ಸುದ್ದಿ

FlipCart Big Billion Days Offer; 50,000 ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ,.!

38

ಸಾಲು ಸಾಲು ಹಬ್ಬಗಳು ಬರುತ್ತಿರುವುದು ಮತ್ತು ಬಿಗ್ ಬಿಲಿಯನ್ ಡೇಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ 50,000 ಕ್ಕೂ ಅಧಿಕ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಫ್ಲಿಪ್‍ಕಾರ್ಟ್‍ನ ಸಪ್ಲೈ ಚೇನ್, ಲಾಜಿಸ್ಟಿಕ್ ಮತ್ತು ಗ್ರಾಹಕ ಬೆಂಬಲ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಸೃಜಿಸಿದೆ.

ಇದಲ್ಲದೇ, ಬಿಬಿಡಿ ಅಂದರೆ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಮಾರಾಟ ಜಾಲದಲ್ಲಿ ಶೇ.30 ರಷ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ವರ್ಷದ ದೊಡ್ಡ ಕಾರ್ಯಕ್ರಮವಾದ ಬಿಬಿಡಿ ಸೆಪ್ಟಂಬರ್29 ಕ್ಕೆ ಆರಂಭವಾಗಿ ಅಕ್ಟೋಬರ್ 4 ಕ್ಕೆ ಅಂತ್ಯಗೊಳ್ಳಲಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಗ್ರಾಹಕರು ಈ ಇ ಕಾಮರ್ಸ್ ಮಾರ್ಕೆಟ್‍ಪ್ಲೇಸ್‍ನಲ್ಲಿ ಶಾಪಿಂಗ್ ಮಾಡಲಿದ್ದಾರೆ.2014 ರಲ್ಲಿ ಆರಂಭವಾದ ಈ ಬಿಗ್ ಬಿಲಿಯನ್ ಡೇ ಸಂದರ್ಭದಲ್ಲಿ ಫ್ಲಿಪ್‍ಕಾರ್ಟ್‍ನ ಅತಿದೊಡ್ಡ ಉದ್ಯೋಗ ಸೃಷ್ಟಿ ಇದಾಗಿದೆ.

ಫ್ಲಿಪ್‍ಕಾರ್ಟ್ ವಿಶ್‍ಮಾಸ್ಟರ್ಸ್‍ನಿಂದ ವೇರ್‌ಹೌಸ್‌ಗಳಲ್ಲಿನ ಸಿಬ್ಬಂದಿಗೆ, ಮದರ್ ಹಬ್ಸ್ ಮತ್ತು ಡೆಲಿವರಿ ಹಬ್‌ವರೆಗಿನ ಪೂರ್ತಿ ಸಪ್ಲೈ ಚೇನ್‍ನಲ್ಲಿ ನೇರ ಉದ್ಯೋಗಗಳು ಇರಲಿವೆ. ಕೈನಲ್ಲಿ ಬಳಸುವ ಸಾಧನಗಳು, ಪಿಒಎಸ್ ಯಂತ್ರಗಳು, ಸ್ಕ್ಯಾನರ್‌ಗಳು, ವಿವಿಧ ಮೊಬೈಲ್ ಅಪ್ಲಿಕೇಶನ್‍ಗಳನ್ನು ಬಳಸುವ ಬಗ್ಗೆ ಸಿಬ್ಬಂದಿಗೆಲ್ಲಾ ಪೂರಕ ತರಬೇತಿಯನ್ನು ನೀಡಲಾಗಿರುತ್ತದೆ. ಇದಲ್ಲದೇ, ಪ್ರಮುಖವಾಗಿ ಗ್ರಾಹಕ ಸೇವೆ, ವಿತರಣೆ ಮತ್ತು ಅಳವಡಿಕೆ (ಇನ್‍ಸ್ಟಾಲೇಶನ್) ಕುರಿತು ತರಬೇತಿಯನ್ನು ಹೊಂದಿರುತ್ತಾರೆ.

