ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲಿಂಬೆಯನ್ನು ಅಡುಗೆಯ ರುಚಿಗೆ ಮತ್ತು ಔಷಧಿಗೆ ಬಳಸುತ್ತಾರೆ, ನಮ್ಮ ಆರೋಗ್ಯಕ್ಕೂ ಸಹ ಲಿಂಬೆ ಉತ್ತಮ ಆರೈಕೆ. ಸಾಮಾನ್ಯವಾಗಿ ನಿಂಬೆಹಣ್ಣಿನ ರಸವನ್ನು ಹಿಂಡಿ ಎಲ್ಲರೂ ಸಿಪ್ಪೆಯನ್ನು ಬಿಸಾಡುತ್ತಾರೆ ಆದರೆ ನಮಗೆ ತಿಳಿದಿಲ್ಲ ಲಿಂಬೆ ರಸಕ್ಕಿಂತ ಹತ್ತು ಪಟ್ಟು ಸಿಪ್ಪೆಯಲ್ಲಿ ಹತ್ತಿ ಹೆಚ್ಚು ಪೋಷಕಾಂಶಗಳು ಇರುತ್ತವೆ ಎಂದು.

ಲಿಂಬೆಯ ಸಿಪ್ಪೆಯಲ್ಲಿ ಮಿಟಮಿನ್ಸ್ , ಖನಿಜ, ಕರಗದೇ ಇರುವಂತಹ ನಾರುಗಳು ಹಾಗೂ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಹಾಗೂ ಮಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರಿಸುತ್ತದೆ. ಹಾಗಾಗಿ ನಿಂಬೆ ಸಿಪ್ಪೆಯನ್ನು ಬಿಸಾಡಬೇಡಿ ಇದನ್ನು ಬಳಸಿಕೊಳ್ಳಿ ಇದರಿಂದ ಹಲವು ಪ್ರಯೋಜನಗಳಿವೆ ಅವುಗಳನ್ನು ತಿಳಿಯೋಣ ಬನ್ನಿ.
ಕ್ಯಾನ್ಸರ್ ನಿಂದ ತಡೆಗಟ್ಟುತ್ತದೆ: ಕ್ಯಾನ್ಸರ್ ನಿಂದ ತಡೆಗಟ್ಟಲು ಹಾಗೂ ಕ್ಯಾನ್ಸರ್ ಗೆ ಚಿಕಿತ್ಸೆಯಾಗಿ ಲಿಂಬೆಸಿಪ್ಪೆಯನ್ನು ಬಳಸಲಾಗುತ್ತಿದೆ. ಲಿಂಬೆಸಿಪ್ಪೆ ಕ್ಯಾನ್ಸರ್ ಪೀಡಿತ ಜೀವಕೋಶಗಳ ವಿರುದ್ದ ಹೋರಾಡುವ ಶಕ್ತಿಯಿದೆ. ಒಂದು ಅಧ್ಯಯನ ಪ್ರಕಾರ ಕ್ಯಾನ್ಸರ್ ಪೀಡಿತ ಜೀವಕೋಶಗಳಿರುವ ವ್ಯಕ್ತಿಗಳು ಲಿಂಬೆಸಿಪ್ಪೆಯನ್ನು ಸೇವಿಸುವ ಮೂಲಕ ಇವುಗಳು ಅಭಿವೃದ್ದಿಯಾಗುವುದನ್ನು ತಡೆಗಟ್ಟಿವೆ. ಕ್ಯಾನ್ಸರ್ ಪೀಡಿತ ಜೀವಕೋಶಗಳು ಆಮ್ಲೀಯ ವಾತಾವರಣದಲ್ಲಿ ಶೀಘ್ರವಾಗಿ ಅಭಿವೃದ್ದಿ ಹೊಂದುತ್ತವೆ.

ಮೂಳೆಗಳ ಆರೋಗ್ಯ : ಲಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿವೆ. ಇವು ಮೂಳೆಗಳ ಆರೋಗ್ಯ ಉತ್ತಮಗೊಳಿಸುತ್ತವೆ ಹಾಗೂ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗೂ ನೆರವಾಗುತ್ತವೆ. ವಿಶೇಷವಾಗಿ ಉರಿಯೂತದ ಸಂಧಿವಾತ (inflammatory polyarthritis) ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವ ಓಸ್ಟಿಯೋಪೋರೋಸಿಸ್, ಮತ್ತು ರ್‍ಹೂಮಟಾಯ್ಡ್ ಸಂಧಿವಾತ ಮೊದಲಾದ ತೊಂದರೆಗಳ ಚಿಕಿತ್ಸೆಗೆ ನೆರವಾಗುತ್ತವೆ.
ತೂಕ ಇಳಿಕೆ : ಲಿಂಬೆ ಸಿಪ್ಪೆಯ ಸೇವನೆಯಿಂದ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ನೀಡುತ್ತದೆ. ಇದರಲ್ಲಿರುವ ಪೆಕ್ಟಿನ್ ಎಂಬ ಪೋಷಕಾಂಶ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಕೊಬ್ಬನ್ನು ಕರಗಿಸಿ ತೂಕ ಇಳಿಕೆಗೆ ನೆರವಾಗುತ್ತದೆ.

