ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ ಮನಸು ಮಾಡದವರು.

ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ ಮಿಡಿಯುವವರು, ದುಡಿಯುವವರು.
ರಾಜ್ ಬಿ ಶೆಟ್ಟಿ ಎರಡನೇ ವರ್ಗದ ನಿರ್ದೇಶಕ. ಅವರಿಗೆ ಸಿನಿಮಾ ಸೋಲು ಗೆಲುವಿನ ಭಯವಿಲ್ಲ. ತಾವು ಬರೆದ, ತಾವು ನಂಬಿದ ಕಥೆಯನ್ನು ತಮ್ಮ ಮನ ಮುಚ್ಚುವಂತೆ ಮುಂದೆ ಜನ ಮೆಚ್ಚೇ ಮೆಚ್ಚುತ್ತಾರೆ ಎಂಬ ಆಶಯದಲ್ಲಿ ಸಿನಿಮಾ ಮಾಡಿದ್ದಾರೆ. ಮತ್ತು ಆ ನಿಟ್ಟಿನಲ್ಲಿ ಭಾಗಶಃ ಗೆದ್ದಿದ್ದಾರೆ.

ಇಲ್ಲಿ ರಾಜ್ ಒಬ್ಬ ನಿರ್ದೇಶಕನಾಗಿ ಗೆಲ್ಲುವುದರ ಜೊತೆಗೆ ಒಬ್ಬ ಬರಹಗಾರನಾಗಿಯು ಬೆರಗು ಮೂಡಿಸುತ್ತಾರೆ.
ಪ್ರತಿ ಪಾತ್ರಕ್ಕೆ ಅವರು ನೀಡಿರುವ ಸಹಜ ಶೈಲಿಯ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ. ಯಾವೆಲ್ಲ ಕಲಾವಿದರು ಹಾಸ್ಯ ಪಾತ್ರಗಳಿಗೆ ಲಾಯಕ್ಕು ಎಂದು ಭಾವಿಸಲಾಗಿತ್ತೋ ಅವರನ್ನೆಲ್ಲ ಗಂಭೀರ ಪಾತ್ರಗಳಲ್ಲಿ ತೋರಿಸಿ ಗೆಲ್ಲುವ ಮೂಲಕ ಒಬ್ಬ ಕ್ರಿಯಾಶೀಲ ನಿರ್ದೇಶಕ ಯಾವುದೇ ಕಲಾವಿದನ ಇಮೇಜ್ ಬದಲಿಸಬಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ..
ಎಲ್ಲಕ್ಕಿಂತ ಹೆಚ್ಚಾಗಿ ‘ಒಂದು ಮೊಟ್ಟೆಯ ಕಥೆ’ಯಲ್ಲಿ ಕೀಳರಿಮೆ ಹೊಂದಿದ್ದು, ಮಾತನಾಡಲು ಅಂಜುವ ಹಾಸ್ಯಮಯ ಪಾತ್ರಕ್ಕೆ ಜೀವ ತುಂಬಿದ್ದ ರಾಜ್, ಇಲ್ಲಿ ತಮ್ಮ ಇಮೇಜ್ ಅಕ್ಷರಶಃ ಬದಲಾಯಿಸಿದ್ದಾರೆ. ಅವರ ಉಗ್ರರೂಪ ಎಂಥವರನ್ನಾದರೂ ಅರೆಕ್ಷಣ ಬೆಚ್ಚಿ ಬೀಳಿಸುವಂತಿದೆ.
