ಸುದ್ದಿ

18.70 ಲಕ್ಷ ರೈತರ 8759 ಕೋಟಿ ಸಾಲ ಮನ್ನಾ…!

102

ಬೆಂಗಳೂರು: ಸಾಲ ಮನ್ನಾ ಯೋಜನೆಯಲ್ಲಿ ಈವರೆಗೆ ರಾಜ್ಯದ 18.70 ಲಕ್ಷ ರೈತ ಕುಟುಂಬಗಳ 8759 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಮನ್ನಾ ವರ್ಗೀಕರಣ ಮಾಡುವಾಗ ಯಾದಗಿರಿಯಲ್ಲಿ ಕೆಲಗೊಂದಲ ಮೂಡಿದ್ದು ಈ ಕುರಿತು ಶುಕ್ರವಾರ ಜೂ.14ರಂದು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ.

ಸಾಲ ಮನ್ನಾ ಯೋಜನೆಗೆ ಮೈತ್ರಿ ಸರ್ಕಾರ ಬದ್ಧವಾಗಿದ್ದು ನಿಗದಿತ ಅವಧಿಯೊಳಗೆ ಸಾಲಮನ್ನಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.49 ಲಕ್ಷ ರೈತರ 3929 ಕೋಟಿ ರೂ. ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ 11.20 ಲಕ್ಷ ರೈತರ 4830 ಕೋಟಿ ರೂ. ಸೇರಿ ಒಟ್ಟು 18.70 ಲಕ್ಷ ರೈತರ 8759 ಕೋಟಿ ರೂ. ಮನ್ನಾ ಮಾಡಲಾಗಿದೆ. ಈ ಪೈಕಿ ವಾಣಿಜ್ಯ ಬ್ಯಾಂಕಿನಲ್ಲಿ ಪಾವತಿಸಲಾದ 13,123 ರೈತರ ಸಾಲದ ವರ್ಗೀಕರಣ ಮಾಹಿತಿಯನ್ನು ಬ್ಯಾಂಕುಗಳು ತಪ್ಪಾಗಿ ನೀಡಿರುತ್ತವೆ. ರೆಗ್ಯುಲರ್‌ ಲೋನ್‌ ಅನ್ನು ರೀಸ್ಟಕ್ಚರ್‌x ಲೋನ್‌ ಎಂದು ಪರಿಗಣಿಸಿ ರೈತರಿಗೆ ಕೇವಲ 25 ಸಾವಿರಗಳನ್ನು ಮಾತ್ರ ಪ್ರೋತ್ಸಾಹಧನ ರೂಪದಲ್ಲಿ ಪಾವತಿಸಲಾಗಿದೆ.

ಆದರೆ, ರೈತರಿಗೆ ರೀಸ್ಟಕ್ಚರ್‌ ಲೋನ್‌ ಆಧಾರದಲ್ಲಿ 2 ಲಕ್ಷ ರೂ.ಗಳ ಸಾಲ ಮಂಜೂರು ಮಾಡಲು ಅವಕಾಶವಿದೆ. ಅನರ್ಹವಾದ ಸಾಲದ ವಿಧಗಳನ್ನು ರೈತರ ಸಾಲದ ಯೋಜನೆಗೆ ಪರಿಗಣಿಸಿ ತಪ್ಪು ಮಾಹಿತಿ ಸಲ್ಲಿಸಿದ್ದಾರೆ. ರೈತರು ಆತಂಕ ಪಡುವ ಅಗತ್ಯವಿಲ್ಲ, ಈಗಾಗಲೇ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಧ್ಯಮದವರ ಮೇಲೆ ಸಿಎಂ ಸಿಡಿಮಿಡಿ: ಮಾಧ್ಯಮದವರ ಮೇಲೆ ಮತ್ತೆ ಬೇಸರ ಹೊರಹಾಕಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ, “ರಾಜ್ಯದ ಅಭಿವೃದ್ಧಿಯಾಗಬೇಕಾ? ಅಥವಾ ಹಾಳಾಗಬೇಕಾ? ನೀವೇ ನಿರ್ಧಾರ ಮಾಡಿ’ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸತ್ಯವನ್ನು ದಿನಾ ತೋರಿಸಿ ಏನು ಸಾಧನೆ ಮಾಡ್ತಾರೋ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಮೇಲೆ ದಿನನಿತ್ಯ ಮಾಧ್ಯಮಗಳೇ ಮುಗಿಬಿದ್ದಿವೆ ಎಂದು ಹೇಳಿದರು.ಮೋದಿನಾ ದಿನಾ ಹೊಗಳುತ್ತೀರಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಹೋಗಿ ಮೋದಿಯವರಿಗೆ ಹೋಗಿ ಕೇಳಿ. ನಮ್ಮಿಂದ ತಪ್ಪಾಗಿರೋದು ಅಂತ ಬ್ಯಾಂಕ್‌ನವರೇ ಹೇಳಿಕೊಂಡಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಬೇರೆ ರೀತಿಯ ಸುದ್ದಿ ಬಿತ್ತರವಾಗುತ್ತದೆ. ಜನರನ್ನು ದಯವಿಟ್ಟು ತಪ್ಪು ದಾರಿಗೆ ಎಳೆಯಬೇಡಿ, ಅನಗತ್ಯವಾಗಿರೋದು ತೋರಿಸಬೇಡಿ ಎಂದು ಮನವಿ ಮಾಡಿದರು
ಜೂ.21ರಂದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್‌ ತಾಲೂಕಿನಲ್ಲಿ ಹಾಗೂ 22ರಂದು ಕಲಬುರಗಿ ಜಿಲ್ಲೆ ಅಫ‌ಜಲಪುರ ತಾಲೂಕು, ಜುಲೈ 5ರಂದು ಬೀದರ್‌ ಜಿಲ್ಲೆ ಬಸವಕಲ್ಯಾಣ, 6 ರಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ಕನ್ನಡಿಗರೇ ನಮ್ಮ ಮೈಸೂರು ಸ್ಯಾಂಡಲ್ ಸೋಪ್, 100% ಶ್ರೀಗಂಧದ ಎಣ್ಣೆಯಿಂದ ತಯಾರಿಸಿದ ವಿಶ್ವದ ಏಕೈಕ ಸೋಪ್!ಗರ್ವದಿಂದ ಈ ಲೇಖನಿ ಓದಿ…

