ಸುದ್ದಿ

ರಾಮಮಂದಿರಕ್ಕೆ ಜೂನ್‌ 10ರಂದು ಶಿಲಾನ್ಯಾಸ, ರುದ್ರಾಭಿಷೇಕದೊಂದಿಗೆ ನಿರ್ಮಾಣ ಆರಂಭ!

57

ರಾಮಮಂದಿರ ನಿರ್ಮಾಣ ಕಾಮಗಾರಿಗೆ ಬುಧವಾರ (ಜೂನ್‌ 10) ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸೋಮವಾರ ಅಧಿಕೃತವಾಗಿ ಘೋಷಿಸಿದೆ.

”ಅಂದು ಬೆಳಗ್ಗೆ 8ರಿಂದ 10 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲು ಉದ್ದೇಶಿತ ಮಂದಿರ ನಿರ್ಮಾಣದ ಸ್ಥಳದಲ್ಲಿರುವ ಕುಬೇರ ತಿಲ ಮಂದಿರದಲ್ಲಿ ಈಶ್ವರನಿಗೆ ರುದ್ರಾಭಿಷೇಕ ನೆರವೇರಿಸಲಾಗುವುದು. ಲಂಕೆಗೆ ಯುದ್ಧಕ್ಕೆ ಹೊರಡುವ ಮುನ್ನ ಶ್ರೀರಾಮ ಈಶ್ವರನನ್ನು ಪ್ರಾರ್ಥಿಸಿದ್ದರು. ಹೀಗಾಗಿ ರುದ್ರಾಭಿಷೇಕದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಆ ಬಳಿಕ ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಲಾಗುವುದು,”

ಕಳೆದ ಮಾರ್ಚ್‌ನಲ್ಲಿ ರಾಮಲಲ್ಲಾ ವಿಗ್ರಹವನ್ನು ತಾತ್ಕಲಿಕ ಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು. ಮೇ 11ರಂದು ಸಮತಟ್ಟುಗೊಳಿಸುವ ಕಾಮಗಾರಿ ಆರಂಭಿಸಿದ್ದು, ಆ ವೇಳೆ ಹಲವು ಶಿವಲಿಂಗ ಹಾಗೂ ಹಲವು ವಿಗ್ರಹಗಳು ಪತ್ತೆಯಾಗಿದ್ದವು. ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಾಮನವಮಿಯಂದೇ (ಏ.22) ಶಿಲಾನ್ಯಾಸ ನೆರವೇರಿಸಲು ನಿರ್ಧರಿಸಲಾಗಿತ್ತಾದರೂ, ಕೊರೊನಾ ಲಾಕ್‌ಡೌನ್‌ ಕಾರಣದಿಂದ ಮುಂದೂಡಲಾಗಿತ್ತು.

ತಲಾ 16 ಅಡಿ ಎತ್ತರದ 424 ಕೆತ್ತನೆಯ ಕಂಬಗಳನ್ನು ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಮಂದಿರದ ಆವರಣದಲ್ಲಿ ಸೀತಾ ರಸೋಯಿ (ಪಾಕಶಾಲೆ), ಧರ್ಮಶಾಲೆ, ಭಜನಾ ಮಂದಿರ, ರಂಗಮಂಟಪಗಳು ಇರಲಿವೆ. ಗರ್ಭಗುಡಿ ಹಾಗೂ ಗೋಪುರವನ್ನು ವಿಶೇಷವಾಗಿ ರೂಪಿಸಲು ನಿರ್ಧರಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ನಂಬಿದ್ರೆ ನಂಬಿ,ಈ ಹಳ್ಳಿಯಲ್ಲಿ ರಾವಣನಿಗೆ ಪೂಜೆ ಮಾಡ್ತಾರೆ!ಶಾಕ್ ಆಗ್ಬೇಡಿ…ಈ ಲೇಖನ ಓದಿ ಶೇರ್ ಮಾಡಿ..

    ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ..

