ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ವರ್ಷಗಳಿಂದ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ ವರ್ಷ ಭಾರತದಲ್ಲೆ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೆ ಸ್ಥಾನ ಪಡೆದುಕೊಂಡ ಛತ್ತೀಸ್ಗಢದ ಅಂಬಿಕಾಪುರ ಹೊಸತೊಂದು ಪ್ರಯತ್ನದ ಮೂಲಕ ವಿಶ್ವದ ಗಮನ ಸೆಳೆದಿದೆ.

ಹೌದು ಛತ್ತಿಸ್ಗಢದ ಅಂಬಿಕಾಪುರ ಸ್ವಚ್ಛತಾ ಕಾರ್ಯಗಳಲ್ಲಿ ಬೇರೆ ನಗರಗಳಿಗಿಂತ ಬಹಳ ಮುಂದುವರೆದಿದೆ. ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಗಳಿಸಿದೆ, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಗರದಲ್ಲಿ ರಸ್ತೆ ನಿರ್ಮಿಸುವ ಮೂಲಕ ತ್ಯಾಜ್ಯ ನಿರ್ವಹಣೆಯ ಹೊಸ ಯೋಜನೆಗೆ ಮಾದರಿಯಾಗಿತ್ತು. ಇದೀಗ ಕಸ ವಿಲೇವಾರಿಗೆ ಹೊಸ ಯೋಜನೆ ರೂಪಿಸಿರುವ ನಗರ ಕಸ ಕೊಡಿ ಆಹಾರ ಸ್ವೀಕರಿಸಿ ಎಂಬ ವಿನೂತನ ಆಫರ್ ನೀಡಿದೆ.

ಕಸ ವಿಲೇವಾರಿ ಸಮಸ್ಯೆಯನ್ನು ಕಡಿಮೆ ಮಾಡಲು ವಿನೂತನ ಯೋಜನೆಯೊಂದನ್ನು ಶುರುಮಾಡಿದ್ದಾರೆ, ಅದೇನೆಂದರೆ, ಗಾರ್ಬೇಜ್ ಹೋಟೆಲ್. ಈ ಹೋಟೆಲ್ ನ ವಿಶೇಷತೆ ಏನೆಂದರೆ, ಇಲ್ಲಿ ಹಣದ ಬದಲಿಗೆ ಕಸವನ್ನು ಪಡೆಯಲಾಗುತ್ತದೆ. ಉದಾಹರಣೆಗೆ 500ಗ್ರಾಂ ಕಸ ತಂದವರಿಗೆ ತಿಂಡಿ, ಹಾಗು 1ಕೆಜಿ ಕಸ ತಂದವರಿಗೆ ಊಟವನ್ನು ಇಲ್ಲಿ ಉಚಿತವಾಗಿ ಕೊಡುತ್ತಾರಂತೆ.

ಈ ಹೋಟೆಲ್ ಛತ್ತೀಸ್ಗಢದ ಅಂಬಿಕಾಪುರದಲ್ಲಿ ನಗರದ ಬಸ್ ನಿಲ್ದಾಣದ ಬಳಿ ಆರಂಭಿಸಬೇಕೆಂದು ಅಂಬಿಕಾಪುರದ ಪಾಲಿಕೆ ತೀರ್ಮಾನಿಸಿದೆ. ಈ ರೀತಿ ಮಾಡುವುದರಿಂದ ಎಲ್ಲೆಂದರಲ್ಲಿ ಕಸ ಹಾಕುವುದು ಕಡಿಮೆಯಾಗುತ್ತದೆ, ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಹಾಯವಾಗುತ್ತದೆ.ಸಧ್ಯ ಈ ಯೋಜನೆ ಕಸ, ಪೇಪರ್ ಆಯುವವರಿಗೆ ಮೀಸಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಪಾಲಿಕೆ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…
ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ, ಪಾಕಿಸ್ತಾನದ ಬಾಲಕೋಟ್ನಲ್ಲಿ ನಡೆಸಿದ ಏರ್ಸ್ಟ್ರೈಕ್ ಬಗ್ಗೆ ಓವರ್ಸೀಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ ಪ್ರಶ್ನೆ ಎತ್ತಿದ್ದಾರೆ. 300 ಜನರನ್ನ ಕೊಂದಿದ್ದರೆ ಸರಿ. ಆದ್ರೆ ಅದಕ್ಕೆ ಸಾಕ್ಷಿ ಕೊಡ್ತೀರಾ? ಅದನ್ನು ಪ್ರೂವ್ ಮಾಡ್ತೀರಾ? ಎಂದು ಕೇಳಿದ್ದಾರೆ. ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮುಂಬೈ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಅಲ್ಲಿಂದ ಬಂದ 8 ಮಂದಿ ಇಲ್ಲಿ ಕೃತ್ಯ…
ನಾನು ಜೆಡಿಎಸ್ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ…
ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್ ಹೈಪರ್ಲೂಪ್ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್ ಸಮ್ಮಿಟ್ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ವರ್ಜಿನ್ ಹೈಪರ್ಲೂಪ್ ಒನ್ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.
2019 ರ ಜನವರಿಯಿಂದ ಮಾರ್ಚ್ ವೇಳೆ ವಿವಾಹವಾಗಬೇಕೆಂದು ಪ್ಲಾನ್ ಮಾಡಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜನತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಶಾಕ್ ನೀಡಿದೆ. ಕುಂಭ ಮೇಳದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ವಿವಾಹದ ದಿನಾಂಕ ನಿಗದಿಯಾಗಿದ್ದರೆ ಅದನ್ನು ಮುಂದೂಡಿ ಇಲ್ಲವೇ ಸ್ಥಳ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದೆ. ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯ ಹಾಗೂ ಪುಷ್ಯ ಪೂರ್ಣಿಮಾದಂದು ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹಾಗೆಯೇ ಫೆಬ್ರವರಿಯಲ್ಲಿ ಮೌನಿ ಅಮಾವಾಸ್ಯೆ, ಬಸಂತ ಪಂಚಮಿ ಹಾಗೂ…