ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅರಿಶಿನ ಹಾಲು (ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು) ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅದರ ಬಣ್ಣ ನೋಡಿ ಮಾತ್ರವಲ್ಲ, ಪ್ರಯೋಜನಗಳನ್ನು ನೋಡಿ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಅರಿಶಿನ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಇಲ್ಲಿವೆ ನೋಡಿ

ರಕ್ತವನ್ನು ಶುದ್ಧೀಕರಿಸುತ್ತದೆ : ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಎಲ್ಲಾ ಕಲ್ಮಶಗಳಿಂದ ರಕ್ತನಾಳಗಳು ಮತ್ತು ದುಗ್ಧರಸ ವ್ಯವಸ್ಥೆ(ಲಿಂಫ್ಯಾಟಿಕ್ ಸಿಸ್ಟಮ್)ಯನ್ನು ಶುದ್ಧಗೊಳಿಸುತ್ತದೆ.
ಕ್ಯಾನ್ಸರ್ ತಡೆಗಟ್ಟುತ್ತದೆ : ಅರಿಶಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಹುದು. ಅರಿಶಿನದಲ್ಲಿರುವ ‘ಕರ್ಕ್ಯುಮಿನ್ ‘ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಹೆಚ್ಚಿಸುತ್ತದೆ :ಅರಿಶಿನದ ಹಾಲು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಹುಣ್ಣು ಮತ್ತು ಅತಿಸಾರವನ್ನು ತಡೆಯುತ್ತದೆ. ಹೊಟ್ಟೆಯುಬ್ಬರ ,ಎದೆಯುರಿ, ಇತರ ಜಠರಗರುಳಿನ ಸೋಂಕುಗಳಿದ್ದರೆ ಪ್ರತಿದಿನ ಅರಿಶಿನವನ್ನು ಒಂದು ಕಪ್ ಹಾಲಿಗೆ ಸೇರಿಸಿ ಕುಡಿಯಿರಿ.
ಸಮಯಕ್ಕೆ ಸರಿಯಾಗಿ ಋತುಚಕ್ರ : ಅರಿಶಿನದ ಹಾಲು ಕುಡಿಯುತ್ತಿದ್ದರೆ ಮುಟ್ಟಿನ ನೋವು ಶಮನಗೊಂಡು, ಋತುಚಕ್ರ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜೊತೆಗೆ, ಲ್ಯುಕೋರಿಯಾ, ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್ಸ್ ಮತ್ತು ಹಾರ್ಮೋನುಗಳಲ್ಲಿ ಅಸಮತೋಲನ ಹೊಂದಿರುವ ಮಹಿಳೆಯರಿಗೂ ಅರಿಶಿನ ಹಾಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಕೆಮ್ಮು ಮತ್ತು ಶೀತಕ್ಕೆ ಪರಿಹಾರ : ಅರಿಶಿನ ಹಾಲು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸುತ್ತದೆ. ಗಂಟಲು ನೋಯುತ್ತಿದ್ದರೆ ಅರಿಶಿನ ಹಾಲನ್ನು ಕುಡಿಯಿರಿ.
ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ : ಅರಿಶಿನದ ಹಾಲು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಸ್ತಮಾ, ಬ್ರಾಂಕೈಟಿಸ್‌ಗೆ ಪರಿಣಾಮಕಾರಿ ಪರಿಹಾರವಾಗಿದೆ. ಸೈನಸ್ ಮತ್ತು ಶ್ವಾಸಕೋಶದ ಸಮಸ್ಯೆಯಿದ್ದರೂ ಪರಿಹಾರ ನೀಡುತ್ತದೆ.

ತೂಕ ಕಡಿಮೆಯಾಗುತ್ತದೆ : ಹೌದು, ಅರಿಶಿನ ಹಾಲು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ! ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಸರಿಯಾಗಿ ನಿದ್ರೆ ಬರಲು : ನಿದ್ರೆ ಸರಿಯಾಗಿ ಬರದಿದ್ದರೆ ಅರಿಶಿನ ಹಾಲು ಕುಡಿಯಿರಿ. ಮಲಗುವ ಮೊದಲು ಅರಿಶಿನ ಹಾಲು ಕುಡಿದರೆ ವಿಶ್ರಾಂತಿ ಸಿಗುತ್ತದೆ. ಮನಸ್ಸು ಶಾಂತಗೊಂಡು ನಿದ್ರೆ ಬರುತ್ತದೆ.

ಕೀಲು ನೋವು ನಿವಾರಣೆ : ಅರಿಶಿನವನ್ನು ಆಯುರ್ವೇದದಲ್ಲಿ ‘ನೈಸರ್ಗಿಕ ಆಸ್ಪಿರಿನ್’ಎಂದು ಕರೆಯುತ್ತಾರೆ. ಇದು ಎಲ್ಲಾ ರೀತಿಯ ನೋವನ್ನು ನಿವಾರಿಸುತ್ತದೆ. ಅರಿಶಿನ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಕೀಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಆರೋಗ್ಯವಾಗಿರಿಸುತ್ತದೆ. ಈ ಹಾಲನ್ನು ಪ್ರತಿದಿನ ಸೇವಿಸುವುದರಿಂದ ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತ ಬರುವುದನ್ನು ತಪ್ಪಿಸಬಹುದು.
ಚರ್ಮಕ್ಕೆ ಹೊಳಪು ನೀಡುತ್ತದೆ : ಅರಿಶಿನದ ಹಾಲು ಮೊಡವೆ, ಎಸ್ಜಿಮಾ, ಇತರ ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಚರ್ಮದಲ್ಲಿ ಮೂಡಿರುವ ಸುಕ್ಕುಗಳನ್ನು ತೆಗೆದು, ನೈಸರ್ಗಿಕವಾಗಿ ಹೊಳೆಯಲು ಸಹಾಯ ಮಾಡುತ್ತದೆ.