ದೇಶಾದ್ಯಂತ ಇರುವ ಫ್ಲಿಪ್‍ಕಾರ್ಟ್‍ನ ಲಕ್ಷಾಂತರ ಮಾರಾಟ ಪಾಲುದಾರರಿಗೆ ಹಬ್ಬದ ಸಂದರ್ಭದಲ್ಲಿ ಅವರಿಗೆ ಎದುರಾಗುವ ಬೇಡಿಕೆಗಳನ್ನು ಯಾವ ರೀತಿ ಪೂರೈಸಬೇಕು ಎಂಬುದು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಅವರಿಗೂ ಪ್ರತ್ಯೇಕ ವಿಧಾನಗಳಲ್ಲಿ ತರಬೇತಿಯನ್ನು ನೀಡಲಾಗಿದೆ. ಇವರಿಗೆ ಪ್ರಮುಖವಾಗಿ ವೇರ್‌ಹೌಸ್ ಮ್ಯಾನೇಜ್‍ಮೆಂಟ್, ಪ್ಯಾಕೇಜಿಂಗ್ ಸೇರಿದಂತೆ ಹಲವು ವಿಧದ ತರಬೇತಿಯನ್ನು ನೀಡಲಾಗಿದೆ.|

ದೇಶಾದ್ಯಂತ ಹೊಸ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಮೂಲಕ ಮಾರಾಟಗಾರರ ವ್ಯವಹಾರದ ಮಟ್ಟವನ್ನು ಹೆಚ್ಚಿಸುವುದು, ಸ್ಥಳೀಯ ಮಟ್ಟದ ಉದ್ಯಮಗಳಿಗೆ ಆದ್ಯತೆ ನೀಡುವುದು ಹಾಗೂ ಆರ್ಥಿಕತೆಯನ್ನು ಸದೃಢಗೊಳಿಸುವುದು ಫ್ಲಿಪ್‍ಕಾರ್ಟ್‍ನ ಗುರಿಯಾಗಿದೆ ಎಂದು ತಿಳಿಸಿದರು.ಇದಲ್ಲದೇ, ಬಿಗ್ ಬಿಲಿಯನ್ ಡೇಗಳ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವೆಂಡರ್‌ಗಳಾದ ಹೌಸ್‍ಕೀಪಿಂಗ್, ಭದ್ರತೆ, ಸಾರಿಗೆಯಂತಹ ಸಂಸ್ಥೆಗಳು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಅವಕಾಶವಿದೆ. ಈ ಮೂಲಕ ಫ್ಲಿಪ್‍ಕಾರ್ಟ್ ಪರೋಕ್ಷ ಉದ್ಯೋಗಗಳನ್ನೂ ಸೃಷ್ಟಿಸಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಮಾತ್ರವಲ್ಲ ಬಸ್, ರೈಲು, ವಿಮಾನ ಟಿಕೆಟ್ ಸಿಗುತ್ತೆ…!ತಿಳಿಯಲು ಇದನ್ನು ಓದಿ..

    ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇನ್ನುಮುಂದೆ ಬಸ್, ರೈಲು ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಿದ್ಯುತ್ ಬಿಲ್ ಪಾವತಿ ಹಾಗೂ ಮೊಬೈಲ್ ರಿಚಾರ್ಜ್ ಸೇವೆಗಳು ಲಭ್ಯವಾಗಲಿವೆ. ರಾಜ್ಯ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಬುಧವಾರ (ಆ. 2) ಚಾಲನೆ ದೊರೆಯಲಿದೆ.

  • ಸುದ್ದಿ

    ಕಾರ್ಖಾನೆಯ ಕ್ಯಾಂಟೀನ್ ಊಟ ತಿಂದು 100ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ..!

