ಆರೋಗ್ಯ

ಈಗಿನ ಚಳಿಗಾಲದಲ್ಲಿ ಆರೋಗ್ಯದ ಮೇಲೆ ಪ್ರಭಾವ ಬೀರುವ ಅನೇಕ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಪರಿಹಾರ.

64


ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ.  ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು.

ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ ನಾವು ಆರೋಗ್ಯವಂತರಾಗಿರಲು ಹೆಚ್ಚಿನ ಭಾಗ ಪ್ರಕೃತಿಯೇ ನಮಗೆ ಸಹಾಯಕವಾಗಿದೆ. ಈ ಕಾಲದಲ್ಲಿ ಸೂರ್ಯನು ದಕ್ಷಿಣಾಯನದಲ್ಲಿ ಇರುವುದರಿಂದ ಹಗಲುಗಳು ಕಿರಿದಾಗಿದ್ದು, ರಾತ್ರಿಗಳು ದೀರ್ಘವಾಗಿರುತ್ತವೆ. ಇದರಿಂದ ದೇಹದ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುತ್ತದೆ. ಈ ಋತುವಿನಲ್ಲಿ ಜಠರಾಗ್ನಿಯೂ ಪ್ರಖರವಾಗಿ ಇರುವುದರಿಂದ ಸೇವಿಸಿದ ಆಹಾರ ಚೆನ್ನಾಗಿ ಪಚನವಾಗುತ್ತದೆ.

ನಮ್ಮ ದೇಶದಲ್ಲಿ ಚಳಿಗಾಲವು ಶರದ್ ಋತುವಿನಿಂದ ಆರಂಭವಾಗುತ್ತದೆ. ಆದ್ದರಿಂದ ಶರೀರವನ್ನು ಬೆಚ್ಚಗಿಡಲು ಉಣ್ಣೆ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.  ಈ ಋತುವಿನಲ್ಲಿ ಹಸಿವು ಜಾಸ್ತಿಯಾಗುವುದರಿಂದ ಕಾಲಕಾಲಕ್ಕೆ ಶರೀರಕ್ಕೆ ಆಹಾರ ಪೂರೈಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಹಸಿವನ್ನು ತಡೆಯಲು ಪ್ರಯತ್ನಿಸುವುದು ದೇಹಕ್ಕೆ ಹಾನಿ ಉಂಟು ಮಾಡಬಹುದು. ಹಾಗೆ ಮಾಡುವುದರಿಂದ ಜಠರಾಗ್ನಿಯು ರಕ್ತ, ಮಾಂಸ, ಧಾತು ಹಾಗೂ ರಸಗಳನ್ನು ದಹಿಸಿ ಶರೀರ ಕೃಷವಾಗಬಹುದು ಮತ್ತು ವಾಯುಪ್ರಕೋಪ ಹೆಚ್ಚಬಹುದು.

ಚಳಿಗಾಲದಲ್ಲಿ ವಾಯು ಪ್ರಕೋಪ ಮತ್ತು ಕಫ ಸಂಚಯ ಆಗುವುದರಿಂದ ಅವುಗಳನ್ನು ಹೆಚ್ಚಿಸುವ ಪದಾರ್ಥಗಳ ಸೇವನೆ ವರ್ಜಿಸಬೇಕು. ಸಿಹಿ, ಆಮ್ಲ ಮತ್ತು ಲವಣಯುಕ್ತ ಆಹಾರಗಳನ್ನು ಸೇವಿಸಬೇಕು. ಈ ಕಾಲದಲ್ಲಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಹೆಚ್ಚು ಹಿತ ಎನಿಸುತ್ತದೆ. ಆದ್ದರಿಂದ ಚಹಾ ಹಾಗೂ ಕಾಫಿಯನ್ನು ನಾವು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಹಾ, ಕಾಫಿಗಳ ಅತಿಯಾದ ಸೇವನೆ ವಾಯು ಪ್ರಕೋಪವನ್ನು ಹೆಚ್ಚಿಸುತ್ತದೆ. ಅದಕ್ಕೆ ಬದಲಾಗಿ ಬಿಸಿ ಸೂಪ್‌ಗಳನ್ನು ಕುಡಿಯಬಹುದು.

