ಸುದ್ದಿ

ತಪ್ಪಿನ ಅರಿವಾಗಿ ಜೈ ಜಗದೀಶ್ ಅವರ ಬಳಿ ಕ್ಷಮೆ ಯಾಚಿಸಿದ ಕಿಶನ್…!

26

ಬಿಗ್ ಬಾಸ್ ಸೀಸನ್-7ನ ಸ್ಪರ್ಧಿ ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಕಿಶನ್ ಸೋಮವಾರ ಜೈ ಜಗದೀಶ್ ಅವರ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ಈ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಕಿಶನ್ ಬಳಿ ಹೇಳಿದ್ದರು. ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ.

ಜೈ ಜಗದೀಶ್ ಅಡುಗೆ ಮನೆಯಲ್ಲಿದ್ದ ವೇಳೆ  ನಾನು ಆ ರೀತಿ ಮಾತನಾಡಬಾರದಿತ್ತು ಎಂದು
ಕಿಶನ್ ಹೇಳಿದ್ದಾರೆ . ನನ್ನನ್ನು ಕ್ಷಮಿಸಿ. ಈ ವಿಷಯ ಇಷ್ಟು ದೊಡ್ಡದಾಗುತ್ತೆ ಎಂದು ನನಗೆ ತಿಳಿದಿರಲಿಲ್ಲ. ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ.

ಕಿಶನ್ ಮಾತು ಕೇಳಿದ ಜೈ ಜಗದೀಶ್ ಅವರು ನೀನು ನನ್ನನ್ನು ಪ್ರಶ್ನೆ ಮಾಡಬೇಕೆಂದರೆ ಪ್ರತ್ಯೇಕವಾಗಿ ಕರೆದು ಕೇಳಬೇಕಿತ್ತು. ಅದನ್ನು ಬಿಟ್ಟು ಎಲ್ಲರ ಮುಂದೆ ಕೇಳಿ ನನಗೆ ಅವಮಾನ ಮಾಡಿದೆ. ಈಗ ಬಂದು ಕ್ಷಮೆ ಕೇಳುತ್ತಿದ್ದೀಯಾ. ನೀನೂ ಹೀರೋ ಆಗಬೇಕು ಎಂದುಕೊಂಡಿದ್ದೆ, ನಿನ್ನ ಉದ್ದೇಶ ಈಡೇರಿದೆ.

ನಾನು ನಿನ್ನೆಯೇ ಸಾರಿ ಹೇಳಿದ್ದೇನೆ. ನಾನು ತಪ್ಪು ಮಾಡಿದ್ದರೆ ಸೈಡಿಗೆ ಕರೆದು ಹೇಳಬೇಕಾಗಿತ್ತು ಎಂದು ಕಿಶನ್‌ಗೆ ಜೈ ಜಗದೀಶ್ ಹೇಳಿದರು. ಕಿಶನ್ ಕ್ಷಮೆ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಸದಸ್ಯರು ಎಲ್ಲವನ್ನು ಮರೆತು ಆತನನ್ನು ಕ್ಷಮಿಸಿ ಎಂದು ಜೈ ಜಗದೀಶ್ ಅವರಿಗೆ ಹೇಳಿದ್ದಾರೆ. ಮನೆಯ ಸದಸ್ಯರ ಮಾತು ಕೇಳಿ ಜೈ ಜಗದೀಶ್, ಕಿಶನ್‍ನನ್ನು  ಕ್ಷಮಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾಮಮಂದಿರಕ್ಕೆ ಜೂನ್‌ 10ರಂದು ಶಿಲಾನ್ಯಾಸ, ರುದ್ರಾಭಿಷೇಕದೊಂದಿಗೆ ನಿರ್ಮಾಣ ಆರಂಭ!

    ರಾಮಮಂದಿರ ನಿರ್ಮಾಣ ಕಾಮಗಾರಿಗೆ ಬುಧವಾರ (ಜೂನ್‌ 10) ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸೋಮವಾರ ಅಧಿಕೃತವಾಗಿ ಘೋಷಿಸಿದೆ. ”ಅಂದು ಬೆಳಗ್ಗೆ 8ರಿಂದ 10 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲು ಉದ್ದೇಶಿತ ಮಂದಿರ ನಿರ್ಮಾಣದ ಸ್ಥಳದಲ್ಲಿರುವ ಕುಬೇರ ತಿಲ ಮಂದಿರದಲ್ಲಿ ಈಶ್ವರನಿಗೆ ರುದ್ರಾಭಿಷೇಕ ನೆರವೇರಿಸಲಾಗುವುದು. ಲಂಕೆಗೆ ಯುದ್ಧಕ್ಕೆ ಹೊರಡುವ ಮುನ್ನ ಶ್ರೀರಾಮ ಈಶ್ವರನನ್ನು ಪ್ರಾರ್ಥಿಸಿದ್ದರು. ಹೀಗಾಗಿ ರುದ್ರಾಭಿಷೇಕದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಆ ಬಳಿಕ ವಿಧ್ಯುಕ್ತವಾಗಿ ಶಿಲಾನ್ಯಾಸ ನೆರವೇರಿಸಲಾಗುವುದು,” ಕಳೆದ…

  • ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

    ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

  • ಸುದ್ದಿ

    ‘ಮಿಸೈಲ್ ಮ್ಯಾನ್’,ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ 88ನೇ ಹುಟ್ಟುಹಬ್ಬದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ…!

    ಇಂದು ಭಾರತ ಕಂಡ ಅದ್ಭುತ ವಿಜ್ಞಾನಿ, ಪೀಪಲ್ಸ್ ಪ್ರೆಸಿಡೆಂಟ್, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ 88 ವರ್ಷದ ಹುಟ್ಟುಹಬ್ಬ. ಈ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಆಚರಿಸಲಾಗುತ್ತದೆ.ದೇಶ ಕಂಡ ಪ್ರೀತಿಯ ಮಾಜಿ ರಾಷ್ಟ್ರಪತಿಗಳಿಗೆ ಪ್ರಧಾನಿ ಮೋದಿ ನಮಿಸಿದ್ದಾರೆ. ಕಲಾಂರನ್ನು ನೆನೆದು ವಿಡಿಯೋ ಶೇರ್ ಮಾಡಿ, ನೀವು ಎಂದಿಗೂ ನಮಗೆ ಪ್ರೇರಣೆ ಎಂದು ಗೌರವ ಸಲ್ಲಿಸಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ವಿನಮ್ರ ಶೃದ್ಧಾಂಜಲಿ ಮಾಡಿದದ್ದರೆ. ಅವರು  ಸಮರ್ಥ ಮತ್ತು ಸಮೃದ್ಧ ಭಾರತದ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕರಿದ ಎಣ್ಣೆಯನ್ನ ಪದೇ ಪದೇ ಉಪಯೋಗಿಸಿದ್ದಲ್ಲಿ ಈ ಭಯಂಕರ ಖಾಯಿಲೆ ಗ್ಯಾರಂಟಿ..!

    ಈಗಂತೂ ಮನೆಯಲ್ಲಿ ಮಾಡಿದ ಅಡುಗೆಗಿಂತ ಹೊರಗಡೆ ಸಿಗುವ ಫಾಸ್ಟ್ ಫುಡ್, ಸ್ನಾಕ್ಸ್ ಗಳನ್ನು ತಿನ್ನುವುದೇ ಹೆಚ್ಚು.ಅದರಲ್ಲೂ ಹೊರಗಡೆ ಸಿಗುವ ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ ಆಯ್ಕೆ ಮಾಡಿಕೊಳ್ತೇವೆ. ಹೊಟೇಲ್ ಇರಲಿ, ಮನೆಯಿರಲಿ, ಒಮ್ಮೆ ಕರಿದ ಎಣ್ಣೆಯನ್ನು ಎತ್ತಿಟ್ಟು ಮತ್ತೊಮ್ಮೆ ಅಡುಗೆಗೆ ಬಳಸ್ತೇವೆ. ಮನೆಯಲ್ಲಿ ನಾಲ್ಕೈದು ಬಾರಿ ಬಳಸಿದ್ರೆ ಹೊಟೇಲ್ ನಲ್ಲಿ ಅದೆಷ್ಟು ಬಾರಿ ಒಂದೇ…

  • inspirational

    ಯಾರದೋ ತಲೆ ಇನ್ನಾರದೋ ದೇಹ…!!!ಅಚ್ಚರಿಯ ಲೇಖನ ಓದಿ

    ದೇಹ ಒಬ್ಬನದ್ದು, ತಲೆ ಮತ್ತೂಬ್ಬನದ್ದು! ಈ ರೀತಿ ಸಿನಿಮಾದಲ್ಲಿ ನೀವು ನೋಡಿರುತ್ತಿರಿ ಅಲ್ಲವೇ…?ಎಲ್ಲ ಅಂದುಕೊಂಡಂತೆ ಆದರೆ,ಒಬ್ಬ ಮನುಷ್ಯನ ತಲೆಯನ್ನು ಇನ್ನೊಬ್ಬರ ದೇಹಕ್ಕೆ ಜೋಡಿಸಬಹುದಂತೆ.. ಆಶ್ಚರ್ಯವಾಯಿತೇ…?ಮುಂದೆ ಓದಿ.. ಇದೇ ಮೊದಲ ಬಾರಿಗೆ ಅಂತಹುದೊಂದು ಪ್ರಯತ್ನ ನಡೆಯಲಿದೆ. ಮಾನವನ ತಲೆಯನ್ನೇ ಕಸಿ ಮಾಡಿ, ಮತ್ತೂಬ್ಬನ ದೇಹಕ್ಕೆ ಕೂರಿಸಲು ಎಲ್ಲ ಸಿದ್ಧತೆಗಳು ಆರಂಭವಾಗಿವೆ. ಅದಕ್ಕೆ ಮುನ್ನುಡಿಯೆಂಬಂತೆ, ಒಂದು ಇಲಿಯ ದೇಹಕ್ಕೆ ಮತ್ತೂಂದು ಇಲಿಯ ತಲೆಯನ್ನು ಕಸಿ ಮಾಡಲಾಗಿದೆ. ಹೌದು. ಚೀನದ ವಿಜ್ಞಾನಿಗಳು ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ವರ್ಷಾಂತ್ಯದಲ್ಲಿ ಮಾನವನ ಮೇಲೆ ನಡೆಯುವ…

  • ದೇವರು, ದೇವರು-ಧರ್ಮ

    ಹಿಂದೂ ಮಹಾ ಗಣಪತಿ – ಚಿತ್ರದುರ್ಗ ಕರ್ನಾಟಕದ ಅತಿ ಹೆಚ್ಚು ಜನ ಸೇರುವ ಗಣಪತಿ…

    2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.