಓದಿ ಶಾಕ್ ಆಗ್ತೀರಾ…

    ಯಾರನ್ನೇ ಆಗಲಿ ಅಳಿಸುವುದು ತುಂಬಾ ಸುಲಭ, ಆದರೆ ನಗಿಸುವುದು ಕಷ್ಟ.ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆಯಸ್ಸು ಜಾಸ್ತಿಯಾಗುತ್ತೆ ಅಂತ ಹೇಳುತ್ತಾರೆ.ಅದು ನಿಜಾ ಕೂಡ.ಆದರೆ ಅದೇ ನಗುವಿನಿಂದ ಸಾವಾಗಬಹುದೆಂದು ಎಂದರೆ ನೀವು ನಂಬುತ್ತೀರಾ! ನಂಬಲ್ಲ ಆಲ್ವಾ ಹಾಗಾದ್ರೆ ಮುಂದೆ ಓದಿ…

  • ಕವಿ

    ಸಾಹಿತಿ ಕಾಮರೂಪಿ ಇನ್ನಿಲ್ಲ

    ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್.ಪ್ರಭಾಕರ (ಕಾಮರೂಪಿ) (87) ಇಂದು ಕೋಲಾರ ಕಠಾರಿಪಾಳ್ಯದ ಸ್ವಗೃಹದಲ್ಲಿ ವಯೋಸಹಜತೆಯಿಂದ ವಿಧಿವಶರಾದರು. ಕೋಲಾರದಲ್ಲಿ ಹುಟ್ಟಿ ಬೆಳೆದು ಉಪನ್ಯಾಸಕರಾಗಿ ಸೇವೆ ಆರಂಭಿಸಿ ಪತ್ರಕರ್ತ ಅಂಕಣಕಾರರಾಗಿ ಹೆಸರು ಸಂಪಾದಿಸಿ ದ ಹಿಂದೂ ಪತ್ರಿಕೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಖ್ಯಾತರಾಗಿದ್ದಾರೆ. ದಕ್ಷಿಣ ಆಫ್ರಿಕಾದ ನೀಗ್ರೋ ಜನಾಂಗದ ನೆಲ್ಸನ್ ಮಂಡೇಲಾ ಅವರನ್ನು ಸಂದರ್ಶನ ಮಾಡಿದ ಏಕೈಕ ಭಾರತೀಯ ಪತ್ರಕರ್ತ ಇವರಾಗಿದ್ದರು. ಕುದುರೆಮೊಟ್ಟೆ ಕಥಾ ಸಂಕಲನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ…