ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಹಣವನ್ನು ಸಾಲ ನೀಡಿ ದುಬಾರಿ ಬಡ್ಡಿ ನೀಡಬೇಂಕು ಎಂದು ಒತ್ತಾಯಿಸುತ್ತಿದ್ದ ನಗರದ ಏಳು ಪೈನಾನ್ಸ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಲಲಿತ್ ಕಾನೂಗ (52), ಆಶೀಸ್ (28) ಹಾಗೂ ಸಂಜಯ್ ಸಚ್ ದೇವ್ (35) ಚಂದ್ರು (55), ಓಂ ಪ್ರಕಾಶ್ (56) ಹಾಗೂ ಮಾತಾ ಪ್ರಸಾದ್ (34) ಬಂಧಿತ ಆರೋಪಿಗಳು.
ಲೇವಾದೇವಿಗಾರರು ಹಾಗೂ ಅವರ ಏಜೆಂಟ್ ಗಳು ಹಣವನ್ನು ಸಾಲ ನೀಡಿ, ಬಳಿಕ ಶೇ.20ರಿಂದ 25ರಷ್ಟು ದುಬಾರಿ ಬಡ್ಡಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಹಲವರು ದೂರು ದಾಖಲಿಸಿದ್ದರು.
ನಂತರ ಪೊಲೀಸರು ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದರು. ನಿನ್ನೆ ಕಾನೂನು ಬಾಹಿರವಾಗಿ ಹಣದ ವ್ಯವಹಾರ ನಡೆಸುತ್ತಿದ್ದ ಕಲಾಸಿಪಾಳ್ಯದ ಆಶಿಶ್ ಮೆಟಲ್ಸ್, ಶಾರದ ಟಾಕೀಸ್ ಹಿಂಭಾಗದ ರಾಜೀವ್ ಫೈನಾನ್ಸ್ ಹಾಗೂ ಶಾಂತಿನಗರದ ಸಂಜಯ್ ಫೈನಾನ್ಸ್, ಜೆಪಿ ನಗರದ ರಾಜಾಸಾಬ್ ಫೈನಾನ್ಸ್ ಮತ್ತು ಸ್ಕಂದ್ ಎಂಟರ್ ಪ್ರೈಸೆಸ್, ಹನುಮಂತ ನಗರದ ವೈಷ್ಣವಿ ಹೋಲ್ಡಿಂಗ್ ಸೇರಿ ಒಟ್ಟು ಏಳು ಕಚೇರಿಗಳನ್ನು ಶೋಧಿಸಿ, ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವ್ಯವಹಾರಕ್ಕೆ ಸಂಬಂಧಿಸಿದಂತೆ 566 ಚೆಕ್ ಗಳು, 197 ಆನ್ ಡಿಮ್ಯಾಂಡ್ ನೋಟುಗಳು ಹಾಗೂ 9,03,200 ರೂ. ನಗದು ಮತ್ತು 3 ಸೇಲ್ ಡೀಡ್ ಗಳು, 28 ಅಗ್ರಿಮೆಂಟ್ ಗಳು ಸೇರಿ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟ್ಯಾಪ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಮಾರುಕಟ್ಟೆ, ಪುಟ್ಟೇನಹಳ್ಳಿ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗವಿಮಠದ ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ರವಿ ಚನ್ನಣ್ಣನವರ್, ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಕೊಪ್ಪಳ ಅಂದು ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಜಾತ್ರೆಯಿಂದ ದಕ್ಷಿಣ ಕಾಶಿ ಎಂದೆನಿಸಿದೆ. ಈ ಹಿಂದೆ ಯಾಗಗಳು ನಡೆಯುತ್ತಿದ್ದವಂತೆ, ಅದರ ಮೂಲ ಉದ್ದೇಶ ಜನರ ಹಿತವಾಗಿತ್ತಂತೆ. ಈಗ ಲಕ್ಷ ದೀಪೋತ್ಸವದ ಮೂಲಕ ದೈವದ ಸಾಕ್ಷಾತ್ಕಾರ, ಲಕ್ಷ ವೃಕ್ಷ ನೆಡುವ ಮೂಲಕ ಪ್ರಕೃತಿ ಸಾಕ್ಷಾತ್ಕಾರವಾಗುತ್ತಿದೆ….