ಚಳಿಗಾಲದಲ್ಲಿ ಕ್ಯಾರೆಟ್, ಮೂಲಂಗಿ, ಗೆಣಸು ಮುಂತಾದ ಗೆಡ್ಡೆಗಳು, ಮೆಂತೆ ಪಲ್ಲೆ, ಬಸಳೆ ಸೊಪ್ಪು, ರಾಜಗಿರಿ ಸೊಪ್ಪು, ಪಾಲಕ್, ಸಬ್ಬಸಿಗೆ ಮುಂತಾದ ಸೊಪ್ಪುಗಳು, ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಈ ಋತುವಿನಲ್ಲಿ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆ ಆಗುವುದರಿಂದ ಜಿಡ್ಡನ್ನು ಪೂರೈಸುವ ಆಹಾರ ಪದಾರ್ಥ ಸೇವಿಸಬೇಕು. ಹಾಲು, ತುಪ್ಪ, ಬೆಣ್ಣೆ, ಕೆನೆ, ಗೋಡಂಬಿ, ಕಲ್ಲುಸಕ್ಕರೆ, ಬಾದಾಮಿ, ಗಜ್ಜರಿ ಹಲ್ವ, ಬಾಸುಂದಿ, ಒಣ ಕೊಬ್ಬರಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಸೇವಿಸಬೇಕು.

ಶರೀರದ ಉಷ್ಣತೆ ಕಾಪಾಡಿಕೊಳ್ಳಲು ಹೆಚ್ಚು ಕ್ಯಾಲೊರಿಗಳ ಅವಶ್ಯಕತೆ ಇರುವುದರಿಂದ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಹುದು. ಈ ಋತುವಿನಲ್ಲಿ ಬರುವ ಹಣ್ಣುಗಳಾದ ಸೀತಾಫಲ, ಪಪ್ಪಾಯಿ, ಕಿತ್ತಳೆ, ಪೇರು ಮುಂತಾದ ಹಣ್ಣುಗಳನ್ನು ಸೇವಿಸಬೇಕು. ತರಕಾರಿಗಳಲ್ಲಿ ಹೂಕೋಸು ವರ್ಜ್ಯ. ಏಕೆಂದರೆ ಅದು ಕೀಲುನೋವನ್ನು ಉಂಟುಮಾಡುತ್ತದೆ.

ರಾತ್ರಿ ತುಂಬಾ ತಡವಾಗಿ ಊಟಮಾಡುವುದು, ಮುಂಜಾನೆ ತಡಮಾಡಿ ಏಳುವುದು, ಉಪವಾಸ ಮಾಡುವುದು, ತಂಗಳು ಆಹಾರ ಸೇವನೆ ಈ ಋತುವಿಗೆ ತಕ್ಕುದಲ್ಲ. ಇವೆಲ್ಲ ವಾಯು ಪ್ರಕೋಪ ಹೆಚ್ಚಿಸುತ್ತವೆ.  ವಾತ ಹಾಗೂ ಪಿತ್ತ ಪ್ರಕೃತಿಯವರಿಗೆ ಈ ಋತು ಸರಿಯಾದುದಲ್ಲ. ಆದ್ದರಿಂದ ಕಫ ಪ್ರಕೃತಿಯವರು ಹುಳಿಯಾದ ಪದಾರ್ಥಗಳು, ಮೊಸರು, ಬಾಳೆಹಣ್ಣನ್ನು ಸೇವಿಸಬಾರದು.  ವಾತ ಪ್ರಕೃತಿಯವರು ಅದರಿಂದ ಪಾರಾಗಲು ಮತ್ತು ಶರೀರದಲ್ಲಿ ಸ್ಫೂರ್ತಿ ಹೊಂದಲು ಸಾಸಿವೆ ಎಣ್ಣೆಯಿಂದ ಶರೀರವನ್ನು ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಸಂಧಿವಾತ, ಕೀಲುನೋವುಗಳು ಗುಣವಾಗುತ್ತವೆ ಮತ್ತು ತ್ವಚೆಯೂ ಕೋಮಲವಾಗಿ ಇರುತ್ತದೆ. ಕಫ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಿಗಳಿಗೆ ಆಕಳ ತುಪ್ಪದಲ್ಲಿ ಸೈಂಧವ ಲವಣ, ಮೆಂತೆ ಮತ್ತು ಕರ್ಪೂರ ಬೆರೆಸಿ ಎದೆಗೆ ಚೆನ್ನಾಗಿ ಮಾಲೀಷು ಮಾಡಬೇಕು.