    ಕಾರ್ಖಾನೆಯ ಕ್ಯಾಂಟೀನ್ ಆಹಾರ ಸೇವಿಸಿದ 100ಕ್ಕೂ ಹೆಚ್ಚು ಮಹಿಳಾ ನೌಕರರು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ತಾಲ್ಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಅಂಚೇಪಾಳ್ಯದ ಬಳಿ ಇರುವ ಇಂಡೋ ಸ್ಪಾನಿಶ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನೌಕರರಿಗೆ ನಿನ್ನೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಅನ್ನ ಮತ್ತು ಮೊಳಕೆಕಾಳು ಸಾಂಬಾರ್ ನೀಡಲಾಗಿತ್ತು. ಊಟ ಮುಗಿದ ಕೆಲವು ನಿಮಿಷಗಳ ನಂತರ 40ಕ್ಕೂ ಹೆಚ್ಚು ಮಹಿಳೆಯರು ಹೊಟ್ಟೆ ನೋವೆಂದು ಒದ್ದಾಡಿದ್ದಾರೆ….

  • ಸುದ್ದಿ

    ಆನ್‌ಲೈನ್‌ನಲ್ಲಿ ಪಿಎಫ್‌ ಕ್ಲೇಮ್ ಮಾಡಿಕೊಳ್ಳಲು ಈಗ ಸುಲಭ ಅಂದ್ರೆ ಸುಲಭ..! ಹೇಗೆ ಅಂತಿರಾ..?

    ಉದ್ಯೋಗಿಗಳಿಗೆ ನಿವೃತ್ತಿ ನಂತರ ಅನುಕೂಲವಾಗಲೆಂದು ಬಹಳಷ್ಟು ಸಂಸ್ಥೆಗಳು ಪಿಎಫ್ ಸೌಲಭ್ಯವನ್ನು ತಮ್ಮ ಕಂಪನಿಯಲ್ಲಿ ನೀಡುತ್ತಿವೆ. ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಿಂದ ಪ್ರಾವಿಡೆಂಟ್‌ ಫಂಡ್‌ನ ಕಾರ್ಯಗಳು ನೆರವೇರುತ್ತಿದ್ದು, ಒಟ್ಟು ಮೊತ್ತಕ್ಕೆ ನಿಗದಿಪಡಿಸಿದ ಬಡ್ಡಿ ಸೇರಿಸಿ ಸರ್ಕಾರ ಹಣವನ್ನು ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿ ಸ್ಥಾಪನೆಯಾದ ಇಪಿಎಫ್‌ಒ ಉದ್ಯೋಗಿಗಳಿಗೆ ಪಿಎಫ್‌ ಸೌಲಭ್ಯವನ್ನು ನೀಡುತ್ತಿದೆ. ಉದ್ಯೋಗಿ ತನಗೆ ಅಗತ್ಯವಿದ್ದಾಗ ಅಥವಾ ನಿವೃತ್ತಿಯ ನಂತರ ಪಿಎಫ್‌ ಹಣವನ್ನು ಪಡೆಯಬಹುದಾಗಿದೆ. ಇನ್ನು, ಪಿಎಫ್‌ ಹಣವನ್ನು ಪಡೆಯುವುದು ಸಹ ಈಗ ಬಹಳಷ್ಟು ಸುಲಭ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ಶುಭ ದಿನದಂದು ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(27 ಡಿಸೆಂಬರ್, 2018) ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದ ಸದಸ್ಯರು ನಿಮ್ಮ ಜೀವನದಲ್ಲಿ ಒಂದು…

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

  • ರಾಜಕೀಯ

    ನರೇಂದ್ರ ಮೋದಿಯನ್ನು ಕೆಣಕಿದ ಮೋಹಕ ತಾರೆ ರಮ್ಯಾ!ಟ್ವಿಟ್ಟರ್ನಲ್ಲಿ ಟೀಕೆಗಳ ಸುರಿಮಳೆ…

    ಕನ್ನಡ ಸಿನಿಮಾ ತಾರೆ ಮತ್ತು ಕಾಂಗ್ರೆಸ್ ಯುವ ನಾಯಕಿ ರಮ್ಯಾರವರು ತಮ್ಮ ಟ್ವಿಟ್ಟರ್’ನ ಟ್ವಿಟ್’ಗಳ ಮೂಲಕ ಪೇಚಿಗೆ ಸಿಲುಕುವುದು ಸಾಮಾನ್ಯ.