ಸಿನಿಮಾದಲ್ಲಿ ಕ್ರೈಂ ತುಂಬಿದ್ದರೂ, ಅಂಥ ಸನ್ನಿವೇಶಗಳಲ್ಲಿ ರಕ್ತ ಸಿಕ್ತ ದೃಶ್ಯಗಳನ್ನು ಜಾಣ್ಮೆಯಿಂದ ಮರೆಮಾಚಿ, ಧ್ವನಿ, ನೆರಳು, ಕ್ಯಾಮೆರಾ ಮೂಮೆಂಟ್ ಮೂಲಕವೇ ಆ ರೌದ್ರವನ್ನು ನೋಡುಗರಿಗೆ ಫೀಲ್ ಮಾಡಿಸುತ್ತಾರೆ. ಮತ್ತು ಅಂಥ ದೃಶ್ಯವನ್ನು ನೋಡುಗರಿಗೆ ಸಹ್ಯ ಎನಿಸುವಂತೆ ಮಾಡಿದ್ದಾರೆ. ಒಬ್ಬ ನಟನಾಗಿಯು ರಾಜ್ ಬಿ ಶೆಟ್ಟಿ ಪರಕಾಯ ಪ್ರವೇಶ ಮಾಡಿದ್ದಾರೆ. ರಿಷಭ್ ಶೆಟ್ಟಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಆಯ್ಕೆ ಸಮರ್ಥ, ಅಭಿನಯ ಅದ್ಭುತ.
ಕನ್ನಡದಲ್ಲಿ ಕ್ರಿಯಾಶೀಲ ಕಥೆ ಮತ್ತು ನಿರ್ದೇಶಕರನ್ನು ಹುಡುಕುತ್ತಿದ್ದ ಸಿನಿಮಾಪ್ರಿಯರಿಗೆ ರಾಜ್ ಬಿ ಶೆಟ್ಟಿ ಹೊಸ ಆಶಾಕಿರಣ. ಒಂದು ಕಡೆ ಸಿನಿಮಾಸೂತ್ರಗಳನ್ನಿಟ್ಟುಕೊಂಡು ಅದದೇ ಹೀರೋಯಿಸಂ, ಬಿಲ್ಡಪ್, ಕೌಂಟರ್ ಡೈಲಾಗ್ ಆಧಾರಿತ ನಿರ್ದೇಶಕರು ಹೇರಳವಾಗಿರುವಾಗಿ, ಅದೆಲ್ಲದರ ಹೊರತಾಗಿಯು ಸಿನಿಮಾ ಮಾಡಬಲ್ಲೆ, ಮಾಡಿ ಗೆಲ್ಲಬಲ್ಲೆ ಎಂಬ ಮನೋಭಾವದ ವಿರಳ ನಿರ್ದೇಶಕರ ಸಾಲಿನಲ್ಲಿ ರಾಜ್ ನಿಲ್ಲುತ್ತಾರೆ.
ರಾಜ್ ಅವರಿಗೆ ಕಥನ ಹೇಳುವ ಶೈಲಿ ಚೆನ್ನಾಗಿ ಒಲಿದಿದೆ. ಒಂದು ಸಾಮಾನ್ಯ ಕಥೆಯನ್ನು ಹೊಸತನದ ನಿರೂಪಣಾ ಶೈಲಿಯಿಂದ ವಿಶೇಷವಾಗಿ ತೋರಿಸುತ್ತಾರೆ.
‘ಗರುಡ ಗಮನ ವೃಷಭ ವಾಹನ’ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದಾ ಎಂದು ಕೇಳಿದರೆ ನನ್ನ ಉತ್ತರ ಇಷ್ಟೇ.. ಅದು ನೋಡುಗರ ಅಭಿರುಚಿಯನ್ನು ಅವಲಂಬಿಸಿದೆ. ಕಮರ್ಷಿಯಲ್ ಸೂತ್ರಗಳ ಸಿನಿಮಾ ಪ್ರಿಯರಿಗೆ ಇದು ರುಚಿಸದಿದ್ದರೆ ಅಚ್ಚರಿಯಲ್ಲ. ಯಾವ ಸಿನಿಮಾಗಳು ಲೋಪ ದೋಷಗಳಿಗೆ ಹೊರತಲ್ಲ. ಅಂತೆಯೇ ಇಲ್ಲೂ ದ್ವಿತೀಯಾರ್ಧ ಸ್ವಲ್ಪ ಸುದೀರ್ಘವೆನಿಸುತ್ತದೆ. ಆದರೆ ಎಲ್ಲರ ನಿರೀಕ್ಷೆ ಮೀರಿದ ರೀತಿಯಲ್ಲಿ ಕಥೆ ಸಾಗುವುದರಿಂದ ಅಲ್ಲಲ್ಲಿ ವಾವ್ ಫ್ಯಾಕ್ಟರ್ ಗಳಿದೆ. ಮತ್ತದು ಇಷ್ಟವಾಗುತ್ತೆ.