ವೃದ್ಧರಿಗೆ ಮತ್ತು ನ್ಯುಮೋನಿಯಾ ಪೀಡಿತ ಚಿಕ್ಕ ಮಕ್ಕಳಿಗೂ ಇದು ಉಪಯುಕ್ತ. ವಾತ ಪೀಡಿತ ರೋಗಿಗಳು ಗೋಧಿ ಹಿಟ್ಟಿನಲ್ಲಿ ಮೆಂತೆ ಸೊಪ್ಪು, ಓಂ ಕಾಳು, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಶುಂಠಿ ಬೆರೆಸಿ ತಯಾರಿಸಿದ ಪರಾಠಾ ಸೇವಿಸಬೇಕು. ನೆಲ್ಲಿಕಾಯಿಯ ಸೇವನೆ ಈ ಋತುವಿಗೆ ತುಂಬಾ ಉಪಯುಕ್ತ. ಆದ್ದರಿಂದ ಯಾವುದೇ ರೂಪದಲ್ಲಾಗಲೀ ನೆಲ್ಲಿಕಾಯಿಯ ಸೇವನೆ ಮಾಡಬೇಕು. ಯಾವುದೇ ಔಷಧಿ ಸೇವಿಸಲು ಚಳಿಗಾಲ ಉತ್ತಮವಾದ ಕಾಲ. ಆದ್ದರಿಂದ ದೀರ್ಘ ಕಾಲದಿಂದ ಬಳಲುತ್ತಿರುವ ರೋಗಿಗಳಿಗೆ ಚಳಿಗಾಲದಲ್ಲಿ ಔಷಧ ಸೇವನೆ ಪ್ರಾರಂಭಿಸಬಹುದು. ಮಕ್ಕಳಿಗೆ ಹಾಲುಣಿಸುವ ತಾಯಂದಿರು ಪ್ರತಿನಿತ್ಯ ಒಂದು ಚಮಚ ಓಂ ಕಾಳನ್ನು ಸೇವಿಸಬೇಕು. ಇದರಿಂದ ಮಗುವಿಗೆ ಅಪಚನ ಆಗುವುದಿಲ್ಲ.

ತಪ್ಪದೆ ಈ ಟಿಪ್ಸ್ ಪಾಲಿಸಿ :
ಕೊಬ್ಬರಿ ಎಣ್ಣೆ ಮಸಾಜ್ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ಮೈ ಬಿರುಕು, ಒಣ ಚರ್ಮದ ತೊಂದರೆ ಕಡಿಮೆಯಾಗುತ್ತದೆ. ಎಣ್ಣೆ ಸ್ನಾನದಿಂದಲೂ ಚರ್ಮದ ಒಣಗುವಿಕೆ ಹೋಗಿಲ್ಲವಾದಲ್ಲಿ ಸ್ನಾನದ ಬಳಿಕ ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಸ್ವಲ್ಪ ಮಾಶ್ಚುರೈಸರ್ ಅಥವಾ ಲೋಶನ್ ನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು. ಬಾದಾಮಿ ಎಣ್ಣೆಯನ್ನು ರಾತ್ರಿ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಇದು ಡಿ ಜೀವಸತ್ವ ಹೊಂದಿದ್ದು, ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಆದರೆ ಅಲರ್ಜಿ ಇರುವವರು ಇದನ್ನು ಬಳಸದಿರುವುದು ಒಳ್ಳೆಯದು. ದ್ರಾಕ್ಷಿ ಬೀಜದ ಎಣ್ಣೆ ಇದು ವಿಟಮಿನ್ ಇ ಅಂಶವನ್ನು ಹೊಂದಿದ್ದು, ಪೋಷಣೆಯನ್ನು ಒದಗಿಸುವ ಮೂಲಕ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.

ಸೋಯಾ ಎಣ್ಣೆ ಇದು ಚರ್ಮದ ತೇವಾಂಶವನ್ನು ಕಾಪಾಡುವ ಜೊತೆಗೆ ಮೃದುವಾದ ಮತ್ತು ದೀರ್ಘಕಾಲದ ಹೊಳಪನ್ನು ನೀಡುತ್ತದೆ. ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದಲೂ ಚರ್ಮದ ರಕ್ಷಣೆ ಮಾದಬಹುದು.

