ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಂದನವನದ ಆ್ಯಕ್ಷನ್ ಪ್ರಿನ್ಸ್ ದೃವಾ ಸರ್ಜಾ ಮೊನ್ನೆ ಮೊನ್ನೆ ಅಷ್ಟೇ ದುರಂತ ಅಂತ್ಯ ಕಂಡ ಖಳನಾಯಕ ಉದಯ್ ಅವರ ಅಕ್ಕನ ಗಂಡ ಅಂದರೆ ಬಾವ ರಾಜ ನಿರ್ದೇಶನದ ಐರಾ ಚಿತ್ರದ ಮೂಹೂರ್ತವನ್ನು ಉದಯ್ ಅವರ ಸಮಾಧಿ ಬಳಿ ಕ್ಲಾಪ್ ಮಾಡುವ ಆ ಚಿತ್ರಕ್ಕೆ ಚಾಲನೆಯನ್ನು ಮಾಡಿ ಗೆಳೆಯನನ್ನು ನೆನೆದು ಭಾವುಕರಾಗಿದ್ದರು.
ದೃವಾ ಸರ್ಜಾ ಮದುವೆಯ ತಯಾರಿ ಕೂಡ ಭರ್ಜರಿಯಾಗಿ ಸಾಗಿದೆ. ಇತ್ತ ದೃವಾ ಸರ್ಜಾ ಮದುವೆಯ ಆಮಂತ್ರಣ ಪತ್ರಿಕೆ ಹಿಡಿದು ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಮನೆ ಗಳತ್ತ ಹೆಜ್ಜೆ ಹಾಕಿ ಎಲ್ಲರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ದೃವಸರ್ಜಾ ಹಾಗೂ ಮಾಸ್ತಿಗುಡಿಯ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡ ಖಳನಾಯಕ ಉದಯ್ ಇಬ್ಬರೂ ಬಾಲ್ಯ ಸ್ನೇಹಿತರು ಒಟ್ಟಾಗಿ ವಿದ್ಯಾಭ್ಯಾಸ ಕಲಿತವರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.
ಉದಯ್ ಗೆಳೆಯ ಇರದಿದ್ದರೂ ಸಹ ದ್ರುವಸರ್ಜಾ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಉದಯ್ ಅವರ ಮನೆಗೆ ತಾವೇ ಹೋಗಿ ಉದಯ್ ತಾಯಿ ತಂಗಿಯನ್ನು ಆತ್ಮೀಯವಾಗಿ ಮದುವೆಗೆ ಆಮಂತ್ರಣ ನೀಡಿ ಬಂದಿದ್ದಾರೆ. ಆದರೆ ಮನೆಯಲ್ಲಿ ಇಲ್ಲದ ಗೆಳೆಯನ ನೆನಪು ಮಾತ್ರ ಒಂದು ಕ್ಷಣ ಅವರ ಮನ ಹಿಂಡಿದ ಅನುಭವವನ್ನು ನೀಡಿ ನೋವು ತರಿಸಿತ್ತು.
ಇನ್ನು ನಟ ದೃವಾ ಸರ್ಜಾ ಖುದ್ದಾಗಿ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ತನ್ನ ಮದುವೆಯ ಆಹ್ವಾನ ನೀಡಿರುವುದು ಕುಟುಂಬಕ್ಕೆ ಅವರಿಲ್ಲದ ನಡುವೆಯೂ ಕೊಂಚ ನೆಮ್ಮದಿ ನೀಡಿದೆ.ಬಾಲ್ಯ ಸ್ನೇಹಿತರ ಮರೆಯದೇ ತನ್ನ ಮದುವೆ ಆಹ್ವಾನ ನೀಡುವ ಮೂಲಕ ದೃವಾ ಸರ್ಜಾ ತನ್ನತನವನ್ನು ಮೆರೆದಿದ್ದಾರೆ. ಇನ್ನು ಭರ್ಜರಿ ಹುಡುಗನ ಮದುವೆ ಸಂಭ್ರಮ ಚಂದನವನದ ತುಂಬಾ ಹರಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರೈಲ್ವೆ ಇಲಾಖೆಯಲ್ಲಿನ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 306 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರೈಲ್ವೆ ನೇಮಕಾತಿ ಸೆಲ್ (ಆರ್ಆರ್ಸಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ. ಒಟ್ಟು ಹುದ್ದೆಗಳ ಸಂಖ್ಯೆ – 306ಸಹಾಯಕ ಲೊಕೊ ಪೈಲಟ್ – 85 ಹುದ್ದೆಗಳುತಂತ್ರಜ್ಞ (ಟೆಕ್ನಿಷಿಯನ್) – 221 ಹುದ್ದೆಗಳು ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ…
ನೀವೆಲ್ಲ ಹೀಗೆ ಹೇಳ್ತಾ ಇದ್ದರೆ ಬಿಗ್ಬಾಸ್ ಮನೆಯಿಂದ ಹೊರ ಹೋದ ನಾಲ್ಕೇ ದಿನಕ್ಕೆ ನನ್ನ ಮದುವೆ ಮಾಡಿಸ್ತಾರೆ ಎಂದು ಭೂಮಿ ಶೆಟ್ಟಿ ಹೇಳಿಕೊಂಡಿದ್ದಾರೆ. ಬಿಗ್ಬಾಸ್ ಫಿನಾಲೆಗೆ ಮೂರು ದಿನಗಳು ಮಾತ್ರ ಉಳಿದಿದ್ದು, ಟಾಪ್ ಫೈವ್ ಸ್ಪರ್ಧಿಗಳಲ್ಲಿ ಭೂಮಿ ಶೆಟ್ಟಿ ಸಹ ಒಬ್ಬರು. ಕೊನೆಯ ವಾರ ಆಗಿದ್ದರಿಂದ ಬಿಗ್ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಟಾಸ್ಕ್ ಗಳು ಸಿಗುತ್ತಿಲ್ಲ. ಬದಲಾಗಿ ಹಳೆಯ ಸ್ಪರ್ಧಿಗಳನ್ನು ಮನೆಗೆ ಕರೆ ತರುವ ಮೂಲಕ ಫೈನಿಲಿಸ್ಟ್ ಗಳಿಗೆ ಸರ್ಪ್ರೈಸ್ ನೀಡಲಾಗುತ್ತಿದೆ. ಗೆಸ್ಟ್ ಬಂದು ಹೋದ ನಂತರ ಸ್ಪರ್ಧಿಗಳು…
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಿದ್ರು ಟ್ರಾಫಿಕ್ ಸಮಸ್ಯೆ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿಲ್ಲ.
ಮಹದಾಯಿ ವಿವಾದ ಬಗೆ ಹರಿಸಲು ಜನವರಿ 25ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆ ನೀಡಿದರೆ. ಈ ನಡುವೆ ಜ.30 ರಂದು ಸಾರಿಗೆ ಬಂದ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕರ್ನಾಕಟ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳ ಮುಖ್ಯ ಪಾತ್ರವಾಯಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಲಕ್ಷ್ಮಿ ಒಲಿಯುವುದು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ
‘ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಜುಲೈನಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಆದ ತಪ್ಪಿನಿಂದ ದೃಷ್ಟಿಕಳೆದುಕೊಂಡವರಿಗೆ ಸರ್ಕಾರ ತಲಾ 3 ಲಕ್ಷರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡ ಆಗಿದೆ. ಆದರೆಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ ಎಂದು ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಯಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ 10 ಮಂದಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ತಪ್ಪಿತಸ್ಥ…