ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತನಗೆ ಮೆದುಳಿನ ಕ್ಯಾನ್ಸರ್ ಗಡ್ದೆ ಇದೆ ಎಂಬುದನ್ನು ಅರಿಯದ ಮಹಿಳೆಯೊಬ್ಬಳಿಗೆ ಸಾಕಿದ ಕುದುರೆಯೇ ನೆರವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ತನ್ನ ಮಾಲಕಿಯ ಕ್ಯಾನ್ಸರ್ ವಾಸನೆಯನ್ನು ಮೂಗಿನಿಂದಲೇ ಕಂಡುಹಿಡಿದು ಅವಳನ್ನು ಚಿಕಿತ್ಸೆಗೆ ಪ್ರೇರೇಪಿಸಿದ ಮನಕಲಕುವ ಸ್ಟೋರಿ ಇದು.
ಇಂಗ್ಲೆಂಡ್ ಲ್ಯಾಂಚ್ಶೈರ್ನ ಬ್ಲ್ಯಾಕ್ಬರ್ನ್ ಮೂಲದವರಾದ ಕೆಲ್ಲಿ ಅನ್ನಾ ಅಲೆಕ್ಸಾಂಡರ್(43) ತನ್ನ ಕುದುರೆ ಅಲಿಯಾನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದ್ದಕ್ಕಿಂದಂತೆ ರೋಗದಿಂದ ಬಳಲು ಆರಂಭಿಸಿದ ಬಳಿಕ ತನ್ನ ಅಲಿಯಾನ ಕುದುರೆ ಆಕೆಯ ತಲೆಯ ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು ಎಂದು ಅಲೆಕ್ಸಾಂಡರ್ ಹೇಳಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಅಲೆಕ್ಸಾಂಡರ್ ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗ ತನಗೆ ಕೆಳ ಮಟ್ಟದ ಮೆದುಳು ಕ್ಯಾನ್ಸರ್ ಗೆಡ್ಡೆ ಇರುವುದು ಪತ್ತೆಯಾಗಿದೆ.
ಅಂದಹಾಗೆ ತಮ್ಮ ಪತಿ ಕೆವಿನ್ ಅವರಿಂದ ವಿವಾಹದ ಕೊಡುಗೆಯಾಗಿರುವ ಅಲಿಯಾನ ಜತೆ ಅಲೆಕ್ಸಾಂಡರ್ ಡ್ರೆಸ್ಸೇಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಖುಷಿ ಹಂಚಿಕೊಂಡಿದ್ದಾರೆ. ಹಾಗೆಯೇ 2015 ರಲ್ಲಿ ಮೊದಲ ಬಾರಿಗೆ ಅನಾರೋಗ್ಯಕ್ಕೆ ತುತ್ತಾದರಂತೆ. ನನ್ನ ಮೊದಲ ಡ್ರೆಸ್ಸೇಜ್ ಸ್ಪರ್ಧೆ ಮುಗಿದ ಕೆಲವೇ ದಿನಗಳಲ್ಲಿ ರೋಗಗ್ರಸ್ತವಾದೆ. ದಿನವೊಂದಕ್ಕೆ 14 ರಿಂದ 15 ಬಾರಿ ರೊಗಗ್ರಸ್ತವಾಗುತ್ತಿದೆ. ಸಾಕಷ್ಟು ಬಾರಿ ಔಷಧವನ್ನು ತೆಗೆದುಕೊಂಡಿದ್ದೇನೆ. ಆದರೂ ಗುಣಮುಖವಾಗಿರಲಿಲ್ಲ. ಅಲ್ಲದೆ, ಭಯಾನಕ ವಾಸನೆ ಬರುತ್ತಿತ್ತು ಎಂದಿದ್ದಾರೆ.
ಬಳಿಕ ನಾನು ಕೆಲವು ದಿನಗಳವರೆಗೆ ತವರು ಮನೆಗೆ ಹೋದೆ. ಸುಮಾರು 5-6 ವಾರಗಳವರೆಗೆ ಅಲಿಯಾನಳನ್ನು ನೋಡಲೇ ಇಲ್ಲ. ಮರಳಿ ಬಂದ ಬಳಿಕ ಅವಳ ಪ್ರತಿಕ್ರಿಯೆ ತುಂಬಾ ವಿಚಿತ್ರವಾಗಿತ್ತು. ನನ್ನ ತಲೆಯ ಒಂದು ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು. ಬಳಿಕ ಮೆದುಳು ಗಡ್ಡೆ ಇದೆ ಎಂಬುದು ಗೊತ್ತಾಗಿ, ಲಿವಿಂಗ್ಸ್ಟನ್ನಲ್ಲಿರುವ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾದೆವು. ಬಳಿಕ ಆಲಿಗೋಡೆಂಡ್ರೊಗ್ಲಿಯೊಮಾ ಮೆದುಳು ಗಡ್ಡೆಗೆ ಚಿಕಿತ್ಸೆ ನೀಡಿದರು ಎಂದು ತಿಳಿಸಿದ್ದಾರೆ.
