ಸುದ್ದಿ

ಇಂದು ಮಧ್ಯಾಹ್ನ ಗುಜರಾತಿಗೆ ಅಪ್ಪಳಿಸಲಿದೆ ವಾಯು – 3 ಲಕ್ಷ ಜನ ಶಿಫ್ಟ್, 500 ಗ್ರಾಮಗಳ ತೆರವು

64

ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್‍ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್‍ನ ಕರಾವಳಿಗೆ ಅಪ್ಪಳಿಸಲಿದೆ.

ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್‍ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ.

ಮುಂಬೈನಿಂದ ಮುಂದೆ ಸಾಗಿದ ವಾಯು ಚಂಡಮಾರುತ, ದಿಯು-ಸೋಮನಾಥ-ಪೋರಬಂದರ್-ದ್ವಾರಕ ಮೂಲಕ ಸಾಗಿ ಪಾಕಿಸ್ತಾನದ ಕರಾಚಿಯತ್ತ ದುರ್ಬಲ ಆಗಲಿದೆ. ಇದರ ನಡುವೆ ದಿಯು ಹಾಗೂ ಪೋರ್ ಬಂದರ್ ನಡುವೆ ಭಾರೀ ವರ್ಷಧಾರೆಯಾಗಲಿದೆ.

ಬಂಗಾಳಕೊಲ್ಲಿಯ ಫೋನಿಯಿಂದ ಒಡಿಶಾ ಎದುರಿಸಿದ ಸ್ಥಿತಿಯಿಂದ ಗುಜರಾತ್ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ, ಗುಜರಾತ್‍ನ ಮೋರ್ಬಿ, ಭಾವನಗರ, ಜುನಾಗಢ, ಗಿರ್, ಸೋಮನಾಥ, ಜಾಮ್‍ನಗರ, ದ್ವಾರಕಾ, ಕಛ್, ಪೋರ್ ಬಂದರ್, ರಾಜಕೋಟ್ ಮತ್ತು ಅಮ್ರೇಲಿಯ 10 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಹಾಗೂ 500 ಗ್ರಾಮಗಳ ತೆರವು ಮಾಡಲಾಗಿದೆ.
ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 52 ತಂಡಗಳು ಗುಜರಾತ್‍ನಲ್ಲಿ ಬೀಡು ಬಿಟ್ಟಿವೆ. ಜೊತೆಗೆ, ಸೇನಾಪಡೆಯ 10 ತುಕಡಿಗಳು, ಮುಂಬೈ ನೌಕಾನೆಲೆಯಲ್ಲಿ ತುರ್ತು ಸ್ಥಿತಿ ಎದುರಿಸಲು ವೈದ್ಯಕೀಯ ತಂಡಗಳು ಸನ್ನದ್ಧವಾಗಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ನೀವು ಬ್ರೇಕ್‌ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯ ನಿಮಗೆ ಗ್ಯಾರೆಂಟಿ..!ತಿಳಿಯಲು ಈ ಲೇಖನ ಓದಿ..

    ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ

  • ಕಾನೂನು

    ಬಿಪಿಎಲ್ ಪಡಿತರ ಚೀಟಿದಾರರಿಗೆ ಸಚಿವ ‘ಯು.ಟಿ.ಖಾದರ್’ ತಿಳಿಸಿರುವ ಸಿಹಿ ಸುದ್ದಿ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

  • ಸುದ್ದಿ

    ಮೋದಿ ಸರಕಾರದಿಂದ ಕೊನೆಯ ಬಜೆಟ್..ಮಧ್ಯಮ ವರ್ಗಕ್ಕೆ ಬಂಪರ್ ಆಫರ್!ಈ ಬಜೆಟ್ ನಿಂದ ನಿಮಗೆಷ್ಟು ಲಾಭ..ಇಲ್ಲಿದೆ ಸಂಪೂರ್ಣ ಮಾಹಿತಿ…

    ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಕೊನೆ ಬಡ್ಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವರ ಪಿಯೂಶ್ ಗೋಯಲ್ ಮಧ್ಯಮ ವರ್ಗಕ್ಕೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆಯ ಅನುದಾನವನ್ನು ಸರ್ಕಾರ ಶೇ. 4ರಿಂದ 14ಕ್ಕೆ ಹೆಚ್ಚಳ ಮಾಡಿದೆ. ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ…

  • ಮನರಂಜನೆ

    ಬಿಗ್ ಮನೆ ಪ್ರವೇಶ ಮಾಡಿದ ಹಳೆ ಸ್ಪರ್ಧಿಗಳು…ಯಾರೆಲ್ಲಾ ಒಳಗಡೆ ಹೋಗಿದ್ದಾರೆ ಗೊತ್ತಾ..?

    ಬಿಗ್ ಬಾಸ್ ಸೀಸನ್-6 ಕೊನೆಯಾಗುವುದಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಕಳೆದ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಭೇಟಿ ನೀಡಿದ್ದರು. ಆದರೆ ಈಗ ಹಳೆಯ ಸೀಸನ್ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರಿಗಾಗಿ ಇಲ್ಲಿ ವಿಶೇಷ ಮನೆಯನ್ನು ನಿರ್ಮಿಸಲಾಗಿದೆ. ಬಿಗ್ ಬಾಸ್ ಸೀಸನ್-4 ಸ್ಪರ್ಧಿ ವಿನ್ನರ್, ಒಳ್ಳೆ ಹುಡುಗ ಪ್ರಥಮ್, ರನ್ನರಪ್ ಕಿರಿಕ್ ಕೀರ್ತಿ ಹಾಗೂ ಸಂಜನಾ ಚಿದಾನಂದ್ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್…

  • ಸುದ್ದಿ

    ದಂಡಕ್ಕೆ ಹೆದರಿ ರಸ್ತೆಗಿಳಿಯದ ವಾಹನಗಳು, ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಕುಸಿತ,.!

    ರಾಜ್ಯದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಮಂಗಳವಾರವೇ ಜಾರಿಗೆ ಬಂದಿದೆ. ಸಂಚಾರ ನಿಯಮಗಳನ್ನು ಕೇರ್ ಮಾಡದ ವಾಹನ ಸವಾರರು ಭಾರೀ ದಂಡ. ದಂಡಕ್ಕೆ ಹೆದರಿ ರಸ್ತೆಗಿಳಿಯದ ವಾಹನಗಳು, ಒಡಿಶಾದಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ಕುಸಿತಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ದಂಡಗಳನ್ನು ನೋಡಿ ಬೆಚ್ಚ ಬಿದ್ದಿರುವ ವಾಹನ ಸವಾರರು ಹಲವರು ತಮ್ಮ ವಾಹನಗಳನ್ನು ಮನೆಯಿಂದ ಹೊರಗೆ ತರುತ್ತಿಲ್ಲವಂತೆ. ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಬೇಡಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆಯಂತೆ. ಹೌದು ಒಡಿಶಾದಲ್ಲಿ ಪೆಟ್ರೋಲ್…

  • ಸುದ್ದಿ

    ಸ್ಪೋಟಕ ಮಾಹಿತಿ;ಪಬ್‌ಜಿ ವ್ಯಸನದಿಂದಾಗಿ ಯುವಕನ ಜೀವನವಾಯ್ತು ನರಕ!

    ಜನಪ್ರಿಯ ಆನ್‌ಲೈನ್ ಆಟಗಳಲ್ಲಿ ಒಂದಾದ ಪಬ್‌ಜಿ ಇತ್ತೀಚಿಗೆ ಯಾವಾಗಲೂಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಪಬ್‌ಜಿ ಆಟಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇತರೆ ವ್ಯಸನಗಳಿಗೆತುತ್ತಾಗಿದ್ದಾರೆ ಎಂಬ ಅನೇಕ ಪ್ರಕರಣಗಳು ದಾಖಲಾಗಿವೆ. ಇಂತಹುದೇ ಮತ್ತೊಂದು ಪ್ರಕರಣ ಹೈದರಾಬಾದ್‌ನಲ್ಲಿವರದಿಯಾಗಿದೆ. ಹೌದು, ಪಬ್‌ಜಿ ಆಟದ ಕಾರಣದಿಂದಾಗಿ ಹೈದರಾಬಾದ್‌ನ 19 ವರ್ಷದ ಯುವಕನೋರ್ವಪಾರ್ಶ್ವವಾಯುವಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಹೌದು, ಕಳೆದ ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಪಬ್‌ಜಿಗೆವ್ಯಸನಿಯಾಗಿದ್ದ ಹೈದರಾಬಾದ್‌ನ ಯುವಕನಿಗೆ ಪಾರ್ಶ್ವವಾಯು ಅಪ್ಪಳಿಸಿದೆ. ಐಸಿಯುಗೆ ಕರೆದೊಯ್ಯಲಾಗಿರುವಆತ ತನ್ನ ಬಲಗೈ…