ಸುದ್ದಿ

ಖತರ್ನಾಕ್ ಕಳ್ಳರನ್ನು ಬಂಧಿಸಿ 5 ಲಕ್ಷ ಮೌಲ್ಯದ 14 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡ ಕ್ಯಾತಸಂದ್ರ ಪೊಲೀಸರು

37

 

ತುಮಕೂರು, ಆ.23-ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಖತರ್ನಾಕ್ ಕಳ್ಳನನ್ನು ಕ್ಯಾತಸಂದ್ರ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅನಂತಪುರ ಜಿಲ್ಲೆ ಅರೆಸಮುದ್ರಂ ನಿವಾಸಿ ನರಸಿಂಹ ಮೂರ್ತಿ (30) ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಪಟ್ಟಣದ ಹಳೇ ದೇವರಾಯಪಟ್ಟಣದಲ್ಲಿ ಪ್ರಸ್ತುತ ವಾಸವಾಗಿದ್ದನು.

ಕಳೆದ 2013ರಲ್ಲಿ ಬೆಂಗಳೂರು, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಕಡೆಗಳಲ್ಲಿ ಮೋಟಾರ್‍ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ಈತನ ಬಂಧನದಿಂದ ಹಲವು ಪ್ರಕರಣಗಳು ಪತ್ತೆಯಾದಂತಾಗಿದೆ. ಆ.21 ರಂದು ಕ್ಯಾತಸಂದ್ರ ವ್ಯಾಪ್ತಿಯ ಹಿರೇಗಹಳ್ಳಿ ಕೈಗಾರಿಕಾ ಪ್ರದೇಶದ ಹಿಂಭಾಗದಲ್ಲಿರುವ ಸಿಂಗೋನಹಳ್ಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಬೈಕನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ಗಸ್ತಿನಲ್ಲಿ ಕ್ಯಾತಸಂದ್ರ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ಈತನಿಂದ 5 ಲಕ್ಷ ರೂ. ಮೌಲ್ಯದ 14 ಮೋಟಾರ್‍ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. 2016ರಲ್ಲಿ ಗೌರಿಬಿದನೂರು ಪೊಲೀಸರು ಈತನನ್ನು ಬಂಧಿಸಿ 18 ಬೈಕ್‍ಗಳನ್ನು ವಶಪಡಿಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ಆರೋಪಿ ವಿರುದ್ಧ ಗೌರಿಬಿದನೂರು, ದೊಡ್ಡಬಳ್ಳಾಪುರ, ಯಲಹಂಕ ಠಾಣೆಗಳಲ್ಲೂ ಸಹ ಕಳವು ಪ್ರಕರಣಗಳು ದಾಖಲಾಗಿವೆ.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಎಸ್‍ಪಿ ಡಾ.ಶೋಭಾರಾಣಿ ಮಾರ್ಗದರ್ಶನದಲ್ಲಿ ನಗರ ಉಪವಿಭಾಗದ ಪೊಲೀಸ್ ಉಪಅಧೀಕ್ಷಕ ತಿಪ್ಪೇಸ್ವಾಮಿ, ಕ್ಯಾತಸಂದ್ರ ವೃತ್ತನಿರೀಕ್ಷಕರಾದ ಶ್ರೀಧರ್ ನೇತೃತ್ವದಲ್ಲಿ ಪಿಎಸ್‍ಐ ರಾಜು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಆಭಿನಂದಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ವಿಶ್ವದ ಎಲ್ಲಾ ಕನ್ನಡಿಗರಿಗೆ ಮನರಂಜನೆ ನೀಡುತ್ತಿದ್ದ “ಮಜಾ ಟಾಕೀಸ್”ಬಂದ್ ಆಗಲಿದೆಯಾ?ಇದು ನಿಜನಾ?ತಿಳಿಯಲು ಈ ಲೇಖನ ಓದಿ…

    ಮಜಾ ವಿತ್ ಸುಜಾ ಯಶಸ್ಸಿನ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೊಕೇಶ್ ಪ್ರೊಡಕ್ಷನ್ಸ್ ಮೂಲಕ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ, ನಗುವಿನ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  • ಸುದ್ದಿ

    ಅತಿ ಚಿಕ್ಕ ಪಕ್ಷಿ ಎಂದಾದರೂ ನೋಡಿದೀರಾ ಹಾಗಾದರೆ, ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ.

    ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್‌ ಬರ್ಡ್‌ ಎಂದು ಹೇಳಲಾಗಿದೆ. ‘ಬ್ಯಾನ್‌ ಬಾಯ್‌ ಸಹೀದ್‌’ ಎನ್ನುವ ಫೇಸ್‌ಬುಕ್‌ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್‌ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್‌ ಬರ್ಡ್‌. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್‌ ಆಗುತ್ತಿದ್ದು 15000 ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. ಆದರೆ ನಿಜಕ್ಕೂ ಇದು…

  • ಸುದ್ದಿ

    ಶಬರಿಮಲೆಗೆ ಮಹಿಳೆಯರಿಬ್ಬರ ಪ್ರವೇಶ ಮಾಡಿದ್ದರ ಬಗ್ಗೆ ವೀರೇಂದ್ರ ಹೆಗ್ಗಡೆರವರು ಹೇಳಿದ್ದೇನು ಗೊತ್ತಾ?

    ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ…

  • ಸುದ್ದಿ

    ಇಲ್ಲಿ ಮಹಿಳೆಯರಿಗೆ ಒಂದಲ್ಲ ಎರಡಲ್ಲ 8 ಗಂಡಂದಿರು…!ಮುಂದೆ ಓದಿ…….

    ಮಹಾಭಾರತದ ದ್ರೌಪದಿ ಎಲ್ಲರಿಗೂ ಗೊತ್ತು. ಆಕೆ ಪಾಂಡವರ ಪತ್ನಿ. ಐವರು ಗಂಡಂದಿರನ್ನು ಹೊಂದಿದ್ದ ದ್ರೌಪದಿಯೇ ಮಹಾಭಾರತಕ್ಕೆ ಕಾರಣ ಎನ್ನಲಾಗುತ್ತದೆ. ಅದೇನೇ ಇರಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರು ಭಾರತದಲ್ಲಿ ಇದ್ದಾರೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ಗಡಿ ಭಾಗ ಮುರೆನಾದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವ ಮಹಿಳೆಯರಿದ್ದಾರೆ. ಇದು ಹಳೇ ಪದ್ಧತಿಯೇನಲ್ಲ. ಕೆಲ ವರ್ಷಗಳ ಹಿಂದೆ ಅಲ್ಲಿನ ಮುಖಂಡರು ಗ್ರಾಮದ ಒಳಿತಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಊರಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಯುವಕರ ಸಂಖ್ಯೆ…

  • ದೇವರು-ಧರ್ಮ

    ಹಾಸನಾಂಬೆಯ ಕಾಣಿಕೆ ಹುಂಡಿ ಎಣಿಕೆ ವೇಳೆ ಸಿಕ್ಕಿದ್ದೇನು ಗೊತ್ತಾ..?

    ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ  ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ, ಹಳೇ ನೋಟುಗಳು ಸಿಕ್ಕಿದೆ. ಅದರಲ್ಲೂ ಬ್ಯಾನ್ ಆಗಿರುವ ಹಳೆಯ ಸಾವಿರ ರೂಪಾಯಿ ಮುಖಬೆಲೆಯುಳ್ಳ ನೋಟುಗಳು ಜಾಸ್ತಿ ಪತ್ತೆಯಾಗಿದೆ. ಅಲ್ಲದೇ, ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಬರೆದು ವೆರೈಟಿ ವೆರೈಟಿ ಪತ್ರಗಳು, ಲವ್…

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(1 ಜನವರಿ 2019) ನಿಮ್ಮ ಪ್ರೀತಿ ಒಂದು ಹೊಸ ಎತ್ತರವನ್ನು…