ಒಂದೆರಡು ಚಮಚ ಜೇನಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದು. ತೆಂಗಿನಕಾಯಿ ತುರಿದು ರುಬ್ಬಿ ರಸ ತೆಗೆಯಿರಿ. ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದು. ಯಥೇಚ್ಛವಾಗಿ ನೀರು ಕುಡಿಯಬೇಕು. ಸಾಕಷ್ಟು ತರಕಾರಿ, ಹಣ್ಣು ಸೇವನೆ ಇದರಿಂದ ಚರ್ಮ ತೇವಾಂಶ ಹೊಂದಲು ಸಹಕಾರಿಯಾಗುತ್ತದೆ. ಸ್ನಾನಕ್ಕೆ ಅತಿ ಬಿಸಿಯಾದ ನೀರಿಗಿಂತ ಉಗುರು ಬೆಚ್ಚಗಿನ ನೀರು ಬಳಸುವುದು. ಶುಷ್ಕತೆ ಹೆಚ್ಚಿಸದ ಸೌಮ್ಯವಾದ ಸೋಪ್ ಗಳ ಉಪಯೋಗ. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳುವುದು ಹಾಗೂ ನಂತರ ಲೋಷನ್ ಹಚ್ಚಿಕೊಳ್ಳುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಇಲ್ಲಿವೆ ಮೊಡವೆಯ ಸಮಸ್ಯೆಯನ್ನು ಮಾಯ ಮಾಡೋ ಮನೆಮದ್ದುಗಳು..!ತಿಳಿಯಲು ಈ ಲೇಖನ ಓದಿ…

    ಸಾಮಾನ್ಯವಾಗಿ ಎಲ್ಲರ ಸೌಂದರ್ಯ ಹಾಳಾಗುವುದು ಮೊಡವೆಗಳಿಂದಲೇ. ಹದಿಹರೆಯದಲ್ಲಿ ಸಾಮಾನ್ಯವಾದ ಮೊಡವೆ ಅಳಿದರೂ ಕಲೆಗಳನ್ನು ಉಳಿಸುತ್ತದೆ. ಕೆಲವರಿಗಂತೂ ಎಷ್ಟೇ ವಯಸ್ಸಾದರೂ ಇವು ಬಿಟ್ಟು ಹೋಗುವ ಮಾತನ್ನೇ ಆಡುವುದಿಲ್ಲ.

  • ಸುದ್ದಿ

    ಎರಡನೇ ಪತ್ನಿಯಿಂದ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ..!ಈ ಸುದ್ದಿ ನೋಡಿ…

    ಮೈತ್ರಿ ಸರ್ಕಾರದ ಪರವಾಗಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಯಾಯ್ವರು ಸಾಕಷ್ಟು ಏಳು ಬೀಳುಗಳ ನಡುವೆಯೂ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿಗಳಿಗೆ ಈಗೊಂದು ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಈ ದೂರು ಪುರಸ್ಕರಿಸಿರುವ ನ್ಯಾಯಾಲಯ, ದೂರಿನ ವಿಚಾರಣೆಯನ್ನು ಬರುವ ಮೇ 2ಕ್ಕೆ ಮುಂದೂಡುವಂತೆ ಮಂಗಳವಾರ ಆದೇಶಿಸಿದೆ.ಕಳೆದ 2018ರಲ್ಲಿ ನಡೆದ ವಿಧಾನಸಭಾ…

  • ಸುದ್ದಿ

    ಹೆಂಡತಿಯ ಹತ್ತಿರ 20 ಸಾವಿರ ಸಾಲ ಪಡೆದ ಪತಿ, 28.45 ಕೋ.ರೂ ಗೆದ್ದ…!

    ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್‌ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…

  • ಜ್ಯೋತಿಷ್ಯ

    ವಿಘ್ನ ವಿನಾಯಕನನನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ.

    ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ (ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು )9901077772 call/ what ಮೇಷ ನೀವು ಇಂದು ನಿಮಗಾಗಿ ಸಾಕಷ್ಟು ಸಮಯ ಹೊಂದಿರುವುದರಿಂದ ನಿಮ್ಮ ಒಳ್ಳೆಯ ಆರೋಗ್ಯದ ಸಲುವಾಗಿ ಒಂದು ಧೀರ್ಘ ನಡಿಗೆಗೆ ಹೋಗಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು…