ರಾಕಿಂಗ್ ಸ್ಟಾರ್ ಯಶ್ ಎಂದರೆ ನಮ್ಮೆಲ್ಲರ ಅಚ್ಚು ಮೆಚ್ಚಿನ ಹೀರೋ ಅವರಿಗೆ ಫಾಲೋ ವರ್ಸ್ ತುಂಬಾನೇ ಜಾಸ್ತಿ ಈಗ ಅವರಿಗೆ ದಿ ಜಿಕ್ಯೂ ಇಂಡಿಯಾ ಆಯೋಜಿಸಿದ್ದ, ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು (The GQ 50 MostInfluential Young Indians) ಪಟ್ಟಿಯಲ್ಲಿ ಯಶ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ, ಯುವ ಮನಸ್ಸುಗಳಲ್ಲಿ ಸಂಚಲನ ಸೃಷ್ಟಿಸಿದ, ಅವರ ಯೋಚನೆ,…
ಆಗ ಹಸ್ತಿನಾಪುರದಲ್ಲಿ ಪರೀಕ್ಷಿತನ ಮಗ ಜನಮೇಜಯನು ರಾಜ್ಯ ಆಳುತಿದ್ದ. ಅವನ ಅಸ್ತಾನಕ್ಕೆ ಉತ್ತಂಕನೆಂಬ ಮುನಿಯು ಆಗಮಿಸಿದ. ಈ ಮುನಿಗೆ ತಾನು ತಕ್ಷಕ ಎಂಬ ಹಾವಿನಿಂದ ಒದಗಿದ ಅನ್ಯಾಯಕ್ಕಾಗಿ ಸೇಡು ತೀರಿಸಿಕೊಳ್ಳಲು ಜನಮೇಜಯನ ಆಸ್ಥಾನಕ್ಕೆ ಬಂದಿದ್ದ. ಹಾಗಾಗಿ ತನಗೆ ನಮಸ್ಕರಿಸಿದ ರಾಜನನ್ನೂ ಅವನ ಪರಿವಾರವನ್ನು ಅಷಿರ್ವದಿಸಿದ. ರಾಜನು ನೀಡಿದ ಆಸನದಲ್ಲಿ ಕುಳಿತು ಅತಿಥ್ಯ ಸ್ವೀಕರಿಸಿದ. ಎಲ್ಲರ ಕುಶಲವನ್ನೂ ವಿಚಾರಿಸಿದ. ಅನಂತರ ರಾಜನನ್ನೂ ಕುರಿತು
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್ಸ್ಕ್ರೀನ್ನಲ್ಲಿ ಹೊಸ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.
ಚಿನ್ನ ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ. ನಿರಂತರವಾಗಿ ಬಂಗಾರದ ಬೆಲೆ ಏರಿಕೆಯಾಗ್ತಿದೆ. ಸತತ 6ನೇ ದಿನವೂ ಬಂಗಾರದ ಬೆಲೆ ಹೆಚ್ಚಾಗಿದೆ. ಚಿನ್ನ ಈವರೆಗೆ ಶೇಕಡಾ 25 ರಷ್ಟು ಏರಿಕೆ ಕಂಡಿದ್ದು, ಸೋಮವಾರ 10 ಗ್ರಾಂ ಚಿನ್ನದ ಬೆಲೆ 39,196 ರೂಪಾಯಿಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಶೇಕಡಾ 1ರಷ್ಟು ಹೆಚ್ಚಳ ಕಂಡಿದೆ. ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 45,058 ರೂಪಾಯಿಗೆ ಮಾರಾಟವಾಗ್ತಿದೆ. ಶುಕ್ರವಾರ ಕೆ.ಜಿ. ಬೆಳ್ಳಿ 45,148 ರೂಪಾಯಿಯಿತ್ತು. ಇದು 2016ರ ನಂತ್ರ ಗರಿಷ್ಠ…