ಆರೋಗ್ಯ

ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ತೊಂದರೆಗೆ ಬಾಳೆಹಣ್ಣು ರಾಮಬಾಣ.!

196

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ. ಊಟದ ವಿಷಯದಲ್ಲಿ ನಾವು ಎಷ್ಟು ಕಾಳಜಿ ವಹಿಸುತ್ತೇವೋ ಹಾಗೆಯೇ ನಾವು ಸೇವಿಸುವ ಹಣ್ಣುಗಳ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗುತ್ತಾದೆ.
ಬಾಳೆಹಣ್ಣಿನಲ್ಲಿ ಹೇರಳವಾದ ವಿಟಮಿನ್‌ಗಳು, ಕಾರ್ಬೋಹೈಡ್ರೇಟ್ಸ್. ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂನ್ನು ಹೊಂದಿರುವುದರಿಂದ ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯೆನಿಸಿದೆ. ಬಾಳೆಹಣ್ಣು ಧಾರ್ಮಿಕ ವಿಧಿವಿಧಾನಗಳಲ್ಲಿ ಅತಿಥಿ ಸತ್ಕಾರಗಳಲ್ಲಂತೂ ಬಾಳೆ ಇಲ್ಲದಿರುವುದೇ ಇಲ್ಲ.


ರಕ್ತಹೀನತೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ಕಿತ್ತಳೆ ಹಣ್ಣಿನ ಜತೆಗೆ ಸೇರಿಸಿ ತಿಂದರೆ ಗುಣಮುಖರಾಗಬಹುದು. ನರಗಳಿಗೆ ಬೇಕಾದ ರಂಜಕಾಂಶವನ್ನು ಬಾಳೆಹಣ್ಣು ಒದಗಿಸಿಕೊಡುವುದರಿಂದ ಸ್ನಾಯುಗಳು ಬಲವಾಗುತ್ತದೆ.

ಹೆಚ್ಚಿನ ಪೊಟ್ಯಾಶಿಯಂನ್ನು ಈ ಹಣ್ಣು ಹೊಂದಿರುವುದರಿಂದ ಮೂಳೆಗಳಿಗೆ ಅತ್ಯುತ್ತಮ. ಹಾಗಾಗಿ ವ್ಯಾಯಾಮ ಮಾಡುವವರು, ಆಟಗಾರರು, ಬಾಳೆಹಣ್ಣನ್ನು ಸೇವಿಸಲೇಬೇಕು ಎನ್ನುವುದು ಆರೋಗ್ಯ ತಜ್ಞರ ಸಲಹೆ. ಇನ್ನು ಹಣ್ಣಾದ ಬಾಳೆಹಣ್ಣು ಸೇವಿಸುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದ ದೂರವಿರಬಹುದು ಎಂದು ಕೆಲ ಸಂಶೋಧನೆಗಳು ಹೇಳಿವೆ.

ಖಿನ್ನತೆಯಿಂದ ಹೊರಬರಲು ಬಾಳೆಹಣ್ಣು ಸಹಾಯ ಮಾಡುತ್ತದೆ. ಇದರಲ್ಲಿನ ಟ್ರಿಪ್ರೋಪ್ಯಾನ್ ಎಂಬ ಪ್ರೊಟೀನ್ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಮಾಡುವುದರಿಂದ ಮಿದುಳು ಚುರುಕುಗೊಳ್ಳುತ್ತದೆ.

ಬಾಳೆಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಕಣ್ಣಿನ ಆರೋಗ್ಯ ಜತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸಿಗರೇಟ್ ಚಟಕ್ಕೆ ಬಿದ್ದವರು ಸಿಗರೇಟ್ ಸೇದಬೆಕೆನಿಸಿದಾಗೆಲ್ಲಾ ಬಾಳೆಹಣ್ಣನ್ನು ತಿಂದರೆ ಅದರಲ್ಲಿನ ಬಿ-6, ಬಿ-12, ಮ್ಯಾಂಗನೀಸ್ ಅಂಶವು ಮನಸ್ಸನ್ನು ನಿಯಂತ್ರಿಸುವುದಕ್ಕೆ ಸಹಾಯಕವಾಗುವುದಂತೆ. ಆ ಮೂಲಕ ಚಟಮುಕ್ತರಾಗಿ ಹೆಚ್ಚು ಕಾಲ ಬದುಕಬಹುದು.
ಬಾಳೆಹಣ್ಣಿನ ಸೇವನೆಯಿಂದ ಪಾರ್ಶ್ವವಾಯು ರೋಗದಿಂದ ದೂರವಿಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಗರ್ಭಣಿಯರು ಬಾಳೆಹಣ್ಣು ಸೇವಿಸಿದರೆ ಮಗುವಿಗೆ ಹೆಚ್ಚು ಉಪಯುಕ್ತ. ಇದರಲ್ಲಿ ಪಾಲಿಕ್ ಆಸಿಡ್ ಹೇರಳವಾಗಿರುವುದರಿಂದ ಗರ್ಭಾಶಯದಲ್ಲಿರುವ ಮಗುವಿನ ಬೆಳವಣಿಗೆಗೆ ಹೆಚ್ಚು ಸಹಾಯ ಮಾಡುತ್ತದೆ.

ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಹೃದಯಾಘಾತದ ಸಮಸ್ಯೆ ಬರುವುದಿಲ್ಲ ಮತ್ತು ಪಚ್ಚವಾಯು ಅಥವಾ ಲಕ್ವಾ ಹೊಡೆಯದಂತೆ ಕಾಪಾಡುತ್ತದೆ. ಬಾಳೆಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಕ್ಯಾನರ್ ಸಮಸ್ಯೆ ಬರುವುದಿಲ್ಲ ಕಡಿಮೆ ರ ಕ್ತ ಇರುವವರು ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಕೆಂಪು ರ ಕ್ತಕಣಗಳು ಹೆಚ್ಚಾಗಿ ಉತ್ಪಾದನೆ ಮಾಡುತ್ತದೆ ಇದರಿಂದ ರ ಕ್ತಹೀನತೆ ಕಡಿಮೆಯಾಗಿ ಆರೋಗ್ಯ ಚೆನ್ನಾಗಿರುತ್ತದೆ. ಹಾಗೇನೇ ಬಾಳೆ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ ಇದರಿಂದ ನಮ್ಮ ಮರುವಿನ ಕಾಯಿಲೆ ಕೂಡ ಕಡಿಮೆಯಾಗುತ್ತದೆ. ಬಾಳೆಹಣ್ಣು ನಮ್ಮ ದೇಹಕ್ಕೆ ತಂಪು ಇದನ್ನು ತಿನ್ನುವುದರಿಂದ ನಮ್ಮ ದೇಹ ಹಾಗೂ ಮನಸ್ಸು ತಿಳಿಯಾಗಿ ತಂಪಾಗಿ ಇರುತ್ತದೆ.

ಹೊರಗಡೆ ಸಿಗುವ ಬೇರೆ ಯಾವುದೋ ತಿನಿಸು ತಿನ್ನುವುದರ ಬದಲು ಬಾಳೆಹಣ್ಣು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ ಇದರಿಂದ ನಮ್ಮ ದೇಹಕ್ಕೆ ಆರೋಗ್ಯವು ಅಭಿವೃದ್ಧಿ ಆಗುತ್ತದೆ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಹೆಚ್ಚಾಗಿ ಇರುತ್ತದೆ ಇದು ನಮ್ಮ ದೇಹದಲ್ಲಿ ಸೇರೋಟೋನಿನ್ ಎಂಬ ಕೆಮಿಕಲ್ ನ್ನು ಬಿಡುಗಡೆ ಮಾಡುತ್ತದೆ ಇದರಿಂದ ನಮ್ಮ ಮೆದುಳಿಗೆ ಬೀಳುವ ಒತ್ತಡವನ್ನು ಕಡಿಮೆಮಾಡುತ್ತದೆ ಶಕ್ತಿಯನ್ನು ಹೆಚ್ಚಾಗಿಸುತ್ತದೆ ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ ಜಾಸ್ತಿ ಇರುವುದರಿಂದ ರಾತ್ರಿ ಹೊತ್ತು ಜಾಸ್ತಿ ಕುಡಿಯುವವರು ಬೆಳಿಗ್ಗಿನಹೊತ್ತು ನಿಮ್ಮ ನಿಷೇ ಇಳಿದಿಲ್ಲ ಎಂದರೆ ಒಂದು ಬಾಳೆಹಣ್ಣನ್ನು ತಿನ್ನಿ ಬೇಗನೆ ನಿಮ್ಮ ನಿಷೇ ಇಳಿಯುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಂಬಂಧ

    ವರದಕ್ಷಿಣೆ ಬೇಡಿಕೆ ನೀಡಿದ ವರನ ಕುಟುಂಬದವರಿಗೆ ,ಮದುವೆಯಲ್ಲಿ ‘ವಧು’ ನೀಡಿದ ಶಾಕ್ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ಮದುವೆಯ ದಿನ ವರನ ಕುಟುಂಬದವರು ನಗದು, ಒಡವೆ ಸೇರಿದಂತೆ ಒಂದು ಕೋಟಿ ಮೌಲ್ಯದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಿಂದ ಯುವತಿಯೊಬ್ಬಳು, ವೈದ್ಯನೊಂದಿಗೆ ನಿಗದಿಯಾಗಿದ್ದ ತನ್ನ ಮದುವೆಯನ್ನೇ ಸ್ಥಗಿತಗೊಳಿಸಿದ್ದಾಳೆ. ಡಾ. ರಾಶಿ ವರದಕ್ಷಿಣೆ ವಿರುದ್ಧ ಹೀಗೆ ಸಿಡಿದೆದ್ದ ವಧು.

