ಸುದ್ದಿ

ಕರೋನ ಸಮಸ್ಯೆ ಹೀಗೆ ಇದ್ದರೆ ಚಿನ್ನದ ಬೆಲೆ ಎಷ್ಟಾಗಲಿದೆ. ಮಾರ್ಕೆಟ್ ತಜ್ಞರು ಹೇಳಿದ್ದೇನು ನೋಡಿ.!

107

ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ, ಭಾರತದಲ್ಲಿ ಕೊರೋನಾ ಈಗ ಸ್ಟೇಜ್ 2 ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಟೇಜ್ 4 ಗೆ ಕೊರೋನಾ ಆಕ್ರಮಿಸಿದರೆ ಖಂಡಿತ ದುರಂತ ಸಂಭವಿಸಲಿದೆ ಎಂದು ಹಲವಾರು ಮಂದಿ ಅಭಿಪ್ರಾಯ ಪಟ್ಟಿದ್ದಾರೆ, ಚೀನಾ ಈಗಾಗಲೇ ಈ ಸಂಕಷ್ಟದಿಂದ ಪಾರಾಗಿದೆ ಮತ್ತು ಭಾರತ ಈಗಾಗಲೇ ಹಲವಾರು ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ. ಇಷ್ಟೇ ಅಲ್ಲದೆ ಕೊರೋನಾ ಅಬ್ಬರಕ್ಕೆ ಈಗಾಗಲೇ ಆರ್ಥಿಕ ವಹಿವಾಟು ಕುಸಿದು ಬಿದ್ದಿದೆ, ಕೇವಲ ಏಳು ದಿನಗಳಲ್ಲಿ ಅಂತರದಲ್ಲಿ ಷೇರ್ ಮಾರ್ಕೆಟ್ ಹಾಗು ಚಿನ್ನದ ದರದಲ್ಲಿ ಭಾರಿ ವ್ಯತ್ಯಯ ಮೂಡಿದೆ.

ಇನ್ನು ಇದು ಹೀಗೆ ಮುಂದುವರೆದರೆ ನಮ್ಮ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿತ ಕಾಣುವುದರಲ್ಲಿ ಎರಡು ಮಾತು ಇಲ್ಲ ಎಂದು ಹೇಳಲಾಗುತ್ತಿದೆ, ಇನ್ನು ಇದೆ ಪರಿಸ್ಥಿತಿ ದೇಶದಲ್ಲಿ ದೇಶದಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಕೂಡ ಪಾತಾಳಕ್ಕೆ ಇಳಿಯಲಿದೆ ಅನ್ನುವುದು ಚಿನ್ನ ತಜ್ಞರ ಅಭಿಪ್ರಾಯವಾಗಿದೆ. ಬೆಂಗಳೂರು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿಯುತ್ತಲೇ ಇದೆ ಮತ್ತು ಕಳೆದ ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂ ಚಿನ್ನದ ಬೆಲೆ ಸುಮಾರು 5500 ರೂಪಾಯಿ ಇಳಿದಿದೆ.

ಚಿನ್ನದ ಬೆಲೆಯಲ್ಲಿ ಇತ್ತೀಚಿನ ಕುಸಿತವನ್ನು ಜಾಗತಿಕ ಕರೋನ ವೈರಸ್ ದುರಂತವೆಂದು ಪರಿಗಣಿಸಲಾಗಿದೆ, ಕೇವಲ 6 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 5500 ಕುಸಿತವನ್ನು ನೋಡಿದಾಗ ಮುಂದಿನ 15 ದಿನಗಳವರೆಗೆ ಈ ವ್ಯಾಪಾರ ಮುಂದುವರಿದರೆ ದೇಶೀಯ ಚಿನ್ನದ ಬೆಲೆ 10 ಗ್ರಾಂಗೆ 3000 ರಷ್ಟು ಇಳಿಯಬಹುದು ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ ಎಂಸಿಎಕ್ಸ್‌ ನಲ್ಲಿ ಚಿನ್ನದ ಭವಿಷ್ಯದ ಬೆಲೆಯಲ್ಲಿ 2% ಕುಸಿತದಿಂದಾಗಿ ಚಿನ್ನದ ದೇಶೀಯ ಬೆಲೆ 800 ರೂಗಳಷ್ಟು ಕುಸಿದಿದೆ ಮತ್ತು ಇದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು 10 ಗ್ರಾಂಗೆ 38,755 ಕ್ಕೆ ತಂದಿದೆ.

ಇನ್ನು ಅದೇ ಸಮಯದಲ್ಲಿ ಕಳೆದ ಐದು ಸೆಷನ್‌ಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 5,000 ರೂಪಾಯಿಗಳಿಗೆ ಇಳಿದಿದೆ, ಆಗ ಚಿನ್ನದ ಬೆಲೆ 44,500 ಆಗಿತ್ತು. ಇದು ಚಿನ್ನದ ಮೇಲೆ ಮಾತ್ರವಲ್ಲ ಬೆಳ್ಳಿಯ ಮೇಲೂ ಪರಿಣಾಮ ಬೀರಿದೆ. ಗಮನಾರ್ಹವಾಗಿ ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನವನ್ನು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಯಾಗಿ ನೋಡಲಾಗುತ್ತದೆ, ಆದರೆ ಇತ್ತೀಚಿನ ಚಿನ್ನದ ಬೆಲೆಯಲ್ಲಿನ ತೀವ್ರ ಕುಸಿತವು ಮಾರುಕಟ್ಟೆಗಳಲ್ಲಿ ಭಾರಿ ಚಂಚಲತೆ ಸ್ರಷ್ಟಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಯೂ ತೀವ್ರವಾಗಿ ಕುಸಿದಿದೆ, ಕೊರೊನೊ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ಮಾರುಕಟ್ಟೆಗಳಲ್ಲಿ ಹೆಚ್ಚಿನ ಹಣವನ್ನು ಸಂಗ್ರಹಿಸುವಲ್ಲಿ ಹೂಡಿಕೆದಾರರು ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ನಂಬಲಾಗಿದೆ.

ಸದ್ಯಕ್ಕೆ ಬಂಗಾರದ ಬೆಲೆಯಲ್ಲಿ ಏರಿಳಿತ ಆಗುತ್ತಿದೆ, ಪೆಟ್ರೋಲ್ ಡೀಸೆಲ್ ಕಚ್ಚಾ ತೈಲದ ಬೆಲೆ ಕೂಡ ಏರಿಳಿಕೆ ಕಂಡಿದೆ, ಹೀಗಾಗಿ ಒಂದು ವೇಳೆ ಚಿನ್ನ ಮತ್ತೆ ತನ್ನ ಬೆಲೆಯಲ್ಲಿ ಇಳಿಕೆ ಕಂಡುಕೊಂಡರೆ ಅದು ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಳ್ಳಬಹುದು ಎನ್ನಲಾಗಿದೆ. ಭಾರತದಲ್ಲಿ ಮೊದಲೇ ಬಂಗಾರ ಪ್ರಿಯರು ಹೆಚ್ಚಿದ್ದಾರೆ, ಸದ್ಯಕ್ಕೆ ಬಂಗಾರದ ಬೆಲೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಯಾರಿಗೂ ಸಹ ತಿಳಿದಿಲ್ಲ. ಇದೆ ಸೋಂಕಿನ ಪರಿಸ್ಥಿತಿ ಮುಂದುವರಿದರೆ ಚಿನ್ನದ ಮಾರ್ಕೆಟ್ ಏನಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