  • ಉಪಯುಕ್ತ ಮಾಹಿತಿ

    ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದರೆ ಏನು ಮಾಡಬೇಕು,ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ‌.

    ನೀವು ಎಂದಾದರೂ ಚೆಕ್ ಬೌನ್ಸ್ ಆದ ಸಂದರ್ಭವನ್ನು ಎದುರಿಸಿದ್ದೀರಾ? ಇದು ಮುಜುಗರದ ವಿಚಾರ ಮಾತ್ರವಲ್ಲ, ನಿಮ್ಮ ಹಣಕಾಸಿನ ಅರ್ಹತೆ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರವೂ ಹೌದು. ನಾನಾ ಕಾರಣಗಳಿಗೋಸ್ಕರ ಚೆಕ್ ಬೌನ್ಸ್ ಆಗಬಹುದು. ಹಾಗಂತ ಇವುಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಚೆಕ್ ಬೌನ್ಸ್ ಆಗಲು ಮುಖ್ಯ ಕಾರಣಗಳೇನೆಂದು ತಿಳಿಯೋಣ. ನೀವು ಬರೆದ ಅಥವಾ ಪಡೆದ ಚೆಕ್ ಹಿಂತಿರುಗಿತು ಎಂದರೆ ಬ್ಯಾಂಕ್ ಅದನ್ನು ಮಾನ್ಯಗೊಳಿಸಿಲ್ಲ ಎಂದರ್ಥ. ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕೆಲವು ನೀವು ಬರೆದ ಅಥವಾ ಪಡೆದ…

  • ಸುದ್ದಿ

    ಈ ಬ್ಯುಸಿನೆಸ್ಸನ್ನು ಶುರು ಮಾಡಿದರೆ ತಿಂಗಳಿಗೆ ಕಚಿತವಾಗಿ ನೀವು 1 ಲಕ್ಷ ರೂ. ಗಳಿಸಬಹುದು…!

    ಅನೇಕರು ನಿಯಮಿತ ಆದಾಯ ಗಳಿಸುವ ದಾರಿ ಹುಡುಕುತ್ತಾರೆ. ನೌಕರಿ ಬಿಟ್ಟು ಸ್ವಂತ ಬ್ಯುಸಿನೆಸ್ ಶುರು ಮಾಡಿ, ಕೈತುಂಬ ಲಾಭ ಗಳಿಸುವ ಬ್ಯುಸಿನೆಸ್ ಹುಡುಕಾಟ ನಡೆಸುತ್ತಾರೆ. ಅಂತವರಿಗೆ ಮೊಟ್ಟೆ ಮಾರಾಟಕ್ಕಾಗಿ ಕೋಳಿ ಸಾಕಣಿಕೆ ಬೆಸ್ಟ್. 1,500 ಕೋಳಿಗಳನ್ನು ಸಾಕಿ ಸಣ್ಣ ಮಟ್ಟದಲ್ಲಿಯೂ ನೀವು ಮೊಟ್ಟೆ ಮಾರಾಟ ಶುರು ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 7-9 ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ. ಒಮ್ಮೆ ಕ್ಲಿಕ್ ಆದ್ರೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಉತ್ತಮ…

  • ಸುದ್ದಿ

    ದೇಶದ ಎಲ್ಲಾ ವಾಹನ ಸವಾರರಿಗೊಂದು ಸಂತೋಷದ ಸುದ್ದಿ..! ಇವತ್ತಿನಿಂದಲೇ ಜಾರಿಗೆ ತರಲಿದ್ದಾರೆ,.!!

