ಸುದ್ದಿ

2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ದ ಕಣಕ್ಕಿಳಿಯಲಿರುವ ಪ್ರಥಮ ಹಿಂದು ಸಂಸದೆ ತುಳಸಿ..!

85

ಈಗ ಬರಲಿರುವ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಅವರು ಅಮೆರಿಕದ ಮಾಧ್ಯಮವೊಂದಕ್ಕೆ ಅಧಿಕೃತವಾಗಿ ಹೇಳಿದ್ದಾರೆ.

ಇವರು ಅಮೇರಿಕದ ಕಾಂಗ್ರೆಸ್ ನಮಹ ಮೊದಲ ಮಹಿಳಾ ಹಿಂದೂ ಕಾರ್ಯಕರ್ತೆ ಯಾಗಿದ್ದಾರೆ. ಹೆಸರು ತುಳಸಿ ಗಬ್ಬಾರ್ಡ್. ಈಗ ಇವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದಾರೆ.

ತುಳಸಿ ಅವರು ಸದ್ಯ ಅಮೆರಿಕ ವಿದೇಶಾಂಗ ಇಲಾಖೆಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರ ನಿರ್ಧಾರವು ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದೆ.

ಗಬ್ಬಾರ್ಡ್​ ಇರಾಕ್​ ವಾರ್​ ಸಂದರ್ಭದಲ್ಲಿ ಅಮೆರಿಕವನ್ನ ಪ್ರತಿನಿಧಿಸಿ ಸೇವೆ ಸಲ್ಲಿಸಿದ್ದರು.

ಹವಾಯಿ ಕ್ಷೇತ್ರದಿಂದ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್‍ನಲ್ಲಿ ನಾಲ್ಕು ಬಾರಿ ಡೆಮೊಕ್ರಾಟಿಕ್ ಸಂಸದೆಯಾಗಿರುವ ತುಳಸಿ ಅತ್ಯಂತ ಪ್ರಭಾವಿ ಮಹಿಳಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ಇವರು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಒಂದು ಇತಿಹಾಸ ಸೃಷ್ಟಿದಂತೆ ಆಗುತ್ತದೆ.

ಇವರು ಭಾರತದ ಮೂಲದ ನಿವಾಸಿ ಯಾಗಿದ್ದು. ಅಲ್ಲಿಯ ಜನ ಇವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತದ ಮೂಲದ ಮೊದಲ ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರವಾಗಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