ಆರೋಗ್ಯ, ಉಪಯುಕ್ತ ಮಾಹಿತಿ

ಕಡಲೆ ಕಾಯಿಯಲ್ಲಿದೆ ಈ 6 ಅದ್ಭುತ ಆರೋಗ್ಯದ ಗುಟ್ಟುಗಳು..!

247

ಬಡವರ ಬಾದಾಮಿ ಎಂದೇ ಕರೆಯುವ ಕಡಲೆಕಾಯಿಯಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಸದಾ ನೀವು ಯಂಗ್ ಆಗಿ ಕಾಣುವಂತೆ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತೆ.

ಹಾಗಾದ್ರೆ ಕಡಲೆ ಕಾಯಿಯನ್ನು ತಿನ್ನುವುದರಿಂದ ಇನ್ನು ಹಲವಾರು ಪ್ರಯೋಜನಗಳಿವೆ..

*ಪ್ರತಿದಿನ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.ಜೊತೆಗೆ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ.

*ದಿನಾಲೂ ಪುರುಷ ಹಾಗೂ ಮಹಿಳೆ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿದ್ದು ಅವರ ಲೈಂಗಿಕ ಜೀವನ ಉತ್ತಮವಾಗಿರುತ್ತದೆ.

*ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಇದು ಸಹಕಾರಿಯಾಗಿರುವುದರಿಂದ ಗರ್ಭಿಣಿಯರಿಗೆ ನೆಲಗಡಲೆ ಬಹಳ ಒಳ್ಳೆಯದು.

*ನೆಲಗಡಲೆಯಲ್ಲಿ ಒಮೆಗಾ -6 ಕೊಬ್ಬಿನಂಶವಿರುವುದರಿಂದ ಚರ್ಮದ ಕಾಂತಿಗೆ ತುಂಬಾ ಒಳ್ಳೆಯದು

*ಹೃದಯ ಖಾಯಿಲೆಗಳು ನಿಮ್ಮ ಬಳಿ ಬಾರದಿರಲು, ವಾರದಲ್ಲಿ ಐದು ದಿನ ನೀವು ಕಡಲೆ ಕಾಯಿ ಸೇವಿಸಿ.

*ಪ್ರತೀ ದಿನ ನೆಲಗಡಲೆ ತಿನ್ನುವುದರಿಂದ ರಕ್ತದ ಸಮಸ್ಯೆ ಎದುರಾಗುವುದಿಲ್ಲ.ಹಾಗಾಗಿ ರಕ್ತ ಹೀನತೆ ಇರುವವರು ಅವಶ್ಯವಾಗಿ ಕಡಲೆ ಕಾಯಿ ಸೇವನೆ ಮಾಡಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