    ದೇಶಾದ್ಯಂತಒಂದೇ ಮಾದರಿಯ ಡಿಎಲ್ ಹಾಗೂಆರ್‍ಸಿ ಕಾರ್ಡ್‍ಗಳನ್ನುವಿತರಿಸಲು ಕೇಂದ್ರ ರಸ್ತೆ ಸಾರಿಗೆಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂಆರ್‍ಸಿ ಕಾರ್ಡ್‍ಗಳುಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳು ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವರೀತಿಯಲ್ಲೇ ಕಾರ್ಯ ನಿರ್ವಹಿಸಲಿವೆ. ಈಸಂಬಂಧ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರತಿಕ್ರಿಯಿಸಿ,  ಆಗಸ್ಟ್ 1 ರಿಂದ  ನೋಂದಣಿಯಾಗುವ ಎಲ್ಲಾ ವಾಹನ ಸವಾರರಿಗೆ ಅನ್ವಯವಾಗಲಿದೆ.ಹಳೆಯ ವಾಹನಗಳ ಮಾಲೀಕರು ನವೀಕರಣಸಮಯದಲ್ಲಿ ಹೊಸ ಕಾರ್ಡ್ ಪಡೆದುಕೊಳ್ಳಬಹುದು. ಈ ಹೊಸ ಮಾದರಿ ಸ್ಮಾರ್ಟ್ಕಾರ್ಡ್ ಕ್ಯೂಆರ್ ಕೋಡ್ ಹಾಗೂಮೈಕ್ರೋಚಿಪ್ ಹೊಂದಿರಲಿದೆ. ಇದರಿಂದ ಟ್ರಾಫಿಕ್  ಪೊಲೀಸರು  ಸಂಬಂಧಿಸಿದ ವಿವರಗಳನ್ನು,ಸುಲಭವಾಗಿ ಮತ್ತು…

  • ದೇವರು-ಧರ್ಮ

    ಇಲ್ಲಿ ಎಲ್ಲರೂ ಕೋಮುವಾದಿಗಳೇ..!!! ಹೇಗೆ ಗೊತ್ತಾ? ಈ ಲೇಖನಿ ಓದಿ…

    ದೇವರು ಭೂಮಿ ಮತ್ತು ಸ್ವರ್ಗಗಳನ್ನು 6 ದಿನದಲ್ಲಿ ನಿರ್ಮಿಸಿದ ಮತ್ತು ಉಳಿದ ಅಗತ್ಯ ವಸ್ತುಗಳನ್ನು 7ನೇ ದಿನದಂದು ನಿರ್ಮಿಸಿದ ಅನ್ನೋದನ್ನ ಜಗತ್ತಿನ 14 ಮಿಲಿಯನ್ ಜನ ಈಗಲೂ ನಂಬುತ್ತಾರೆ ಅನ್ನೋದನ್ನು ನಾನು ನನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಯಹೂದಿ ಗೆಳೆಯರಲ್ಲಿ ಹೇಳ್ದಾಗ ಯಹೂದಿ ಗೆಳೆಯನನ್ನು ಬಿಟ್ಟು ಉಳಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

  • ಸಿನಿಮಾ

    ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣನವರ ನಡುವೆ ಬ್ರೇಕ್ ಅಪ್‌ ಹಾಗೇ ಹೋಯ್ತಾ..!

    ರಕ್ಷಿತ್ ಶೆಟ್ಟಿ ನಟಿಸಿದ್ದ ಕನ್ನಡದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ನ್ನೇ ಉಟ್ಟು ಹಾಕಿತ್ತು. ಕೋಟಿ ಕೋಟಿ ಹಣವನ್ನು ಗಳಿಸಿತ್ತು. ಇದಲ್ಲದೆ ಪರಭಾಷೆಯ ಚಿತ್ರಗಳಿಗೆ ಸಹ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ್ದ ಹಲವಾರು ನಟ ನಟಿಯರ ಬದುಕಿನ ದಾರಿಯನ್ನೇ ಬದಲಾಯಿಸಿದ ಚಿತ್ರ ಇದು. ಈ ಚಿತ್ರದ ಯಶಸ್ಸಿನ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಅಭಿನಯವನ್ನು ಮೆಚ್ಚಿ ಪರಭಾಷೆ ಚಿತ್ರಗಳಿಂದ ಕಾಲ್ ಶೀಟ್ ಬಂದು ಅಲ್ಲಿಯೂ…