ಸುದ್ದಿ

14 ಕೋಟಿ ಬೆಲೆ ಬಾಳುವ ಕೋಣವನ್ನು ನೀವೆಂದಾದರೂ ನೋಡಿದ್ದೀರಾ?ಇದರ ವಿಶೇಷತೆ ಏನು ಗೊತ್ತಾ?

128

ಅಬ್ಬಬ್ಬಾ ಎಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು? ಒಂದು3 ಲಕ್ಷ , ಇಲ್ಲಾ 10 ಲಕ್ಷ. ಆದರೆ ಈ ಕೋಣದ ಬೆಲೆ ಕೇಳಿದರೆ ನಿಮಗೆ ತಲೆ ತಿರುಗಿ ಬೀಳುವುದು ಖಂಡಿತ ಕೋಣ ವ್ಯಾಪಾರದ ಪುಷ್ಕರ್ ಮೇಳದಲ್ಲಿ ಕಂಗೊಳಿಸಿದ ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ ರೂ.! ಪುಷ್ಕರ್ ಜಾತ್ರಗೆ ಬಂದ 14 ಕೋಟಿರೂ. ಮೌಲ್ಯದ  ಭೀಮ ಕೋಣ ಇದೀಗ ದೇಶದೆಲ್ಲೆಡೆ ಸುದ್ದಿಮಾಡ್ತಿದೆ.

ಆರು ವರ್ಷದ ಕೋಣವಾಗಿದ್ದು, 1,300 ಕೆ.ಜಿ.ತೂಕ ಹೊಂದಿದೆ. ಈ ವಿಶಿಷ್ಟ ಕೋಣವನ್ನು ಜೋಧಪುರದಿಂದ ಮಾಲೀಕ ಜವಾಹರ್ ಲಾಲ್ ಜಂಗಿದ್, ಅವರ ಮಗ ಅರವಿಂದ್ ಜಂಗಿದ್ ಹಾಗೂ ಅವರ ಕುಟುಂಬದ ಸದಸ್ಯರು ಪುಷ್ಕರ್ ಜಾತ್ರೆಗೆ ಕರೆ ತಂದಿದ್ದಾರೆ.

ಜಾತ್ರೆಯ ಮೊದಲ ದಿನವೇ ಕೋಣವನ್ನು ನೋಡಲು ಜನ ಮುಗಿಬಿದ್ದಿದ್ದು, ಸಾಲುಗಟ್ಟಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೋಣದ ಮಾಲೀಕ ಜಂಗಿದ್ ಈ ಕುರಿತು ಪ್ರತಿಕ್ರಿಯಿಸಿ, ಭೀಮಾನ ನಿರ್ವಹಣೆಗೆ ಹಾಗೂ ಆಹಾರಕ್ಕಾಗಿ ಪ್ರತಿ ತಿಂಗಳು 1.5 ಲಕ್ಷ   ರೂ. ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಪ್ರತಿ ದಿನ ಒಂದು ಕೆ.ಜಿ.ತುಪ್ಪ, ಅರ್ಧ ಕೆ.ಜಿ. ಬೆಣ್ಣೆ, 200 ಗ್ರಾಂ.ಜೇನುತುಪ್ಪ, 25 ಲೀಟರ್ ಹಾಲು, ಒಂದು ಕಿಲೋ ಗೋಡಂಬಿ ಬಾದಾಮಿ ಸಹ ಈ ಕೋಣಕ್ಕೆ ಬೇಕಾಗುತ್ತದೆ. ಜಾತ್ರೆಗೆ ಬರುವುದಕ್ಕೂ ಮೊದಲು ಈ ಕೋಣಕ್ಕೆ 14 ಕೋಟಿ ರೂ.ಗಳ ಪ್ರಸ್ತಾಪವನ್ನು ನಾವುಸ್ವೀಕರಿಸಿದ್ದೇವೆ. ಆದರೆ ನಾವು  ಭೀಮನನ್ನು ಮಾರಾಟ ಮಾಡಲು ಬಯಸುವುದಿಲ್ಲ. ಜಾತ್ರೆಯಲ್ಲಿಯೂ ಕೋಣಗಳನ್ನು ಮಾರಾಟಕ್ಕೆ ತರುವುದಿಲ್ಲ. ಬದಲಿಗೆ  ಮರ‍್ರಾ ತಳಿಯನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸಲು ಈ ಕೋಣದ ಪ್ರದರ್ಶನ ಮಾತ್ರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.ಭೀಮನ ತೂಕವು ಕಳೆದ ವರ್ಷಕ್ಕಿಂತ ಈ ಬಾರಿ100 ಕೆ.ಜಿ. ಹೆಚ್ಚಿದ್ದು, ಬೆಲೆ ಸಹ 2 ಕೋಟಿ ರೂ. ಹೆಚ್ಚಿಸಲಾಗಿದೆ. ಕಳೆದ  ವಾರ್ಷವೂ ಕೋಣ ಮೇಳಕ್ಕೆ ಮಾಲೀಕರೊಂದಿಗೆ ಆಗಮಿಸಿತ್ತು