ಲಿಂಬೆಸಿಪ್ಪೆಯನ್ನು ಸೇವಿಸುವ ವಿಧಾನ
ಲಿಂಬೆರಸವನ್ನು ಹಿಂಡುವ ಮುನ್ನ ಸಿಪ್ಪೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಬಳಿಕ ಕತ್ತರಿಸಿ ಹಿಂಡಿ ಸಿಪ್ಪೆಯನ್ನು ಪ್ರತ್ಯೇಕಿಸಿಟ್ಟುಕೊಳ್ಳಿ. ಬಳಿಕ ಇವನ್ನು ಅತಿ ಚಿಕ್ಕದಾದ ಚೂರುಗಳನ್ನಾಗಿಸಿ ಎಲ್ಲೆಲ್ಲಿ ಹುಳಿ ಅಗತ್ಯವಿದೆಯೋ ಅಲ್ಲಿ ಈ ತುಂಡುಗಳನ್ನು ಬಳಸಬಹುದು. ಇನ್ನೊಂದು ವಿಧಾನದಲ್ಲಿ ಕೊಂಚ ನೀರಿನಲ್ಲಿ ಲಿಂಬೆಯ ಸಿಪ್ಪೆಗಳನ್ನು ಬೇಯಿಸಿ ಕೊಂಚವೇ ಸಕ್ಕರೆ ಬೆರೆಸಿ ಪಾಕವನ್ನಾಗಿಸಿ. ಇದು ತಣಿದ ಬಳಿಕ ಇದನ್ನು ನೇರವಾಗಿ ಸೇವಿಸಬಹುದು. ಇನ್ನೊಂದು ವಿಧಾನದಲ್ಲಿ, ಟೀ ಕುದಿಸುವಾಗ ಲಿಂಬೆಯ ಸಿಪ್ಪೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಕುದಿಸಿ ಈ ಟೀಯನ್ನು ಸೇವಿಸಬಹುದು. ಮಸಾಲೆ ಅರೆಯುವಾಗ ಹುಳಿಯ ಬದಲು ಲಿಂಬೆ ಸಿಪ್ಪೆಯನ್ನು ಸೇರಿಸಿ ಅರೆಯಬಹುದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…
ಮಂಡ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಶಾಸಕರ ಸಮ್ಮುಖದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಘೋಷಿಸಿದ್ದಾರೆ. ಅದರಲ್ಲೂ ವಾಸ್ತು, ಜೋತಿಷ್ಯಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿರುವ ದೇವೇಗೌಡ ಕುಟುಂಬದವರು ಇಂದು ಶುಭ ಲಗ್ನವನ್ನು ನೋಡಿಕೊಂಡು ನಿಖಿಲ್ ಮಂಡ್ಯದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.ಹೆಸರು ಘೋಷಣೆ ಮಾಡಿದ ನಂತರ ಮಧ್ಯಾಹ್ನ 12:01ಕ್ಕೆ ನಿಖಿಲ್ ವೇದಿಕೆ ಮೇಲೆ ಬಂದಿದ್ದಾರೆ. ರಾಜಕೀಯವಾಗಿ ಏರಬೇಕು, ಬೆಳಯಬೇಕು ಎನ್ನುವ ಉದ್ದೇಶದಿಂದ…
ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…
ಇಂದು ನಮ್ಮ ಜೀವನ ವಿಧಾನದಲ್ಲಿ ನಾವು ಅನುಸರಿಸುತ್ತಿರುವ ಅಭ್ಯಾಸಗಳು, ಮಾಡುತ್ತಿರುವ ತಪ್ಪುಗಳಿಂದ ನಮಗೆ ಅನೇಕ ವಿಧದ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳು ಬರುತ್ತಿವೆ.
ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್…
ರಾಜಕೀಯ ಮುಖಂಡರು ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ಇಲ್ಲ ಸಲ್ಲದ ವಿವಾಧತ್ಮಕ ಹೇಳಿಕೆಗಳನ್ನು ಕೊಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಈಗ ಹಿಂದೂಗಳು ಹಿಂಸಾಚಾರ ಮಾಡುತ್ತಾರೆ ಎಂಬುದನ್ನ ಈ ಹಿಂದೂ ಧರ್ಮದ ಈ ಮಹಾಕಾವ್ಯಗಳಿಗೆ ಹೋಲಿಕೆ ಮಾಡುವುದರ ಮುಖಾಂತರ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದು ಹೇಳುವ ಮೂಲಕ ಸಿಪಿಐ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಯಚೂರಿ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು ಆದ್ರೆ ಕೆಲ ಧರ್ಮದವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಲ ಬಿಜೆಪಿ…