ಸಿನಿಮಾ

ಶೆಟ್ಟರ ಕಥೆಯಲ್ಲಿ, ಬರವಣಿಗೆಯೇ ರಾಜ.. ಗರುಡ ಗಮನ ವೃಷಭ ವಾಹನ ಚಿತ್ರದ ವಿಮರ್ಶೆ

27

ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ‌ ಮನಸು ಮಾಡದವರು.

ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ‌ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ‌ ಮಿಡಿಯುವವರು, ದುಡಿಯುವವರು.

ರಾಜ್ ಬಿ ಶೆಟ್ಟಿ ಎರಡನೇ ವರ್ಗದ ನಿರ್ದೇಶಕ. ಅವರಿಗೆ ಸಿನಿಮಾ ಸೋಲು ಗೆಲುವಿನ ಭಯವಿಲ್ಲ. ತಾವು ಬರೆದ, ತಾವು ನಂಬಿದ ಕಥೆಯನ್ನು ತಮ್ಮ ಮನ ಮುಚ್ಚುವಂತೆ ಮುಂದೆ ಜನ‌ ಮೆಚ್ಚೇ ಮೆಚ್ಚುತ್ತಾರೆ ಎಂಬ ಆಶಯದಲ್ಲಿ ಸಿನಿಮಾ‌ ಮಾಡಿದ್ದಾರೆ. ಮತ್ತು ಆ ನಿಟ್ಟಿನಲ್ಲಿ ಭಾಗಶಃ ಗೆದ್ದಿದ್ದಾರೆ.

ಇಲ್ಲಿ ರಾಜ್ ಒಬ್ಬ ನಿರ್ದೇಶಕನಾಗಿ ಗೆಲ್ಲುವುದರ ಜೊತೆಗೆ ಒಬ್ಬ ಬರಹಗಾರನಾಗಿಯು ಬೆರಗು ಮೂಡಿಸುತ್ತಾರೆ.

ಪ್ರತಿ ಪಾತ್ರಕ್ಕೆ ಅವರು ನೀಡಿರುವ ಸಹಜ ಶೈಲಿಯ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ. ಯಾವೆಲ್ಲ ಕಲಾವಿದರು ಹಾಸ್ಯ ಪಾತ್ರಗಳಿಗೆ ಲಾಯಕ್ಕು ಎಂದು ಭಾವಿಸಲಾಗಿತ್ತೋ ಅವರನ್ನೆಲ್ಲ ಗಂಭೀರ ಪಾತ್ರಗಳಲ್ಲಿ ತೋರಿಸಿ ಗೆಲ್ಲುವ ಮೂಲಕ ಒಬ್ಬ ಕ್ರಿಯಾಶೀಲ ನಿರ್ದೇಶಕ ಯಾವುದೇ ಕಲಾವಿದನ ಇಮೇಜ್ ಬದಲಿಸಬಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ..

ಎಲ್ಲಕ್ಕಿಂತ ಹೆಚ್ಚಾಗಿ ‘ಒಂದು ಮೊಟ್ಟೆಯ ಕಥೆ’ಯಲ್ಲಿ ಕೀಳರಿಮೆ ಹೊಂದಿದ್ದು, ಮಾತನಾಡಲು ಅಂಜುವ ಹಾಸ್ಯಮಯ ಪಾತ್ರಕ್ಕೆ ಜೀವ‌ ತುಂಬಿದ್ದ ರಾಜ್, ಇಲ್ಲಿ ತಮ್ಮ ಇಮೇಜ್ ಅಕ್ಷರಶಃ ಬದಲಾಯಿಸಿದ್ದಾರೆ. ಅವರ ಉಗ್ರರೂಪ ಎಂಥವರನ್ನಾದರೂ ಅರೆಕ್ಷಣ ಬೆಚ್ಚಿ ಬೀಳಿಸುವಂತಿದೆ.