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕಾನೂನು

    ತ್ರಿವಳಿ ತಲಾಖ್‌ ರದ್ದು! ಸುಪ್ರಿಂ ಕೋರ್ಟ್‌ನ ಐತಿಹಾಸಿಕ ತೀರ್ಪು…

    ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು ತ್ರಿವಳಿ ತಲಾಖ್‌ ಅನ್ನು ರದ್ದು ಪಡಿಸಿದೆ.

  • ಜೀವನಶೈಲಿ

    ಚಾಣಕ್ಯನ ಪ್ರಕಾರ ಇಂತಹ ಸಮಯಗಳಲ್ಲಿ ಸ್ನಾನ ಮಾಡಲೆಬೇಕಂತೆ! ಏಕೆ ಗೊತ್ತಾ?ಮುಂದೆ ಓದಿ…

    ಸ್ನಾನ ಮಾಡುವ ವಿಷಯಕ್ಕೆ ಬಂದ್ರೆ ಕೆಲವರು ದಿನಾ ಮತ್ತೆ ಕೆಲವರು ಅವರವರ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ನಮಗೆ ಕೆಲಸಗಲಿರಲಿ ಬೇರೆ ಏನಾದ್ರೂ ಇರಲಿ ಪ್ರತಿನಿತ್ಯ ಸ್ನಾನ ಮಾಡುವುದು ಒಳಿತು.

  • ಸಿನಿಮಾ

    ಶಾಕಿಂಗ್ ನ್ಯೂಸ್!ಚಾಲೆಂಜಿಂಗ್ ಸ್ಟಾರ್ ಮನೆ ಮೇಲೆ ಕಲ್ಲು ತೂರಾಟ!ಮಾಡಿದ್ದು ಯಾರು?

    ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಇಂದು ಬೆಳಗಿನ ಜಾವ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಸದ್ಯ ರಾಜರಾಜೇಶ್ವರಿನಗರ ಪೊಲೀಸರು ಹಾಗೂ ಕೆಂಗೇರಿ…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಭಾನುವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗೆ ಧನ ಯೋಗದ ಲಾಭವಿದೆ!ನಿಮ್ಮ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(23 ಡಿಸೆಂಬರ್, 2018) ಹೊಸ ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತವೆ. ನಿಮ್ಮ ಮಕ್ಕಳಿಗಾಗಿ ಯೋಜನೆಗಳು ಮಾಡಲು ಅತ್ಯುತ್ತಮ ದಿನ. ನಿಮ್ಮನ್ನು ತನ್ನಜೀವಕ್ಕಿಂತಲೂ ಹೆಚ್ಚು…

  • ಸುದ್ದಿ

    ಕೇಳಿದಷ್ಟು ಹಣ ಕೊಡಲು ನೋಟು ಪ್ರಿಂಟ್ ಮಾಡುವುದಿಲ್ಲ…!

    ‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ. ‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10…

  • fact check

    ವಿಧಾನಸಭೆ ಚುನಾವಣೆ 2023:ಈ ವೇಳಾಪಟ್ಟಿ ನಿಜವೇ?

    ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ಗೆ ಅಂದಾಜು ಎರಡು ತಿಂಗಳು ಮಾತ್ರವೇ ಬಾಕಿ ಇದೆ. ಈ ಸಂಬಂಧ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೇಳಾಪಟ್ಟಿ ಕುರಿತಂತೆ ಸಾಕಷ್ಟು ವದಂತಿಗಳು, ತಪ್ಪು ವೇಳಾಪಟ್ಟಿ ಮಾಹಿತಿ ಹಬ್ಬುತ್ತಿವೆ. ನೆಟ್ಟಿಗರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ವೇಳಾಪಟ್ಟಿ ಫೋಟೊ ಹಂಚುವಾಗ ಸತ್ಯಾಸತ್ಯತೆ ಪರಿಶೀಲಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪರಿಶೀಲನೆಗೆ ಒಂದುಷ್ಟು ಮಾಹಿತಿ, ಸತ್ಯತೆ ಇಲ್ಲಿ…