ಸುದ್ದಿ

ಇನ್ಮುಂದೆ ಡಬ್ಬಿಂಗ್ ಮಾಡುವ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಯಾವ ಕಿರಿಕಿರಿಯೂ ಇಲ್ಲ,..!!!ಇಷ್ಟಕ್ಕೂ ಈ ಸುದ್ದಿ ಯಾಕೆ ಬಂತು ಗೊತ್ತಾ ,.!!

30

ಕಿಚ್ಚ ಸುದೀಪ್‌,ಮೆಗಾಸ್ಟಾರ್‌ ಚಿರಂಜೀವಿ ನಟನೆಯ ‘ಸೈರಾ’ ಬೆನ್ನಲ್ಲೇ ಮತ್ತೊಂದು ಭಾರೀ ಬಜೆಟ್‌ನ ಸಿನಿಮಾ ‘ದಬಾಂಗ್‌ 3’ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗಲಿದೆ. ಸೈರಾ ಚಿತ್ರವಂತೂ ಯಾವುದೇ ಅಡ್ಡಿ ಇಲ್ಲದೆ ರಿಲೀಸ್‌ ಆಗಿದೆ. ಇನ್ನು ಸುದೀಪ್‌ ನಟಿಸಿದ್ದಾರೆಂಬ ಕಾರಣಕ್ಕೆ ದಬಾಂಗ್‌-3ಸಿನಿಮಾ ಕೂಡ ಅಷ್ಟೇ ಸಲೀಸಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಡಿಸೆಂಬರ್‌ನಲ್ಲಿಕ್ರಿಸ್‌ಮಸ್‌ ಹಬ್ಬದ ಹೊತ್ತಿಗೆ ದಬಾಂಗ್‌-3 ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಕನ್ನಡಕ್ಕೆ ಡಬ್‌ ಆಗಿರುವ ‘ಸೈರಾ’ ಸಿನಿಮಾಗೆ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ದಬಾಂಗ್‌ 3 ಸಿನಿಮಾ ಬಗ್ಗೆಯೂ ಭರ್ಜರಿ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿಕಿಚ್ಚ ಸುದೀಪ್‌ ಖಳನಟರಾಗಿ ನಟಿಸಿದ್ದು, ಸ್ವತಃ ಅವರೇ ತಮ್ಮ ಪಾತ್ರಕ್ಕೆ ಡಬ್‌ ಮಾಡಲಿದ್ದಾರೆ. ಹಾಗಾಗಿ ಕನ್ನಡದ ಪ್ರೇಕ್ಷಕರು ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ದಸರಾ ಹಬ್ಬದ ದಿನದಂದು ಈ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದ್ದು, ಸುದೀಪ್‌ ಇರುವಂಥ ಸಿನಿಮಾದ ಹೊಸ ಲುಕ್‌ ರಿಲೀಸ್‌ ಮಾಡಿದೆ ಚಿತ್ರತಂಡ. ಈ ಪೋಸ್ಟರ್‌ ಅನ್ನುವ ಸ್ವತಃ ಸುದೀಪ್‌ ಟ್ವಿಟ್‌ ಮಾಡಿ, ಅಭಿಮಾನಿಗಳ ಜತೆ ಚಿತ್ರದ ಕುರಿತಾಗಿ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.

ಈ ಟ್ವಿಟ್‌ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್‌, ‘ಹೀರೋ ಜತೆ ಹೋರಾಡುವ ಮಾತೇ ಇಲ್ಲ. ಏಕೆಂದರೆ ವಿಲನ್‌ಗೆ ನಾಯಕನ ಮೇಲೆ ಎಲ್ಲಿಲ್ಲದ ಪ್ರೀತಿ. ನಿಮ್ಮ ಜೊತೆಗಿನ ಕೆಲಸ ಮತ್ತು ಹಂಚಿಕೊಂಡಿರುವ ಪ್ರೀತಿ ಯಾವತ್ತಿಗೂ ಶಾಶ್ವತ. ಅದು ಅಮೂಲ್ಯವಾದ ಕ್ಷಣ’ ಎಂದಿದ್ದಾರೆ. ಪ್ರಭುದೇವ ನಿರ್ದೇಶನದಲ್ಲಿಈ ಸಿನಿಮಾ ಮೂಡಿ ಬಂದಿದೆ. ಕನ್ನಡದಲ್ಲಿಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂನಲ್ಲೂಈ ಸಿನಿಮಾ ಬಿಡುಗಡೆ ಆಗುತ್ತಿದೆ

ಉತ್ತಮ ಡಬ್ಬಿಂಗ್‌ ಸಿನಿಮಾ ಕೊಟ್ಟಾಗ ಪ್ರೇಕ್ಷಕರು ತಪ್ಪದೇ ನೋಡುತ್ತಾರೆಂಬುದನ್ನು ಸೈರಾ ನಿರೂಪಿಸಿದೆ. ಮೊದಲು ಈ ಚಿತ್ರವನ್ನು ರಿಲೀಸ್‌ ಮಾಡಲು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ಮಾಲೀಕರು ಒಪ್ಪಲಿಲ್ಲ. ನಾವು ಮನವಿ ಮಾಡಿಕೊಂಡ ನಂತರ ರಿಲೀಸ್‌ ಮಾಡಿದರು. ಅಲ್ಲದೆ, ಈ ಚಿತ್ರದಲ್ಲಿಸುದೀಪ್‌ ಅವರೇ ನಟಿಸಿ ಕನ್ನಡದಲ್ಲೇ ತಮ್ಮ ಪಾತ್ರಕ್ಕೆ ವಾಯ್‌್ಸ ನೀಡಿದ್ದಾರೆ. ಹೀಗಾಗಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವತ್ತಿನವರೆಗೂ ಶೇ.70ಕ್ಕೂ ಹೆಚ್ಚು ಪ್ರಮಾಣದಲ್ಲಿ ಚಿತ್ರಮಂದಿರಗಳು ಬೆಂಗಳೂರಿನಲ್ಲಿ ಭರ್ತಿಯಾಗುತ್ತಿವೆ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ತಿಳಿಸಿದ್ದಾರೆ. ದಬಾಂಗ್‌-3ಚಿತ್ರಕ್ಕೂ ಇದೇ ರೀತಿಯ ನಿರೀಕ್ಷೆ ಇದೆ. ಸುದೀಪ್‌ ಅವರೇ ಮಹತ್ವದ ಪಾತ್ರ ಮಾಡಿರುವುದು ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಡಬ್ಬಿಂಗ್‌ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