ಸುದ್ದಿ

ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ವಿಜಯವನ್ನು ಸಾಧಿಸಿದ ಎಂ,ಟೆಕ್ ಪದವೀಧರ,..ಇದನ್ನೊಮ್ಮೆ ಓದಿ..?

45

ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದ್ಯೋ ಗೊತ್ತಿಲ್ಲ. ಆದರೆ ಸಿಎಂಗೂ ಮೊದಲೇ ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.

ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಅದಮ್ಯ ಆಸೆಯಿಂದ ಈ ಗುಲಾಬಿ ತೋಟಗಾರಿಕೆ ಮಾಡುತ್ತಿದ್ದಾರೆ. 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್‍ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಗಿರೀಶ್ ಮೊದಲಿಗೆ ಕೃಷಿ ಮಾಡುತ್ತೇನೆ ಅಂದಾಗ ಕುಟುಂಬದವರು ಒಪ್ಪಿರಲಿಲ್ಲ. ಅದರಲ್ಲೂ 40 ಬೊರ್‍ವೆಲ್ ಕೊರೆಸಿದ್ರೂ ನೀರು ಸಿಗ್ಲಿಲ್ಲ. ಇಂಥ ಹೊತ್ತಲ್ಲಿ ಮಗನಿಗೆ ಧೈರ್ಯ ತುಂಬಿದ್ದು ಕೆಇಬಿ ನಿವೃತ್ತ ಎಂಜಿನಿಯರ್ ತಂದೆ ರಾಮಸ್ವಾಮಿ. ನನ್ನ ಸಲಹೆಯಂತೆ ಪೌಲಿಹೌಸ್‍ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಿದ ಬಳಿಕ ಈಗ ನೀರಿನ ಸಮಸ್ಯೆಯೇ ಇಲ್ಲ ಎಂದು ಗಿರೀಶ್ ತಂದೆ ರಾಮಸ್ವಾಮಿ ಹೇಳುತ್ತಾರೆ.

ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ತಾಯಿ ಲಲಿತಮ್ಮ, ಎಂಟೆಕ್ ಪದವೀಧರೆಯಾಗಿರೋ ಪತ್ನಿ ಅಕ್ಷತಾ ಸಹ ಗಿರೀಶ್‍ಗೆ ಸಾಥ್ ನೀಡುತ್ತಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಸಚಿವ. ಈ ಸುದ್ದಿ ನೋಡಿ.!

    ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…

  • ವಿಚಿತ್ರ ಆದರೂ ಸತ್ಯ, ಸೌಂದರ್ಯ

    ಈ ಕುಟುಂಬ ಹೇಗಿತ್ತು ಈಗ ಹೇಗಾಗಿದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಫಿಟ್ ಅಂಡ್ ಫೈನ್ ಆಗಿರಬೇಕೆಂದು ಹೊಸ ವರ್ಷಕ್ಕೆ ಬಹುತೇಕರು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ನಂತರದಲ್ಲಿ ಇದನ್ನು ಪಾಲಿಸುವವರು ಮಾತ್ರ ಕೆಲವೇ ಕೆಲವು ಮಂದಿ. ಆದರೆ ಚೀನಾದ ಕುಟುಂಬವೊಂದು ಇಂತಹ ನಿರ್ಧಾರ ಕೈಗೊಂಡು ಅದನ್ನು ಸಾಕಾರಗೊಳಿಸಿದ್ದಾರೆ. 2 ವರ್ಷದ ಪೋಟೋಗ್ರಾಫರ್ ಜೆಸ್ಸಿಗೆ 6 ತಿಂಗಳ ಹಿಂದೆ ಸಧೃಡ ಮೈಕಟ್ಟನ್ನು ಹೊಂದಬೇಕೆಂಬ ಬಯಕೆ ಉಂಟಾಗಿತ್ತು. ಇದನ್ನು ಆತ ತನ್ನ ಪತ್ನಿ ಬಳಿ ಹೇಳಿಕೊಂಡಿದ್ದ. ಮಗನ ನಿರ್ಧಾರವನ್ನು ಆತನ ತಾಯಿಯೂ ಬೆಂಬಲಿಸಿದ್ದಾರೆ. ಇವರೆಲ್ಲರು ಸೇರಿ ಜೆಸ್ಸಿಯ ತಂದೆಯನ್ನೂ ಒಪ್ಪಿಸಿದ್ದು. ನಾಲ್ವರು ಜಾಗಿಂಗ್ ನಿಂದ…

  • ಜ್ಯೋತಿಷ್ಯ

    ಶ್ರೀ ಅನ್ನಪೂರ್ಣೇಶ್ವರಿ ಆಶೀರ್ವಾದದೊಂದಿಗೆ ಈ ರಾಶಿಗಳಿಗೆ ಶುಭಯೋಗ.!ನಿಮ್ಮ ರಾಶಿಯೂ ಇದೆಯಾ ನೋಡಿ..

    ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇ ದಿನಗಳಲ್ಲಿ ಪರಿಹಾರ ಶತಸಿದ್ಧ.ಸಂಪರ್ಕಿಸಿ:-9353957085 ಮೇಷ ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ನೀವು ಇತರರ ಮೇಲೆ ಹೆಚ್ಚು ಖರ್ಚು ಮಾಡಬಯಸುತ್ತೀರಿ. ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವ ಮೊದಲು ಅದಕ್ಕೆ ಎಲ್ಲರ ಅನುಮೋದನೆಯಿದೆಯೆಂದು ಖಾತ್ರಿಪಡಿಸಿಕೊಳ್ಳಿ. ಪ್ರಣಯಕ್ಕೆ ಒಳ್ಳೆಯ ದಿನ. ಒಬ್ಬ ಆಧ್ಯಾತ್ಮಿಕ ನಾಯಕರು…

  • ಉಪಯುಕ್ತ ಮಾಹಿತಿ

    ನೀವು ಜಿಮ್ ಗೆ ಹೋಗುತ್ತಿದ್ದರೆ, ಹೋಗುವ ಮುನ್ನ ಮರೆಯದೇ ಇದನ್ನು ಸೇವಿಸಿ!

    ಉತ್ತಮ ಆರೋಗ್ಯ ಹಾಗೂ ಸದೃಢ ದೇಹಕ್ಕಾಗಿ ಜನ ಜಿಮ್ ಗೆ ಹೋಗ್ತಾರೆ. ಕೆಲವರಿಗೆ ಸದೃಢ ದೇಹ ಹೊಂದುವ ಆಸೆ ಸಿಕ್ಕಾಪಟ್ಟೆ ಇರುತ್ತೆ. ಹಾಗಾಗಿ ಏನೂ ತಿನ್ನದೆ ಜಿಮ್ ಗೆ ಹೋಗ್ತಾರೆ. ಇದ್ರಿಂದ ಆರೋಗ್ಯ ಹಾಗೂ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಖಾಲಿ ಹೊಟ್ಟೆಯಲ್ಲಿ ಜಿಮ್ ಗೆ ಹೋಗುವುದು ಒಳ್ಳೆಯದಲ್ಲ. ಅಲ್ಪ ಆಹಾರ ಸೇವನೆ ಮಾಡಿ ಜಿಮ್ ಗೆ ಹೋಗುವುದು ಬೆಸ್ಟ್. ಜಿಮ್ ಗೆ ಹೋಗುವ ಮೊದಲು ಹಾಲು ಮತ್ತು ಓಟ್ಸ್ ಸೇವನೆ ಮಾಡಿ. ಹೀಗೆ ಮಾಡುವುದರಿಂದ…

  • ಉಪಯುಕ್ತ ಮಾಹಿತಿ

    ಲಕ್ಷಾಂತರ ಪ್ಯಾನ್ ಕಾರ್ಡ್ ರದ್ದು!ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಿದೆಯಾ,ಇಲ್ಲವಾ ಚೆಕ್ ಮಾಡಲು ಈ ಲೇಖನಿ ಓದಿ…

    ಹಣಕಾಸು ರಾಜ್ಯ ಸಚಿವ ಸಂತೋಷ ಕುಮಾರ್ ಗಂಗಾವರ್‌ರು ಸಂಸತ್ತಿಗೆ ಲಿಖಿತ ಪ್ರಶ್ನೆಗೆ ಉತ್ತರಿಸಿ ಒಬ್ಬವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹಂಚಲಾಗಿತ್ತು. ಜುಲೈ 27ರವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಗುರುತಿಸಿ ರದ್ದು ಪಡಿಸಲಾಗಿದೆ. ಎಂದು ತಿಳಿಸಿದ್ದಾರೆ. ಒಬ್ಬನೆ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ನೀಡಿದ್ದು ಪತ್ತೆಯಾಗಿದೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಸಿಗರೇಟ್ ಚಟದಿಂದ ಹೊರಗೆ ಬರಲು ಈ ಜ್ಯೂಸ್ ಕುಡಿಯಿರಿ ಸಾಕು.

    ನಮ್ಮ ದೇಶದಲ್ಲಿ ಸಿಗರೇಟ್ ಸೇವನೆ ಮಾಡುವವರು ಬಹಳಷ್ಟು ಜನರು ಇದ್ದಾರೆ ಬರಿ ಗಂಡಸರು ಅಷ್ಟೇ ಅಲ್ದೆ ಮಹಿಳೆಯರು ಕೂಡ ಈ ಧೂಮಪಾನ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆರೋಗ್ಯಕ್ಕೆ ಮಾರಕವಾಗಿ ಕಾಡುವಂತ ಈ ಧೂಮಪಾವನ್ನು ನಿಯಂತ್ರಿಸಲು ಹಲವು ವಿಧಾನಗಳಿವೆ ಆದ್ರೆ ಈ ಚಟದಿಂದ ಬೇಗನೆ ಮುಕ್ತಿ ಪಡೆಯಲು ಆಗೋದಿಲ್ಲ, ಅಂತವರಿಗೆ ಈ ನಿಂಬೆ ಜ್ಯುಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಧೈಲ್ಯಾಂಡ್ ನ ಸಂಶೋಧನೆ ಸಾಬೀತು ಪಡಿಸಿದೆ. ಧೂಮಪಾನದಿಂದ ಕಾನ್ಸರ್ ಮುಂತಾದ ಮಾರಕ ಕಾಯಿಲೆಗಳು ಬರುತ್ತವೆ ಅಂತಹ…