ಚುನಾವಣೆ

ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

36

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು ಆರಂಭವಾಗಿರುವುದರಿಂದ ಮೇ 20ರೊಳಗೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಮುಗಿಯಲಿದೆ.

ಮೇ 31ರೊಳಗೆ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲು ಆಯೋಗ ಸಿದ್ದತೆ ಮಾಡಿಕೊಂಡಿದೆ. ಜೂನ್ 1ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗದಂತೆ ಮೇ ತಿಂಗಳೊಳಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಯೋಜನೆಗಳನ್ನು ಹಾಕಿಕೊಂಡಿದೆ.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಹಣ ಕಾಸು

    ನಿಮ್ಗೆ ಗೊತ್ತಾ, ಎಟಿಎಂ ಮೂಲಕ ಈ 15 ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು!

    ಸಾಮಾನ್ಯವಾಗಿ ಈ ಹಿಂದೆ ಗ್ರಾಹಕರು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ

  • ಸುದ್ದಿ

    ಪೆಟ್ರೋಲ್ ಬೇಕು ಅಂದ್ರೆ ಈ ನಿಯಮವನ್ನು ಪಾಲಿಸಲೇಬೇಕು …!

    ಬೆಂಗಳೂರು:  ಜನರಿಗೆ ಅನುಕೂಲ ಆಗಲಿ ಅಂತ ಸರ್ಕಾರ ಮತ್ತು ಪೊಲೀಸರು ಅನೇಕ ಕಾನೂನುಗಳನ್ನು ಜಾರಿಗೆ ತರ್ತಾರೆ.. ಆದರೆ ಅದನ್ನ ಪಾಲಿಸೋದು ಮಾತ್ರ ಕಡಿಮೆ. ಇದೀಗ ಸಂಚಾರಿ ಪೊಲೀಸರು ಮತ್ತೊಂದು ಕಾನೂನು ಜಾರಿಗೆ ಕೈ ಹಾಕ್ತಿದ್ದಾರೆ. ಬೈಕ್ ಸವಾರರ ಸೇಫ್ಟಿಗಾಗಿ ಪೊಲೀಸರ ಹೊಸ ಪ್ರಯೋಗ..! ದಿನದಿಂದ ದಿನಕ್ಕೆ ಬೆಳೀತಿರೋ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ ಅತೀ ಹೆಚ್ಚು ಬೈಕ್‌ಗಳನ್ನು ಹೊಂದಿರೋ ನಗರ. ಹೀಗಾಗಿ ಬೆಂಗಳೂರಿನಲ್ಲಿ ಆ್ಯಕ್ಸಿಡೆಂಟ್ ಕೂಡ ಹೆಚ್ಚಾಗ್ತಿದೆ. ಅಪಘಾತ ತಪ್ಪಿಸಲು ಎಷ್ಟೇ ಕಾನೂನು ಜಾರಿಗೆ ತಂದರು ಅನುಷ್ಠಾನ…

  • ಸುದ್ದಿ

    ರೈತರಿಗೆ ಮತ್ತೊಂದು ಸಂತಸದ ಸುದ್ದಿ ಕೊಟ್ಟ ನಮ್ಮ ಸರ್ಕಾರ…!ಏನದು ಎಂದು ಇಲ್ಲಿ ಓದಿ ತಿಳಿಯಿರಿ..

    ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿರುವ ಸರ್ಕಾರ ಮತ್ತೊಂದು ಅನುಕೂಲತೆ ಕಲ್ಪಿಸಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದ ಸಂದರ್ಭದಲ್ಲಿ ಬೆಂಬಲ ಬೆಲೆಗೆ ಸರ್ಕಾರದಿಂದ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಲೆ ನಿಗದಿಪಡಿಸಲು ಐವರು ಸಚಿವರ ಕ್ಯಾಬಿನೇಟ್ ಉಪ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಉಪಮುಖ್ಯಮಂತ್ರಿಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಐವರು ಸಚಿವರ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದ್ದು, ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನುಸಂಸದೀಯ ವ್ಯವಹಾರಗಳು ಹಾಗೂ ಸಣ್ಣ…

  • ಸುದ್ದಿ

    ಸರ್ಕಾರಿ ನೌಕರರಿಗೆ ನವೆಂಬರ್ ತಿಂಗಳಿನಲ್ಲಿ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ..! ಏನದು ಗೊತ್ತಾ?

    ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 5% ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕೆಲವರ್ಗದ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಬೋನಸ್ ಹಾಗೂ ಸಾರಿಗೆ ಭತ್ಯೆ(TA) ಲಭ್ಯವಾಗಿದೆ. ಈಗ ನವೆಂಬರ್ ತಿಂಗಳಿನಲ್ಲಿ ಬಂಪರ್ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರಿ ನೌಕರರ ಸಂಬಳ ಏರಿಕೆ ಬಗ್ಗೆ ನವೆಂಬರ್ ತಿಂಗಳಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಅಧಿಕೃತ ಆದೇಶ ಹೊರಬರಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ…

  • ಮನರಂಜನೆ

    ‘ಹರ ಹರ ಮಹಾದೇವ’ ಧಾರಾವಾಹಿಯನ್ನು ನಿಲ್ಲಿಸಿದ ಕಾರಣ ಕೇಳಿದ್ರೆ ನೀವ್ ಶಾಕ್ ಆಗ್ತೀರಾ…!

    ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ 416 ಕಂತುಗಳ ಪ್ರಸಾರ ಆಗಿದೆ.

  • ಜ್ಯೋತಿಷ್ಯ

    ನಿಮ್ಮ ಹಸ್ತದಲ್ಲಿ V ಗುರುತು ಇದ್ದರೆ, ನೀವೆಷ್ಟು ಅದೃಷ್ಟವಂತರು ಗೊತ್ತಾ..?

    ನಮ್ಮ ದೇಹದ ಪ್ರತಿಯೊಂದು ಅಂಗವೂ ನಮ್ಮ ಸ್ವಭಾವ, ಆರೋಗ್ಯ, ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ. ಇದು ನಮ್ಮ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ಹೇಳುತ್ತದೆ. ಎಲ್ಲರ ಹಸ್ತ ರೇಖೆ ಒಂದೇ ರೀತಿ ಇರುವುದಿಲ್ಲ. ಹಸ್ತದಲ್ಲಿ ಇರುವ ರೇಖೆಗಳು ಅಕ್ಷರಗಳನ್ನು ಹೋಲುತ್ತದೆ. ಈ ಅಕ್ಷರಗಳು ವ್ಯಕ್ತಿಯ ಸ್ವಭಾವವನ್ನು ಹೇಳುತ್ತವೆ. ನಿಮ್ಮ ಹಸ್ತದಲ್ಲಿ ವಿ ಅಕ್ಷರವಿದ್ರೆ ಅದ್ರ ಅರ್ಧವೇನು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಹಸ್ತದಲ್ಲಿ ‘ವಿ’ ಅಕ್ಷರವಿದ್ರೆ ನಿಮ್ಮ ಜೀವನದಲ್ಲಿ ಪ್ರಗತಿ ಸಾಧಿಸುತ್ತೀರಿ ಎಂದರ್ಥ….