ರೆಸಿಪಿ

ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.

168

ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು.

ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.
ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ ಬೇಳೆ, ಮೆಂತ್ಯ ಕಾಳುಗಳನ್ನು ಚೆನ್ನಾಗಿ ತೊಳೆದು, ನೀರು ಸೇರಿಸಿ 6 ಘಂಟೆಗಳ ಕಾಲ ನೆನೆಸಿಟ್ಟು, ನಂತರ ನೀರು ಬಸಿದು ರುಬ್ಬಿಕೊಳ್ಳಬೇಕು.ಇದನ್ನು ಸುಮಾರು 8ಘಂಟೆಗಳ ಕಾಲ ಹುದುಗು ಬರಲು ಬಿಡಬೇಕು. ದೋಸೆ ಮಾಡುವ ಮೊದಲು ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸ ಬೇಕು.

ಮೆಂತ್ಯ ಸೊಪ್ಪಿನ ಮಸಾಲೆ ತಯಾರಿಸಲು ಬೇಕಾಗುವ ಪದಾರ್ಥಗಳು. ಸುಮಾರು 8ದೋಸೆಗೆ ಆಗುವಷ್ಟು ಮೆಂತ್ಯ ಸೊಪ್ಪು, ಒಂದು ಬಟ್ಟಲು ಈರುಳ್ಳಿ, ಒಂದು ಹಸಿಕಾಯಿ ತುರಿ, ಕಾಲು ಬಟ್ಟಲು ಧನಿಯಾ, ಒಂದು ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ,
ಬೆಳ್ಳುಳ್ಳಿ ಎಸಳು. ಎರಡು ಹುಣಸೇ ಹಣ್ಣು. ಅರ್ಧ ಟೀ ಚಮಚ ಹಸಿಮೆಣಸಿನ ಕಾಯಿ ಮೂರು ಉಪ್ಪು ರುಚಿಗೆ ತಕ್ಕಷ್ಟು ಇವುಗಳನ್ನು ಹಸಿಯಾಗಿಯೇ ಸ್ವಲ್ಪವೇ ಸ್ವಲ್ಪ ನೀರು ಸೆರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ನಮಗೆ ಎಷ್ಟು ಬೇಕೋ ಅಷ್ಟೇ ದೋಸೆ ಹಿಟ್ಟಿಗೆ ಮೆಂತ್ಯ ಸೊಪ್ಪಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು ಕಾದ ಕಾವಲಿಯಲ್ಲಿ ದೋಸೆ ಮಾಡಿದರೆ, ರುಚಿಕರ. ಆರೋಗ್ಯಕರ.ಆಕರ್ಷಕ ಬಣ್ಣದ ಮೆಂತ್ಯ ಸೊಪ್ಪಿನ ದೋಸೆ ಸವಿಯಲು ಸಿದ್ಧ. ನಿಮ್ಮ ಇಷ್ಟದ ಚಟ್ನಿ ಯೊಂದಿಗೆ ಸೇವಿಸ ಬಹುದು. ದೋಸೆ ಕಹಿ ಇರುವುದಿಲ್ಲ. ತೀರಾ ಸೂಕ್ಷ್ಮವಾಗಿ ಪರೀಕ್ಷಿಸಿದರೆ ಸ್ವಲ್ಪ ಕಹಿ ಅನ್ನಿಸ ಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಿಮ್ಮ ಕಿಡ್ನಿಗೆ ಅಪಾಯ ತರುವಂತಹ 10 ಸಂಗತಿಗಳು ಗಮನವಿರಲಿ…!

    ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. ಆದರೆ ನಾವು ಬೇಕಂತಲೋ ಅಥವಾ ಮರೆತೋ ಮಾಡುವ ಶೇ. 10 ಸಂಗತಿಗಳು ಕಿಡ್ನಿಗೆ ತುಂಬಾ ಅಪಾಯಕಾರಿ. ಅವು ಯಾವವು ಅನ್ನೋದನ್ನು ನೋಡೋಣ. ತುಂಬಾ ಪ್ರೋಟೀನ್ ಯುಕ್ತ ಆಹಾರ ಸೇವಿಸುವುದು ಕಿಡ್ನಿಗೆ ಅಪಾಯಕಾರಿ. ಅದರಲ್ಲೂ ಮುಖ್ಯವಾಗಿ ಕೆಂಪು ಮಾಂಸ ಕಿಡ್ನಿಯನ್ನು ಡ್ಯಾಮೇಜ್ ಮಾಡುತ್ತೆ. ವಿಟಮಿನ್ ಬಿ6 ಹಾಗೂ ವಿಟಮಿನ್ ಡಿ…

  • ಸಿನಿಮಾ

    ಪಾಕ್ ಧ್ವಜ ಹಿಡಿದು ಸುದ್ದಿಯಾದ ಬಾಲಿವುಡ್ ನಟಿ…

    ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ರಾಖಿ ಸಾವಂತ್ ಫೋಟೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಾಖಿ ಸಾವಂತ್, ಪಾಕಿಸ್ತಾನದ ಧ್ವಜ ಹಿಡಿದು ನಿಂತಿದ್ದಾಳೆ. ಸುಂದರ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾಳೆ. ರಾಖಿ ಸಾವಂತ್ ಫೋಟೋ ನೋಡ್ತಿದ್ದಂತೆ ಕೋಪಗೊಂಡ ಅಭಿಮಾನಿಗಳು ಶೀರ್ಷಿಕೆ ನೋಡಿದ ಮೇಲೆ ತಣ್ಣಗಾಗಿದ್ದಾರೆ. ನನಗೆ ನನ್ನ ದೇಶ ಭಾರತ ತುಂಬಾ ಇಷ್ಟ. ಆದ್ರೆ ಇದು ಬರ್ತಿರುವ ನನ್ನ ಮುಂದಿನ ಚಿತ್ರದ ಒಂದು ದೃಶ್ಯವೆಂದು…