  • ವಿಚಿತ್ರ ಆದರೂ ಸತ್ಯ

    ಮಕ್ಕಳು ಹುಟ್ಟುವಾಗಲೆ ತಲೇಯಲ್ಲಿ ಕೂದಲು ಇರುತ್ತೆ ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮಕ್ಕಳು ಹುಟ್ಟುವಾಗ ಅವರ ತಲೆಯಲ್ಲಿ ತುಂಬಾನೆ ಕೂದಲು ಇರುತ್ತದೆ, ಇಲ್ಲವಾದರೆ ಸ್ವಲ್ಪವೇ ಸ್ವಲ್ಪ ಕೂದಲು ಇರುತ್ತದೆ. ಆದರೆ ಯಾವುದೆ ಮಕ್ಕಳು ಹುಟ್ಟುವಾಗ ಬಕ್ಕ ತಲೆಯೊಂದಿಗೆ ಹುಟ್ಟಿರುವುದನ್ನು ನೋಡಿರೋದು ಕಡಿಮೆ.

  • ಸುದ್ದಿ

    ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಜಾತಿ ಸೂಚಕ ಬ್ಯಾಂಡ್​ಗಳು ಕಡ್ಡಾಯ

    ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್  ಜಾತಿಯ ಮಕ್ಕಳನ್ನು ಪ್ಲಸ್  ಎಂದು ಕರೆದಿರುವುದು ಸಹ ಇದೀಗ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ  ಜಾತಿವಿಷವನ್ನುಬೇರುಮಟ್ಟದಿಂದತೊಲಗಿಸಬೇಕುಎಂದುರಾಷ್ಟ್ರಾದಾದ್ಯಂತಎಲ್ಲಾರಾಜ್ಯಗಳಶಿಕ್ಷಣಇಲಾಖೆಗಳುಸಾಕಷ್ಟುಪ್ರಯತ್ನಪಡುತ್ತಿವೆ. ಆದರೆ, ಇಂತಹಸಂದರ್ಭದಲ್ಲಿತಮಿಳುನಾಡಿನಮಧುರೈಜಿಲ್ಲೆಯಹಲವುಖಾಸಗಿಶಾಲೆಗಳಲ್ಲಿಮಕ್ಕಳವಿದ್ಯಾರ್ಥಿಜೀವನದಿಂದಲೇಈವಿಷವನ್ನುಮತ್ತಷ್ಟುಬಲವಾಗಿಮನಸ್ಸಿನಆಳಕ್ಕೆಇಳಿಸುವಪ್ರಯತ್ನನಡೆಸಲಾಗುತ್ತಿದೆ. ಇಲ್ಲಿಶಿಶುವಿಹಾರದಿಂದಲೇಮಕ್ಕಳುಕಡ್ಡಾಯವಾಗಿಅವರರವರಜಾತಿಯನ್ನುಸೂಚಿಸುವಬಣ್ಣಬಣ್ಣದಪಟ್ಟಿಯನ್ನುಕೈಗೆಕಟ್ಟಿಕೊಂಡುಬರಬೇಕುಎಂಬಕೆಟ್ಟಸಂಪ್ರದಾಯವನ್ನುಆಚರಿಸಲಾಗುತ್ತಿದೆಎಂಬಆಘಾತಕಾರಿವಿಚಾರವರದಿಯಾಗಿದೆ. ವಿದ್ಯಾರ್ಥಿಗಳುಶಾಲೆಗೆಬರುವಾಗಕೆಂಪು, ಹಳದಿ, ಹಸಿರುಹಾಗೂಬಿಳಿಬಣ್ಣದಪಟ್ಟಿಗಳನ್ನುಕಟ್ಟಿಕೊಂಡುಬರುತ್ತಾರೆ. ಈಮೂಲಕಅವರುಯಾವಜಾತಿಯವರುಎಂಬುದುಶಿಕ್ಷಕರಿಗೆಖಚಿತವಾಗುತ್ತದೆ. ಹೀಗೆದಲಿತರನ್ನುಮೇಲ್ವರ್ಗದವಿದ್ಯಾರ್ಥಿಗಳಿಂದಬೇರ್ಪಡಿಸಿಕೂರಿಸುವಹಾಗೂತಾರತಮ್ಯದಶಿಕ್ಷಣನೀಡುವಮೂಲಕವಿದ್ಯಾರ್ಥಿಜೀವನದಿಂದಲೇಮಕ್ಕಳಮನಸ್ಸಿನಲ್ಲಿಜಾತಿಎಂಬಸಂಕೋಲೆಯನ್ನುಬೆಳೆಸಲಾಗುತ್ತಿದೆ.