    ಮೈಸೂರು ಸ್ಯಾಂಡಲ್ ಸೋಪ್ ಎಂಬುದು ಕರ್ನಾಟಕದ ಸರ್ಕಾರಿ ಒಡೆತನದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಕಂಪನಿಯಿಂದ ಉತ್ಪಾದಿಸಲ್ಪಟ್ಟ ಸಾಬೂರಿನ ಬ್ರಾಂಡ್ ಆಗಿದೆ. 100% ಶುದ್ಧ ಶ್ರೀಗಂಧದ ಎಣ್ಣೆಯಿಂದ ತಯಾರಿಸಿದ ವಿಶ್ವದ ಏಕೈಕ ಸೋಪ್ .

  • ಜ್ಯೋತಿಷ್ಯ

    ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಮಾಡಿ ಕನಸನ್ನು ನನಸಾಗಿಸಿಕೊಂಡ ಸೋದರರು………!

    ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್‍ಗಳನ್ನು ಮಾಡುವ ಕನಸು ಹೊಂದಿದ್ದನು. ಅದು…

  • ದೇಶ-ವಿದೇಶ

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಈ 999 ಮೆಟ್ಟಿಲೇರಿದರೆ ಸಾಕು..!ತಿಳಿಯಲು ಈ ಲೇಖನ ಓದಿ…

    ಭೂಮಿಯಿಂದ ಸ್ವರ್ಗಕ್ಕೆ ಹೋಗಲು ಬೇರೆ ದಾರಿ ಇದೆ ಎಂದು ನಮ್ಮ ಪುರಾಣದಲ್ಲಿ ತಿಳಿಸಲಾಗಿದೆ. ಆದರೆ ಅದು ಎಲ್ಲಿದೆ? ಹೇಗಿದೆ ಅನ್ನೋದು ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಂದು ನಾವು ನಿಮಗೊಂದು ರಸ್ತೆಯ ಬಗ್ಗೆ ಹೇಳುತ್ತೇವೆ. ಅದರ ವಿಶೇಷತೆ ಬಗ್ಗೆ ನೀವು ತಿಳಿದುಕೊಂಡರೆ ಇದೇ ಸ್ವರ್ಗಕ್ಕೆ ಹೋಗುವ ರಸ್ತೆ ಎನ್ನುವಿರಿ…!

  • ಸುದ್ದಿ

    ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷದವರಿಂದ ಕುದುರೆ ವ್ಯಾಪಾರ: ಸಿಎಂ ಕಮಲ್‍ನಾಥ್ ಹೇಳಿಕೆ….!

    ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್‍ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್…

  • ಉಪಯುಕ್ತ ಮಾಹಿತಿ

    ಉತ್ತಮ ತರಕಾರಿಗಳಲ್ಲಿ ಒಂದಾದ ಬೆಂಡೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು….?

    ನಾವು ದಿನವೂ ಉಪಯೋಗಿಸುವ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು. ಇದು ಋತುಮಾನಗಳೊಂದಿಗೆ ಸಂಬಂಧವಿಲ್ಲದೆ ಯಾವಾಗಲೂ ದೊರೆಯುತ್ತದೆ.

  • ಉಪಯುಕ್ತ ಮಾಹಿತಿ

    ಈ ಜಾಗಗಳಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟು ಕೊಳ್ಳಲೇಬೇಡಿ…

    ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ. ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು…