ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ…
ಈ ಹಳ್ಳಿ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಚಿಖಾಲಿ. ಈ ಚಿಖಾಲಿ ಹಳ್ಳಿಯಲ್ಲಿ ಈ ವಿಚಿತ್ರ ಆಚರಣೆಯ ಮಾಡುತ್ತಾರೆ. ಇಲ್ಲಿನ ಜನರ ನಂಬಿಕೆಯಂತೆ ರಾವಣನಿಗೆ ಅವಮಾನ ಮಾಡುವುದೆಂದರೆ ಅದು ಇಡೀ ಹಳ್ಳಿಗೇ ಅಶುಭ ಶಕುನವಂತೆ.
ಚೈತ್ರ ನವರಾತ್ರಿಯ ಸಂಪ್ರದಾಯದ ಪ್ರಕಾರ, 10ನೇ ದಿನವಾದ ದಶಮಿಯಂದು ಹಳ್ಳಿಗರು ಇಲ್ಲಿ ಪೂಜಿಸುವುದು ರಾವಣನನ್ನು. ಇದೇ ಅವಧಿಯಲ್ಲಿ ರಾವಣನ ಗೌರವಾರ್ಥ ಜಾತ್ರೆಯೊಂದೂ ನಡೆಯುತ್ತದೆ. ಆ ದಿನ ಜನರು ರಾಮ-ರಾವಣ ಯುದ್ಧದ ಪ್ರಹಸನವನ್ನೂ ಮಾಡುತ್ತಾರೆ. ಈ ಸಂದರ್ಭ ಭಾರೀ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ ಇಲ್ಲಿ.
ಇಲ್ಲಿರುವ ಮಂದಿರದ ಅರ್ಚಕ ಬಾಬು ಭಾಯಿ ರಾವಣ್. ಯಾವಾಗ ಅವರು ಈ ದೇವಸ್ಥಾನದ ಪೂಜೆಗೆ ಶುರುವಿಟ್ಟುಕೊಂಡರೋ ಅಂದಿನಿಂದ ಅವರ ಹೆಸರಿನೊಂದಿಗೆ ‘ರಾವಣ’ ಎಂಬ ಅಡ್ಡನಾಮವೂ ಸೇರಿಕೊಂಡು ಜನಜನಿತವಾಯಿತು.ಇಲ್ಲಿ ಓದಿ:-24 ಗಂಟೆಯಲ್ಲಿ 36 ಮೊಟ್ಟೆ ಇಟ್ಟ ಕೋಳಿ!!!
ಹಳ್ಳಿಗೆ ಯಾವುದೇ ಸಮಸ್ಯೆ ಎದುರಾದಾಗ, ಜನರು ಆತನ ಬಳಿ ಬರುತ್ತಾರೆ. ಅವರು ಬೇಡಿಕೆ ಈಡೇರುವವರೆಗೂ ರಾವಣನ ವಿಗ್ರಹದೆದುರು ಉಪವಾಸ ವ್ರತ ಮಾಡುತ್ತಾರೆ. ಈ ಗ್ರಾಮ ಮತ್ತು ಸಮೀಪದ ಹಳ್ಳಿಗಳು ನೀರಿನ ತೀವ್ರ ಕ್ಷಾಮ ಎದುರಿಸಿದ ಸಂದರ್ಭವೊಂದರಲ್ಲಿ, ಅವರು ರಾವಣ ವಿಗ್ರಹದೆದುರು ಕುಳಿತ ಅವರು ತಮ್ಮ ಪ್ರಾರ್ಥನೆ ಪ್ರಾರಂಭಿಸಿದರು. ಪವಾಡಸದೃಶವೋ ಎಂಬಂತೆ ಮೂರೇ ದಿನಗಳಲ್ಲಿ ಆ ಪ್ರದೇಶದಲ್ಲಿ ಭರ್ಜರಿ ಮಳೆ ಸುರಿಯಿತು.
ಈ ಪ್ರದೇಶದಲ್ಲಿ ರಾವಣನನ್ನು ಮಾತ್ರ ಪೂಜಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ಚಾಲ್ತಿಯಲ್ಲಿದೆ ಎನ್ನುತ್ತಾರೆ ಕೈಲಾಸ ನಾರಾಯಣ ವ್ಯಾಸ. ಅದೊಮ್ಮೆ ಅದ್ಯಾವುದೋ ಕಾರಣಕ್ಕೆ ಚೈತ್ರ ದಶಮಿಯಂದು ರಾವಣನ ಉತ್ಸವವನ್ನು ನಡೆಸಲಾಗಲಿಲ್ಲ. ಆ ಸಂದರ್ಭದಲ್ಲಿ ಇಡೀ ಹಳ್ಳಿಗೇ ಬೆಂಕಿ ಬಿದ್ದು, ಆ ಗ್ರಾಮದ ಒಂದು ಭಾಗವನ್ನಷ್ಟೇ ಉಳಿಸಿಕೊಳ್ಳಲು ಗ್ರಾಮಸ್ಥರಿಗೆ ಸಾಧ್ಯವಾಯಿತಂತೆ.
ಸ್ಥಳೀಯರಾದ ಪದ್ಮಾ ಜೈನ್ ಕೂಡಾ ಈ ನಂಬಿಕೆಯನ್ನು ಬೆಂಬಲಿಸುತ್ತಾರೆ. ನವರಾತ್ರಿ ಕಳೆದ ದಶಮಿ ದಿನದಂದು ರಾವಣನನ್ನು ಪೂಜಿಸದೇ ಇದ್ದ ಕಾರಣ ಹಳ್ಳಿಗೆ ಒಂದಲ್ಲ, ಎರಡು ಬಾರಿ ಬೆಂಕಿ ಹತ್ತಿಕೊಂಡಿತಂತೆ. ಹಳ್ಳಿಗೆ ಬೆಂಕಿ ಹತ್ತಿಕೊಂಡಿದ್ದನ್ನು ವೀಡಿಯೋದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಲಾಗಿತ್ತಾದರೂ, ಭಾರೀ ಬಿರುಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲವಂತೆ.
ಭಾರತದಲ್ಲಿ ಮತ್ತು ನೆರೆಯ ಶ್ರೀಲಂಕಾದಲ್ಲಿ ರಾವಣನನ್ನು ಪೂಜಿಸುವುದು ಹೊಸತೇನಲ್ಲ. ರಾವಣೇಶ್ವರನಿಗೆ ಸಾಕಷ್ಟು ಮಂದಿರಗಳೂ ಇವೆ. ಆದರೆ ರಾವಣನ ಪೂಜೆ ಮಾಡದಿರುವುದಕ್ಕಾಗಿ ಇಡೀ ಹಳ್ಳಿಗೆ ಹಳ್ಳಿಗೇ ಭಸ್ಮವಾಗುವುದು ಮಾತ್ರ ತೀರಾ ಅಪರೂಪ ಮತ್ತು ಚರ್ಚೆ ಮಾಡಬೇಕಾದ ಸಂಗತಿ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ ಬರೆದು ತಿಳಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏಡಿಗಳು ಹೆಚ್ಚು ಕಾಲ ಬಾಳುವುದು ತೀರ ಅಪರೂಪ ವಿಚಾರ. ಆದರೆ ನ್ಯೂಯಾರ್ಕ್ ನಲ್ಲಿ ಏಡಿಯೊಂದು ಬರೋಬ್ಬರಿ 132 ವರ್ಷ ಬದುಕಿದೆ.
ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ
ವಾಸ್ತುಪ್ರಕಾರ ಮನೆಯ ಸಭಾಂಗಣ, ಕೋಣೆ, ಅಡುಗೆ ಮನೆ, ಶೌಚಾಲಯ ಎಲ್ಲವೂ ನಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೊಠಡಿ ಹಾಗೂ ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯ ಸುಖ-ಶಾಂತಿ, ಆರ್ಥಿಕ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ.
ಡಿಜಿಟಲ್ ಪೇಮೆಂಟ್ ಗೆ ಉತ್ತೇಜನ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದೀಗ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಶುಲ್ಕವನ್ನು ಕಡಿತ ಮಾಡಲು ನಿರ್ಧರಿಸಿದೆ.
ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ
ಶಾಪಿಂಗ್ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.