ಸಿನಿಮಾದಲ್ಲಿ ಕ್ರೈಂ ತುಂಬಿದ್ದರೂ, ಅಂಥ ಸನ್ನಿವೇಶಗಳಲ್ಲಿ ರಕ್ತ ಸಿಕ್ತ ದೃಶ್ಯಗಳನ್ನು ಜಾಣ್ಮೆಯಿಂದ ಮರೆಮಾಚಿ, ಧ್ವನಿ, ನೆರಳು, ಕ್ಯಾಮೆರಾ ಮೂಮೆಂಟ್ ಮೂಲಕವೇ ಆ ರೌದ್ರವನ್ನು ನೋಡುಗರಿಗೆ ಫೀಲ್ ಮಾಡಿಸುತ್ತಾರೆ. ಮತ್ತು ಅಂಥ ದೃಶ್ಯವನ್ನು ನೋಡುಗರಿಗೆ ಸಹ್ಯ ಎನಿಸುವಂತೆ ಮಾಡಿದ್ದಾರೆ. ಒಬ್ಬ ನಟನಾಗಿಯು ರಾಜ್ ಬಿ ಶೆಟ್ಟಿ ಪರಕಾಯ ಪ್ರವೇಶ ಮಾಡಿದ್ದಾರೆ. ರಿಷಭ್ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಆಯ್ಕೆ ಸಮರ್ಥ, ಅಭಿನಯ ಅದ್ಭುತ.

ಕನ್ನಡದಲ್ಲಿ ಕ್ರಿಯಾಶೀಲ ಕಥೆ ಮತ್ತು ನಿರ್ದೇಶಕರನ್ನು ಹುಡುಕುತ್ತಿದ್ದ ಸಿನಿಮಾಪ್ರಿಯರಿಗೆ ರಾಜ್ ಬಿ ಶೆಟ್ಟಿ ಹೊಸ ಆಶಾಕಿರಣ. ಒಂದು ಕಡೆ ಸಿನಿಮಾಸೂತ್ರಗಳನ್ನಿಟ್ಟುಕೊಂಡು ಅದದೇ ಹೀರೋಯಿಸಂ, ಬಿಲ್ಡಪ್, ಕೌಂಟರ್ ಡೈಲಾಗ್ ಆಧಾರಿತ ನಿರ್ದೇಶಕರು ಹೇರಳವಾಗಿರುವಾಗಿ, ಅದೆಲ್ಲದರ ಹೊರತಾಗಿಯು ಸಿನಿಮಾ‌ ಮಾಡಬಲ್ಲೆ, ಮಾಡಿ ಗೆಲ್ಲಬಲ್ಲೆ ಎಂಬ ಮನೋಭಾವದ ವಿರಳ ನಿರ್ದೇಶಕರ ಸಾಲಿನಲ್ಲಿ ರಾಜ್ ನಿಲ್ಲುತ್ತಾರೆ.

ರಾಜ್ ಅವರಿಗೆ ಕಥನ ಹೇಳುವ ಶೈಲಿ ಚೆನ್ನಾಗಿ ಒಲಿದಿದೆ. ಒಂದು ಸಾಮಾನ್ಯ ಕಥೆಯನ್ನು ಹೊಸತನದ‌ ನಿರೂಪಣಾ‌ ಶೈಲಿಯಿಂದ ವಿಶೇಷವಾಗಿ ತೋರಿಸುತ್ತಾರೆ.