ಆದರೆ ರಾಜ್ ಬಿ ಶೆಟ್ಟಿ ಒಂದಷ್ಟು ಅದ್ಭುತ ಸಿನಿಮಾಗಳನ್ನು ಕೊಡಬಲ್ಲ ಕನಸು ಮತ್ತು ಕಸುವನ್ನು ಹೊಂದಿರುವ ನಿರ್ದೇಶಕ ಎಂಬುದು ಸತ್ಯ.

ಅವರ ಸಿನಿಮಾಪ್ರೀತಿಗೆ, ಬರಹಕ್ಕೆ ಎಂಥವರಾದರೂ ಅಭಿಮಾನಿಯಾಗುತ್ತಾರೆ.
ಕ್ಯಾಮೆರಾ ವರ್ಕ್, ಎಡಿಟಿಂಗ್ ಸಕತ್ತಾಗಿ ಬ್ಲೆಂಡ್ ಆಗಿದೆ.
ಮಿಥುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತ ಬೇರೆಯದೇ ಫೀಲ್ ಕೊಡುತ್ತದೆ, ಕಾಡುತ್ತದೆ, ಆವರಿಸುತ್ತದೆ.
ಇಂಥದ್ದೊಂದು ಕಥೆ ನಂಬಿ ಹಣ ಹೂಡಿದ ನಿರ್ಮಾಪಕರಿಗೂ ಮೆಚ್ಚುಗೆ ಸಲ್ಲಲೇಬೇಕು.
ಮಲಯಾಳಂ, ತಮಿಳಿನ ಪ್ರಯೋಗಾತ್ಮಕ ಚಿತ್ರಗಳನ್ನು ಮೆಚ್ಚಿ ಹೊಗಳುವವರಿಗೆ ಈ ಚಿತ್ರ ಹೆಚ್ಚು ಆಪ್ತ ಎನಿಸುತ್ತದೆ. ಮತ್ತು ನಾವು ಈಗ ಪರಭಾಷಾ ನಿರ್ದೇಶಕರ ಅಭಿಮಾನಿಗಳಿಗೂ ಈ ಚಿತ್ರವನ್ನು ರೆಫರ್ ಮಾಡಬಹುದು. ಆ ಬಳಿಕ ಅವರು ಸಹ ರಾಜ್ ಅವರನ್ನು ಹೊಗಳುವುದನ್ನು ಕಂಡು ಸಂಭ್ರಮಿಸಬಹುದು.
ಒಮ್ಮೆ ನೋಡಿ, ಹೊಸತನಕ್ಕೆ ಬೆಂಬಲ ನೀಡಿ.