  • ಆರೋಗ್ಯ

    ಪ್ರತಿದಿನ ಬೆಳಿಗ್ಗೆ ರಾಗಿ ಗಂಜಿ ಕುಡಿದರೆ ಏನಾಗುತ್ತೆ ಗೊತ್ತಾ! ಈ ಅರೋಗ್ಯ ಮಾಹಿತಿ ನೋಡಿ.

    ಹೌದು ರಾಗಿ ತಿಂದವ ಯೋಗಿ ಎನ್ನುವ ಮಾತಿನಂತೆ ರಾಗಿ ನಮ್ಮ ಪುರಾತನ ಆಹಾರ ಧಾನ್ಯಗಳಲ್ಲಿ ಒಂದಾಗಿದೆ ಅತಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಇದನ್ನು ಸೇವಿಸಿದರೆ ನಮ್ಮ ದೇಹವು ಸದಾಕಾಲ ಸಮೃದ್ಧತೆಯಿಂದ ಕೂಡಿರುತ್ತದೆ ರಾಗಿಯಲ್ಲಿ ಹಲವಾರು ವಿಧದ ರೆಸಿಪಿಗಳನ್ನು ತಯಾರಿಸುವುದು ಉಂಟು ಆ ಪ್ರದೇಶದ ಅನುಕೂಲಕ್ಕೆ ತಕ್ಕಂತೆ ಕೆಲವರು ರಾಗಿಮುದ್ದೆ ರಾಗಿರೊಟ್ಟಿ ರಾಗಿ ಗಂಜಿಯನ್ನು ಸಾಮಾನ್ಯವಾಗಿ ಸೇವನೆ ಮಾಡುತ್ತಾರೆ ಇನ್ನೂ ನೀವು ರಾಗಿ ಗಂಜಿಯನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದು ನಿಮಗೆ…

  • ಸುದ್ದಿ

    ಸೀರೆಯನ್ನುಟ್ಟು ಬೆತ್ತಲೆಯ ಬೆನ್ನನ್ನು ತೋರಿಸಿದ ಬೆಡಗಿ ..,ಯಾರು ಗೊತ್ತಾ…?

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಾಗ್ತಿರುತ್ತಾರೆ. ಪಿಗ್ಗಿ ಡ್ರೆಸ್ ಸಾಮಾನ್ಯವಾಗಿ ಸುದ್ದಿಗೆ ಬರ್ತಿರುತ್ತದೆ. ಕೆಲ ದಿನಗಳ ಹಿಂದೆ ಪತಿ ನಿಕ್ ಜೊತೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗಿದ್ದರು. ಈಗ ಪ್ರಿಯಾಂಕಾ ಇನ್ನೊಂದು ಹಾಟ್ ಫೋಟೋ ವೈರಲ್ ಆಗಿದೆ. ಪ್ರಿಯಾಂಕಾ ಇನ್ಸ್ಟೈಲ್ ಮ್ಯಾಗಜಿನ್ ಗಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಸೀರೆಯುಟ್ಟಿದ್ದಾರೆ. ಆದ್ರೆ ಬ್ಲೌಸ್ ತೊಟ್ಟಿಲ್ಲ. ಬೆತ್ತಲೆ ಬೆನ್ನು ತೋರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಪ್ರಿಯಾಂಕಾರ ಕೆಲ ಫೋಟೋ ಹಾಗೂ…

  • ಸುದ್ದಿ

    ಹೆಚ್.ವಿಶ್ವನಾಥ್​ ವಿರುದ್ದ ಧೋಸ್ತಿ ಸರ್ಕಾರ ಗರಂ ; ನೀವು ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ.? ಎಂದು ಆವಾಜ್…..

    ನೀವೂ ಎಲ್ಲಿದ್ದೀರಿ.? ಯಾಕ್ರಿ ರಾಜೀನಾಮೆ ಕೊಟ್ರಿ, ಈಗ ಎಲ್ಲಿದ್ದೀರಾ ನೀವು.? ಯಾಕೆ ಮೋಸ ಮಾಡಿದ್ರೀ.? ಎಂದು ಹುಣಸೂರು ಕಾರ್ಯಕರ್ತರಿಂದ ಶಾಸಕ ಹೆಚ್. ವಿಶ್ವನಾಥ್ ಗೆ ನಾನ್ ಸ್ಟಾಪ್ ಕರೆ ಮಾಡಿ ಆವಾಜ್ ಹಾಕಲಾಗುತ್ತೀದೆ. ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಶಾಸಕ ಹೆಚ್ ವಿಶ್ವನಾಥ್​​ ಅವರ ರಾಜೀನಾಮೆ ವಿರೋಧಿಸಿ ಜೆಡಿಎಸ್‍ನಿಂದ ಆಕ್ರೋಶ ವ್ಯಕ್ತವಾಗಿದೆ. ವಿಶ್ವನಾಥ್ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೋರಿ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಅಲ್ಲದೆ ಅದರ ಫೋಟೋವನ್ನು…