ಚಿಕಿತ್ಸೆಯ ಬಳಿಕವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಗಿ ಅಲೆಕ್ಸಾಂಡರ್ ಹೇಳಿಕೊಂಡಿದ್ದಾರೆ. ಕ್ರಮೇಣ ಚೇತರಿಸಿಕೊಂಡ ಅಲೆಕ್ಸಾಂಡರ್ಗೆ ಆಕೆಯ ಕುದುರೆ ಅಲಿಯಾನ ಸಾಥ್ ನೀಡಿದ್ದನ್ನು ಸ್ಮರಿಸಿದ್ದಾರೆ. ಇದೀಗ ಅಲೆಕ್ಸಾಂಡರ್ ಮೆದುಳು ಗಡ್ಡೆ ಕುರಿತಾದ ಸಂಶೋಧನೆ ಮಾಡುತ್ತಿದ್ದು, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ವಿಟ್ಜರ್ಲೆಂಡ್ನಲ್ಲಿ ನಟ ದರ್ಶನ್. ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್ ಸ್ಟಾರ್. ಎಂ.ಡಿ ಶ್ರೀಧರ್ ನಿರ್ದೇಶಿಸುತ್ತಿರುವ ಒಡೆಯ ಸಿನಿಮಾದ ಕೊನೆಯ ಎರಡು ಹಾಡುಗಳ ಚಿತ್ರೀಕರಣಕ್ಕೆಂದು ಚಿತ್ರತಂಡ ಅಕ್ಟೋಬರ್ 15ರಂದು ಸ್ವಿಟ್ಜರ್ಲೆಂಡ್ಗೆ ಹಾರಿದ್ದರು. ಹತ್ತು ದಿನಗಳ ಕಾಲ ನಡೆಯಲಿರುವ ಚಿತ್ರೀಕರಣದ ನಂತರ ಇದೇ ಅಕ್ಟೋಬರ್ 26ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ದಚ್ಚು ಆ್ಯಂಡ್ ಟೀಮ್. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದ್ದು ಈ ವರ್ಷದ ಕೊನೆಯಲ್ಲಿ ಒಡೆಯ ಚಿತ್ರ ಡಿ ಬಾಸ್ ಫ್ಯಾನ್ಸ್ಗಳ ಮುಂದೆ ಬರಲಿದೆ. ಅಕ್ಟೋಬರ್ 15ರಂದು…
ತುಂಬಾ ಜನ ಸಿಳ್ಳೆ (ವಿಸಿಲ್) ಹೊಡೆಯೋಕೆ ತುಂಬಾ ಇಷ್ಟ ಪಡುತ್ತಾರೆ. ಆದ್ರೆ ಕೆಲವರಿಗೆ ವಿಸಿಲ್ ಹೊಡೆಯೋದು ಹೇಗೆ ಅಂತ ಗೊತ್ತಾಗದೆ ತುಂಬಾ ಕಷ್ಟ ಪಡುತ್ತಾರೆ. ನೀವೇನಾದ್ರೂ ವಿಸಿಲ್ ಹೊಡೆಯೋದು ಹೇಗೆ ಅಂತ ಕಲಿಬೇಕು ಅನ್ಕೊಂಡ್ರೆ ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಅನುಸರಿಸಿ…
ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಪುಟ್ಟ ದೇಶ ಇಸ್ರೇಲ್, ಎಷ್ಟೇ ತೊಂದರೆಗಳು ಬಂದ್ರೂ ಕೂಡ ಎದೆಗುಂದದೆ, ಬಂದ ತೊಂದರೆಗಳನ್ನು ಎದುರಿಸಿ ಹೇಗೆ ಬೆಳೆದಿದೆ ಎಂದರೆ….ಆ ಇಸ್ರೇಲಿನ ಅದೆಷ್ಟೋ ಪಟ್ಟು ದೊಡ್ಡದಾಗಿರೋ ನಮ್ಮ ಭಾರತಕ್ಕೇನು ಆ ರೀತಿ ಬೆಳೆಯೋ ಅವಕಾಶಗಳೇ ಸಿಕ್ಕಿರಲಿಲ್ಲವಾ ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ !
ಬಾಲಿವುಡ್ ನಟಿ ಕರೀನಾ ಕಪೂರ್ ಹುಟ್ಟು ಹಬ್ಬದ ನಂತ್ರ ಡಾನ್ಸ್ ಇಂಡಿಯಾ ಡಾನ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್ ಫೈನಲ್ ನಲ್ಲಿ ಜಡ್ಜ್ ಆಗಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕರೀನಾ ಸ್ಟೈಲ್ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಸೆಟ್ ನಲ್ಲಿ ಕರೀನಾ ಫ್ಯಾಷನ್ ಎಲ್ಲರನ್ನು ಆಕರ್ಷಿಸಿದೆ. ವಿಶೇಷವಾಗಿ ಕರಿನಾ ಕತ್ತಿಗೆ ಹಾಕಿದ್ದ ಸ್ನೇಕ್ ಚೈನ್. ಕರೀನಾ ಡೈಮಂಡ್ ಸ್ನೇಕ್ ಚೈನ್ ಧರಿಸಿ ಬಂದಿದ್ದರು. ಕರೀನಾರ ಈ ಚೈನ್ ಐಷಾರಾಮಿ ಕಾರುಗಳಿಗಿಂತ ದುಬಾರಿ ಎನ್ನಲಾಗಿದೆ. ಇದ್ರ…
ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.
ಬಿಗ್ ಬಾಸ್ ಸಂಚಿಕೆ-5ರ ಕಾರ್ಯಕ್ರಮ ಇನ್ನೇನು ಮುಗಿಯಲಿದೆ.ಈಗಾಗಲೇ ಪೈನಲ್’ಗೆ ಎಲ್ಲಾ ತಯಾರಿಗಳು ಶುರುವಾಗಿವೆ.