‘ಗರುಡ ಗಮನ ವೃಷಭ ವಾಹನ’ ಚಿತ್ರ ಎಲ್ಲರಿಗೂ ‌ಇಷ್ಟವಾಗುತ್ತದಾ ಎಂದು ಕೇಳಿದರೆ ನನ್ನ ಉತ್ತರ ಇಷ್ಟೇ.. ಅದು‌ ನೋಡುಗರ ಅಭಿರುಚಿಯನ್ನು ಅವಲಂಬಿಸಿದೆ. ಕಮರ್ಷಿಯಲ್ ಸೂತ್ರಗಳ ಸಿನಿಮಾ ಪ್ರಿಯರಿಗೆ ಇದು ರುಚಿಸದಿದ್ದರೆ ಅಚ್ಚರಿಯಲ್ಲ. ಯಾವ ಸಿನಿಮಾಗಳು ಲೋಪ ದೋಷಗಳಿಗೆ ಹೊರತಲ್ಲ. ಅಂತೆಯೇ ಇಲ್ಲೂ ದ್ವಿತೀಯಾರ್ಧ ಸ್ವಲ್ಪ ಸುದೀರ್ಘವೆನಿಸುತ್ತದೆ. ಆದರೆ ಎಲ್ಲರ ನಿರೀಕ್ಷೆ ಮೀರಿದ ರೀತಿಯಲ್ಲಿ ಕಥೆ ಸಾಗುವುದರಿಂದ ಅಲ್ಲಲ್ಲಿ ವಾವ್ ಫ್ಯಾಕ್ಟರ್ ಗಳಿದೆ‌. ಮತ್ತದು ಇಷ್ಟವಾಗುತ್ತೆ‌.

ಆದರೆ ರಾಜ್ ಬಿ ಶೆಟ್ಟಿ ಒಂದಷ್ಟು ಅದ್ಭುತ ಸಿನಿಮಾಗಳನ್ನು ಕೊಡಬಲ್ಲ ಕನಸು ಮತ್ತು ಕಸುವನ್ನು ಹೊಂದಿರುವ ನಿರ್ದೇಶಕ ಎಂಬುದು ಸತ್ಯ.

ಅವರ ಸಿನಿಮಾಪ್ರೀತಿಗೆ, ಬರಹಕ್ಕೆ ಎಂಥವರಾದರೂ ಅಭಿಮಾನಿಯಾಗುತ್ತಾರೆ.

ಕ್ಯಾಮೆರಾ ವರ್ಕ್, ಎಡಿಟಿಂಗ್ ಸಕತ್ತಾಗಿ ಬ್ಲೆಂಡ್ ಆಗಿದೆ.

ಮಿಥುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತ ಬೇರೆಯದೇ ಫೀಲ್ ಕೊಡುತ್ತದೆ, ಕಾಡುತ್ತದೆ, ಆವರಿಸುತ್ತದೆ.

ಇಂಥದ್ದೊಂದು ಕಥೆ ನಂಬಿ ಹಣ ಹೂಡಿದ ನಿರ್ಮಾಪಕರಿಗೂ ಮೆಚ್ಚುಗೆ ಸಲ್ಲಲೇಬೇಕು.

ಮಲಯಾಳಂ, ತಮಿಳಿನ ಪ್ರಯೋಗಾತ್ಮಕ ಚಿತ್ರಗಳನ್ನು ಮೆಚ್ಚಿ ಹೊಗಳುವವರಿಗೆ ಈ ಚಿತ್ರ ಹೆಚ್ಚು ಆಪ್ತ ಎನಿಸುತ್ತದೆ. ಮತ್ತು ನಾವು ಈಗ ಪರಭಾಷಾ ನಿರ್ದೇಶಕರ ಅಭಿಮಾನಿಗಳಿಗೂ ಈ ಚಿತ್ರವನ್ನು ರೆಫರ್ ಮಾಡಬಹುದು. ಆ ಬಳಿಕ ಅವರು ಸಹ ರಾಜ್ ಅವರನ್ನು ಹೊಗಳುವುದನ್ನು ಕಂಡು ಸಂಭ್ರಮಿಸಬಹುದು.

ಒಮ್ಮೆ ನೋಡಿ, ಹೊಸತನಕ್ಕೆ ಬೆಂಬಲ ನೀಡಿ.

Good luck and congratulations for the tremendous success Raj B Shetty

ಧನ್ಯವಾದಗಳೊಂದಿಗೆ

ಟಿ.ಜಿ.ನಂದೀಶ್, ತೀರ್ಥಹಳ್ಳಿ.