ಅರಿಶಿನ ಹಾಲಿನ ಅಡ್ಡಪರಿಣಾಮಗಳು :
* ನಿಮಗೆ ಮೂತ್ರಪಿಂಡದ ಸಮಸ್ಯೆಗಳಿದ್ದರೆ ದಯವಿಟ್ಟು ಅರಿಶಿನದ ಹಾಲು ಕುಡಿಯಬೇಡಿ.
*ಹೆಚ್ಚು ಅರಿಶಿನ ಸೇವನೆಯಿಂದ ದೇಹ ಕಬ್ಬಿಣದಂಶವನ್ನು ಹೀರಿಕೊಳ್ಳಲು ಅಡ್ಡಿಯಾಗಬಹುದು. ಕಬ್ಬಿಣದಂಶವಿರುವ ಆಹಾರವನ್ನು ಸೇವಿಸದ ಜನರಲ್ಲಿ ಕಬ್ಬಿಣದ ಕೊರತೆಗೆ ಕಾರಣವಾಗಬಹುದು.
*ನೀವು ಈಗಾಗಲೇ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಹಾಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತುಂಬಾ ಕಡಿಮೆ ಮಾಡಬಹುದು. ನೀವು ಮಧುಮೇಹ ರೋಗಿಯಾಗಿದ್ದರೆ ಅರಿಶಿನ ಹಾಲನ್ನು ಸೇವಿಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಪರೀಕ್ಷಿಸಿ.
ಅರಿಶಿನ ಹಾಲು ತಯಾರಿಸುವುದು ಹೇಗೆ?
ಬೇಕಾಗುವ ಪದಾರ್ಥಗಳು : 1 ಟೀ ಚಮಚ ಅರಿಶಿನ, ಹಾಲು ½ ಕಪ್, 1ಟೀ ಚಮಚ ದಾಲ್ಚಿನ್ನಿ ಪುಡಿ, 1ಟೀ ಚಮಚ ಶುಂಠಿ ಪುಡಿಕಾಳುಮೆಣಸಿನಪುಡಿ ಚಿಟಿಕೆಯಷ್ಟು, 1ಟೀಸ್ಪೂನ್ ಜೇನುತುಪ್ಪ. ಮಾಡುವ ವಿಧಾನ :ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬೆರೆಸಿ ಕುದಿಸಿರಿ ನಂತರ ಕಡಿಮೆ ಮಾಡಿ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ. ಸೋಸಿ, ಇದಕ್ಕೆ ಚಿಟಿಕೆಯಷ್ಟು ದಾಲ್ಚಿನ್ನಿ ಸೇರಿಸಿ ಕುಡಿಯಿರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದಿಲ್ಲೊಂದು ಸುದ್ದಿಯಲ್ಲಿರುವ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಈಗ ತಮ್ಮ ಹೊಸ ಚಿತ್ರಕ್ಕೆ ಕ್ಲ್ಯಾಪ್ ಮಾಡುವಂತೆ ನಮ್ಮ ರಾಜ್ಯದ ದಂಡನಾಯಕರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್ಸ್ಕ್ರೀನ್ನಲ್ಲಿ ಹೊಸ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ಒಳ್ಳೆ ಹುಡುಗ ಪ್ರಥಮ್ ರವರು ಪ್ರೇಮ ಪತ್ರವನ್ನು ಬರೆದಿದ್ದಾರೆ. ಯಾರಿಗೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಪ್ರಥಮ್ ರವರು ಲೈವ್ ನಲ್ಲಿ ತಮ್ಮ ಬಿಗಬಾಸ್ ಗೆಳತಿ “ಸಂಜನವ”ರಿಗೆ ಪ್ರೇಮ ಪತ್ರವನ್ನು ಬರೆದಿದ್ದಾರೆ.
ನಿಮ್ಮ ಮಕ್ಕಳು ಕೂಡ ವಸ್ತು ಅಥವಾ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅಸಮರ್ಥರಾಗಿದ್ದಾರೆಯೇ? ಹೌದು ಎಂದಾದರೆ ಅದರ ಬಗ್ಗೆ ಟೆನ್ಶನ್ ಮಾಡಬೇಡಿ. ಈ ಸಮಸ್ಯೆಗೆ ಪರಿಹಾರವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಒಂದು ವೇಳೆ ನಿಮ್ಮ ಮಕ್ಕಳಿಗೆ ಯಾವುದೆ ವಿಷಯವನ್ನು ಅರ್ಥಮಾಡಿಕೊಳ್ಳಲು ಅಥವಾ ಅದನ್ನು ನೆನಪು ಮಾಡಿಕೊಳ್ಳಲು ಕಷ್ಟವಾದರೆ, ಅವರಿಗೆ ಅದನ್ನು ಸ್ವಲ್ಪ ಜೋರಾಗಿ ಓದಲು ಹೇಳಿ.
ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ಇದ್ದರು. ಆದರೆ ಚಿರು ಅಣ್ಣನ ಹಠಾತ್ ನಿಧನದಿಂದ ನೊಂದಿರುವ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತನ್ನ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ. ರಾಮನಗರ ಬಳಿ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರದ್ದು ಆದರೆ ಚೀರುಸರ್ಜಾ ಗೆ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ದ್ರುವ ಸರ್ಜಾ…
ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.