  • inspirational

    ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

    ಮಯೂನ್ ಎನ್ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.ನಿವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ…

  • ಉಪಯುಕ್ತ ಮಾಹಿತಿ

    ಬಿಳಿ ಕೂದಲನ್ನು ಕಪ್ಪಾಗಿಸುವ ಅತೀ ಸುಲಭ ವಿಧಾನ..ಹೀಗೆ ಮಾಡಿ

    ಬಿಳಿ ಕೂದಲನ್ನು ಮರೆಮಾಚಲು ಹೇರ್ ಕಲರ್ ಗಳನ್ನು ಬಳಸುತ್ತಾರೆ. ಇಂತಹ ಕಲರ್ ಗಳು ಅನೇಕರಿಗೆ ಚರ್ಮದ ಖಾಯಿಲೆ ಅಥವಾ ಇನ್ಯಾವುದೋ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಅವುಗಳ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಿಳಿ ಕೂದಲನ್ನು ಕಪ್ಪಾಗಿಸುವ ವಿಧಾನಗಳು ಇಲ್ಲಿವೆ. ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ. ತೆಂಗಿನೆಣ್ಣೆಯೊಡನೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಿ….

  • ಸುದ್ದಿ

    ನನಗೆ ವಯಸ್ಸಾಗಿದೆ ಗನ್ ಹಿಡಿಯಲು ಸಾಧ್ಯವಿಲ್ಲ!ಅಣ್ಣಾ ಅಜಾರೆಯವರು ಈ ಮಾತನ್ನು ಹೇಳಿದ್ದೇಕೆ ಗೊತ್ತಾ?

    ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ೪೫ ಜನ ಸೈನಿಕರು ಹುತಾತ್ಮರಾಗಿದ್ದು, ಈ ರಕ್ಕಸರ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳಲೇಬೇಕು ಎಂದು ಪ್ರಧಾನಿ ಮೋದಿಯನ್ನು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಅಣ್ಣಾ ಅಜಾರೆ ಅವರು ಹೇಳಿರುವ ಮಾತು ಎಂತಹವರಲ್ಲೂ ರಕ್ತ ಕುದಿಯುವಂತೆ ಮಾಡಿದೆ.ನಮ್ಮ ಯೋಧರಿಗೆ ಸಹಾಯ ಮಾಡಲು ಸೇನಾ ವಾಹನದ ಡ್ರೈವರ್ ಆಗಿ ಕೆಲಸ ಮಾಡಲು ಶಕ್ತಿ ನನಗೆ ಇದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಉಪವಾಸ…

  • govt

    ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ

    ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ. ಈ ಡೈರೆಕ್ಟ್‌ ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಿ.! ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಿಮ್ಮ ಸ್ಕ್ರೀನ್‌ ಮೇಲೆ ಡಿಸ್ಪ್ಲೇ ಆಗಲಿದೆ. ಇದನ್ನು ಜಾಗರೂಕರಾಗಿ ಓದಿ ಅರ್ಜಿ ತುಂಬಿರಿ. https://drive.google.com/file/d/1-14JW0nJ2hfXT-TAHsIykVdha9D9_eZC/view ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ. ಆದರೆ, ಈ ಯೋಜನೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯು ಗುರುವಾರ 5 ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ…

  • ಜ್ಯೋತಿಷ್ಯ

    ನೀವು ಇಷ್ಟಪಡುವ ದೇವರನ್ನು ನೆನಯುತ್ತ ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Friday, December 10, 2021) ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದ್ದಾಗ ಮಾತ್ರ ಮಾನಸಿಕ ಮತ್ತು ನೈತಿಕ ಶಿಕ್ಷಣದ ಜೊತೆ ದೈಹಿಕ ಶಿಕ್ಷಣವನ್ನೂ ತೆಗೆದುಕೊಳ್ಳಿ. ಆರೋಗ್ಯಕರ ಮನಸ್ಸು ಯಾವಾಗಲೂ ಆರೋಗ್ಯಕರ ದೇಹದಲ್ಲಿ ಪರ್ಯವಸಾನವಾಗುತ್ತದೆಂದು ನೆನಪಿಡಿ. ಹಿಂದೆ ತಮ್ಮ ಹಣವನ್ನು ಹೂಡಿಕೆ ಮಾಡಿದ ಜನರು ಇಂದು ಆ ಹಣದಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಪತ್ನಿಯ ವ್ಯವಹಾರಗಳಲ್ಲಿ ನಿಮ್ಮ ಹಸ್ತಕ್ಷೇಪ ಅವಳಿಗೆ ಕಿರಿಕಿರಿ ಮಾಡಬಹುದು. ಕೋಪ ಭುಗಿಲೇಳುವುದನ್ನು ತಪ್ಪಿಸಲು ಅವಳ ಅನುಮತಿ ತೆಗೆದುಕೊಳ್ಳಿ. ನೀವು ಸುಲಭವಾಗಿ ಸಮಸ್ಯೆಯನ್ನು ತಪ್ಪಿಸಬಹುದು….