About the author / 

Raj Rao

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಉತ್ತರ ಪ್ರದೇಶ,ಬಿಹಾರ್ನಲ್ಲಿ ಇವಿಎಂ ಹ್ಯಾಕ್ – ಬೆಂಗ್ಳೂರಲ್ಲಿ ಸ್ಟ್ರಾಂಗ್ ರೂಂಗಳಿಗೆ ಸರ್ಪಗಾವಲು….!

    ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್‍ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್‍ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ…

  • ಸುದ್ದಿ

    ತಾಯಂದಿರು ಪರೀಕ್ಷೆ ಬರೆಯಲು ಹೋದಾಗ ಪೇದೆಗಳು ಮಾಡಿದ ಕೆಲಸವೇನು ಗೊತ್ತಾ?

    ಪರೀಕ್ಷೆ ಬರೆಯಲು ಹೋದ ತಾಯಂದಿರ ಮಕ್ಕಳನ್ನು ನೋಡಿಕೊಂಡ ಅಸ್ಸಾಂನ ಮಹಿಳಾ ಪೇದೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಸ್ಸಾಂನ ಮಹಿಳಾ ಪೇದೆಗಳು ಮಕ್ಕಳನ್ನು ಎತ್ತಿಕೊಂಡು ಅವರನ್ನು ನೋಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಸಾಕಷ್ಟು ಶೇರ್ ಆಗುತ್ತಿದ್ದು, ಅನೇಕರು ಪೇದೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂ ಪೊಲೀಸರು, ಇಬ್ಬರು ಮಹಿಳಾ ಪೇದೆಗಳು ಮಗುವನ್ನು ಎತ್ತಿಕೊಂಡು ಸಂತೈಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ತಾಯಿ ಯಾಗುವುದು ಒಂದು ಕ್ರಿಯೆ. ನೀವು ಅದನ್ನು…

  • ಸುದ್ದಿ

    ಎಸ್‌ಬಿಐ ಗ್ರಾಹಕರು ಗಮನಿಸಬೇಕಾದ ವಿಷಯ ; ಅಕ್ಟೋಬರ್ 1 ರಿಂದ ಬದಲಾಗಲಿದೆ ಈ 6 ನಿಯಮ,.!ತಪ್ಪದೇ ತಿಳಿದುಕೊಳ್ಳಿ,.!

    ನಿಮ್ಮ ಖಾತೆಯು ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಇದ್ದರೆ, ನೀವು ಈ ಸುದ್ದಿಯನ್ನು ಓದಬೇಕು. ವಾಸ್ತವವಾಗಿ, ಅಕ್ಟೋಬರ್ 1 ರಿಂದ ಎಸ್‌ಬಿಐ ಕೆಲವು ಸೇವಾ ಶುಲ್ಕದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಈ ಬದಲಾವಣೆಗಳು ದೇಶಾದ್ಯಂತ ಎಸ್‌ಬಿಐನ ಎಲ್ಲಾ 32 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳ ಅಡಿಯಲ್ಲಿ, ಬ್ಯಾಂಕ್ ಮಾಸಿಕ ಸರಾಸರಿ ಸಮತೋಲನವನ್ನು (MAB) ನಿರ್ವಹಿಸದಿದ್ದರೆ ದಂಡವನ್ನು 80 ಪ್ರತಿಶತದಷ್ಟು ಕಡಿಮೆಗೊಳಿಸಲಾಗುತ್ತದೆ. ಇದಲ್ಲದೆ, ಬ್ಯಾಂಕ್‌ನಿಂದ ಅಕ್ಟೋಬರ್ 1 ರಿಂದ…

  • ಸುದ್ದಿ

    ಬಿಳಿ ಎಕ್ಕದ ಗಿಡದಲ್ಲಿರುವ ಈ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು, ನೀವು ತಪ್ಪದೆ ತಿಳಿಯಬೇಕಾದ ವಿಷಯ,.!

    ಬಿಳಿ ಎಕ್ಕದ ಗಿಡದಲ್ಲಿ  ನಮಗೆ ತಿಳಿಯದ  ಔಷಧಿ ಗುಣಗಳು ತುಂಬಾನೇ ಇದೆ, ನಮ್ಮ ಮನೆ ಹತ್ತಿರ ಅಥವಾ ರೋಡ್ನಲ್ಲಿ ಒಂದು ಔಷಧಿ ಗಿಡ ತುಂಬಾ ಜನರಿಗೆ ಗೊತ್ತಿಲ್ಲ ನಮ್ಮಲ್ಲಿ ಈಗಲೂ ಕೂಡ ಇದನ್ನು ಹಳ್ಳಿಕಡೆ ಬಳಸುತ್ತ ಬಂದಿದ್ದಾರೆ.ಎಕ್ಕದ ಗಿಡದಲ್ಲಿ ಎರಡು ಪ್ರಭೇದಗಳಿವೆ ಅವು ಬಿಳಿ ಮತ್ತು ಕೆಂಪು ಗಿಡಗಳು ಎಕ್ಕದ ಗಿಡದ ಎಲೆ ವಿನಾಯಕ ಚತುರ್ಥಿ ಗೆ ಬೇಕಾದ ಶ್ರೇಷ್ಠ ವಾದ ಎಲೆ. ಈ ಒಂದು ಗಿಡ ಅಪ್ಪು ಸೈನಿಸಿ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು…

  • ಉಪಯುಕ್ತ ಮಾಹಿತಿ

    ನೀವೂ ಪ್ರತೀ ದಿವಸ ತಪ್ಪದೆ ಸ್ನಾನ ಮಾಡುತ್ತೀರಾ.!

    ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು ನಿಮಗೆ ಆಶ್ಚರ್ಯವಾಗುವಂತಹ ಸಂಗತಿ ಹೇಳಿದೆ. ಪ್ರತಿದಿನ ಸ್ನಾನ ಮಾಡೋರು ಗಮನ ಇಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗ್ತಾರಂತೆ. ಯಸ್, ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ…

  • ಸುದ್ದಿ

    ಪರ್ಸಿನಲ್ಲಿ ಸತ್ತವರ ಫೋಟೊ ಇಟ್ಟರೆ ಏನಾಗುತ್ತೆ ಗೊತ್ತಾ…?

    ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನಾಗ್ಬೇಕೆಂದು ಬಯಸ್ತಾನೆ. ಸದಾ ಪರ್ಸ್ ನಲ್ಲಿ ಹಣವಿರಬೇಕೆಂದು ಆಶಿಸುತ್ತಾನೆ. ಕೆಲವರು ಪರ್ಸ್ ನಲ್ಲಿ ವಿಶೇಷ ವಸ್ತುಗಳನ್ನಿಟ್ಟುಕೊಳ್ತಾರೆ. ಇದ್ರಿಂದ ಅವ್ರ ಪರ್ಸ್ ನಲ್ಲಿ ಹಣ ತುಂಬಿ ತುಳುಕುತ್ತಿರುತ್ತದೆ. ಕೆಲವೊಮ್ಮೆ ಪರ್ಸ್ ನಲ್ಲಿರುವ ವಸ್ತುವೇ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಪರ್ಸ್ ನಲ್ಲಿ ಯಾವ ವಸ್ತು ಇಡಬೇಕು? ಯಾವುದನ್ನು ಇಡಬಾರದು ಎಂಬುದನ್ನು ತಿಳಿದಿರಬೇಕು. ಪರ್ಸ್ ನಲ್ಲಿ ಎಂದೂ ಹಳೆಯ ಕಾಗದಗಳನ್ನು ಇಡಬಾರದು. ಇದು ಒಳ್ಳೆಯದಲ್ಲ. ಲಕ್ಷ್ಮಿಗೂ ಇದು ಇಷ್ಟವಾಗುವುದಿಲ್ಲ. ಹಾಗಾಗಿ ಪರ್ಸ್ ಸ್ವಚ್ಛವಾಗಿರುವಂತೆ…