ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿ ವರ್ಷ ಶಾಲಾ ಆವರಣದಲ್ಲಿ 150 ಗಿಡ ನೆಡುತ್ತೇವೆ, ಆದರೆ ದನಗಳು ದಾಳಿನಡೆಸಿ ಎಲ್ಲವೂ ಹಾಳಾಗುತ್ತವೆ. ಹಾಗಾಗಿ,ಶಾಲೆಗೆ ಕಾಂಪೌಂಡ್ ಕಟ್ಟಿಸಲು ಮೊದಲ ಆದ್ಯತೆ ನೀಡುತ್ತೇನೆ..’ನಟ ಪುನೀತ್ ರಾಜ್ಕುಮಾರ್ ನಡೆಸಿಕೊಡುವ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿ 6.4 ಲಕ್ಷ ರೂ. ಗೆದ್ದ ತಾಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ.ಎನ್. ತೇಜಸ್ ಅವರ ಮನದಾನದ ಮಾತುಗಳಿವು.
ರಿಯಾಲಿಟಿ ಶೋಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ನಡೆಸಿದ ಪರೀಕ್ಷೆ ಬರೆದು ಆಯ್ಕೆಯಾದ ವಿದ್ಯಾರ್ಥಿ ತೇಜಸ್ ಜಿಲ್ಲೆಗೆ ಕೀರ್ತಿತಂದಿದ್ದಾನೆ. ಕಟ್ಟಾಯ ಶಾಲೆಗೆ ಭೇಟಿ ನೀಡಿದ್ದ ಕೋಟ್ಯಧಿಪತಿ ತಂಡ ಎಲ್ಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಹೆಚ್ಚು ಅಂಕಗಳಿಸಿದ ತೇಜಸ್, ನಟ ಪುನೀತ್ ರಾಜ್ಕುಮಾರ್ ಎದುರಿಗೆ ಹಾಟ್ ಸಿಟ್ನಲ್ಲಿ ಕುಳಿತು 15ರಲ್ಲಿ11 ಪ್ರಶ್ನೆಗೆ ಸರಿ ಉತ್ತರ ನೀಡಿ ಹಣ ಗೆದ್ದಿರುವುದು ಮಾತ್ರವಲ್ಲದೆ ತನ್ನ ಶಾಲೆಯ ಮೇಲಿನ ಪ್ರೀತಿ ವ್ಯಕ್ತಪಡಿಸಿ ಜನರ ಮನ ಗೆದ್ದಿದ್ದಾನೆ.ತೇಜಸ್ ಕೋಟ್ಯಧಿಪತಿ ಹಾಟ್ ಸೀಟ್ಗೆ ಏರಿದ್ದು ಶಾಲೆಯ ಶಿಕ್ಷಕರಿಗೆಲ್ಲ ಅತೀ ವಸಂತಸ ತಂದಿದೆ.
ಡಾಕ್ಟರ್ ಆಗುವ ಆಸೆ: ನಾನು ಗೆದ್ದಿರುವ 6.4 ಲಕ್ಷರೂಪಾಯಿಯಲ್ಲಿ ಅಕ್ಕನ ಮದುವೆ ಮಾಡುತ್ತೇನೆ ಹಾಗೂ ಶಾಲೆಯ ಕಾಂಪೌಂಡ್ ಕಟ್ಟಿಸುತ್ತೇನೆ ಎನ್ನುತ್ತಾನೆ ವಿದ್ಯಾರ್ಥಿ ತೇಜಸ್. ಬಡ ಕುಟುಂಬದಲ್ಲೇ ಬೆಳೆದ ನಾನು ಲಕ್ಷಾಂತರ ರೂಪಾಯಿ ನೋಡುತ್ತಿರುವುದು ಇದೇ ಮೊದಲು. ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದೇನೆ.
ಕನ್ನಡದ ಕೋಟ್ಯಧಿಪತಿ ಮೂಲಕ ರಾಜ್ಯಾದ್ಯಂತ ಪರಿಚಿತನಾಗಲು ಸಹಕರಿಸಿದ ಶಾಲೆಯ ಎಲ್ಲ ಶಿಕ್ಷಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತೇಜಸ್ ಹೇಳಿದ್ದಾನೆ.ತಂದೆ ನಂಜಪ್ಪ ಕೃಷಿ ಕೆಲಸಮಾಡಿಕೊಂಡಿದ್ದು, ತಾಯಿ ಗೌರಮಣಿ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ತೇಜಸ್ ಬುದ್ಧಿವಂತ. ಸರ್ಕಾರಿ ಶಾಲೆ ಮೇಲಿನ ಆತನ ಪ್ರೀತಿ ಮೆಚ್ಚುವಂಥದ್ದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..
ನಿತ್ಯ ವಾಹನಗಳನ್ನು ಬಳಸುವವರು ಯಾರಾದರೂ ಅದರ ಕೀಗಳನ್ನು ಭದ್ರವಾಗಿ ಇಟ್ಟುಕೊಳ್ಳಬೇಕು. ಒಂದು ವೇಳೆ ಅವನ್ನು ಕಳೆದುಕೊಂಡರೆ ಕಷ್ಟಗಳು ತಪ್ಪಿದ್ದಲ್ಲ.. ಆಗ ಅನುಭವಿಸುವ ಕಿರಿಕಿರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಇನ್ನು ಮುಖ್ಯವಾಗಿ ಕಾರಿನ ಮಾಲೀಕರು ಒಮ್ಮೊಮ್ಮೆ ಕಾರಿನಲ್ಲೇ ಕೀ ಮರೆತುಬಿಡುತ್ತಾರೆ.
ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು. ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ…
ಲಕ್ನೋ: ತನ್ನ ಮೂರು ಚಿಕ್ಕ ಮಕ್ಕಳು ಮತ್ತು ತನ್ನ ಹೆಂಡತಿಯನ್ನು ಕೊಂದು ಪತಿಯೂ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನ ಮಸೂರಿ ಎಂಬ ಗ್ರಾಮದಲ್ಲಿ ನಡೆದಿದೆ. ಪತ್ನಿ ಮತ್ತು ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ಪತಿಯನ್ನು 37 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಇನ್ನು ಕೊಲೆಯದ ಪತ್ನಿಯೂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎನ್ನಲಾಗಿದೆ. ಈ ಘಟನೆಯಲ್ಲಿ ಎಂಟು ವರ್ಷ, ಐದು ವರ್ಷ ಮತ್ತು ಮೂರು ವರ್ಷದ ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಗುರುವಾರ ರಾತ್ರಿ…
ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ. ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು ಕೇವಲ ಭಗವಂತನನ್ನು ಚಿಂತಿಸುವಂತೆ ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ…
ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ. ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ…