ಆರೋಗ್ಯ

ಈಗಿನ ಚಳಿಗಾಲದಲ್ಲಿ ಆರೋಗ್ಯದ ಮೇಲೆ ಪ್ರಭಾವ ಬೀರುವ ಅನೇಕ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಪರಿಹಾರ.

69


ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ.  ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತುಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಬಲವರ್ಧಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಆರೋಗ್ಯವಂತರಾಗಿ ಇರಲು ಆಯುರ್ವೇದವು ಹಲವು ಸೂತ್ರಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಈ ಕಾಲದಲ್ಲಿ ನಿರೋಗಿಗಳಾಗಿ ಇರಬಹುದು.

ಆಯುರ್ವೇದ ಹೇಳುವಂತೆ ಚಳಿಗಾಲದಲ್ಲಿ ನಾವು ಆರೋಗ್ಯವಂತರಾಗಿರಲು ಹೆಚ್ಚಿನ ಭಾಗ ಪ್ರಕೃತಿಯೇ ನಮಗೆ ಸಹಾಯಕವಾಗಿದೆ. ಈ ಕಾಲದಲ್ಲಿ ಸೂರ್ಯನು ದಕ್ಷಿಣಾಯನದಲ್ಲಿ ಇರುವುದರಿಂದ ಹಗಲುಗಳು ಕಿರಿದಾಗಿದ್ದು, ರಾತ್ರಿಗಳು ದೀರ್ಘವಾಗಿರುತ್ತವೆ. ಇದರಿಂದ ದೇಹದ ವಿಶ್ರಾಂತಿಗೆ ಸಾಕಷ್ಟು ಸಮಯ ದೊರೆಯುತ್ತದೆ. ಈ ಋತುವಿನಲ್ಲಿ ಜಠರಾಗ್ನಿಯೂ ಪ್ರಖರವಾಗಿ ಇರುವುದರಿಂದ ಸೇವಿಸಿದ ಆಹಾರ ಚೆನ್ನಾಗಿ ಪಚನವಾಗುತ್ತದೆ.

ನಮ್ಮ ದೇಶದಲ್ಲಿ ಚಳಿಗಾಲವು ಶರದ್ ಋತುವಿನಿಂದ ಆರಂಭವಾಗುತ್ತದೆ. ಆದ್ದರಿಂದ ಶರೀರವನ್ನು ಬೆಚ್ಚಗಿಡಲು ಉಣ್ಣೆ ಬಟ್ಟೆಗಳನ್ನು ಬಳಸುವುದರೊಂದಿಗೆ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.  ಈ ಋತುವಿನಲ್ಲಿ ಹಸಿವು ಜಾಸ್ತಿಯಾಗುವುದರಿಂದ ಕಾಲಕಾಲಕ್ಕೆ ಶರೀರಕ್ಕೆ ಆಹಾರ ಪೂರೈಸಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಹಸಿವನ್ನು ತಡೆಯಲು ಪ್ರಯತ್ನಿಸುವುದು ದೇಹಕ್ಕೆ ಹಾನಿ ಉಂಟು ಮಾಡಬಹುದು. ಹಾಗೆ ಮಾಡುವುದರಿಂದ ಜಠರಾಗ್ನಿಯು ರಕ್ತ, ಮಾಂಸ, ಧಾತು ಹಾಗೂ ರಸಗಳನ್ನು ದಹಿಸಿ ಶರೀರ ಕೃಷವಾಗಬಹುದು ಮತ್ತು ವಾಯುಪ್ರಕೋಪ ಹೆಚ್ಚಬಹುದು.

ಚಳಿಗಾಲದಲ್ಲಿ ವಾಯು ಪ್ರಕೋಪ ಮತ್ತು ಕಫ ಸಂಚಯ ಆಗುವುದರಿಂದ ಅವುಗಳನ್ನು ಹೆಚ್ಚಿಸುವ ಪದಾರ್ಥಗಳ ಸೇವನೆ ವರ್ಜಿಸಬೇಕು. ಸಿಹಿ, ಆಮ್ಲ ಮತ್ತು ಲವಣಯುಕ್ತ ಆಹಾರಗಳನ್ನು ಸೇವಿಸಬೇಕು. ಈ ಕಾಲದಲ್ಲಿ ಬಿಸಿಯಾದ ಪದಾರ್ಥಗಳನ್ನು ಸೇವಿಸುವುದು ಹೆಚ್ಚು ಹಿತ ಎನಿಸುತ್ತದೆ. ಆದ್ದರಿಂದ ಚಹಾ ಹಾಗೂ ಕಾಫಿಯನ್ನು ನಾವು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಹಾ, ಕಾಫಿಗಳ ಅತಿಯಾದ ಸೇವನೆ ವಾಯು ಪ್ರಕೋಪವನ್ನು ಹೆಚ್ಚಿಸುತ್ತದೆ. ಅದಕ್ಕೆ ಬದಲಾಗಿ ಬಿಸಿ ಸೂಪ್‌ಗಳನ್ನು ಕುಡಿಯಬಹುದು.

ಚಳಿಗಾಲದಲ್ಲಿ ಕ್ಯಾರೆಟ್, ಮೂಲಂಗಿ, ಗೆಣಸು ಮುಂತಾದ ಗೆಡ್ಡೆಗಳು, ಮೆಂತೆ ಪಲ್ಲೆ, ಬಸಳೆ ಸೊಪ್ಪು, ರಾಜಗಿರಿ ಸೊಪ್ಪು, ಪಾಲಕ್, ಸಬ್ಬಸಿಗೆ ಮುಂತಾದ ಸೊಪ್ಪುಗಳು, ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಈ ಋತುವಿನಲ್ಲಿ ಚರ್ಮದಲ್ಲಿ ಜಿಡ್ಡಿನ ಅಂಶ ಕಡಿಮೆ ಆಗುವುದರಿಂದ ಜಿಡ್ಡನ್ನು ಪೂರೈಸುವ ಆಹಾರ ಪದಾರ್ಥ ಸೇವಿಸಬೇಕು. ಹಾಲು, ತುಪ್ಪ, ಬೆಣ್ಣೆ, ಕೆನೆ, ಗೋಡಂಬಿ, ಕಲ್ಲುಸಕ್ಕರೆ, ಬಾದಾಮಿ, ಗಜ್ಜರಿ ಹಲ್ವ, ಬಾಸುಂದಿ, ಒಣ ಕೊಬ್ಬರಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಸೇವಿಸಬೇಕು.

ಶರೀರದ ಉಷ್ಣತೆ ಕಾಪಾಡಿಕೊಳ್ಳಲು ಹೆಚ್ಚು ಕ್ಯಾಲೊರಿಗಳ ಅವಶ್ಯಕತೆ ಇರುವುದರಿಂದ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಹುದು. ಈ ಋತುವಿನಲ್ಲಿ ಬರುವ ಹಣ್ಣುಗಳಾದ ಸೀತಾಫಲ, ಪಪ್ಪಾಯಿ, ಕಿತ್ತಳೆ, ಪೇರು ಮುಂತಾದ ಹಣ್ಣುಗಳನ್ನು ಸೇವಿಸಬೇಕು. ತರಕಾರಿಗಳಲ್ಲಿ ಹೂಕೋಸು ವರ್ಜ್ಯ. ಏಕೆಂದರೆ ಅದು ಕೀಲುನೋವನ್ನು ಉಂಟುಮಾಡುತ್ತದೆ.

ರಾತ್ರಿ ತುಂಬಾ ತಡವಾಗಿ ಊಟಮಾಡುವುದು, ಮುಂಜಾನೆ ತಡಮಾಡಿ ಏಳುವುದು, ಉಪವಾಸ ಮಾಡುವುದು, ತಂಗಳು ಆಹಾರ ಸೇವನೆ ಈ ಋತುವಿಗೆ ತಕ್ಕುದಲ್ಲ. ಇವೆಲ್ಲ ವಾಯು ಪ್ರಕೋಪ ಹೆಚ್ಚಿಸುತ್ತವೆ.  ವಾತ ಹಾಗೂ ಪಿತ್ತ ಪ್ರಕೃತಿಯವರಿಗೆ ಈ ಋತು ಸರಿಯಾದುದಲ್ಲ. ಆದ್ದರಿಂದ ಕಫ ಪ್ರಕೃತಿಯವರು ಹುಳಿಯಾದ ಪದಾರ್ಥಗಳು, ಮೊಸರು, ಬಾಳೆಹಣ್ಣನ್ನು ಸೇವಿಸಬಾರದು.  ವಾತ ಪ್ರಕೃತಿಯವರು ಅದರಿಂದ ಪಾರಾಗಲು ಮತ್ತು ಶರೀರದಲ್ಲಿ ಸ್ಫೂರ್ತಿ ಹೊಂದಲು ಸಾಸಿವೆ ಎಣ್ಣೆಯಿಂದ ಶರೀರವನ್ನು ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಸಂಧಿವಾತ, ಕೀಲುನೋವುಗಳು ಗುಣವಾಗುತ್ತವೆ ಮತ್ತು ತ್ವಚೆಯೂ ಕೋಮಲವಾಗಿ ಇರುತ್ತದೆ. ಕಫ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಿಗಳಿಗೆ ಆಕಳ ತುಪ್ಪದಲ್ಲಿ ಸೈಂಧವ ಲವಣ, ಮೆಂತೆ ಮತ್ತು ಕರ್ಪೂರ ಬೆರೆಸಿ ಎದೆಗೆ ಚೆನ್ನಾಗಿ ಮಾಲೀಷು ಮಾಡಬೇಕು.

ವೃದ್ಧರಿಗೆ ಮತ್ತು ನ್ಯುಮೋನಿಯಾ ಪೀಡಿತ ಚಿಕ್ಕ ಮಕ್ಕಳಿಗೂ ಇದು ಉಪಯುಕ್ತ. ವಾತ ಪೀಡಿತ ರೋಗಿಗಳು ಗೋಧಿ ಹಿಟ್ಟಿನಲ್ಲಿ ಮೆಂತೆ ಸೊಪ್ಪು, ಓಂ ಕಾಳು, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಶುಂಠಿ ಬೆರೆಸಿ ತಯಾರಿಸಿದ ಪರಾಠಾ ಸೇವಿಸಬೇಕು. ನೆಲ್ಲಿಕಾಯಿಯ ಸೇವನೆ ಈ ಋತುವಿಗೆ ತುಂಬಾ ಉಪಯುಕ್ತ. ಆದ್ದರಿಂದ ಯಾವುದೇ ರೂಪದಲ್ಲಾಗಲೀ ನೆಲ್ಲಿಕಾಯಿಯ ಸೇವನೆ ಮಾಡಬೇಕು. ಯಾವುದೇ ಔಷಧಿ ಸೇವಿಸಲು ಚಳಿಗಾಲ ಉತ್ತಮವಾದ ಕಾಲ. ಆದ್ದರಿಂದ ದೀರ್ಘ ಕಾಲದಿಂದ ಬಳಲುತ್ತಿರುವ ರೋಗಿಗಳಿಗೆ ಚಳಿಗಾಲದಲ್ಲಿ ಔಷಧ ಸೇವನೆ ಪ್ರಾರಂಭಿಸಬಹುದು. ಮಕ್ಕಳಿಗೆ ಹಾಲುಣಿಸುವ ತಾಯಂದಿರು ಪ್ರತಿನಿತ್ಯ ಒಂದು ಚಮಚ ಓಂ ಕಾಳನ್ನು ಸೇವಿಸಬೇಕು. ಇದರಿಂದ ಮಗುವಿಗೆ ಅಪಚನ ಆಗುವುದಿಲ್ಲ.

ತಪ್ಪದೆ ಈ ಟಿಪ್ಸ್ ಪಾಲಿಸಿ :
ಕೊಬ್ಬರಿ ಎಣ್ಣೆ ಮಸಾಜ್ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ಮೈ ಬಿರುಕು, ಒಣ ಚರ್ಮದ ತೊಂದರೆ ಕಡಿಮೆಯಾಗುತ್ತದೆ. ಎಣ್ಣೆ ಸ್ನಾನದಿಂದಲೂ ಚರ್ಮದ ಒಣಗುವಿಕೆ ಹೋಗಿಲ್ಲವಾದಲ್ಲಿ ಸ್ನಾನದ ಬಳಿಕ ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಸ್ವಲ್ಪ ಮಾಶ್ಚುರೈಸರ್ ಅಥವಾ ಲೋಶನ್ ನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು. ಬಾದಾಮಿ ಎಣ್ಣೆಯನ್ನು ರಾತ್ರಿ ಹಚ್ಚಿ ಮಲಗಿದರೆ, ಬೆಳಿಗ್ಗೆ ಚರ್ಮ ಒಣಗುವುದಿಲ್ಲ. ಕಾಂತಿಯುತವಾಗಿರುತ್ತದೆ. ಇದು ಡಿ ಜೀವಸತ್ವ ಹೊಂದಿದ್ದು, ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಆದರೆ ಅಲರ್ಜಿ ಇರುವವರು ಇದನ್ನು ಬಳಸದಿರುವುದು ಒಳ್ಳೆಯದು. ದ್ರಾಕ್ಷಿ ಬೀಜದ ಎಣ್ಣೆ ಇದು ವಿಟಮಿನ್ ಇ ಅಂಶವನ್ನು ಹೊಂದಿದ್ದು, ಪೋಷಣೆಯನ್ನು ಒದಗಿಸುವ ಮೂಲಕ ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.

ಸೋಯಾ ಎಣ್ಣೆ ಇದು ಚರ್ಮದ ತೇವಾಂಶವನ್ನು ಕಾಪಾಡುವ ಜೊತೆಗೆ ಮೃದುವಾದ ಮತ್ತು ದೀರ್ಘಕಾಲದ ಹೊಳಪನ್ನು ನೀಡುತ್ತದೆ. ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದಲೂ ಚರ್ಮದ ರಕ್ಷಣೆ ಮಾದಬಹುದು.

ಒಂದೆರಡು ಚಮಚ ಜೇನಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುವುದು. ತೆಂಗಿನಕಾಯಿ ತುರಿದು ರುಬ್ಬಿ ರಸ ತೆಗೆಯಿರಿ. ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದು. ಯಥೇಚ್ಛವಾಗಿ ನೀರು ಕುಡಿಯಬೇಕು. ಸಾಕಷ್ಟು ತರಕಾರಿ, ಹಣ್ಣು ಸೇವನೆ ಇದರಿಂದ ಚರ್ಮ ತೇವಾಂಶ ಹೊಂದಲು ಸಹಕಾರಿಯಾಗುತ್ತದೆ. ಸ್ನಾನಕ್ಕೆ ಅತಿ ಬಿಸಿಯಾದ ನೀರಿಗಿಂತ ಉಗುರು ಬೆಚ್ಚಗಿನ ನೀರು ಬಳಸುವುದು. ಶುಷ್ಕತೆ ಹೆಚ್ಚಿಸದ ಸೌಮ್ಯವಾದ ಸೋಪ್ ಗಳ ಉಪಯೋಗ. ಸ್ನಾನದ ನಂತರ ಮೃದು ಬಟ್ಟೆಯಲ್ಲಿ ಮೈ ಒರೆಸಿಕೊಳ್ಳುವುದು ಹಾಗೂ ನಂತರ ಲೋಷನ್ ಹಚ್ಚಿಕೊಳ್ಳುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ರಾಧಾ ರಮಣ’ ಖ್ಯಾತಿಯ ದೀಪಿಕಾ ಮದುವೆ ತೆಲುಗು ಸ್ಟಾರ್ ನಟನ ಜೊತೆ ಫಿಕ್ಸ್ ವರನು ಯಾರು ಗೊತ್ತೇ ??

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿ ಈಗ ಮುಗಿದಿರುವ ವಿಷಯ ನಮಗೆಲ್ಲರಿಗೂ ತಿಳಿದಿದೆ. ಆದರೆ ಈಗ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆ  ಅವರು ತೆಲುಗು ನಟನನ್ನು ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ . ಅನುಷಾ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನುಷಾ ‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟನ…

  • ಜ್ಯೋತಿಷ್ಯ

    ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲು ಈ ನಿಯಮಗಳನ್ನು ಪಾಲನೆ ಮಾಡಿ..

    ಹಣದ ಯಾರಿಗೆ ತಾನೇ ಬೇಡ ಹೇಳಿ.ಇದರ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ.ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ ಪ್ರಾಪ್ತಿಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರತಿದಿನ ಅಥವಾ ಪ್ರತಿ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಷ್ಮಿ ಸ್ತೋತ್ರವನ್ನು ಪಠಣ ಮಾಡಿ. ಪ್ರತಿ ವಾರ ಮನೆ ಕ್ಲೀನ್ ಮಾಡುವಾಗ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದ್ರಿಂದ ಕೀಟಾಣುಗಳು ನಾಶವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಪ್ರತಿ…

  • ರಾಜಕೀಯ

    ಮೋದಿಯವರ ಶಾದಿ ಶಗುನ್ಗೂ ಹಾಗೂ ಸಿದ್ದರಾಮಯ್ಯನವರ ಶಾದಿಭಾಗ್ಯಕ್ಕೂ ಏನ್ ಸಂಭಂದ ಗೊತ್ತಾ???

    ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್‌’ ಹೆಸರಿನ ಯೋಜನೆ ಘೋಷಿಸಿದೆ.

  • inspirational

    ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.

    ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು 6%ರಿಂದ 15%ಕ್ಕೆ ಏರಿಸಿರುವ ಪರಿಣಾಮ, ದೇಶದಾದ್ಯಂತ ಚಿನ್ನದ ಖರೀದಿ ಪ್ರಮಾಣ ಕುಸಿಯುತ್ತಿದೆ. ಆದರೆ ಇದೇ ವೇಳೆ ಚಿನ್ನದ ಬೆಲೆ ಏರಿಕೆಯಿಂದ ಜುವೆಲ್ಲರಿ ಕಂಪನಿಗಳ ಆದಾಯ ಮಾತ್ರ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ವಿಶ್ವ ಚಿನ್ನ ಮಂಡಳಿ (World Gold Council – WGC) ವರದಿ ಪ್ರಕಾರ, 2026ರಲ್ಲಿ ಭಾರತದ ಒಟ್ಟು ಚಿನ್ನದ ಬೇಡಿಕೆ ಸುಮಾರು 50 ರಿಂದ…

  • inspirational, ಉಪಯುಕ್ತ ಮಾಹಿತಿ

    ಉತ್ತಮ ಆರೋಗ್ಯ ಟಿಪ್ಸ್

    ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು…

  • ಉಪಯುಕ್ತ ಮಾಹಿತಿ

    ನಿಮ್ಮ ವಾಹನದ ಸಂಖ್ಯೆ ಯಾವ ಜಿಲ್ಲೆಗೆ ಸೇರಿದ್ದು ಅನ್ನೋದು ನಿಮ್ಗೆ ಗೊತ್ತಾ..?ನೋಡೋದು ಹೇಗೆ ಮುಂದೆ ಓದಿ ತಿಳಿಯಿರಿ…

    ನೋಡಿ, ನಾವು ದಿನಾಲೂ ನೋಡುವ ಬಳಸುವ ವಸ್ತುಗಳ ಬಗ್ಗೆ ಮಾಹಿತಿಯೇ ಗೊತ್ತಿರೋದಿಲ್ಲ.ಯಾಕಂದ್ರೆ ನಾವು ಅದು ಏನು,ಎತ್ತ ಅಂತ ತಿಳ್ಕೊಲ್ಲೋ ಗೊಡವೆಗೆ ಹೋಗೋದಿಲ್ಲ. ಅದರಲ್ಲಿ ಒಂದನ್ನು ಹೇಳಬೇಕಂದ್ರೆ ನಮ್ಮ ವಾಹನದ ರಿಜಿಸ್ಟ್ರೇಷನ್ ಸಂಖ್ಯೆ. ಏನಪ್ಪಾ ನಾವು ಹೊಸ ಗಾಡಿ ತಂಡ ಮೇಲೆ ಅರ್ ಟಿ ಓ ಗೆ ಹೋಗ್ತೀವಿ.ರಿಜಿಸ್ಟ್ರೇಷನ್ ಮಾಡಿಸ್ಕೊಂಡು ಬರ್ತೀವಿ.ಮತ್ತೆ ಬೇರೆ ಉಸಾಬರಿ ನಮಗೆತಕ್ಕೆ ಅಂತ ಅನ್ಕೊಳ್ತಿವಿ.ಆದ್ರೆ ಆದಷ್ಟೂ ನಾವು ಉಪಯೋಗಿಸುವ ಯಾವುದೇ ವಸ್ತುಗಳಾಗಲಿ,ವಾಹನಗಲಾಗಲಿ ಅದರ ಬಗ್ಗೆ ನಾವು ತಿಳಿದಿರ್ಲೆಬೇಕು.