Good luck and congratulations for the tremendous success Raj B Shetty
ಧನ್ಯವಾದಗಳೊಂದಿಗೆ
ಟಿ.ಜಿ.ನಂದೀಶ್, ತೀರ್ಥಹಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೇಷ ರಾಶಿ ಭವಿಷ್ಯ (Thursday, December 2, 2021) ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಫಿಟ್ ಆಗಿ ಉಳಿಯಲು ನಿಯಮಿತವಾಗಿ ಹೆಲ್ತ್ ಕ್ಲಬ್‌ಗೆ ಭೇಟಿ ನೀಡಿ. ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಇದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿ ನಿಮ್ಮ ಬಹುನಿರೀಕ್ಷಿತ ಕಲ್ಪನೆಗಳನ್ನು ಸಾಕ್ಷಾತ್ಕಾರ ಮಾಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ಇಂದು ನಿಮಗೆಲ್ಲರಿಗೂ ತುಂಬ ಸಕ್ರಿಯವಾದ ಮತ್ತು…
ಅಪ್ಪಿತಪ್ಪಿಯೂ ಈ ನಾಲ್ಕು ಆಹಾರ ಸೇವಿಸಬೇಡಿ,ಕಿಡ್ನಿ ಸ್ಟೋನ್ ಗ್ಯಾರೆಂಟಿ.ಈಗಲೆ ನೋಡಿ. ನಮಸ್ಕಾರ ವೀಕ್ಷಕರೇ ಕೆಲವೊಂದು ಆಹಾರ ಪದಾರ್ಥಗಳನ್ನು ತಿಂದರೆ ಕಿಡ್ನಿ ಸ್ಟೋನ್ ಆಗುತ್ತದೆ ಮಾಹಿತಿಯನ್ನು ತಿಳಿದುಕೊಳ್ಳೋಣ ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಇವು ರಕ್ತವನ್ನು ಹಾಳು ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ ಮೂತ್ರದ ಮೂಲಕ ವರ ಹಾಕಿ ಆಹಾರಗಳ ಸಮತೋಲನವನ್ನು ಕಾಪಾಡುತ್ತವೆ ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಪಟಿಕ ರೂಪದಲ್ಲಿ ಮಾರ್ಪಟ್ಟು ಗಣವನ್ನು ವಸ್ತುವಾಗಿ ಪರಿವರ್ತನೆಯಾಗುತ್ತದೆ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿಸ್ಟೋನ್…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 1 ಫೆಬ್ರವರಿ, 2019 ನೀವು ಇಂದು ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು…
ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.
ನಾವು ಮಧ್ಯಾಹ್ನ ಅಥವಾ ರಾತ್ರಿ ಮಲಗುವಾಗ ನಮ್ಮ ಕೈ ಮೇಲೆ ತಲೆನ ಹಾಕಿಕೊಂಡು ಮಲಗುತ್ತೇವೆ ಅದು ನಿಮಗೂ ಗೊತ್ತು, ನಿದ್ದೆ ಮನುಷ್ಯನಿಗೆ ವರದಾನವಾಗಿದೆ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಕೆಲಸ ಮಾಡುವವರು ನಿದ್ರೆ ಕಡೆ ಗಮನ ಕೊಡುತ್ತಿಲ್ಲ ತುಂಬಾ ಕೆಲಸದ ಕಡೆ ಗಮನ ಕೊಡುತ್ತಿದ್ದಾರೆ ಇದರಿಂದ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಇದರಿಂದ ರಾತ್ರಿ ಮಲಗುವ ನಿದ್ದೆ ಸಾಕಾಗುವುದಿಲ್ಲ ಹಾಗಾಗಿ ಮಧ್ಯಾಹ್ನವೂ ಕೂಡ ಮಲಗುತ್ತಾರೆ, ಮತ್ತು ಹೆಚ್ಚಾಗಿ ನಿದ್ರೆ ಮಾಡುವವರನ್ನು ಸೋಂಬೇರಿಗಳು ಅಂತಾನೂ ಕರೆಯುತ್ತಾರೆ….
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸೇರಿ ನಾಲ್ಕು ಸಾರಿಗೆ ನಿಗಮಗಳ ನೌಕರರು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.ಇದೀಗ ಅವರು ಪದಯಾತ್ರೆ + ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ಪ್ರತಿಭಟನೆ ಹೇಗೆ ನಡೆಯುತ್ತಿದೆ? ಏಪ್ರಿಲ್ 8ರಿಂದ ಚಿತ್ತದುರ್ಗದಿಂದ ಬೆಂಗಳೂರಿಗೆ ಪದಯಾತ್ರೆ ಆರಂಭ ಏಪ್ರಿಲ್ 21ಕ್ಕೆ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ನಂತರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಯೋಜನೆ ನೌಕರರ ಪ್ರಮುಖ ಬೇಡಿಕೆಗಳು ಸಾರಿಗೆ ನೌಕರರು ಸರ್ಕಾರದ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳು: 38 ತಿಂಗಳ…